ಒಂದು ತಿಂಗಳು ಸಕ್ಕರೆ ಸೇವಿಸುವುದನ್ನು ಬಿಟ್ಟರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳನ್ನು ಸಂಭವಿಸುತ್ತವೆ ಗೊತ್ತಾ?

ಇತ್ತೀಚಿನ ದಿನಗಳಲ್ಲಿ, ಜನರು ಫಿಟ್ ಆಗಿ ಮತ್ತು ಆರೋಗ್ಯವಾಗಿರಲು ಜೀವನಶೈಲಿಯಲ್ಲಿ ಮತ್ತು ಆಹಾರ ಕ್ರಮದಲ್ಲಿ ಅನೇಕ ರೀತಿಯ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಹೌದು ವ್ಯಾಯಾಮ ಮಾಡುವುದು, ಜಂಕ್‌ ಫುಡ್‌ ತ್ಯಜಿಸುವುದು, ಸಾಕಷ್ಟು ನೀರು ಕುಡಿಯುವುದು ಇತ್ಯಾದಿ ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಅದರಲ್ಲಿ ಸಕ್ಕರೆ ಸೇವನೆ ಮಾಡದಿರುವುದು ಕೂಡ ಒಂದು. ಹಾಗಿದ್ರೆ ಒಂದು ತಿಂಗಳ ಕಾಲ ಸಕ್ಕರೆ ತ್ಯಜಿಸಿದರೆ ದೇಹದಲ್ಲಿ ಏನೆಲ್ಲಾ ಸಕಾರಾತ್ಮಕ ಬದಲಾವಣೆಗಳಾಗುತ್ತವೆ ಎಂಬುದನ್ನು ನೋಡೋಣ ಬನ್ನಿ.

ಒಂದು ತಿಂಗಳು ಸಕ್ಕರೆ ಸೇವಿಸುವುದನ್ನು ಬಿಟ್ಟರೆ ದೇಹದಲ್ಲಿ ಏನೆಲ್ಲಾ ಬದಲಾವಣೆಗಳನ್ನು ಸಂಭವಿಸುತ್ತವೆ ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: vecteezy

Updated on: Oct 24, 2026 | 7:05 PM

ನಾವು ಪ್ರತಿದಿನ ಚಹಾ, ಕಾಫಿ, ಸಿಹಿತಿಂಡಿಗಳು ಮತ್ತು ತಂಪು ಪಾನೀಯಗಳನ್ನು ಸೇವನೆ ಮಾಡುತ್ತಿರುತ್ತೇವೆ. ಇವುಗಳ ಮೂಲಕ ತಿಳಿಯದೆಯೇ ಬಹಳಷ್ಟು ಸಕ್ಕರೆಯನ್ನು (sugar) ಸೇವನೆ ಮಾಡುತ್ತೇವೆ. ಈ ರೀತಿ ಅತಿಯಾದ ಸಕ್ಕರೆ ಸೇವನೆಯು ದೇಹಕ್ಕೆ  ಖಂಡಿತವಾಗಿಯೂ ಹಾನಿಕಾರಕವಾಗಿದೆ. ಹೌದು ಸಕ್ಕರೆಯ ಅತಿಯಾದ ಸೇವನೆಯಿಂದ ಬೊಜ್ಜು, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಮೊಡವೆ, ತೂಕ ಏರಿಕೆ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಸಕ್ಕರೆಯನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡುವುದು ಒಳ್ಳೆಯದು. ಹೀಗಿರುವಾಗ ಒಂದು ತಿಂಗಳುಗಳ ಕಾಲ ಸಕ್ಕರೆ ಸೇವಿಸುವುದನ್ನು ನಿಲ್ಲಿಸಿದರೆ ಏನಾಗುತ್ತದೆ, ದೇಹದಲ್ಲಿ ಏನೆಲ್ಲಾ ಸಕಾರಾತ್ಮಕ ಬದಲಾವಣೆಗಳು ಸಂಭವಿಸುತ್ತವೆ ಎಂಬುದನ್ನು ತಿಳಿಯೋಣ ಬನ್ನಿ.

ಸಕ್ಕರೆಯಿಂದ ದೂರವಿದ್ದರೆ ದೇಹದ ಶಕ್ತಿಯ ಮಟ್ಟ ಹೆಚ್ಚಾಗುತ್ತದೆ:

ಹೆಚ್ಚು ಸಕ್ಕರೆ ತಿನ್ನುವುದರಿಂದ ತಕ್ಷಣ ಶಕ್ತಿ ದೊರೆಯುತ್ತದೆ, ಆದರೆ ಅದು ಬೇಗನೆ ಖಾಲಿಯಾಗುತ್ತದೆ. ಇದು ಆಯಾಸ ಮತ್ತು ಆಲಸ್ಯಕ್ಕೆ ಕಾರಣವಾಗುತ್ತದೆ. ನೀವು ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿದಾಗ, ನಿಮ್ಮ ದೇಹವು ನೈಸರ್ಗಿಕವಾಗಿ ಶಕ್ತಿಯನ್ನು ಸಮತೋಲನಗೊಳಿಸಲು ಕಲಿಯುತ್ತದೆ, ಇದರಿಂದಾಗಿ ನೀವು ದಿನವಿಡೀ ಸಕ್ರಿಯ ಮತ್ತು ಉಲ್ಲಾಸದಿಂದ ಇರುತ್ತೀರಿ.

ಸಕ್ಕರೆ ತಿನ್ನೋದನ್ನು ಬಿಟ್ಟರೆ ತೂಕ ಕಡಿಮೆಯಾಗುತ್ತದೆ:

ಸಕ್ಕರೆಯಲ್ಲಿರುವ ಅಂಶಗಳು ದೇಹಕ್ಕೆ ಯಾವುದೇ ಪೋಷಣೆಯನ್ನು ಒದಗಿಸುವುದಿಲ್ಲ, ಬದಲಿಗೆ ಅವು ಕೊಬ್ಬನ್ನು ವೇಗವಾಗಿ ಹೆಚ್ಚಿಸಲು ಕೆಲಸ ಮಾಡುತ್ತವೆ.  ಹೀಗಿರುವಾಗ ನಾವು ಸಂಸ್ಕರಿಸಿದ ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡಿದಾಗ, ದೇಹವು ಹೆಚ್ಚುವರಿ ಕ್ಯಾಲೊರಿಗಳನ್ನು ಸಂಗ್ರಹಿಸುವುದನ್ನು ನಿಲ್ಲಿಸುತ್ತದೆ, ಇದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.  ವಿಶೇಷವಾಗಿ ಹೊಟ್ಟೆಯ ಕೊಬ್ಬು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸುತ್ತದೆ.  ಇದಲ್ಲದೆ, ಕಡಿಮೆ ಸಕ್ಕರೆ ಸೇವಿಸುವುದರಿಂದ ಕಡುಬಯಕೆಗಳು ನಿಯಂತ್ರಣಗೊಳ್ಳುತ್ತವೆ, ಇದು ಅತಿಯಾಗಿ ತಿನ್ನುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಇದು ನೈಸರ್ಗಿಕವಾಗಿ ತೂಕ ಇಳಿಸುವ ಪ್ರಕ್ರಿಯೆಯನ್ನು ಬೆಂಬಲಿಸುತ್ತದೆ.

ಸಕ್ಕರೆ ತ್ಯಜಿಸುವುದು ತ್ವಚೆಯ ಆರೋಗ್ಯಕ್ಕೂ ಒಳ್ಳೆಯದು:

ಹೆಚ್ಚು ಸಕ್ಕರೆ ತಿನ್ನುವುದರಿಂದ ದೇಹದಲ್ಲಿ ಉತ್ಪತ್ತಿಯಾಗುವ ಕಾಲಜನ್ ಗೆ ಹಾನಿಯಾಗುತ್ತದೆ, ಇದು ಚರ್ಮದ ಮೇಲೆ ಸುಕ್ಕುಗಳು, ಮೊಡವೆಗಳು ಮತ್ತು ಮಂದತೆಯನ್ನು ಹೆಚ್ಚಿಸುತ್ತದೆ. ನಾವು ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿದಾಗ, ಚರ್ಮವು ಒಳಗಿನಿಂದ ದುರಸ್ತಿಯಾಗಲು ಪ್ರಾರಂಭಿಸುತ್ತದೆ ಮತ್ತು ನೈಸರ್ಗಿಕ ಹೊಳಪು ಹೆಚ್ಚಾಗುತ್ತದೆ. ಅಲ್ಲದೆ ಸಕ್ಕರೆಯನ್ನು ತ್ಯಜಿಸಿದ ಕೆಲವು ವಾರಗಳಲ್ಲಿ, ನಿಮ್ಮ ಚರ್ಮದಲ್ಲಿ ಗಮನಾರ್ಹ ವ್ಯತ್ಯಾಸವನ್ನು ನೀವು ಗಮನಿಸಬಹುದು. ಮೊಡವೆಗಳು ಕಡಿಮೆಯಾಗುತ್ತವೆ, ನಿಮ್ಮ ಮೈಬಣ್ಣ ಸುಧಾರಿಸುತ್ತದೆ.

ಹೃದಯದ ಆರೋಗ್ಯ ಸುಧಾರಿಸುತ್ತದೆ:

ಹೆಚ್ಚು ಸಕ್ಕರೆ ಸೇವಿಸುವುದರಿಂದ ಹೃದಯದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಇನ್ನಷ್ಟು ಹದಗೆಡಿಸಬಹುದು. ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವುದರಿಂದ ಹೃದಯದ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಮತ್ತು ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ.

ಇದನ್ನೂ ಓದಿ: ಅಳುವುದರಿಂದಲೂ ಸಾಕಷ್ಟು ಪ್ರಯೋಜನಗಳಿವೆಯಂತೆ

ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ:

ಸಕ್ಕರೆ ದೇಹದ ಹಾರ್ಮೋನುಗಳ ಸಮತೋಲನವನ್ನು ಅಡ್ಡಿಪಡಿಸುತ್ತದೆ, ಇದು ನಿದ್ರೆಗೆ ಅಡ್ಡಿಪಡಿಸುತ್ತದೆ. ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವುದರಿಂದ ಆಳವಾದ, ಉತ್ತಮ ನಿದ್ರೆ ಪಡೆಯಲು ಸಹಾಯ ಮಾಡುತ್ತದೆ.

ಮಾನಸಿಕ ಸ್ಪಷ್ಟತೆ ಮತ್ತು ಗಮನವನ್ನು ಹೆಚ್ಚಾಗುತ್ತದೆ:

ಅತಿಯಾದ ಸಕ್ಕರೆ ಸೇವನೆಯು ಮಾನಸಿಕ ಅಸ್ಪಷ್ಟತೆ ಮತ್ತು ಗಮನ ಕೊರತೆಗೆ ಕಾರಣವಾಗಬಹುದು. 30 ದಿನಗಳವರೆಗೆ ಸಕ್ಕರೆ ತಿನ್ನೋದನ್ನು ಸ್ಟಾಪ್‌ ಮಾಡುವುದರಿಂದ ನಿಮ್ಮ ಮನಸ್ಸು ಚುರುಕು, ಶಾಂತವಾಗುತ್ತದೆ. ಗಮನವನ್ನು ಹೆಚ್ಚಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us