AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Camphor Benefits: ಕರ್ಪೂರವು ಕೇವಲ ಪೂಜೆಗೆ ಮಾತ್ರ ಸೀಮಿತವಲ್ಲ, ಆರೋಗ್ಯ ಸಮಸ್ಯೆಗಳನ್ನು ಕೂಡ ನಿವಾರಿಸುತ್ತೆ!

ಕರ್ಪೂರವನ್ನು ಸಾಮಾನ್ಯವಾಗಿ ಪೂಜೆ ಅಥವಾ ಹವನದಲ್ಲಿ ಬಳಸಲಾಗುತ್ತದೆ, ಆದರೆ ಈ ವಸ್ತುವಿನ ಒಂದು ಚಿಟಿಕೆ ತುಂಬಾ ಪ್ರಯೋಜನಕಾರಿಯಾಗಿದೆ.

Camphor Benefits: ಕರ್ಪೂರವು ಕೇವಲ ಪೂಜೆಗೆ ಮಾತ್ರ ಸೀಮಿತವಲ್ಲ, ಆರೋಗ್ಯ ಸಮಸ್ಯೆಗಳನ್ನು ಕೂಡ ನಿವಾರಿಸುತ್ತೆ!
Camphor
TV9 Web
| Updated By: ನಯನಾ ರಾಜೀವ್|

Updated on: Sep 19, 2022 | 2:18 PM

Share

ಕರ್ಪೂರವನ್ನು ಸಾಮಾನ್ಯವಾಗಿ ಪೂಜೆ ಅಥವಾ ಹವನದಲ್ಲಿ ಬಳಸಲಾಗುತ್ತದೆ, ಆದರೆ ಈ ವಸ್ತುವಿನ ಒಂದು ಚಿಟಿಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕರ್ಪೂರದಲ್ಲಿ ನಮಗೆ ಗೊತ್ತಿರದ ಹಲವು ಔಷಧೀಯ ಗುಣಗಳಿವೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿದೆ. ಕರ್ಪೂರವು ದೇಹದ ಅನೇಕ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ. ಯಾವ ಸಮಸ್ಯೆಗಳನ್ನು ನಿವಾರಿಸಲು ಕರ್ಪೂರವನ್ನು ಬಳಸಬಹುದು ತಿಳಿಯೋಣ.

ತಲೆನೋವು ನಿವಾರಣೆ ಕರ್ಪೂರವು ಸಾಕಷ್ಟು ತಂಪು ನೀಡುತ್ತದೆ. ತಲೆನೋವಿನ ಸಮಸ್ಯೆ ಇದ್ದರೆ ಅರ್ಜುನ ತೊಗಟೆ, ಬಿಳಿ ಚಂದನ ಮತ್ತು ಶುಂಠಿಯೊಂದಿಗೆ ಕರ್ಪೂರವನ್ನು ಬೆರೆಸಿ ಹಚ್ಚುವುದರಿಂದ ತಲೆನೋವಿಗೆ ಉತ್ತಮ ಪರಿಹಾರ ದೊರೆಯುತ್ತದೆ. ತಲೆನೋವಿನ ಸಂದರ್ಭದಲ್ಲಿ ಅರ್ಜುನನ ತೊಗಟೆ, ಬಿಳಿಚಂದನ ಮತ್ತು ಶುಂಠಿಯನ್ನು ಸಮಪ್ರಮಾಣದಲ್ಲಿ ಬೆರೆಸಿ ಪೇಸ್ಟ್ ಮಾಡಿ ನಂತರ ತಲೆಗೆ ಹಚ್ಚಿದರೆ ತಲೆನೋವು ನಿವಾರಣೆಯಾಗುತ್ತದೆ.

ಕೂದಲ ಆರೈಕೆಗೆ ಸಹಕಾರಿ ಕರ್ಪೂರವು ತಲೆಹೊಟ್ಟು, ಶುಷ್ಕತೆ, ಕೂದಲು ಉದುರುವಿಕೆಯಂತಹ ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಕೊಬ್ಬರಿ ಎಣ್ಣೆಯನ್ನು ಕರ್ಪೂರದೊಂದಿಗೆ ಬೆರೆಸಿ ಹಚ್ಚುವುದರಿಂದ ಕೂದಲು ಉದುರುವುದು ನಿಲ್ಲುತ್ತದೆ ಮತ್ತು ಕೂದಲು ಹೊಳೆಯುತ್ತದೆ. ನೀವು ದಪ್ಪ ಮತ್ತು ಉದ್ದ ಕೂದಲು ಬಯಸಿದರೆ, ತೆಂಗಿನ ಎಣ್ಣೆಯನ್ನು ಕರ್ಪೂರದೊಂದಿಗೆ ಬೆರೆಸಿ ಹಚ್ಚುವುದು ಪ್ರಯೋಜನಕಾರಿ.

ಶೀತವನ್ನು ಕೂಡ ನಿವಾರಿಸುತ್ತೆ ಶೀತ ಮತ್ತು ಜ್ವರವನ್ನು ನಿವಾರಿಸಲು ಕರ್ಪೂರವು ತುಂಬಾ ಪ್ರಯೋಜನಕಾರಿಯಾಗಿದೆ. ಶೀತ-ನೆಗಡಿ ಅಥವಾ ಕೆಮ್ಮು ಹೆಚ್ಚಾದ ಸಂದರ್ಭದಲ್ಲಿ, ಕರ್ಪೂರವನ್ನು ಬೆಚ್ಚಗಿನ ಸಾಸಿವೆ ಎಣ್ಣೆಯೊಂದಿಗೆ ಬೆರೆಸಿ ಮಸಾಜ್ ಮಾಡಬೇಕು. ಬಿಸಿನೀರಿನಲ್ಲಿ ಕರ್ಪೂರವನ್ನು ಹಾಕಿ ಉಸಿರೆಳೆದುಕೊಳ್ಳುವುದರಿಂದ ಮುಚ್ಚಿಹೋಗಿರುವ ಮೂಗು ತೆರೆಯುತ್ತದೆ ಮತ್ತು ಶೀತ ಮತ್ತು ಜ್ವರದಲ್ಲಿ ಉಪಶಮನವನ್ನು ನೀಡುತ್ತದೆ.

ನೋವಿಗೆ ಪರಿಹಾರ ಪಾದಗಳಲ್ಲಿ ನೋವು ಮತ್ತು ಊತದ ಸಮಸ್ಯೆ ಇದ್ದರೆ ಕರ್ಪೂರದಲ್ಲಿ ಎಣ್ಣೆಯನ್ನು ಬೆರೆಸಿ ಮಸಾಜ್ ಮಾಡುವುದರಿಂದ ಪರಿಹಾರ ದೊರೆಯುತ್ತದೆ. ನಿಮಗೆ ಸುಸ್ತು ಅನಿಸಿದರೆ ಎಳ್ಳು ಅಥವಾ ಸಾಸಿವೆ ಎಣ್ಣೆಯೊಂದಿಗೆ ಕರ್ಪೂರವನ್ನು ಬೆರೆಸಿ ಮಸಾಜ್ ಮಾಡಬೇಕು.

ಮೊಡವೆಗಳ ಸಮಸ್ಯೆಯೂ ದೂರ ಕರ್ಪೂರದಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣವಿದೆ. ಕರ್ಪೂರದ ಬಳಕೆಯಿಂದ ದೂರವಾಗುತ್ತದೆ. ಇದು ಮೊಡವೆಗಳು ಬೆಳೆಯದಂತೆ ಬ್ಯಾಕ್ಟೀರಿಯಾವನ್ನು ದೂರವಿಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?