Bank Holidays in September: ಬ್ಯಾಂಕ್ ಗ್ರಾಹಕರೇ ಗಮನಿಸಿ; ಸೆಪ್ಟೆಂಬರ್​ನಲ್ಲಿದೆ 12 ಸಾಲು ಸಾಲು ರಜೆಗಳು

September Bank Holidays 2021: ರಜೆ ದಿನಗಳಂದು ಆನ್​ಲೈನ್ ಬ್ಯಾಂಕಿಂಗ್ ವಹಿವಾಟನ್ನು ನಡೆಸಬಹುದು. ಎಟಿಎಂಗಳು ಕೂಡ ತೆರೆದಿರುತ್ತವೆ. ಆದರೆ ಬ್ಯಾಂಕ್​ಗಳಿಗೆ ಮಾತ್ರ ರಜೆ ಇರುತ್ತದೆ. ಸೆಪ್ಟೆಂಬರ್ ತಿಂಗಳ ಬ್ಯಾಂಕ್​ ರಜೆಗಳ ಪಟ್ಟಿ ಹೀಗಿದೆ.

Bank Holidays in September: ಬ್ಯಾಂಕ್ ಗ್ರಾಹಕರೇ ಗಮನಿಸಿ; ಸೆಪ್ಟೆಂಬರ್​ನಲ್ಲಿದೆ 12 ಸಾಲು ಸಾಲು ರಜೆಗಳು
ಸಾಂದರ್ಭಿಕ ಚಿತ್ರ
Edited By:

Updated on: Aug 27, 2021 | 7:17 PM

ಬೆಂಗಳೂರು: ನೀವು ಆನ್​ಲೈನ್ ಬ್ಯಾಂಕಿಂಗ್ ಬಳಸುವುದಿಲ್ಲವಾ? ಬ್ಯಾಂಕ್​ಗಳಿಗೆ ತೆರಳಿ ವಹಿವಾಟು ಮಾಡುತ್ತೀರಾ? ಹಾಗಿದ್ದರೆ ಇಲ್ಲಿ ಗಮನಿಸಿ. ಸೆಪ್ಟೆಂಬರ್ ತಿಂಗಳಲ್ಲಿ ಹಲವು ಹಬ್ಬಗಳು ಇರುವುದರಿಂದ ಒಟ್ಟು 12 ದಿನ ಬ್ಯಾಂಕ್​ಗಳಿಗೆ ರಜೆ ಇರಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸೆಪ್ಟೆಂಬರ್ ತಿಂಗಳ ರಜಾ ದಿನಗಳ ಪಟ್ಟಿ ಮಾಡಿದೆ. ಈ ರಜೆಗಳು ಆಯಾ ರಾಜ್ಯಕ್ಕೆ ವಿಭಿನ್ನವಾಗಿರಲಿದ್ದು, ಆಯಾ ರಾಜ್ಯಗಳ ಹಬ್ಬಗಳು, ವಾರಾಂತ್ಯದ ದಿನಗಳು ಕೂಡ ಈ ರಜೆಯ ಪಟ್ಟಿಯಲ್ಲಿ ಸೇರಿವೆ.

ಈ ರಜೆ ದಿನಗಳಂದು ಆನ್​ಲೈನ್ ಬ್ಯಾಂಕಿಂಗ್ ವಹಿವಾಟನ್ನು ನಡೆಸಬಹುದು. ಎಟಿಎಂಗಳು ಕೂಡ ತೆರೆದಿರುತ್ತವೆ. ಆದರೆ ಬ್ಯಾಂಕ್​ಗಳಿಗೆ ಮಾತ್ರ ರಜೆ ಇರುತ್ತದೆ. ಸೆಪ್ಟೆಂಬರ್ ತಿಂಗಳ ಬ್ಯಾಂಕ್​ ರಜೆಗಳ ಪಟ್ಟಿ ಹೀಗಿದೆ.

1. ಸೆಪ್ಟೆಂಬರ್ 5 – ಭಾನುವಾರ
2. ಸೆಪ್ಟೆಂಬರ್ 8 – ಶ್ರೀಮಂತ ಸಂಕರದೇವರ ತಿಥಿ – (ಗುವಾಹಟಿ) 3. ಸೆಪ್ಟೆಂಬರ್ 9 – ತೀಜ್ (ಹರಿತಾಳಿಕ) – (ಗಾಂಗ್ಟಾಕ್)
4. ಸೆಪ್ಟೆಂಬರ್ 10 – ಗಣೇಶ ಚತುರ್ಥಿ (ಅಹಮದಾಬಾದ್, ಬೇಲಾಪುರ, ಬೆಂಗಳೂರು, ಭುವನೇಶ್ವರ, ಚೆನ್ನೈ, ಹೈದರಾಬಾದ್, ಮುಂಬೈ, ನಾಗ್ಪುರ, ಪಣಜಿ)
5. ಸೆಪ್ಟೆಂಬರ್ 11 – ಎರಡನೇ ಶನಿವಾರ / ಗಣೇಶ ಚತುರ್ಥಿ
6. ಸೆಪ್ಟೆಂಬರ್ 12 – ಭಾನುವಾರ
7. ಸೆಪ್ಟೆಂಬರ್ 17 – ಕರ್ಮ ಪೂಜೆ – (ರಾಂಚಿ)
8. ಸೆಪ್ಟೆಂಬರ್ 19 – ಭಾನುವಾರ
9. ಸೆಪ್ಟೆಂಬರ್ 20 – ಇಂದ್ರಜಾತ್ರೆ – (ಗಾಂಗ್ಟಕ್)
10. ಸೆಪ್ಟೆಂಬರ್ 21 – ಶ್ರೀ ನಾರಾಯಣ ಗುರು ಸಮಾಧಿ ದಿನ – (ಕೊಚ್ಚಿ ಮತ್ತು ತಿರುವನಂತಪುರಂ)
11. ಸೆಪ್ಟೆಂಬರ್ 25 – ನಾಲ್ಕನೇ ಶನಿವಾರ
12. ಸೆಪ್ಟೆಂಬರ್ 26 – ಭಾನುವಾರ

ಈ ದಿನಗಳಂದು ಬ್ಯಾಂಕ್​ಗಳಿಗೆ ರಜೆ ಇರಲಿದೆ. ಸೆಪ್ಟೆಂಬರ್ 11 ಮತ್ತು 25ರಂದು ಎರಡನೇ ಮತ್ತು 4ನೇ ಶನಿವಾರ ಇರಲಿದೆ. ಸೆಪ್ಟೆಂಬರ್ 5, 12, 19 ಮತ್ತು 26ರಂದು ಭಾನುವಾರ ಇರಲಿದೆ. ಆರ್‌ಬಿಐ ಆದೇಶಿಸಿದ ರಜಾದಿನಗಳ ಪಟ್ಟಿಯು ಸೆಪ್ಟೆಂಬರ್ 21 ರಂದು ಶ್ರೀ ನಾರಾಯಣ ಗುರು ಸಮಾಧಿ ದಿನದೊಂದಿಗೆ ಕೊನೆಗೊಳ್ಳುತ್ತದೆ. ಇದನ್ನು ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಆಚರಿಸಲಾಗುತ್ತದೆ.

ಇದನ್ನೂ ಓದಿ: Cash Withdrawal: ಎಸ್​ಬಿಐ, ಪಿಎನ್​ಬಿ, ಐಸಿಐಸಿಐ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್​ ನಗದು ವಿಥ್​ಡ್ರಾ ಮಿತಿ ಇಂತಿವೆ

Bank Holidays: ಇಂದಿನಿಂದ 4 ದಿನಗಳ ಕಾಲ ಈ ರಾಜ್ಯಗಳಲ್ಲಿ ಬ್ಯಾಂಕ್​ಗಳಿಗೆ ರಜಾ ದಿನ

(Bank Holidays in September: Banks Remain Closed Up to 12 bank holidays in September Check details here)