
ಶ್ರೀಮದ್ ಭಗವದ್ಗೀತೆ (Bhagavad Gita) ಹಿಂದೂ ಧರ್ಮದ ಪವಿತ್ರ ಗ್ರಂಥವಾಗಿದೆ. 18 ಅಧ್ಯಾಯಗಳು ಮತ್ತು 700 ಶ್ಲೋಕಗಳನ್ನು ಒಳಗೊಂಡಿರುವ ಭಗವದ್ಗೀತೆ ಅಪಾರ ಮಹತ್ವವನ್ನು ಹೊಂದಿದೆ. ಈ ಪ್ರತಿ ಅಧ್ಯಾಯಗಳು ಆತ್ಮ, ಪರಮಾತ್ಮ, ಭಕ್ತಿ, ಕರ್ಮ ಮತ್ತು ಜೀವನದ ಸಾರವನ್ನು ಒಳಗೊಂಡಿದೆ. ಇಂತಹ ಪವಿತ್ರ ಭಗವದ್ಗೀತೆ ಕೇವಲ ಧಾರ್ಮಿಕ ಗ್ರಂಥವಲ್ಲ ನಮ್ಮ ಜೀವನಕ್ಕೆ ಮಾರ್ಗಸೂಚಿಯಿದ್ದಂತೆ. ಹೌದು ಪ್ರತಿನಿತ್ಯ ಗೀತೆಯನ್ನು ಓದುವ ಮೂಲಕ ಯಶಸ್ವಿ, ಸಂತೋಷದಾಯಕ ಜೀವನವನ್ನು ಹೇಗೆ ನಡೆಸುವುದು ಎಂಬುದನ್ನು ಕಲಿಯುವುದರ ಜೊತೆಗೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಈ ಲೇಖನದಲ್ಲಿ ಭಗವದ್ಗೀತೆಯನ್ನು ಓದುವುದರಿಂದ ಲಭಿಸುವ ಪ್ರಯೋಜನಗಳ ಬಗ್ಗೆ ತಿಳಿಯೋಣ ಬನ್ನಿ.
ಮಾನಸಿಕ ಶಾಂತಿ ಮತ್ತು ನಿಯಂತ್ರಣ: ಪ್ರತಿದಿನ ಗೀತೆಯನ್ನು ಪಠಿಸುವುದರಿಂದ ಮಾನಸಿಕ ಶಾಂತಿ ಮತ್ತು ಸಂಯಮವನ್ನು ಕಾಪಾಡಿಕೊಳ್ಳಬಹುದು. ಹಾಗೂ ಜೀವನವು ಎಷ್ಟೇ ಸವಾಲುಗಳನ್ನು ಒಡ್ಡಿದರೂ, ಭಾವನೆಗಳ ಮೇಲೆ ನಿಯಂತ್ರಣವನ್ನು ಕಾಯ್ದುಕೊಳ್ಳಬಹುದು. ಗೀತೆಯನ್ನು ಓದುವ ಮೂಲಕ, ಒಬ್ಬ ವ್ಯಕ್ತಿಯು ತನ್ನನ್ನು ತಾನು ಅರ್ಥಮಾಡಿಕೊಳ್ಳಲು ಕಲಿಯುತ್ತಾನೆ ಮತ್ತು ಸಂದರ್ಭಗಳ ಆಧಾರದ ಮೇಲೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಕಲಿಯುತ್ತಾನೆ.
ಸಕಾರಾತ್ಮಕ ಶಕ್ತಿ: ಶ್ರೀಮದ್ ಭಗವದ್ಗೀತೆಯನ್ನು ಪಠಿಸುವುದರಿಂದ ಜೀವನದಿಂದ ಎಲ್ಲಾ ನಕಾರಾತ್ಮಕತೆಗಳು ದೂರವಾಗುತ್ತವೆ ಮತ್ತು ಸಕಾರಾತ್ಮಕ ಶಕ್ತಿಯು ಹರಡುತ್ತದೆ. ಗೀತೆಯನ್ನು ನಿಯಮಿತವಾಗಿ ಪಠಿಸುವುದರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ ಮತ್ತು ಒಬ್ಬ ವ್ಯಕ್ತಿಯು ತನ್ನ ಗುರಿಗಳ ಮೇಲೆ ಗಮನಹರಿಸಲು ಸಹಾಯ ಮಾಡುತ್ತದೆ.
ಕೋಪ ಕಡಿಮೆಯಾಗುತ್ತದೆ: ನಿರಂತರವಾಗಿ ಕೋಪಗೊಳ್ಳುವವರು ಗೀತೆಯನ್ನು ಪಠಿಸಬೇಕು. ಗೀತೆಯನ್ನು ಪಠಿಸುವುದರಿಂದ ವ್ಯಕ್ತಿಯು ಕೋಪ, ದುರಾಸೆ, ಭ್ರಮೆ ಮತ್ತು ಮೋಹದ ಬಂಧಗಳಿಂದ ಮುಕ್ತನಾಗುತ್ತಾನೆ. ಮತ್ತು ಆತನ ಜೀವನದಲ್ಲಿ ಸಂತೋಷ ಮತ್ತು ತೃಪ್ತಿ ಹೆಚ್ಚಾಗುತ್ತದೆ.
ಒತ್ತಡ ಮತ್ತು ಆತಂಕದಿಂದ ಮುಕ್ತಿ: ಇಂದಿನ ಕಾರ್ಯನಿರತ ಜೀವನದಲ್ಲಿ ಒತ್ತಡ ಮತ್ತು ಆತಂಕ ಸಾಮಾನ್ಯವಾಗಿ ಕಾಡುವ ಸಮಸ್ಯೆಯಾಗಿದೆ. ಗೀತೆಯನ್ನು ಓದುವುದರಿಂದ ಒಬ್ಬ ವ್ಯಕ್ತಿಗೆ ಜೀವನದ ಸರಿ ಮತ್ತು ತಪ್ಪುಗಳ ಜ್ಞಾನ ಸಿಗುತ್ತದೆ. ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಮತ್ತು ಮಾನಸಿಕ ಶಾಂತತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಅರ್ಥಮಾಡಿಕೊಳ್ಳುತ್ತಾನೆ. ಗೀತೆಯು ವ್ಯಕ್ತಿಯನ್ನು ಒಳಗಿನಿಂದ ಬಲಪಡಿಸುತ್ತದೆ ಮತ್ತು ಯಾವುದೇ ಬಿಕ್ಕಟ್ಟನ್ನು ತಾಳ್ಮೆ ಮತ್ತು ತಿಳುವಳಿಕೆಯಿಂದ ಎದುರಿಸಲು ಸಹಾಯ ಮಾಡುತ್ತದೆ.
ಜೀವನದ ಉದ್ದೇಶದ ಸ್ಪಷ್ಟತೆ: ಗೀತೆಯನ್ನು ಓದುವುದರಿಂದ ಒಬ್ಬ ವ್ಯಕ್ತಿಯು ತನ್ನ ಜೀವನದ ಉದ್ದೇಶವನ್ನು ಅರ್ಥಮಾಡಿಕೊಳ್ಳಬಹುದು. ಈ ಜ್ಞಾನವು ವ್ಯಕ್ತಿಯನ್ನು ಸ್ವಾವಲಂಬನೆಯೊಂದಿಗೆ ಯಶಸ್ವಿ ಮತ್ತು ಸಂತೋಷದಾಯಕ ಜೀವನವನ್ನು ನಡೆಸಲು ಅನುವು ಮಾಡಿಕೊಡುತ್ತದೆ.
ಇದನ್ನೂ ಓದಿ: ಪ್ರತಿನಿತ್ಯ ಪುಸ್ತಕ ಓದುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ