Health Tips: ಬ್ಲ್ಯಾಕ್​​ ಕಾಫಿ ಕುಡಿಯಲು ಸರಿಯಾದ ಸಮಯ ಯಾವುದು? ತಜ್ಞರು ಹೇಳುವುದೇನು?

|

Updated on: Apr 01, 2023 | 3:06 PM

ಬ್ಲ್ಯಾಕ್​​ ಕಾಫಿ ಕುಡಿಯುವುದರಿಂದ ಅದು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಹಾಗೂ ಬ್ಲ್ಯಾಕ್​​ ಕಾಫಿ ಕುಡಿಯುವ ಸರಿಯಾದ ಸಮಯ ಯಾವುದು ಎಂಬೆಲ್ಲಾ ವಿಷಯಗಳ ಕುರಿತು ಆರೋಗ್ಯ ತಜ್ಞರಾದ ಪೂಜಾ ಶೆಲತ್ ಮಾಹಿತಿ ನೀಡಿದ್ದಾರೆ.

Health Tips: ಬ್ಲ್ಯಾಕ್​​ ಕಾಫಿ ಕುಡಿಯಲು ಸರಿಯಾದ ಸಮಯ ಯಾವುದು? ತಜ್ಞರು ಹೇಳುವುದೇನು?
ಬ್ಲ್ಯಾಕ್​​ ಕಾಫಿ ಕುಡಿಯಲು ಸರಿಯಾದ ಸಮಯ
Image Credit source: Black Insomnia Coffee
Follow us on

ಒಂದು ಕಪ್​​​ ಕಾಫಿ ಇಲ್ಲದಿದ್ದರೆ ದಿನವೇ ಅಪೂರ್ಣ ಎನ್ನುವ ಸಾಕಷ್ಟು ಕಾಫಿ ಪ್ರಿಯರನ್ನು ಕಾಣಬಹುದು. ಆದರೆ ಅತಿಯಾದ ಅಮೃತವು ವಿಷ ಎನ್ನುವ ಮಾತಿಗೆ. ಹೌದು ಕಾಫಿ ಅತಿಯಾಗಿ ಕುಡಿಯುವುದರಿಂದ ಕೆಫೀನ್​​​​ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರಬಹುದು. ಸಾಕಷ್ಟು ಜನರು ಹಾಲಿನ ಕಾಫಿಯ ಬದಲಾಗಿ ಬ್ಲ್ಯಾಕ್​​ ಕಾಫಿ ಕುಡಿಯಲು ಇಷ್ಟ ಪಡುತ್ತಾರೆ. ಬ್ಲ್ಯಾಕ್​​ ಕಾಫಿ ಕುಡಿಯುವುದರಿಂದ ಅದು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಹಾಗೂ ಬ್ಲ್ಯಾಕ್​​ ಕಾಫಿ ಕುಡಿಯುವ ಸರಿಯಾದ ಸಮಯ ಯಾವುದು ಎಂಬೆಲ್ಲಾ ವಿಷಯಗಳ ಕುರಿತು ತಜ್ಞರು ನೀಡಿರುವ ಮಾಹಿತಿ ಇಲ್ಲಿದೆ.

ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುವ ಬ್ಲ್ಯಾಕ್​​ ಕಾಫಿ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ ಎಂದು ಸಾಕಷ್ಟು ಅಧ್ಯಯನಗಳು ತಿಳಿಸುತ್ತದೆ. ಬ್ಲ್ಯಾಕ್​​ ಕಾಫಿ ನಿಯಮಿತವಾಗಿ ಕುಡಿಯುವುದರಿಂದ ಟೈಪ್ 2 ಮಧುಮೇಹ ಬರುವ ಸಾಧ್ಯತೆಯನ್ನು ಕಡಿಮೆ ಮಾಡಬಹುದು ಮತ್ತು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು ಅಧ್ಯಯನವು ಕಂಡುಕೊಂಡಿದೆ. ಜೊತೆಗೆ ಪಾರ್ಕಿನ್ಸನ್ ಕಾಯಿಲೆ ಮತ್ತು ಯಕೃತ್ತಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದಾಗಿದೆ. ಇದಲ್ಲದೇ ಬ್ಲ್ಯಾಕ್​​ ಕಾಫಿ ಅತಿಯಾಗಿ ಕುಡಿಯುವುದರಿಂದ ಎದೆಯುರಿ, ಹೆದರಿಕೆ ಅಥವಾ ನಿದ್ರಾಹೀನತೆಗೂ ಕಾರಣವಾಗಬಹುದು.ಆದ್ದರಿಂದ ನಿಯಮಿತವಾಗಿರಲಿ.

ಇದನ್ನೂ ಓದಿ: ಚಾಣಕ್ಯನ ಪ್ರಕಾರ ನಿಜವಾದ ಗೆಳೆಯ ಯಾರು? ಅವರ ಗುಣ ತಿಳಿಯುವುದು ಹೇಗೆ?

ಬ್ಲ್ಯಾಕ್​​ ಕಾಫಿ ಕುಡಿಯಲು ಉತ್ತಮ ಸಮಯ ಯಾವುದು?

ಆರೋಗ್ಯ ತಜ್ಞರಾದ ಪೂಜಾ ಶೆಲತ್, ಬ್ಲ್ಯಾಕ್​​ ಕಾಫಿ ಕುಡಿಯಲು ಸರಿಯಾದ ಸಮಯದ ಕುರಿತು ಮಾಹಿತಿ ನೀಡಿದ್ದಾರೆ. ನಿಮ್ಮ ದೇಹದಲ್ಲಿ ಕಾರ್ಟಿಸೋಲ್ ಮಟ್ಟವು ಕಡಿಮೆ ಇರುವಾಗ ಅಂದರೆ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 11 ಗಂಟೆಯೊಳಗೆ ಬ್ಲ್ಯಾಕ್​​ ಕಾಫಿ ಕುಡಿಯಲು ಸರಿಯಾದ ಸಮಯ ಎಂದು ಅವರು ಸಲಹೆ ನೀಡುತ್ತಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: