AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಯುರ್ವೇದದಿಂದ ಕೂದಲು ಉದುರುವಿಕೆ ನಿಲ್ಲಿಸುವುದು ಹೇಗೆ? ಬಾಬಾ ರಾಮದೇವ್ ನೀಡಿದ ಸಲಹೆಗಳಿವು

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು ಬಹಳ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಜನರು ಕೂದಲು ಉದುರುವಿಕೆಯನ್ನು ಅನುಭವಿಸುತ್ತಿದ್ದಾರೆ. ಜನರು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ವಿವಿಧ ಶಾಂಪೂಗಳು ಮತ್ತು ಔಷಧಿಗಳನ್ನು ಬಳಸುತ್ತಾರೆ. ಆದರೆ ಆಯುರ್ವೇದ ವಿಧಾನಗಳು ಕೂದಲು ಉದುರುವಿಕೆಯನ್ನು ನಿಯಂತ್ರಿಸಬಹುದೇ? ಎಂಬ ಬಗ್ಗೆ ಯೋಗಗುರು ಬಾಬಾ ರಾಮದೇವ್ ನೀಡಿರುವ ಸಲಹೆಗಳು ಇಲ್ಲಿವೆ.

ಆಯುರ್ವೇದದಿಂದ ಕೂದಲು ಉದುರುವಿಕೆ ನಿಲ್ಲಿಸುವುದು ಹೇಗೆ? ಬಾಬಾ ರಾಮದೇವ್ ನೀಡಿದ ಸಲಹೆಗಳಿವು
Baba Ramdev
ಸುಷ್ಮಾ ಚಕ್ರೆ
|

Updated on: Nov 18, 2025 | 4:00 PM

Share

ನವದೆಹಲಿ, ನವೆಂಬರ್ 18: ಇಂದಿನ ಪೀಳಿಗೆ ಎದುರಿಸುತ್ತಿರುವ ಅತ್ಯಂತ ಸಾಮಾನ್ಯವಾದ ಆರೋಗ್ಯ ಸಮಸ್ಯೆಯೆಂದರೆ ಕೂದಲು ಉದುರುವಿಕೆ (Hair Fall). ಈಗೀಗ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಉದುರುವಿಕೆಯನ್ನು ಅನುಭವಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಮಸ್ಯೆಯನ್ನು ಗುಣಪಡಿಸಲು, ಅವರು ಹಲವಾರು ರೀತಿಯ ಶಾಂಪೂಗಳು ಮತ್ತು ಔಷಧಿಗಳನ್ನು ಬಳಸುತ್ತಾರೆ. ಆದರೂ ಪರಿಣಾಮಕಾರಿಯಾಗಿ ಕೂದಲು ಉರುದುರುವಿಕೆ ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಆಯುರ್ವೇದದಲ್ಲಿ ಕೂದಲು ಉದುರುವಿಕೆಗೆ ಸಹಜವಾದ ಮತ್ತು ಪ್ರಾಕೃತಿಕವಾದ ಪರಿಹಾರಗಳಿವೆ ಎಂದು ಯೋಗಗುರು ಬಾಬಾ ರಾಮದೇವ್ (Baba Ramdev) ಹೇಳಿದ್ದಾರೆ.

ಆಯುರ್ವೇದ ವಿಧಾನಗಳ ಮೂಲಕ ಕೂದಲು ಉದುರುವಿಕೆಯನ್ನು ಗುಣಪಡಿಸಲು ಹಲವಾರು ಪರಿಹಾರಗಳಿವೆ ಎಂದು ಬಾಬಾ ರಾಮದೇವ್ ಹೇಳಿದ್ದಾರೆ. ಎಣ್ಣೆಯು ಕೂದಲನ್ನು ಪೋಷಿಸುತ್ತದೆ ಮತ್ತು ಕೂದಲಿಗೆ ಪ್ರಯೋಜನಕಾರಿಯಾಗಿದೆ. ಹಾಗೇ, ಯೋಗವು ಕೂದಲು ಉದುರುವಿಕೆಯನ್ನು ಗುಣಪಡಿಸುವ ಒಂದು ಮಾರ್ಗವಾಗಿದೆ. ಏಕೆಂದರೆ ಯೋಗವನ್ನು ಅಭ್ಯಾಸ ಮಾಡುವ ಮೂಲಕ, ಕೂದಲು ವೇಗವಾಗಿ ಬೆಳೆಯುತ್ತದೆ, ವಿಶೇಷವಾಗಿ ಶಿರ್ಷಾಸನ ಮಾಡುವ ಮೂಲಕ ಕೂದಲು ಉದುರುವಿಕೆಯನ್ನು ನಿಯಂತ್ರಿಸಬಹುದು. ಈ ಆಸನವು ರಕ್ತ ಪರಿಚಲನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಕೂದಲಿನ ಬೆಳವಣಿಗೆಗೆ ಒಳ್ಳೆಯದು.

ಇದನ್ನೂ ಓದಿ: ಕೂದಲು ಉದುರುವಿಕೆಯ ಸಮಸ್ಯೆಗೆ ಗುಡ್‌ಬೈ ಹೇಳಲು ನೀವು ಮಾಡಬೇಕಾದದ್ದು ಇಷ್ಟೆ

ಕೂದಲು ಬೆಳವಣಿಗೆಗೆ ಆಹಾರದಲ್ಲಿ ಏನು ಸೇರಿಸಬೇಕು?:

ಕೂದಲಿನ ಬೆಳವಣಿಗೆಗೆ ನಿಮ್ಮ ಆಹಾರದಲ್ಲಿ ಮೊದಲು ಸೇರಿಸಬೇಕಾದದ್ದು ನೆಲ್ಲಿಕಾಯಿ. ಏಕೆಂದರೆ ಇದು ಉತ್ತಮ ಪ್ರಮಾಣದ ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಇದು ನಿಮ್ಮ ಕೂದಲಿನ ಬೆಳವಣಿಗೆಗೆ ಅವಶ್ಯಕವಾಗಿದೆ. ನೆಲ್ಲಿಕಾಯಿ ರಸವು ಕೂದಲಿನ ಬೆಳವಣಿಗೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಜೊತೆಗೆ, ಕಪ್ಪು ಮತ್ತು ಬಿಳಿ ಎಳ್ಳು ಮೆಗ್ನೀಸಿಯಮ್ ಮತ್ತು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿದ್ದು, ಇವು ಕೂದಲಿನ ಬೆಳವಣಿಗೆಗೆ ಒಳ್ಳೆಯದು. ನೀವು ಅಗಸೆ ಬೀಜಗಳನ್ನು ಸಹ ತಿನ್ನಬಹುದು. ಏಕೆಂದರೆ ಇದು ಕೂಡ ಕೂದಲ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: ಮೆಂತ್ಯೆಯೊಂದಿಗೆ ಈ ವಸ್ತುವನ್ನು ಬೆರೆಸಿ ಹಚ್ಚಿದರೆ ಕೂದಲು ಸೊಂಪಾಗಿ, ಉದ್ದವಾಗಿ ಬೆಳೆಯುತ್ತಂತೆ

ಕೂದಲು ಉದುರುವಿಕೆಗೆ ಕಾರಣಗಳೇನು?:

ರಾಮದೇವ್ ಅವರ ಪ್ರಕಾರ, ಕೂದಲು ಉದುರುವಿಕೆಗೆ ಹಲವಾರು ಕಾರಣಗಳಿವೆ. ಅದರಲ್ಲಿ ಪ್ರಮುಖ ಅಂಶಗಳು ಆರೋಗ್ಯ ಮತ್ತು ಜೀವನಶೈಲಿ. ಕೆಲವು ಸಂದರ್ಭಗಳಲ್ಲಿ, ಕೂದಲು ಉದುರುವಿಕೆ ಆನುವಂಶಿಕ ಕಾರಣಗಳಿಂದ ಉಂಟಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ, ಕೂದಲಿಗೆ ಹಾಕುವ ಕಲರ್ ಮತ್ತು ರಾಸಾಯನಿಕಗಳ ಬಳಕೆ ಹೆಚ್ಚಿರುವುದರಿಂದ ಜನರು ಚಿಕ್ಕ ವಯಸ್ಸಿನಲ್ಲಿಯೇ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ