ರಾತ್ರಿ ಮಲಗುವ ಮುನ್ನ ಲವಂಗದ ನೀರನ್ನು ಕುಡಿಯೋದ್ರಿಂದ ಲಭಿಸುವ ಪ್ರಯೋಜನಗಳೇನು ಗೊತ್ತೇ?

ಲವಂಗವು ಆಹಾರದ ರುಚಿಯನ್ನು ಹೆಚ್ಚಿಸುವ ಅದ್ಭುತವಾದ ಮಸಾಲೆ ಪದಾರ್ಥವಾಗಿದೆ. ಅಷ್ಟೇ ಅಲ್ಲದೆ ಇದು ಆರೋಗ್ಯಕ್ಕೂ ಸಖತ್‌ ಪ್ರಯೋಜನಕಾರಿ. ಇದರಲ್ಲಿ ಆಂಟಿ ಆಕ್ಸಿಡೆಂಟ್‌, ವಿಟಮಿನ್‌ ಸಿ, ಫೈಬರ್‌ ಇತ್ಯಾದಿ ಪೋಷಕಾಂಶಗಳು ಹೇರಳವಾಗಿದ್ದು, ಇದು ಜೀರ್ಣಕ್ರಿಯೆನ್ನು ಸುಧಾರಿಸುವುದರಿಂದ ಹಿಡಿದು ಬಾಯಿಯ ದುರ್ವಾಸನೆ ಹೋಗಲಾಡಿಸುವವರೆಗೆ ಸಾಕಷ್ಟು ಅದ್ಭುತ ಪ್ರಯೋಜನಗಳನ್ನು ಹೊಂದಿದೆ. ಹೀಗಿರುವಾಗ ನಿತ್ಯ ರಾತ್ರಿ ಮಲಗುವ ಮುನ್ನ ಒಂದು ಲೋಟ ಲವಂಗದ ನೀರನ್ನು ಕುಡಿಯುವುದರಿಂದ ದೇಹಕ್ಕೆ ಏನೆಲ್ಲಾ ಲಾಭಗಳು ದೊರೆಯುತ್ತವೆ ಎಂಬುದನ್ನು ನೋಡೋಣ ಬನ್ನಿ.

ರಾತ್ರಿ ಮಲಗುವ ಮುನ್ನ ಲವಂಗದ ನೀರನ್ನು ಕುಡಿಯೋದ್ರಿಂದ ಲಭಿಸುವ ಪ್ರಯೋಜನಗಳೇನು ಗೊತ್ತೇ?
ಸಾಂದರ್ಭಿಕ ಚಿತ್ರ
Image Credit source: magnific

Updated on: Oct 22, 2026 | 8:34 PM

ಗಾತ್ರದಲ್ಲಿ ಸಣ್ಣದಾಗಿದ್ದರೂ, ಲವಂಗವು (clove) ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಹೌದು ಭಾರತೀಯ ಪಾಕಪದ್ಧತಿಯಲ್ಲಿ ಹೇರಳವಾಗಿ ಬಳಸಲಾಗುವ ಲವಂಗ ಕೇವಲ ಮಸಾಲೆ ಪದಾರ್ಥ ಮಾತ್ರವಲ್ಲ ಆರೋಗ್ಯದ ನಿಧಿಯೂ ಆಗಿದೆ. ಉತ್ಕರ್ಷಣ ನಿರೋಧಕ ಗುಣಗಳಿಂದ ಸಮೃದ್ಧವಾಗಿರುವ ಈ ಮಸಾಲೆ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಸಹಕಾರಿಯಾಗಿದೆ. ಆದ್ದರಿಂದಲೇ ಸಾಂಪ್ರದಾಯಿಕ ಔಷಧದಲ್ಲಿಯೂ ಇದನ್ನು ಬಳಸಲಾಗುತ್ತದೆ. ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ಲವಂಗವನ್ನು ಒಂದು ಗ್ಲಾಸ್‌ ನೀರಿಗೆ ಹಾಕಿ ರಾತ್ರಿ ಮಲಗುವ ಮುನ್ನ ಕುಡಿದರೆ ದೇಹಕ್ಕೆ ಏನೆಲ್ಲಾ ಲಾಭಗಳು ಲಭಿಸುತ್ತವೆ ಎಂಬುದನ್ನು ನೋಡೋಣ ಬನ್ನಿ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ:

ಅನೇಕ ಜನರು ರಾತ್ರಿಯಲ್ಲಿ ಹೊಟ್ಟೆಯುಬ್ಬರ ಮತ್ತು ಗ್ಯಾಸ್‌ನಂತಹ ಜೀರ್ಣಕಾರಿ ಸಮಸ್ಯೆಗಳನ್ನು ಅನುಭವಿಸುತ್ತಾರೆ. ನೀವು ಈ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಲವಂಗದ ನೀರನ್ನು ಕುಡಿಯುವುದರಿಂದ ಈ ಸಮಸ್ಯೆಗೆ ಪರಿಹಾರವನ್ನು ಪಡೆಯಬಹುದು. ಇದಲ್ಲದೆ ಲವಂಗವು ಅತಿಸಾರ ಮತ್ತು ಎದೆಯುರಿ ಮುಂತಾದ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ:

ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ನೀವು ರಾತ್ರಿ ಮಲಗುವ ಮುನ್ನ ಲವಂಗದ ನೀರನ್ನು ಸೇವನೆ ಮಾಡಬಹುದು. ಲವಂಗವು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಇದರ ನೀರನ್ನು ಕುಡಿಯುವುದರಿಂದ  ಹಾನಿಕಾರಕ ಸೋಂಕುಗಳ ವಿರುದ್ಧ ಹೋರಾಡುವ ನಿಮ್ಮ ದೇಹದ ಸಾಮರ್ಥ್ಯವ ಹೆಚ್ಚುತ್ತದೆ.

ಬಾಯಿಯ ಆರೋಗ್ಯವನ್ನು ಸುಧಾರಿಸುತ್ತದೆ:

ಲವಂಗದಲ್ಲಿರುವ ಯುಜೆನಾಲ್ ಅಂಶ ಬಾಯಿಯ ಆರೋಗ್ಯಕ್ಕೂ ಅಪಾರ ಪ್ರಯೋಜನಗಳನ್ನು ನೀಡುತ್ತವೆ. ಯುಜೆನಾಲ್ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು, ಅದು ಬಾಯಿಯಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ. ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ.

ಉತ್ತಮ ನಿದ್ರೆ ಪಡೆಯಲು ಸಹಕಾರಿ:

ಲವಂಗ ನೀರು ಆಳವಾದ ನಿದ್ರೆಗೆ ಒಂದು ಉತ್ತಮ ವರದಾನ. ಇದು ಶಾಂತಗೊಳಿಸುವ ಗುಣಗಳನ್ನು ಹೊಂದಿದ್ದು, ಈ ಗುಣಗಳು ಮನಸ್ಸು ಮತ್ತು ದೇಹ ಎರಡನ್ನೂ ವಿಶ್ರಾಂತಿ ಮಾಡುತ್ತದೆ, ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಲವಂಗ ನೀರನ್ನು ನಿಯಮಿತವಾಗಿ ಕುಡಿಯುವುದರಿಂದ ರಾತ್ರಿಯಿಡೀ ನೆಮ್ಮದಿಯ ನಿದ್ರೆಯನ್ನು ಪಡೆಯಬಹುದು. ಅಲ್ಲದೆ ಲವಂಗದ ನೀರು ಕುಡಿಯುವುದರಿಂದ ದೇಹವು ಸಂಪೂರ್ಣವಾಗಿ ಚೈತನ್ಯಶೀಲವಾಗಿರುತ್ತದೆ.

ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಕಾರಿ:

ಲವಂಗ ನೀರು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಲವಂಗ ಇನ್ಸುಲಿನ್ ಕಾರ್ಯವನ್ನು ಸುಧಾರಿಸುತ್ತದೆ, ಲವಂಗದ ನೀರನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಟ್ಟುಕೊಳ್ಳಬಹುದು. ಅಲ್ಲದೆ ಲವಂಗದ ನೀರು ಕಾಲೋಚಿತ ಕಾಯಿಲೆಗಳು ಮತ್ತು ಸೋಂಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: ದಿನಕ್ಕೊಂದು ಪೇರಳೆ ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಲಭಿಸುವ ಪ್ರಯೋಜನಗಳೇನು?

ದೇಹದದಿಂದ ವಿಷವನ್ನು ಹೊರಹಾಕಲು ಸಹಕಾರಿ:

ರಾತ್ರಿ ಮಲಗುವ ಮುನ್ನ ಲವಂಗದ ನೀರನ್ನು ಕುಡಿಯುವುದರಿಂದ ದೇಹ ನಿರ್ವಿಷಗೊಳ್ಳುತ್ತದೆ. ಅಲ್ಲದೆ ಇದು ಯಕೃತ್ತು ಮತ್ತು ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ರಕ್ತವನ್ನು ಶುದ್ಧೀಕರಣಗೊಳಿಸಿ ಚರ್ಮದ ಮೇಲಿನ ಮೊಡವೆಗಳು ಮತ್ತು ಕಲೆಗಳನ್ನು ನಿವಾರಿಸಲು ಕೂಡ ಸಹಾಯ ಮಾಡುತ್ತದೆ.

ಲವಂಗದ ನೀರನ್ನು ತಯಾರಿಸುವುದು ಹೇಗೆ?

ಲವಂಗದ ನೀರನ್ನು ತಯಾರಿಸುವುದು ತುಂಬಾ ಸುಲಭ. ಒಂದು ಪಾತ್ರೆಯಲ್ಲಿ ನೀರನ್ನು ಬಿಸಿ ಮಾಡಿ, ಅದಕ್ಕೆ ಲವಂಗ ಸೇರಿಸಿ, 5 ರಿಂದ 7 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಕುದಿಸಿ. ಸ್ವಲ್ಪ ತಣ್ಣಗಾಗಿಸಿ ಮತ್ತು ಸೋಸಿ. ಉಗುರು ಬೆಚ್ಚಗಿರುವಾಗಲೇ ಲವಂಗದ ನೀರನ್ನು ಕುಡಿಯಿರಿ. ರುಚಿಯನ್ನು ಹೆಚ್ಚಿಸಲು ನೀವು ಸ್ವಲ್ಪ ನಿಂಬೆ ರಸ ಅಥವಾ ಜೇನುತುಪ್ಪವನ್ನು ಕೂಡ ಸೇರಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us