ವಿಶ್ವದಾದಂತ್ಯ ಕ್ಯಾನ್ಸರ್ ನಂತಹ ಮಹಾಮಾರಿಗೆ ಬಲಿಯಾಗುತ್ತಿರುವ ಸಂಖ್ಯೆಯು ಏರಿಕೆಯಾಗುತ್ತಿದೆ. ಈ ಮಹಿಳೆಯರು ವಯಸ್ಸಲ್ಲದ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್ ಗೆ ಬಲಿಯಾಗುತ್ತಿದ್ದಾರೆ. ಆದರೆ ತಜ್ಞರ ಪ್ರಕಾರ ಮಹಿಳೆಯರಂತೆಯೇ ಪುರುಷರಲ್ಲಿಯೂ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತವೆಯಂತೆ. ಸ್ತನ ಕ್ಯಾನ್ಸರ್ ಲಕ್ಷಣಗಳು ಮಹಿಳೆಯರಂತೆ ಪುರುಷರಲ್ಲಿ ಒಂದೇ ರೀತಿಯಿರುತ್ತದೆ.
ಗಂಡು ಮಗು ಬೆಳೆದಂತೆ ಸ್ತನಗಳು ಗಣನೀಯವಾಗಿ ವೃದ್ಧಿಯಾಗುವುದಿಲ್ಲ. ಆದರೆ ಈ ಅಂಗಾಂಶಗಳ ಕೋಶಗಳಲ್ಲಿ ಯಾವುದೇ ಕೆಲವು ಕೋಶಗಳು ಅಸಹಜವಾಗಿ ವಿಭಜಿಸಲಾರಂಭಿಸಿದರೆ ಅದು ಪುರುಷ ಸ್ತನ ಕ್ಯಾನ್ಸರ್ ಗೆ ಕಾರಣವಾಗಬಹುದು. ಕಾಲ ಕ್ರಮೇಣ ವಿಭಜನೆ ತೀವ್ರಗೊಂಡು ಗೆಡ್ಡೆಯಾಗಿ ಮಾರ್ಪಡಾಗುತ್ತದೆ. ಈ ರೀತಿಯಾಗಿ ಪುರುಷರಲ್ಲಿ ಸ್ತನ ಕ್ಯಾನ್ಸರ್ ಕಾಣಿಸಿಕೊಳ್ಳುತ್ತವೆ. ಆದರೆ ಮಹಿಳೆಯರಿಗೆ ಹೋಲಿಕೆ ಮಾಡಿದರೆ ಪುರುಷರಿಗೆ ಈ ಕಾಯಿಲೆ ಬರುವ ಸಾಧ್ಯತೆಯೂ ತೀರಾ ಕಡಿಮೆಯಾಗಿದ್ದು, ಅರವತ್ತು ವಯಸ್ಸಿನ ನಂತರದಲ್ಲಿ ಈ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.
ಪುರುಷರಲ್ಲಿ ಸ್ತನ ಕ್ಯಾನ್ಸರ್ ಬರಲು ಅನುವಂಶೀಯತೆಯು ಕಾರಣವಾಗಿರಬಹುದು. ಅದಲ್ಲದೇ, ಇಸ್ಟ್ರೋಜನ್ ಹಾರ್ಮೋನಿನ ಔಷಧಿಗಳ ಸೇವನೆ, ವೃಷಣದ ಕ್ಯಾನ್ಸರ್‌ಗೆ ನೀಡುವ ಹಾರ್ಮೋನ್ ಥೆರಪಿಗಳು ಅತಿಯಾದ ಬೊಜ್ಜು ಹೀಗೆ ಹತ್ತು ಹಲವು ಕಾರಣಗಳು ಸೇರಿಕೊಂಡಿವೆ.
ಇದನ್ನೂ ಓದಿ: ಅಪಾಯಕಾರಿ ಸ್ತನ ಕ್ಯಾನ್ಸರ್ ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಹೇಗೆ?
* ಸ್ತನಗಳಲ್ಲಿ ಗಡ್ಡೆಗಳು ಅಥವಾ ಎದೆಯ ಭಾಗವು ದಪ್ಪವಾದ ಅನುಭವ
* ಮೊಲೆತೊಟ್ಟುಗಳ ಬದಲಾವಣೆಗಳು
* ಚರ್ಮದ ಬದಲಾವಣೆಗಳು
* ಸ್ತನ ಪ್ರದೇಶಗಳಲ್ಲಿ ವಿಪರೀತ ನೋವು
ಪುರುಷ ಸ್ತನ ಕ್ಯಾನ್ಸರ್ ರೋಗವನ್ನು ಪತ್ತೆ ಹಚ್ಚಲು ದೈಹಿಕ ಪರೀಕ್ಷೆ, ಇಮೇಜಿಂಗ್ ಪರೀಕ್ಷೆಗಳು ಮತ್ತು ಬಯಾಪ್ಸಿಯನ್ನು ಮಾಡಲಾಗುತ್ತದೆ. ಪ್ರಾರಂಭಿಕ ಹಂತದಲ್ಲೂ ಶಸ್ತ್ರಚಿಕಿತ್ಸೆ, ಕೀಮೋಥೆರಪಿ ಮತ್ತು ವಿಕಿರಣ ಚಿಕಿತ್ಸೆಗಳನ್ನು ನೀಡಿ ರೋಗ ಗುಣ ಪಡಿಸಲು ಸಾಧ್ಯ.
* ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳ ಸೇವನೆಯತ್ತ ಗಮನ ಕೊಡಿ
* ದೇಹಕ್ಕೆ ಇಂತಿಷ್ಟು ಗಂಟೆಗಳ ವಿಶ್ರಾಂತಿ ಅಗತ್ಯ, ಹೀಗಾಗಿ ನಿದ್ರೆಯು ಸರಿಯಾಗಿರಲಿ.
* ಧೂಮಪಾನ, ಮದ್ಯಪಾನದಂತಹ ದುರಭ್ಯಾಸದಿಂದ ದೂರವಿರಿ.
* ಸ್ತನ ಕ್ಯಾನ್ಸರ್ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಸರಿಯಾಗಿ ಚಿಕಿತ್ಸೆ ಪಡೆದುಕೊಳ್ಳುವುದರಿಂದಳ್ಳುವುದರಿಂದ ಅಪಾಯದಿಂದ ಪಾರಾಗಲು ಸಾಧ್ಯ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ