Benefits of Sitting on Floor: ನೆಲದ ಮೇಲೆ ಕುಳಿತುಕೊಳ್ಳುವುದರಿಂದ ಇಷ್ಟೆಲ್ಲಾ ಲಾಭಗಳು

ಬದಲಾಗುತ್ತಿರುವ ಇಂದಿನ ನಮ್ಮ ಜೀವನಶೈಲಿ ಮತ್ತು ಆಧುನಿಕತೆಯಿಂದಾಗಿ, ಹಳೆಯ ಸಂಪ್ರದಾಯಗಳು ಹೆಚ್ಚಾಗಿ ಕಣ್ಮರೆಯಾಗುತ್ತಿವೆ. ಅದರಲ್ಲಿ ನೆಲದ ಮೇಲೆ ಕುಳಿತುಕೊಳ್ಳುವ ಅಥವಾ ತಿನ್ನುವ ಅಭ್ಯಾಸವೂ ಒಂದು.

Benefits of Sitting on Floor: ನೆಲದ ಮೇಲೆ ಕುಳಿತುಕೊಳ್ಳುವುದರಿಂದ ಇಷ್ಟೆಲ್ಲಾ ಲಾಭಗಳು
ಪ್ರಾತಿನಿಧಿಕ ಚಿತ್ರImage Credit source: healthline.com
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 31, 2022 | 7:00 AM

ದಿನಕಳೆದಂತೆ ಕಾಲ ಕೂಡ ಬದಲಾಗುತ್ತಿದೆ. ಬದಲಾಗುತ್ತಿರುವ ಇಂದಿನ ನಮ್ಮ ಜೀವನಶೈಲಿ ಮತ್ತು ಆಧುನಿಕತೆಯಿಂದಾಗಿ, ಹಳೆಯ ಸಂಪ್ರದಾಯಗಳು ಹೆಚ್ಚಾಗಿ ಕಣ್ಮರೆಯಾಗುತ್ತಿವೆ. ಅದರಲ್ಲಿ ನೆಲದ (Floor) ಮೇಲೆ ಕುಳಿತು (Sitting)ಕೊಳ್ಳುವ ಅಥವಾ ತಿನ್ನುವ ಅಭ್ಯಾಸವೂ ಒಂದು. ನೆಲದ ಮೇಲೆ ಕುಳಿತವರಿಗೆ ಗೊತ್ತು ನೆಲದ ಮೇಲೆ ಕೂರುವುದರಿಂದ ಆಗುವ ಲಾಭ ಮತ್ತು ಸುಖ. ಹಿಂದೆ ನಮ್ಮ ಮನೆಯಲ್ಲಿ ಹಿರಿಯರು ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದರು. ನೆಲದ ಮೇಲೆ ಕುಳಿತುಕೊಳ್ಳುವುದರಿಂದ ನಮ್ಮ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದು ಅನೇಕ ಅಧ್ಯಯನಗಳು ಮತ್ತು ಸಂಶೋಧನೆಗಳಿಂದ ಸಾಬೀತಾಗಿದೆ. ಆಯುರ್ವೇದವು ನೆಲದ ಮೇಲೆ ಕುಳಿತುಕೊಳ್ಳಲು ಸಹ ಹೇಳುತ್ತದೆ. ಹಾಗಾದರೆ ನೆಲದ ಮೇಲೆ ಕುಳಿತುಕೊಳ್ಳುವ ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ನೆಲದ ಮೇಲೆ ಕುಳಿತುಕೊಳ್ಳುವುದರಿಂದಾಗು ಪ್ರಯೋಜನಗಳು ಹೀಗಿವೆ

  1. ಜೀರ್ಣಕ್ರಿಯೆ ಸುಧಾರಣೆ: ನೆಲದ ಮೇಲೆ ಕಾಲು ಚಾಚಿ ಕುಳಿತುಕೊಳ್ಳುವುದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ತಟ್ಟೆಯನ್ನು ನೆಲದ ಮೇಲೆ ಇಟ್ಟು ತಿನ್ನುವುದರಿಂದ ದೇಹವನ್ನು ಸ್ವಲ್ಪ ಮುಂದಕ್ಕೆ ಬಾಗುತ್ತದೆ. ನಂತರ ಸಹಜ ಸ್ಥಿತಿಗೆ ಬರುತ್ತೇವೆ. ಪದೇ ಪದೇ ದೇಹವನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಬಗ್ಗಿಸುವುದು ಹೊಟ್ಟೆಯ ಸ್ನಾಯುಗಳನ್ನು ಉತ್ತೇಜುತ್ತದೆ ಮತ್ತು ಹೊಟ್ಟೆಯಲ್ಲಿ ಜೀರ್ಣಕಾರಿ ಕಿಣ್ವಗಳ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ. ಇದು ಆಹಾರವನ್ನು ಉತ್ತಮವಾಗಿ ಜೀರ್ಣಿಸಿಕೊಳ್ಳಲು ಪ್ರಾರಂಭಿಸುತ್ತದೆ.
  2. ಬೆನ್ನುಮೂಳೆ ಬಲಿಷ್ಠ: ಆರೋಗ್ಯ ತಜ್ಞರ ಪ್ರಕಾರ ಬೆನ್ನುಮೂಳೆಯನ್ನು ಆರೋಗ್ಯಕರವಾಗಿಸಲು ನೆಲದ ಮೇಲೆ ಕುಳಿತುಕೊಳ್ಳುವುದಾಗಿದೆ. ಹೀಗೆ ಮಾಡುವುದರಿಂದ ನೀವು ಹೆಚ್ಚು ಸ್ಥಿರವಾಗಿ ಕುಳಿತುಕೊಳ್ಳುತ್ತೀರಿ. ನೆಲದ ಮೇಲೆ ಕುಳಿತುಕೊಳ್ಳುವುದು ನಮ್ಮ ಬೆನ್ನುಮೂಳೆಯ ಸಂರಚನೆಯನ್ನು ಸುಧಾರಿಸುತ್ತದೆ.
  3. ಮನಸ್ಸಿಗೆ ವಿಶ್ರಾಂತಿ: ನೆಲದ ಮೇಲೆ ಕುಳಿತುಕೊಳ್ಳುವುದರಿಂದ ಮನಸ್ಸಿಗೆ ವಿಶ್ರಾಂತಿ ದೊರೆಯುತ್ತದೆ. ಜೊತೆಗೆ ಪದ್ಮಾಸನ ಮತ್ತು ಸುಖಾಸನಗಳು ಧ್ಯಾನಕ್ಕೆ ಸೂಕ್ತವಾದ ಭಂಗಿಗಳಾಗಿವೆ. ಈ ಆಸನಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಭಂಗಿಗಳಲ್ಲಿ ಕುಳಿತುಕೊಳ್ಳುವುದರಿಂದ ದೇಹದಲ್ಲಿ ಆಮ್ಲಜನಕದ ಹರಿವು ಹೆಚ್ಚಾಗುತ್ತದೆ.
  4. ಪೃಷ್ಠದ ಸ್ನಾಯುಗಳಿಗೆ ಬಲ: ದುರ್ಬಲವಾದ ಪೃಷ್ಠದ ನಮ್ಮ ಸ್ಥಿರತೆ ಮತ್ತು ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಸೊಂಟ ಮತ್ತು ಬೆನ್ನು ದುರ್ಬಲವಾಗಿದ್ದರೆ, ನೆಲದ ಮೇಲೆ ದೀರ್ಘಕಾಲ ಕುಳಿತುಕೊಳ್ಳಿ. ನೆಲದ ಮೇಲೆ ಕುಳಿತುಕೊಳ್ಳುವುದರಿಂದ ಸೊಂಟದ ಸ್ನಾಯುಗಳು ಬಲಗೊಳ್ಳುತ್ತವೆ. ಇದು ನಿಮ್ಮ ಬೆನ್ನನ್ನು ಸಹ ಬಲಪಡಿಸುತ್ತದೆ.
  5. ದೀರ್ಘಾಯುಷ್ಯ: ನೆಲದ ಮೇಲೆ ಕುಳಿತುಕೊಳ್ಳುವ ಅಭ್ಯಾಸ ನಮ್ಮನ್ನು ದೀರ್ಘಾಯುಷ್ಯವನ್ನಾಗಿಸುತ್ತದೆ. ಇದು ನಮ್ಮ ಸಂಪೂರ್ಣ ಚಲನೆಯ ವ್ಯಾಪ್ತಿಯನ್ನು ಸ್ಥಿರಗೊಳಿಸುತ್ತದೆ.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ