AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಕ್ಕು ಹಿಡಿದ ವಸ್ತುಗಳನ್ನು ಸುಲಭವಾಗಿ ಸ್ವಚ್ಛಗೊಳಿಸಲು ಈ ಒಂದು ತರಕಾರಿಯ ಸಿಪ್ಪೆಯೇ ಸಾಕು

ಗ್ಯಾಸ್‌ ಒಲೆಗಳು, ಬೀಗ, ಸಿಂಕ್‌, ಚಾಕು, ಕಬ್ಬಿಣ ತವಾ, ಬಾಗಿನ ಬೋಲ್ಟ್‌ಗಳು ಸೇರಿದಂತೆ ಮನೆಯಲ್ಲಿರುವ ಲೋಹದ ವಸ್ತುಗಳು ಬಹು ಬೇಗನೇ ತುಕ್ಕು ಹಿಡಿಯುತ್ತವೆ. ಈ ತುಕ್ಕುಗಳನ್ನು ತೆಗೆದು ಹಾಕುವುದು ಬಲು ಕಷ್ಟ ಎಂದು ಹಲವರು ಭಾವಿಸುತ್ತಾರೆ. ಆದ್ರೆ ವೇಸ್ಟ್‌ ಎಂದು ಎಸೆಯುವಂತಹ ಆಲೂಗಡ್ಡೆ ಸಿಪ್ಪೆಯನ್ನು ಬಳಸಿ ಬಲು ಸುಲಭವಾಗಿ ತುಕ್ಕು ಹಿಡಿದ ವಸ್ತುಗಳನ್ನು ಸ್ವಚ್ಛಗೊಳಿಸಬಹುದು, ಅಲ್ಲದೆ ಶೂ, ಗ್ಲಾಸ್‌ಗಳನ್ನು ಸಹ ಶುಚಿಗೊಳಿಸಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ತುಕ್ಕು ಹಿಡಿದ ವಸ್ತುಗಳನ್ನು ಸುಲಭವಾಗಿ ಸ್ವಚ್ಛಗೊಳಿಸಲು ಈ ಒಂದು ತರಕಾರಿಯ ಸಿಪ್ಪೆಯೇ ಸಾಕು
ಸಾಂದರ್ಭಿಕ ಚಿತ್ರ Image Credit source: pixabay
ಮಾಲಾಶ್ರೀ ಅಂಚನ್​
|

Updated on: Nov 06, 2025 | 3:23 PM

Share

ಮನೆಯಲ್ಲಿರುವಂತಹ ಗ್ಯಾಸ್‌ ಒಲೆ, ಬೀಗ, ಚಾಕು, ಸಿಂಕ್‌, ಕಬ್ಬಿಣದ ಪಾತ್ರೆಗಳು, ಬಾಗಿಲಿನ ಬೋಲ್ಟ್‌ ಇತ್ಯಾದಿ ಲೋಹದ ವಸ್ತುಗಳು ತೇವಾಂಶ ಅಂಟಿಕೊಳ್ಳುವ ಕಾರಣದಿಂದಾಗಿ ಬಹುಬೇಗನೇ ತುಕ್ಕು ಹಿಡಿಯುತ್ತವೆ. ಹೀಗೆ ಒಮ್ಮೆ ತುಕ್ಕು ಹಿಡಿದರೆ, ಆ ವಸ್ತುಗಳ (rusty items) ತುಕ್ಕು ನಿವಾರಿಸುವುದು ತುಂಬಾನೇ ಕಷ್ಟದ ಕೆಲಸ. ಇದಕ್ಕಾಗಿ ಹಲವರು ಹಣ ಖರ್ಚು ಮಾಡಿ ಮಾರುಕಟ್ಟೆಯಲ್ಲಿ ಸಿಗುವಂತಹ ಕ್ಲೀನರ್‌ಗಳನ್ನು ಬಳಸುತ್ತಾರೆ. ಈ ಕ್ಲೀನರ್‌ಗಳಿಂದ ಕ್ಲೀನ್‌ ಮಾಡಿದ್ರೂ ಸಹ ತುಕ್ಕುಗಳು ನಿವಾರಣೆಯಾಗುವುದಿಲ್ಲ. ಹೀಗಿರುವಾಗ ನೀವು ಆಲೂಗಡ್ಡೆಯ ಸಿಪ್ಪೆಯನ್ನು ಬಳಸಿ ಬಲು ಸುಲಭವಾಗಿ ತುಕ್ಕು ಹಿಡಿದ ವಸ್ತುಗಳನ್ನು ಸ್ವಚ್ಛಗೊಳಿಸಬಹುದು. ವೇಸ್ಟ್‌ ಎಂದು ಬಿಸಾಡುವ ಆಲೂಗಡ್ಡೆಯ ಸಿಪ್ಪೆ ತುಕ್ಕು ಹಿಡಿದ ವಸ್ತುಗಳು ಮಾತ್ರವಲ್ಲ,  ಬೆಳ್ಳಿ ವಸ್ತು, ಶೂಗಳನ್ನು ಸ್ವಚ್ಛಗೊಳಿಸಲು ಕೂಡ ತುಂಬಾನೇ ಸಹಕಾರಿ. ಅದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ತುಕ್ಕು ಹಿಡಿದ ವಸ್ತುಗಳನ್ನು ಸ್ವಚ್ಛಗೊಳಿಸಲು ಸಹಕಾರಿ ಆಲೂಗಡ್ಡೆ ಸಿಪ್ಪೆ:

ಮಾರುಕಟ್ಟೆಯಲ್ಲಿ ತುಕ್ಕು ತೆಗೆಯಲು ಸಿಗುವಂತಹ ಕ್ಲೀನರ್‌ಗಳಿಗೆ ಹಣ ಖರ್ಚು ಮಾಡುವ ಬದಲು ಆಲೂಗಡ್ಡೆಯ ಸಿಪ್ಪೆಯನ್ನು ಬಳಸಿ ನೀವು ಬಲು ಸುಲಭವಾಗಿ ತುಕ್ಕು ಹಿಡಿದ ವಸ್ತುಗಳನ್ನು ಕ್ಲೀನ್‌ ಮಾಡಬಹುದು. ಚಾಕು, ಕತ್ತರಿ, ಕಬ್ಬಿಣದ ಪಾತ್ರೆ ಇತ್ಯಾದಿ ಲೋಹದ ವಸ್ತುಗಳು ತುಕ್ಕು ಹಿಡಿದಿದ್ರೆ, ಆಲೂಗಡ್ಡೆಯ ಸಿಪ್ಪೆಯ ಹೊರ ಪದರವನ್ನು ತುಕ್ಕು ಹಿಡಿದ ವಸ್ತುಗಳ ಮೇಲೆ ಚೆನ್ನಾಗಿ ಉಜ್ಜುವುದರಿಂದ ತುಕ್ಕು ನಿವಾರಣೆಯಾಗುತ್ತವೆ. ಇದಲ್ಲದೆ ಕ್ಲೀನ್‌ ಮಾಡುವ ಮುನ್ನ ಆಲೂಗಡ್ಡೆಯ ಸಿಪ್ಪೆಗೆ ವಿನೆಗರ್‌, ಅಡಿಗೆ ಸೋಡಾ ಅಥವಾ ನಿಂಬೆ ರಸವನ್ನು ಸೇರಿಸಬಹುದು. ಇದು ಕೂಡ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಸಿಂಕ್‌ಗಳನ್ನು ಸ್ವಚ್ಛಗೊಳಿಸಲು ಸಹಕಾರಿ:

ತುಕ್ಕು ಹಿಡಿದ ವಸ್ತುಗಳನ್ನು ಸ್ವಚ್ಛಗೊಳಿಸಲು ಮಾತ್ರವಲ್ಲದೆ ಅಡುಗೆ ಮನೆಯ ಸಿಂಕ್‌ಗಳನ್ನು ಕ್ಲೀನ್‌ ಮಾಡಲು ಸಹ ಆಲೂಗಡ್ಡೆ ಸಿಪ್ಪೆ ಸಹಕಾರಿಯಾಗಿದೆ. ಅಡುಗೆ ಮನೆ ಸಿಂಕ್‌ ಮತ್ತು ನಲ್ಲಿನಗಳ ಮೇಲೆ ನೀರಿನ ಕಲೆಗಳು ರೂಪುಗೊಳ್ಳುತ್ತವೆ. ಆಲೂಗಡ್ಡೆಯ ಸಿಪ್ಪೆಯಿಂದ ಇವುಗಳನ್ನು ಸ್ಕ್ರಬ್‌ ಮಾಡುವುದರಿಂದ ಕಲೆಗಳು ಮಾಯವಾಗುತ್ತವೆ.

ಶೂಗಳ ವಾಸನೆ ಹೋಗಲಾಡಿಸುತ್ತದೆ:

ಕೆಲವೊಮ್ಮೆ ಶೂಗಳು ವಾಸನೆ ಬರುತ್ತವೆ. ಈ ವಾಸನೆಯ ಶೂಗಳನ್ನು ಧರಿಸಿದರೆ ಅದು ಬ್ಯಾಕ್ಟೀರಿಯಾಗಳ ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ ಮತ್ತು ಶೂ ವಾಸನೆ ಇನ್ನಷ್ಟು ಹದಗೆಡಿಸುತ್ತದೆ. ಹಾಗಾಗಿ  ಆಲೂಗಡ್ಡೆಯ ಸಿಪ್ಪೆಯನ್ನು ಶೂಗಳ ಒಳಗೆ ಹಾಕಿ ರಾತ್ರಿಯಿಡಿ ಬಿಡಿ, ಈ ಆಲೂಗಡ್ಡೆ ಸಿಪ್ಪೆಗಳು ಎಲ್ಲಾ ವಾಸನೆಯನ್ನು ಹೀರಿಕೊಳ್ಳುತ್ತದೆ.

ಇದನ್ನೂ ಓದಿ: ಒಂದು ಹಣ್ಣಿನ ಸಿಪ್ಪೆಯ ಸಹಾಯದಿಂದ ಮನೆಯಿಂದ ಸುಲಭವಾಗಿ ಇಲಿಗಳನ್ನು ಓಡಿಸಬಹುದು

ಕಿಟಕಿ ಗಾಜುಗಳನ್ನು ಸ್ವಚ್ಛಗೊಳಿಸಲು ಸಹಕಾರಿ:

ನೀವು ಕಿಟಕಿ ಗಾಜುಗಳನ್ನು ಸ್ವಚ್ಛಗೊಳಿಸಲು ಸಹ ಆಲೂಗಡ್ಡೆಯ ಸಿಪ್ಪೆಯನ್ನು ಬಳಸಬಹುದು. ಮೊದಲು ಆಲೂಗಡ್ಡೆಯ ಸಿಪ್ಪೆಯನ್ನು ಗಾಜುಗಳ ಮೇಲೆ ಉಜ್ಜಿ, ನಂತರ ಸ್ವಚ್ಛವಾದ ಬಟ್ಟೆಯಿಂದ ಗಾಜನ್ನು ಒರೆಸಿ.

ಬೆಳ್ಳಿ ವಸ್ತುಗಳನ್ನು ಸ್ವಚ್ಛಗೊಳಿಸುತ್ತದೆ:

ನೀವು ಬೆಳ್ಳಿ ವಸ್ತುಗಳನ್ನು ಸಹ ಆಲೂಗಡ್ಡೆಯ ಸಿಪ್ಪೆಯಿಂದ ಸ್ವಚ್ಛಗೊಳಿಸಬಹುದು. ಹೌದು ಬೆಳ್ಳಿ ವಸ್ತುಗಳನ್ನು ಆಲೂಗಡ್ಡೆಯ ಸಿಪ್ಪೆಯಿಂದ ಸ್ಕ್ರಬ್‌ ಮಾಡಿದರೆ, ಬೆಳ್ಳಿ ಪಾತ್ರೆಗಳು ಪಳಪಳ ಹೊಳೆಯುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ