Beard Grooming: ನಿಮ್ಮ ಗಡ್ಡವನ್ನು ಅಂದಚೆಂದಗೊಳಿಸಲು ಸಲಹೆಗಳು: ಗಡ್ಡವನ್ನು ಪೋಷಿಸಲು ನವ ಮಾರ್ಗಗಳು ಇಲ್ಲಿವೆ!

ನಿಜವಾದ ಗಾಢವಾದ ಗಡ್ಡ ಎಂಬುದು ಸ್ವಯಂ-ಸಂಯಮದ ಉತ್ಪನ್ನವಾಗಿದೆ. ನೀವು ಮೊದಲು ಗಡ್ಡ ಬೆಳೆಯಲು ಪ್ರಾರಂಭಿಸಿದಾಗ... ಮೊದಲ ಶೇವ್​​ನಲ್ಲಿಯೇ ಟ್ರಿಮ್ ಮಾಡುವ ಅಥವಾ ಅದನ್ನು ಅಂದೆಚೆಂದಕ್ಕೆ ಒಪ್ಪಓರಣಗೊಳಿಸುವುದಕ್ಕೆ ಬಲಿಯಾಗಬೇಡಿ. ಅಂತಹ ಆತುರ/ ಪ್ರಚೋದನೆಗೆ ಪ್ರತಿರೋಧ ಒಡ್ಡಿ. ಮೊದಲ 4-6 ವಾರಗಳವರೆಗೆ ನಿಮ್ಮ ಗಡ್ಡದ ತಂಟೆಗೆ ಹೋಗಬೇಡಿ.

Beard Grooming: ನಿಮ್ಮ ಗಡ್ಡವನ್ನು ಅಂದಚೆಂದಗೊಳಿಸಲು ಸಲಹೆಗಳು: ಗಡ್ಡವನ್ನು ಪೋಷಿಸಲು ನವ ಮಾರ್ಗಗಳು ಇಲ್ಲಿವೆ!
ಎಲ್ರೂ ಗಡ್ಡ ಬಿಡೋಕ್ಕೆ ಆಗೊಲ್ಲ! ಗಡ್ಡ ಬಿಡುವಾಗ ಈ ತಪ್ಪುಗಳನ್ನು ಮಾಡಬೇಡಿ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: Sep 19, 2022 | 4:37 PM

ಮೊದಲೇ ಹೇಳಿಬಿಡುತ್ತೇವೆ. ಎನಪ್ಪಾ ಗಡ್ಡಕ್ಕೂ ಕೈಹಾಕಿದರಾ? ಗಡ್ಡ ಬೆಳೆಸೋದು/ ಬೋಡಿಸೋ ಬಗ್ಗೆಯೂ ನಮಗೆ ಹೇಳಿಕೊಡಬೇಕಾ? ಎಂಥಾ ಕಾಲ ಬಂತಪ್ಪಾ ಎಂದು ಕೊಂಕು ತೆಗೆಯಬೇಡಿ. ಗಡ್ಡ ನಿಮ್ಮ ಮುಖದ ಅಂದ ಚೆಂದವನ್ನು ಹೆಚ್ಚಿಸಬಲ್ಲದು, ಅಥವಾ ಗಡ್ಡ ಇಲ್ಲದಿರುವುದೆ ನಿಮ್ಮ ಮುಖಾರವಿಂದದ ಸೊಬಗು ಹೆಚ್ಚಿಸಬಲ್ಲದು. ಎಲ್ರೂ ಗಡ್ಡ ಬಿಡೋಕ್ಕೆ (Clean Shave) ಆಗೊಲ್ಲ! ಹಾಗಾಗಿ ಗಡ್ಡಕ್ಕೆ ತನ್ನದೇ ಆದ ಪ್ರಾಶಸ್ತ್ಯವಿದೆ -ಅದನ್ನು ಯಾರೂ ಅಲ್ಲಗಳೆಯಲಾರರು. ಈ ಹಿನ್ನೆಲೆಯಲ್ಲಿ ನಿಮ್ಮ ಗಡ್ಡದ ಅಂದಚೆಂದಕ್ಕೆ ಸಲಹೆಗಳು ಮತ್ತು ವಿವಿಧ ಹಂತಗಳ ವಿವರಣೆ ಮತ್ತು ಗಡ್ಡವನ್ನು ಪೋಷಿಸಲು (Beard Grooming) ನವ ಮಾರ್ಗಗಳನ್ನು ಇಲ್ಲಿ ನೀಡಲಾಗಿದೆ.

  1. 1. ಮೊಟ್ಟಮೊದಲನೆಯದಾಗಿ ತಾಳ್ಮೆಯಿಂದಿರಿ, ಬಿ ಕೂಲ್ ಕೂಲ್!: ನಿಜವಾದ ಗಾಢವಾದ ಗಡ್ಡ ಎಂಬುದು ಸ್ವಯಂ-ಸಂಯಮದ ಉತ್ಪನ್ನವಾಗಿದೆ. ನೀವು ಮೊದಲು ಗಡ್ಡ ಬೆಳೆಯಲು ಪ್ರಾರಂಭಿಸಿದಾಗ… ಮೊದಲ ಶೇವ್​​ನಲ್ಲಿಯೇ ಟ್ರಿಮ್ ಮಾಡುವ ಅಥವಾ ಅದನ್ನು ಅಂದೆಚೆಂದಕ್ಕೆ ಒಪ್ಪಓರಣಗೊಳಿಸುವುದಕ್ಕೆ ಬಲಿಯಾಗಬೇಡಿ. ಅಂತಹ ಆತುರ/ ಪ್ರಚೋದನೆಗೆ ಪ್ರತಿರೋಧ ಒಡ್ಡಿ. ಮೊದಲ 4-6 ವಾರಗಳವರೆಗೆ ನಿಮ್ಮ ಗಡ್ಡದ ತಂಟೆಗೆ ಹೋಗಬೇಡಿ. ಅದನ್ನು ಸ್ಪರ್ಶಿಸದೆ ಹಾಗೆಯೇ ನ್ಯಾಚರಲ್​ ಆಗಿ ಇರಲು ಬಿಡಿ. ಇದು ಮುಂದೆ ಕೂದಲುಗಳು ಸಮವಾಗಿ/ ಸೊಂಪಾಗಿ ಬೆಳೆಯಲು ಅನುವು ಮಾಡಿಕೊಡುತ್ತದೆ (ಕೆಲವು ಕಡೆ ಗಡ್ಡದ ಕೂದಲು ಹೆಚ್ಚು ವೇಗವಾಗಿ ಬೆಳೆಯುತ್ತದೆ, ಮತ್ತೆ ಕೆಲವು ಕಡೆ ಮಂದಗತಿಯಲ್ಲಿ ಬೆಳೆಯುತ್ತದೆ ಎಂಬುದನ್ನು ಅರಿತುಕೊಳ್ಳಿ. ಗಡ್ಡದ ದಪ್ಪ ಕೂದಲು, ಉದ್ದ ಕೂದಲಿನ ಶೈಲಿಯನ್ನು ಆಯ್ಕೆ ಮಾಡಿಕೊಳ್ಳಲು ಮುಂದೆ ಇದು ನಿಮಗೆ ನೆರವಾಗುತ್ತದೆ. ಸಾ,ಮಾನ್ಯವಾಗಿ ಪ್ರತಿಯೊಬ್ಬ ಯುವಕರ ಗಡ್ಡದ ಕೂದಲು ತನ್ನದೇ ಆದ ವೇಗದಲ್ಲಿ, ಆರೋಗ್ಯಕರ ಜೀವನಶೈಲಿಯಲ್ಲಿ ಬೆಳೆಯುತ್ತದೆ. ಉತ್ತಮ ಆಹಾರ ಮತ್ತು ವ್ಯಾಯಾಮವು ಗಡ್ಡ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ
  2. 2. ನಿಮ್ಮ ಗಡ್ಡವನ್ನು ನಿಮ್ಮ ಮುಖದ ಆಕಾರಕ್ಕೆ ತಕ್ಕಂತೆ ಹೊಂದಿಸಿಕೊಳ್ಳಿ!: ಮನುಷ್ಯ ಸೇರಿದಂತೆ ಯಾವುದೇ ಪ್ರಾಣಿಯಾಗರಲಿ ಗಡ್ಡವು ಅದರ ಸುತ್ತಮುತ್ತಲಿನ ಪರಿಸರಕ್ಕೆ ಅನುಗುಣವಾಗಿರಬೇಕು. ಗಡ್ಡ ಬಿಟ್ಟ ಮೊದಲ ಒಂದು ತಿಂಗಳ ನಂತರ, ಅಂತಿಮ ರೂಪ, ಅಂತಿಮ ಸ್ಪರ್ಶದ ಬಗ್ಗೆ ದೃಢ ನಿರ್ಧಾರಕ್ಕೆ ಬನ್ನಿ. ಅದುವರೆವಿಗೂ ಗಡ್ಡದ ವಿಚಾರಕ್ಕೆ ಕೈಹಾಕಲೇಬೇಡಿ. ಒಂದು ತಿಂಗಳ ನಂತರ ನಿಮ್ಮ ಮುಖದ ಆಕಾರಕ್ಕೆ ಪೂರಕವಾದ ಅಂತಿಮ ಶೈಲಿಯನ್ನು ಆಯ್ಕೆ ಮಾಡಿಕೊಳ್ಳಿ. ಅದರಿಂದ ನಿಮ್ಮ ಗಡ್ಡವು ಉತ್ತಮವಾಗಿ ಕಾಣುತ್ತದೆ, ಮತ್ತು ನೀವೂ ಸಹ!
  3. 3. ಸರಿಯಾಗಿ ಈ ಹಂತದಲ್ಲಿ ಟ್ರಿಮ್ಮರ್ ಯಾವುದನ್ನ ಖರೀದಿಸಬೇಕು/ ಬಳಕೆ ಮಾಡಬೇಕು ಎಂಬುದನ್ನು ನಿರ್ಧರಿಸಿ: ಒಂದು ತಿಂಗಳ ಅಂತರದಲ್ಲಿ ಪೊಗದಸ್ತಾಗಿ/ಪೊದೆಯಂತೆ ಬೆಳೆದ ಗಡ್ಡವನ್ನು ಗಿಡ್ಡ ಮಾಡುವ ಬಗ್ಗೆ, ತಿದ್ದಿ ತೀಡುವ ಬಗ್ಗೆ ಆಲೋಚಿಸಿ. ಗಡ್ಡ ಗಿಡ್ಡ ಮಾಡುವ ಬಗ್ಗೆ ಅಥವಾ ನೀವು ಅದನ್ನು ಸೊಂಪಾಗಿ ಬೆಳೆಸಲು ಯೋಜಿಸಿದ್ದರೂ ಅದಕ್ಕಾಗಿ ಗಡ್ಡ ಸಮರುವಿಕೆ ಮಾಡಿಕೊಳ್ಳುವುದು (ಕಟಾವು) ಅತ್ಯಗತ್ಯ. ಅದಕ್ಕಾಗಿ ಗುಣಮಟ್ಟದ ಟ್ರಿಮ್ಮರ್‌ನಲ್ಲಿ ಹೂಡಿಕೆ ಮಾಡಿ ಮತ್ತು ನಿಮ್ಮ ಮಾಸ್ಟರ್ ಪ್ಲಾನ್‌ಗೆ ಸರಿಹೊಂದುವ ಸರಿಯಾದ ಯಂತ್ರವನ್ನು ಖರೀದಿಸಿ.
  4. 4. ನಿಯಮಿತವಾಗಿ ಗಡ್ಡವನ್ನು ಸ್ವಚ್ಛಗೊಳಿಸುತ್ತಿರಿ: ಬೆಳವಣಿಗೆಯ ಆರಂಭಿಕ ಹಂತಗಳಲ್ಲಿ ಇದು ವಿಶೇಷವಾಗಿ ಮುಖ್ಯವಾಗುತ್ತದೆ. ಅದರಲ್ಲೂ… ಕೂದಲಿನ ಮಧ್ಯೆ ಸಿಕ್ಕಿಬಿದ್ದ ಆಹಾರ ಮತ್ತು ಮೃತ ಚರ್ಮದ ಕೋಶಗಳು ತುರಿಕೆಯನ್ನು ಉಲ್ಬಣಗೊಳಿಸಬಹುದು. ಇದು ಕೂದಲಿನ ಬಗ್ಗೆ ಮಾತ್ರವಲ್ಲ, ಕೆಳಗಿರುವ ಚರ್ಮಕ್ಕೂ ಸಂಬಂಧಿಸಿದ್ದು ಎಂಬುದನ್ನು ಅರಿಯಬೇಕು. ಹಾಗಾಗಿ ಗಡ್ಡವನ್ನು ತೊಳೆಯುವುದು ಮತ್ತು ಕಂಡೀಷನಿಂಗ್ ಮಾಡುವುದು ಗಡ್ಡವನ್ನು ನೋಡಿಕೊಳ್ಳುವಲ್ಲಿ ಪ್ರಮುಖ ಹಂತವಾಗಿದೆ. ಔಷಧೀಯ ಡ್ಯಾಂಡ್ರಫ್ ಶಾಂಪೂ ನಂತಹ ವಿಶೇಷ ಕ್ಲೆನ್ಸರ್‌ನೊಂದಿಗೆ ಪ್ರತಿ ವಾರ ನಿಮ್ಮ ಗಡ್ಡವನ್ನು ಸ್ಕ್ರಬ್ ಮಾಡಿ. ನಂತರ ಅದನ್ನು ನಿಧಾನವಾಗಿ ಒಣಗಿಸಿ… ಆದರೆ ಟವಲ್​ನಲ್ಲಿ ಅತಿಯಾಗಿ ಉಜ್ಜುವುದು ಒಳ್ಳೆಯದಲ್ಲ. ಸೌಮ್ಯವಾಗಿ ಅದನ್ನು ಓರಣವಾಗಿಡಬೇಕು. ಇಲ್ಲದಿದ್ದರೆ ಸೀಳು ತುದಿಗಳಿಗೆ ಕಾರಣವಾಗಬಹುದು.
  5. 5. ನಿಮ್ಮ ಬಿಯರ್ಡ್ ಆಯಿಲ್ ಅನ್ನು ಪ್ರೀತಿಸಿ, Beard Oil: ಗಡ್ಡದ ಎಣ್ಣೆಗಳು ಟ್ರಿಕಿ ಆಗಿರಬಹುದು. ಕೆಲವು ತುಂಬಾ ಮಂದವಾಗಿ, ಭಾರವಾಗಿರುತ್ತದೆ. ಕೆಲವು ತುಂಬಾ ಹೊಳೆಯುವಂತೆ ಢಾಳಾಗಿ ಕಾಣುತ್ತದೆ. ಕೆಲವರಿಗೆ ಒಣ ಸ್ಥಿತಿ (dry) ಅನುಭವವಾಗುತ್ತದೆ. ಅದು ಯಾವಾಗ ಎಂದು ನಿಮಗೆ ತಿಳಿಯುತ್ತದೆ. ಆಗ ಎಚ್ಚರಿಕೆ ವಹಿಸಿ. ನೀವು ಬಳಸುವ ಟ್ರಿಮ್ಮರ್ ಯಂತ್ರಗಳನ್ನೂ ಸಹ ನಿಯಮಿತವಾಗಿ ಸ್ವಚ್ಛಗೊಳಿಸುತ್ತಿರಿ
  6. 6. ನಿಮ್ಮ ಗಡ್ಡವನ್ನು ಆರೈಕೆ ಮಾಡಲು ಕಲಿಯಿರಿ:  ನಿಯಮಿತವಾಗಿ ನೀವು ಗಡ್ಡ ಆರೈಕೆ ಮಾಡಲು ಆರಂಭಿಸಿದರೆ ಅದು ನೀವು ಬಯಸಿದ ಆಕಾರಕ್ಕೆ ಮಾರ್ಪಾಡಾಗುತ್ತಿರುವುದು ನಿಮಗೆ ಮನವರಿಕೆಯಾಗುತ್ತದೆ. ನಿಯಮಿತವಾಗಿ ಟ್ರಿಮ್ ಮಾಡುವುದರಿಂದ ನಿಮ್ಮ ಆಯ್ಕೆಯ ಆಕಾರವನ್ನು ಕಾಪಾಡಿಕೊಳ್ಳುತ್ತದೆ. ಆದರೆ ನಿಮ್ಮ ಗಡ್ಡದ ಸಾಲಿನಲ್ಲಿ ಕೆಲವೊಂದು ಕೂದಲುಗಳು ಎದ್ದುಬಿಡುತ್ತವೆ. ಅದಕ್ಕೆ ಬಾಚಣಿಗೆ ಅಥವಾ ಗಡ್ಡದ ಬ್ರಷ್‌ನೊಂದಿಗೆ ದಿನನಿತ್ಯ ಉಜ್ಜುತ್ತಾ/ ತೀಡುತ್ತಾ ಬನ್ನಿ. ಮೊಂಡು ಕೂದಲನ್ನು ದಾರಿಗೆ ತನ್ನಿ. ಕೆಳಮುಖದ ದಿಕ್ಕಿನಲ್ಲಿ ಬೆಳೆಯುತ್ತಾ ಸಾಗುವಂತೆ ದಿಕ್ಕು ನೀಡಿ. ಇದಕ್ಕಾಗಿ ಕೆಲವು ಅಂಟು ಪದಾರ್ಥಗಳು ಮಾರುಕಟ್ಟೆಯಲ್ಲಿ ಲಭ್ಯವಾಗುತ್ತವೆ. ಅದನ್ನು ಪರಿಶೀಲಿಸಿ, ಬಳಸಿ.
  7. 7. ಗಡ್ಡ ಬೆಳೆಸುವ ಆತುರದಲ್ಲಿ, ಮೀಸೆಯನ್ನು ಮರೆಯಬೇಡಿ! ನಿಮ್ಮ ಗಡ್ಡ ಆರೈಕೆ ಬಗ್ಗೆ ಮೊದಲೇ ನೀವು ನಿರ್ಧರಿಸಿ, ಆ ನಿಟ್ಟಿನಲ್ಲಿ ಕಾರ್ಯಮಗ್ನರಾಗಿದ್ದೀರಿ ಅಂದರೆ ನೀವು ನಿಮ್ಮ ಮೀಸೆಯ ಬಗ್ಗೆಯೂ ಜಾಗ್ರತೆ ವಹಿಸಿದ್ದೀರಿ ಎಂದೇ ಅರ್ಥ. ಅದಕ್ಕೇ ಹೇಳಿದ್ದು, ಗಡ್ಡ ಬೆಳೆಸುವ ಆತುರದಲ್ಲಿ, ಗಡ್ಡದ ನಡುಗಡ್ಡೆಯಂತಿರುವ ಮೀಸೆಯನ್ನು ಮರೆಯಬೇಡಿ! ಪ್ರತಿ ಮೂರರಿಂದ ನಾಲ್ಕು ದಿನಗಳಿಗೊಮ್ಮೆ ಸಣ್ಣ ಟ್ರಿಮ್ಮರ್​ ಗಳೊಂದಿಗೆ ನಿಮ್ಮ ಮೀಸೆಯನ್ನು ಬಹಳ ಅಚ್ಚುಕಟ್ಟಾಗಿ, ಜಾಗ್ರತೆಯಿಂದ ಆರೈಕೆ ಮಾಡಿ. ಮತ್ತು ದಾರಿತಪ್ಪಿದ ಓರೆಕೋರೆ ಕೂದಲನ್ನು ಕಟ್ ಮಾಡಿ, ಅಂದಚೆಂದ ಗೊಳಿಸಬಹುದು. ಸರಾಗವಾಗಿ ಕತ್ತರಿಸಬಹುದಾದ, ಶಾರ್ಪ್​ ಸಿಸರ್ಸ್​​​ಗಳೊಂದಿಗೆ ನಿಮ್ಮ ಭೂಷಣಪ್ರಾಯ ಮೀಸೆಯನ್ನು ತಿದ್ದಿ.
  8. 8. ಆರಂಭಿಕ, ತಿಂಗಳ ಸಮಯದ ನಂತರ ಹೆಚ್ಚು ಜಾಗ್ರತೆ ವಹಿಸಿ: ನೀವು ಇಟ್ಟಿಗೆಗಳಿಲ್ಲದ ಮನೆ ನಿರ್ಮಿಸಲು ಸಾಧ್ಯವಿಲ್ಲ, ಇದು ಮುಖದ ಕೂದಲಿಗೂ ಅನ್ವಯಿಸುತ್ತದೆ. ಅದಕ್ಕೆ ಆರಂಭಿಕ, ತಿಂಗಳ ಸಮಯದ ನಂತರ ಹೆಚ್ಚು ಜಾಗ್ರತೆ ವಹಿಸಿ.
  9. 9. ಗಡ್ಡಕ್ಕೆ ಬೇಕು ಸಮೃದ್ಧ ಆಹಾರಗಳು: ನಿಮ್ಮ ಗಡ್ಡ ಪ್ರೋಟೀನ್ ಮತ್ತು ಕೊಬ್ಬಿನಾಂಶದ ಆಹಾರದಿಂದ ಸೃಷ್ಟಿಯಾಗುತ್ತದೆ. ಸಮೃದ್ಧ ಗಡ್ಡವು ವಿಟಮಿನ್ B5, B3 ಮತ್ತು B9 ಮೇಲೆ ಹೆಚ್ಚು ಅವಲಂಬಿತವಾಗಿದೆ. ಅಂದರೆ ಮಾಂಸ, ಒಣ ಬೀಜಗಳು, ಮೊಟ್ಟೆಯ ಹಳದಿ, ಹಾಲು ಮತ್ತು ಸಾಕಷ್ಟು ಹಸಿರು ಎಲೆ, ಸೊಪ್ಪು ತರಕಾರಿಗಳನ್ನು ಒಳಗೊಂಡ ಆಹಾರ ಕ್ರಮವನ್ನು ಪಾಲಿಸಿ.

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ