ಇತ್ತೀಚಿನ ದಿನಗಳಲ್ಲಿ ನಾವು ಅನುಸರಿಸುತ್ತಿರುವ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದ ಅನೇಕ ಜನರು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದೇವೆ. ಅದರಲ್ಲೂ ಮಧುಮೇಹ, ಬೊಜ್ಜು, ಬಿಪಿಯಂತಹ ಆರೋಗ್ಯ ಸಮಸ್ಯೆಗಳು ಚಿಕ್ಕ ವಯಸ್ಸಿನಿಂದಲೇ ಶುರುವಾಗತ್ತವೆ. ಹೊಟ್ಟೆಯ ಕೊಬ್ಬು (Belly Fat) ಸಾಮಾನ್ಯ ಸಮಸ್ಯೆಯಾಗಿದೆ. ಹೊಟ್ಟೆಯ ಕೊಬ್ಬಿನಿಂದಾಗಿ ನಮ್ಮ ಆತ್ಮಸ್ಥೈರ್ಯ ಕುಂದಿದರೂ ಅದರಲ್ಲಿ ಶೇಖರಣೆಯಾಗುವ ಕೊಬ್ಬಿನಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಯಾವುದೇ ಹಣವನ್ನು ಖರ್ಚು ಮಾಡದೆ ಹೊಟ್ಟೆಯ ಕೊಬ್ಬನ್ನು ಕರಗಿಸಲು ಕೆಲವು ರೀತಿಯ ಆಹಾರ ಬದಲಾವಣೆಗಳು ಸಾಕು ಎಂದು ಅವರು ಹೇಳುತ್ತಾರೆ.
ತಜ್ಞರ ಪ್ರಕಾರ, ಅಧಿಕ ತೂಕ ಮತ್ತು ಹೊಟ್ಟೆಯ ಕೊಬ್ಬಿನಿಂದ ಬಳಲುತ್ತಿರುವವರು ಕಾರ್ಬೋಹೈಡ್ರೇಟ್ಗಳು, ಕೊಬ್ಬು ಮತ್ತು ಸಕ್ಕರೆ ಅಧಿಕವಾಗಿರುವ ಆಹಾರವನ್ನು ಸೇವಿಸಬಾರದು. ಅಲ್ಲದೆ ಕರಿದ ಆಹಾರಗಳನ್ನು ತಿನ್ನಬಾರದು. ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಕಡಿಮೆ ಕ್ಯಾಲೋರಿ ಇರುವ ಆಹಾರವನ್ನು ಸೇವಿಸಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. ವಾಸ್ತವವಾಗಿ ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಅಷ್ಟು ಸುಲಭವಲ್ಲ. ಆದರೆ ಕೆಲವು ರೀತಿಯ ತರಕಾರಿಗಳನ್ನು ತಿನ್ನುವ ಮೂಲಕ ನೀವು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಇದನ್ನೂ ಓದಿ: Benefits of Sitting on Floor: ನೆಲದ ಮೇಲೆ ಕುಳಿತುಕೊಳ್ಳುವುದರಿಂದ ಇಷ್ಟೆಲ್ಲಾ ಲಾಭಗಳು
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.