AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Travel Tips: ಜೂನ್‌ ತಿಂಗಳಲ್ಲಿ ಪ್ರವಾಸ ಮಾಡಲು ಬೆಸ್ಟ್‌ ಬೆಂಗಳೂರು ಸಮೀಪದ ಈ ತಾಣಗಳು

ನೀವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೆ, ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಈ ಸ್ಥಳಗಳಿಗೆ ಪ್ರವಾಸಕ್ಕೆ ಹೋಗಬಹುದು. ವಿಶೇಷವಾಗಿ ನೀವು ಟ್ರೆಕ್ಕಿಂಗ್​​ ಮಾಡಲು ಇಷ್ಟಪಡುವವರಾದರೆ ನೀವು ಇಲ್ಲಿ ವಾರಾಂತ್ಯವನ್ನು ಕಳೆಯಬಹುದಾಗಿದೆ.

Travel Tips: ಜೂನ್‌ ತಿಂಗಳಲ್ಲಿ ಪ್ರವಾಸ ಮಾಡಲು ಬೆಸ್ಟ್‌ ಬೆಂಗಳೂರು ಸಮೀಪದ ಈ ತಾಣಗಳು
ಅಕ್ಷತಾ ವರ್ಕಾಡಿ
|

Updated on: Jun 05, 2024 | 1:00 PM

Share

ಭರ್ಜರಿ ಮಳೆ ಆರಂಭ ಆಗಿದ್ದು, ಮುಂಗಾರು ಮಳೆ ಕೂಡ ಬೆಂಗಳೂರಿಗೆ ಎಂಟ್ರಿ ಕೊಟ್ಟಿದೆ. ಈ ತಂಪಾದ ವಾತಾವರಣದಲ್ಲಿ ನೀವು ಹಚ್ಚಹಸಿರಿನ ಸುಂದರ ಪರಿಸರವನ್ನು ಕಣ್ತುಂಬಿಸಿಕೊಳ್ಳಲು ಬಯಸಿದರೆ ಬೆಂಗಳೂರಿಗೆ ಸಮೀಪವಿರುವ ಈ ಪ್ರದೇಶಗಳಿಗೆ ಭೇಟಿ ನೀಡಿ. ನೀವು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೆ, ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಎರಡು ಮೂರು ದಿನಗಳವರೆಗೆ ಈ ಸ್ಥಳಗಳಿಗೆ ಪ್ರವಾಸಕ್ಕೆ ಹೋಗಬಹುದು. ವಿಶೇಷವಾಗಿ ನೀವು ಪರ್ವತಗಳು ಮತ್ತು ಕಾಡುಗಳಿಗೆ ಹೋಗಬೇಕೆಂದು ಭಾವಿಸಿದರೆ.ನೀವು ಇಲ್ಲಿ ವಾರಾಂತ್ಯವನ್ನು ಕಳೆಯಬಹುದಾಗಿದೆ.

ಸ್ಕಂದಗಿರಿ:

ಸ್ಕಂದಗಿರಿ, ಐತಿಹಾಸಿಕವಾಗಿ ಕಲ್ವಾರಬೆಟ್ಟ ಅಥವಾ ಕಲವರ ದುರ್ಗಾ ಎಂದೂ ಕರೆಯಲ್ಪಡುತ್ತದೆ. ಇದು ಬೆಂಗಳೂರಿನಿಂದ 70 ಕಿ.ಮೀ ದೂರದಲ್ಲಿರುವ ಪರ್ವತ ಕೋಟೆಯಾಗಿದೆ. ಬೆಂಗಳೂರಿನ ಗದ್ದಲ ಹಾಗೂ ಒತ್ತಡದ ನಡುವೆ ಮನಸ್ಸಿಗೆ ಆನಂದವನ್ನು ನೀಡಲು ಬಯಸಿದರೆ ಇಲ್ಲಿದೆ ಭೇಟಿ ನೀಡಿ.

ನಂದಿ ಬೆಟ್ಟ:

ಪ್ರತಿ ವರ್ಷದ ಆಗಸ್ಟ್‌ನಲ್ಲಿ ನಂದಿ ಬೆಟ್ಟವು ಹಚ್ಚಹಸಿರಿನ ಚಾದರ ಹೊದ್ದಂತೆ ಭಾಸವಾಗುತ್ತದೆ. ನಂದಿ ಬೆಟ್ಟಗಳು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಗಂಗಾ ರಾಜವಂಶದಿಂದ ನಿರ್ಮಿಸಲ್ಪಟ್ಟ ಪುರಾತನ ಗಿರಿಧಾಮವಾಗಿದೆ. ನಿಮ್ಮ ಸ್ನೇಹಿತರೊಂದಿಗೆ ನೀವು ಇಲ್ಲಿ ಯೋಜನೆಗಳನ್ನು ಮಾಡಬಹುದು. ಇಲ್ಲಿ ನೀವು ಪರ್ವತಗಳು ಮತ್ತು ಹಸಿರಿನ ಸುಂದರ ನೋಟಗಳನ್ನು ನೋಡಬಹುದು. ನಂದಿ ಬೆಟ್ಟವು ಸುಮಾರು 1500 ಮೀಟರ್ ಎತ್ತರದಲ್ಲಿದೆ. ಆದ್ದರಿಂದ, ನೀವು ಇಲ್ಲಿಂದ ಅನೇಕ ಸುಂದರ ನೋಟಗಳನ್ನು ನೋಡಬಹುದು. ನಂದಿ ಬೆಟ್ಟವನ್ನು ನಂದಿ ದುರ್ಗ ಅಥವಾ ನಂದಿ ಕೋಟೆ ಎಂದೂ ಕರೆಯುತ್ತಾರೆ. ಇದು ಮೂರು ನದಿಗಳ ಸಂಗಮ.

ಇದನ್ನೂ ಓದಿ: ಮಳೆಗಾಲದಲ್ಲಿ ಈ ತರಕಾರಿಗಳನ್ನು ಅಪ್ಪಿತಪ್ಪಿಯೂ ಸೇವಿಸಬೇಡಿ

ಕನಕಪುರ:

ಕನಕಪುರ ಬೆಂಗಳೂರಿನಿಂದ ಸುಮಾರು 63 ಕಿ.ಮೀ ದೂರದಲ್ಲಿದೆ. ಇಲ್ಲಿ ರಾತ್ರಿ ಟ್ರೆಕ್ಕಿಂಗ್ ಮಾಡುವ ಅವಕಾಶವನ್ನೂ ಪಡೆಯಬಹುದು. ದಕ್ಷಿಣ ಭಾರತದ ಎಲ್ಲಾ ಟ್ರೆಕ್ಕಿಂಗ್ ಸ್ಥಳಗಳಲ್ಲಿ ಇದರ ಹೆಸರು ಅಗ್ರಸ್ಥಾನದಲ್ಲಿದೆ. ನೀವು ಶಾಂತವಾದ ಸ್ಥಳವನ್ನು ಹುಡುಕುತ್ತಿದ್ದರೆ, ನಿಮ್ಮ ಕುಟುಂಬ ಅಥವಾ ಸ್ನೇಹಿತರೊಂದಿಗೆ ನೀವು ಇಲ್ಲಿಗೆ ಹೋಗಬಹುದು.

ತಟ್ಟೆಕೆರೆ:

ಬೆಂಗಳೂರಿನಿಂದ 40 ಕಿಮೀ ದೂರದಲ್ಲಿರುವ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ತಟ್ಟೆಕೆರೆ ಗ್ರಾಮ. ನೀವು ಹೆಚ್ಚು ಜನನಿಬಿಡ ಪ್ರದೇಶಗಳಿಗೆ ಹೋಗಲು ಇಷ್ಟಪಡದಿದ್ದರೆ ನೀವು ತಟ್ಟೆಕೆರೆ ಕೆರೆಗೆ ಭೇಟಿ ನೀಡಬಹುದು. ಏಕೆಂದರೆ ಇದು ನಗರದ ಹೊರವಲಯದಲ್ಲಿದೆ. ಆದ್ದರಿಂದ ನೀವು ಇಲ್ಲಿ ಸಾಕಷ್ಟು ಶಾಂತಿಯನ್ನು ಪಡೆಯುತ್ತೀರಿ. ಸುತ್ತಲೂ ಹಸಿರಿನಿಂದ ಆವೃತವಾಗಿರುವ ಸರೋವರದ ವಾತಾವರಣವು ನಿಮ್ಮನ್ನು ಆಕರ್ಷಿಸುತ್ತದೆ. ನೀವು ಪ್ರಕೃತಿ ಛಾಯಾಗ್ರಹಣ ಮಾಡಲು ಇಷ್ಟಪಡುತ್ತಿದ್ದರೂ ಸಹ, ಈ ಸ್ಥಳವು ನಿಮಗೆ ಉತ್ತಮವಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: