Clove Benefits: ಚಳಿಗಾಲದಲ್ಲಿ ಕಾಡುವ ಒಣ ಕೆಮ್ಮು ಸೇರಿದಂತೆ ಹಲವು ಸಮಸ್ಯೆಗಳಿಗೆ ಲವಂಗ ರಾಮಬಾಣ

|

Updated on: Jan 14, 2024 | 8:38 PM

ಲವಂಗವನ್ನು ಭಾರತೀಯ ಪಾಕ ಪದ್ಧತಿಯಲ್ಲಿ ಬಳಸಲಾಗುತ್ತದೆ. ಆಹಾರಕ್ಕೆ ಉತ್ತಮ ಸುವಾಸನೆ ಹಾಗೂ ರುಚಿಯನ್ನು ನೀಡುವುದು ಮಾತ್ರವಲ್ಲದೇ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಚಳಿಗಾಲದಲ್ಲಿ ಕಾಡುವ ಅನೇಕ ಸಮಸ್ಯೆಗಳನ್ನು ತೊಡೆದುಹಾಕಲು ಲವಂಗ ಸಹಾಯ ಮಾಡುತ್ತದೆ.

Clove Benefits: ಚಳಿಗಾಲದಲ್ಲಿ ಕಾಡುವ ಒಣ ಕೆಮ್ಮು ಸೇರಿದಂತೆ ಹಲವು ಸಮಸ್ಯೆಗಳಿಗೆ ಲವಂಗ ರಾಮಬಾಣ
Clove Benefits
Image Credit source: Pinterest
Follow us on

ಚಳಿಗಾಲ ಪ್ರಾರಂಭವಾಗುತ್ತಿದ್ದಂತೆ, ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿವವರ ಸಂಖ್ಯೆಯೂ ಹೆಚ್​ಚಾಗುತ್ತಿದೆ. ವೈದ್ಯರನ್ನು ಭೇಟಿಯಾಗಿ ಔಷಧಿಗಳನ್ನು ತೆಗೆದುಕೊಂಡರೂ ಸಹ ಕೆಲವೊಮ್ಮೆ ಕೆಮ್ಮು ದೀರ್ಘಕಾಲದವರೆಗೂ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ಕೆಲವು ಮನೆಮದ್ದುಗಳನ್ನು ಮಾಡಬೇಕು. ಒಣ ಕೆಮ್ಮನ್ನು ತೊಡೆದುಹಾಕಲು ನೀವು ಲವಂಗವನ್ನು ಬಳಸಬಹುದು. ಲವಂಗವನ್ನು ಜೇನುತುಪ್ಪದೊಂದಿಗೆ ಸೇರಿಸಿ ಜಗಿಯುವುದರಿಂದ ಒಣ ಕೆಮ್ಮಿನಿಂದ ತ್ವರಿತ ಪರಿಹಾರ ಪಡೆದುಕೊಳ್ಳಬಹುದು.

ಜೇನುತುಪ್ಪ ಮತ್ತು ಲವಂಗ:

ಜೇನು ಮತ್ತು ಲವಂಗ ಕೆಮ್ಮಿಗೆ ಉತ್ತಮ ಪರಿಹಾರವಾಗಿದೆ. ಸುಮಾರು 7-8 ಲವಂಗಗಳನ್ನು ತೆಗೆದುಕೊಂಡು ಬಿಸಿ ಬಾಣಲೆಯಲ್ಲಿ ನಿಧಾನವಾಗಿ ಹುರಿಯಿರಿ. ಲವಂಗ ತಣ್ಣಗಾದ ನಂತರ, ನುಣ್ಣಗೆ ಪುಡಿ ಮಾಡಿ. ಈಗ ಇದಕ್ಕೆ 3-4 ಚಮಚ ಜೇನುತುಪ್ಪ ಸೇರಿಸಿ. ಇದನ್ನು ಸ್ವಲ್ಪ ಬಿಸಿ ಮಾಡಿ. ಮಿಶ್ರಣವನ್ನು ಬೆಳಿಗ್ಗೆ, ಸಂಜೆ ಮತ್ತು ಮಧ್ಯಾಹ್ನ ತಲಾ ಒಂದು ಚಮಚವನ್ನು ತೆಗೆದುಕೊಳ್ಳಿ. ಇದು ಕೆಮ್ಮಿನಿಂದ ತ್ವರಿತ ಪರಿಹಾರವನ್ನು ನೀಡುತ್ತದೆ.

ಲವಂಗ ತಿನ್ನುವುದರಿಂದ ಆಗುವ ಪ್ರಯೋಜನಗಳು:

  • ಲವಂಗವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಅದು ಊತವನ್ನು ಕಡಿಮೆ ಮಾಡುತ್ತದೆ. ಕೀಲು ನೋವಿನಲ್ಲಿ ಲವಂಗ ತುಂಬಾ ಪ್ರಯೋಜನಕಾರಿ.
  • ಲವಂಗವು ಯುಜೆನಾಲ್ ಎಂಬ ಉತ್ಕರ್ಷಣ ನಿರೋಧಕವನ್ನು ಹೊಂದಿರುತ್ತದೆ, ಇದು ಸ್ವತಂತ್ರ ರಾಡಿಕಲ್ಗಳು, ಹೃದಯ, ಮಧುಮೇಹ ಮತ್ತು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಲವಂಗವು ಹೊಟ್ಟೆಯ ಹುಣ್ಣುಗಳನ್ನು ಕಡಿಮೆ ಮಾಡುತ್ತದೆ ಮತ್ತು ಹೊಟ್ಟೆಯ ಒಳಪದರವನ್ನು ರಕ್ಷಿಸುತ್ತದೆ.
  • ಚಳಿಗಾಲದಲ್ಲಿ ಲವಂಗವನ್ನು ತಿನ್ನುವುದರಿಂದ ಲೋಳೆಯು ದಪ್ಪವಾಗುತ್ತದೆ ಮತ್ತು ಲೋಳೆಯನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ.
  • ಲವಂಗವು ಉಬ್ಬುವುದು, ಗ್ಯಾಸ್ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.
  • ಲವಂಗವು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುವ ಹಲವಾರು ಕಿಣ್ವಗಳನ್ನು ಹೊಂದಿರುತ್ತದೆ.
  • ಲವಂಗವು ವಿಟಮಿನ್ ಸಿ ಅನ್ನು ಹೊಂದಿರುತ್ತದೆ, ಇದು ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
  • ಲವಂಗವು ಯಕೃತ್ತಿನ ಕಾರ್ಯವನ್ನು ಉತ್ತೇಜಿಸುತ್ತದೆ. ಇದು ಹಲ್ಲುನೋವಿನಿಂದಲೂ ಪರಿಹಾರ ನೀಡುತ್ತದೆ.
  • ಲವಂಗವು ಮೂಳೆಗಳಿಗೂ ಒಳ್ಳೆಯದು. ಲವಂಗವು ಬಾಯಿಯಿಂದ ಬ್ಯಾಕ್ಟೀರಿಯಾವನ್ನು ಸಹ ತೆಗೆದುಹಾಕುತ್ತದೆ. ಲವಂಗವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: