AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Traveling in January: ಭಾರತದ ಈ ತಾಣಗಳಿಗೆ ಜನವರಿಯಲ್ಲಿ ಭೇಟಿ ನೀಡಿ, ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳಿ

ಕೊರೆಯುವ ಚಳಿಯಲ್ಲಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳಲು, ಈ ತಿಂಗಳ ವಾರಾಂತ್ಯದಲ್ಲಿ ಕೇವಲ ಮೂರು ದಿನಗಳಲ್ಲಿ ಭೇಟಿ ನೀಡಬಹುದಾದ ತಾಣಗಳ ಕುರಿತು ಮಾಹಿತಿ ಇಲ್ಲಿದೆ.

Traveling in January: ಭಾರತದ ಈ ತಾಣಗಳಿಗೆ ಜನವರಿಯಲ್ಲಿ ಭೇಟಿ ನೀಡಿ, ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳಿ
January 2024
ಅಕ್ಷತಾ ವರ್ಕಾಡಿ
|

Updated on:Jan 02, 2024 | 3:24 PM

Share

ವರ್ಷದ ಮೊದಲ ತಿಂಗಳು ಕೊರೆಯುವ ಚಳಿಯಲ್ಲಿ ಪ್ರಯಾಣಿಸಲು ಬಯಸುತ್ತಿದ್ದೀರಾ? ಈ ತಿಂಗಳಲ್ಲಿ 26 ರಿಂದ 28 ವರೆಗೆ ದೀರ್ಘ ವಾರಾಂತ್ಯ ಇರುವುದರಿಂದ ಈ ಸಮಯದಲ್ಲಿ ಭಾರತದ ಈ ಸುಂದರ ತಾಣಗಳಿಗೆ ಭೇಟಿ ನೀಡಿ. ಕೊರೆಯುವ ಚಳಿಯಲ್ಲಿ ನಿಮ್ಮ ಪ್ರೀತಿ ಪಾತ್ರರೊಂದಿಗೆ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳಿ. ನೀವು ಕೇವಲ ಮೂರು ದಿನಗಳಲ್ಲಿ ಭೇಟಿ ನೀಡಬಹುದಾದ ತಾಣಗಳ ಕುರಿತು ಮಾಹಿತಿ ಇಲ್ಲಿದೆ.

ಅಲ್ಮೋರಾ, ಉತ್ತರಾಖಂಡ:

ಉತ್ತರಾಖಂಡವು ಗಿರಿಧಾಮಗಳಿಂದ ಆವೃತವಾಗಿದ್ದು, ಹಚ್ಚ ಹಸಿರಿನ ಪರಿಸರ ಹಾಗೂ ಬೆಟ್ಟ ಗುಡ್ಡಗಳಿಂದ ಕೂಡಿದೆ. ನೀವಿಲ್ಲಿ ಜೋರಿ ಪಾಯಿಂಟ್, ಜಾಗೇಶ್ವರ ದೇವಸ್ಥಾನ, ಸೂರ್ಯ ದೇವಾಲಯ, ಬಿನ್ಸಾರ್ ಮುಂತಾದ ಸುಂದರ ಸ್ಥಳಗಳನ್ನು ನೋಡಬಹುದು. ಇದಲ್ಲದೇ ಅಲ್ಮೋರಾದಲ್ಲಿ ಅನೇಕ ಮಾರುಕಟ್ಟೆಗಳಿವೆ, ಅಲ್ಲಿ ನೀವು ಸ್ಥಳೀಯ ಬಟ್ಟೆಗಳನ್ನು ಮತ್ತು ಇತರ ಅನೇಕ ಸ್ಥಳೀಯ ವಸ್ತುಗಳನ್ನು ಖರೀದಿಸಬಹುದು.

ಜೈಪುರಕ್ಕೆ ಭೇಟಿ ನೀಡಿ:

ಪಿಂಕ್ ಸಿಟಿ ಎಂದೂ ಕರೆಯಲ್ಪಡುವ ಜೈಪುರ, ಭಾರತದ ರಾಜಸ್ಥಾನದ ಹೃದಯಭಾಗದಲ್ಲಿರುವ ಒಂದು ಮೋಡಿಮಾಡುವ ತಾಣವಾಗಿದೆ. ಇಲ್ಲಿ ನೀವು ಐತಿಹಾಸಿಕ ಕೋಟೆ, ರಾಜಸ್ಥಾನಿ ಸಂಸ್ಕೃತಿಯನ್ನು ಕಣ್ತುಂಬಿಸಿಕೊಳ್ಳಬಹುದು. ಜೊತೆಗೆ ಸ್ಥಳೀಯ ಆಹಾರವನ್ನು ಸವಿಯಿರಿ.

ಇದನ್ನೂ ಓದಿ: ಉಣ್ಣೆ ಬಟ್ಟೆ ಧರಿಸಿ ಮೈ ಮೇಲೆ ದದ್ದು ಮತ್ತು ತುರಿಕೆ ಹೆಚ್ಚಾಗುತ್ತಿದೆಯೇ? ಈ ಸಲಹೆ ಅನುಸರಿಸಿ

‘ಬ್ಲೂ ಸಿಟಿ’ ಜೋಧಪುರ:

ಜನವರಿಯಲ್ಲಿ ರಾಜಸ್ಥಾನದ ಹವಾಮಾನವು ತುಂಬಾ ಆಹ್ಲಾದಕರವಾಗಿರುತ್ತದೆ.ನೀವು ಇಲ್ಲಿ ಬ್ಲೂ ಸಿಟಿಯನ್ನು ನಿಮ್ಮ ಪ್ರಯಾಣದ ತಾಣವನ್ನಾಗಿ ಮಾಡಿಕೊಳ್ಳಬಹುದು. ಮರುಭೂಮಿಯ ಅಂಚಿನಲ್ಲಿರುವ ಈ ನಗರದಲ್ಲಿ ಭೇಟಿ ನೀಡಲು ಹಲವು ಸ್ಥಳಗಳಿವೆ. ರಾಜಸ್ಥಾನಿ ಸಂಸ್ಕೃತಿಯ ಹೊರತಾಗಿ, ದಾಲ್-ಬಾಟಿ ಚುರ್ಮಾದಂತಹ ಸ್ಥಳೀಯ ಆಹಾರವನ್ನು ಇಲ್ಲಿ ಆನಂದಿಸಬಹುದು.

ರಣಥಂಬೋರ್ ರಾಷ್ಟ್ರೀಯ ಉದ್ಯಾನವನ:

ಚಳಿಗಾಲದಲ್ಲಿ ಈ ಸ್ಥಳವು ಹೆಚ್ಚು ಸುಂದರವಾಗಿರುತ್ತದೆ. ರಣಥಂಬೋರ್ ರಾಷ್ಟ್ರೀಯ ಉದ್ಯಾನವನವು ಎಷ್ಟು ಜನಪ್ರಿಯವಾಗಿದೆ ಎಂದರೆ ಪ್ರವಾಸಿಗರು ವರ್ಷವಿಡೀ ಇಲ್ಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಉದ್ಯಾನವನದೊಳಗೆ ಇರುವ ಐತಿಹಾಸಿಕ ರಣಥಂಬೋರ್ ಕೋಟೆ, ವನ್ಯಜೀವಿ ಸಫಾರಿ ಮುಂತಾದವುಗಳನ್ನು ಆನಂದಿಸಲು ಇಲ್ಲಿಗೆ ಭೇಟಿ ನೀಡಿ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:24 pm, Tue, 2 January 24

ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಅಸಹ್ಯ ದೃಶ್ಯ! ಟಾಕ್ಸಿಕ್ ವಿರುದ್ಧ ಕಂಪ್ಲೇಂಟ್ ನೀಡಿದ ವಕೀಲರು ಹೇಳಿದ್ದೇನು?
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಪ್ಯಾರಾ-ಅಥ್ಲೀಟ್ ಪ್ರಸಾದ್​​​ಗೆ 5 ವರ್ಷಗಳ ನಂತರ ಸಿಕ್ತು ಸೂರು ಭಾಗ್ಯ!
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಯುವಕನ ಬಳಿ ನನ್ನ ಕರ್ಕೊಂಡೋಗಿ ಮದುವೆಯಾಗು ಎಂದಿದ್ದ ಅಪ್ರಾಪ್ತೆ ನಿಗೂಢ ಸಾವು
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಕಾಂಪೌಂಡ್ ಒಳಗಿದ್ದ ನಾಯಿಯನ್ನು ಬೇಟೆಯಾಡಲು ಬಂದ ಚಿರತೆ!
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
ಸಂಬಂಧಗಳನ್ನು ಇಟ್ಟುಕೊಂಡು ಮನೆಯನ್ನು ನರಕ ಮಾಡ್ತಾ ಇದೀರಾ; ರಕ್ಷಿತಾಗೆ ಪಾಠ
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
WPL 2026: 6 ಎಸೆತಗಳಲ್ಲಿ 3 ತಪ್ಪು ಮಾಡಿ ಸೋತ ಮುಂಬೈ ಇಂಡಿಯನ್ಸ್
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್!
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಅರಣ್ಯ ಇಲಾಖೆ ವಾಹನವ ಅಟ್ಟಾಡಿಸಿಕೊಂಡು ಬೆನ್ನಟ್ಟಿದ ಕಾಡಾನೆ, ವಿಡಿಯೋ ವೈರಲ್
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಚಾಮರಾಜನಗರ: ನೇನೆಕಟ್ಟೆ ಗ್ರಾಮದಲ್ಲಿ ರಾಜಾರೋಷವಾಗಿ ಸಂಚರಿಸಿದ ಚಿರತೆ
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?
ಮನೆಯಲ್ಲಿ ಆಲೋವೆರಾ ಇದ್ದರೆ ಏನೆಲ್ಲಾ ಲಾಭ?