Outfit for 2023: ವಿಚಿತ್ರ ಕಾಸ್ಟ್ಯೂಮ್​ನಲ್ಲಿ ಪೋಸ್​ ಕೊಟ್ಟ ಸ್ಯಾಮ್​ ಸ್ಮಿಥ್​; ಅಭಿಮಾನಿಗಳು ಫಿದಾ

|

Updated on: Feb 14, 2023 | 7:06 PM

ಸ್ವತಃ ಸ್ಯಾಮ್ ಸ್ಮಿತ್ ತನ್ನ ಇನ್ಟಾಗ್ರಾಮ್​​ನಲ್ಲಿ 2023 ರ ಬ್ರಿಟ್ ಆವರ್ಡ್​ ರೆಡ್​​ಕಾರ್ಪೆಟ್​​​ನಲ್ಲಿ ಲ್ಯಾಟೆಕ್ಸ್ ಬಲೂನ್​​ನ ವಿಭಿನ್ನ ವಿನ್ಯಾಸದ ಬಟ್ಟೆಯಲ್ಲಿ ಪೋಸ್​​ ಕೊಟ್ಟ ಪೋಟೋಗಳನ್ನು ​​​ಹಂಚಿಕೊಂಡಿದ್ದಾರೆ. ಆ ಪೋಸ್ಟ್​​ ಇಲ್ಲಿದೆ.

Outfit for 2023: ವಿಚಿತ್ರ ಕಾಸ್ಟ್ಯೂಮ್​ನಲ್ಲಿ ಪೋಸ್​ ಕೊಟ್ಟ ಸ್ಯಾಮ್​ ಸ್ಮಿಥ್​; ಅಭಿಮಾನಿಗಳು ಫಿದಾ
ಪಾಪ್ ಗಾಯಕ ಸ್ಯಾಮ್ ಸ್ಮಿತ್
Image Credit source: Instagram
Follow us on

2023 ರ ಬ್ರಿಟ್ ಆವರ್ಡ್​(Brit Awards) ಈವೆಂಟ್​​​ನಲ್ಲಿ ಅಮೇರಿಕಾದ ಜನಪ್ರಿಯ ಪಾಪ್ ಗಾಯಕ ಸ್ಯಾಮ್ ಸ್ಮಿತ್ (Sam Smith) ಲ್ಯಾಟೆಕ್ಸ್ ಬಲೂನ್​​ನ ವಿಭಿನ್ನ ವಿನ್ಯಾಸದ ಬಟ್ಟೆಯಲ್ಲಿ ಸಾಕಷ್ಟು ಜನರ ಗಮನ ಸೆಳೆದ್ದಿದ್ದಾರೆ. ಸ್ಯಾಮ್ ಸ್ಮಿತ್ ತನ್ನ ಹಾಡುಗಳ ಮೂಲಕ ಮಾತ್ರವಲ್ಲದೇ ಪ್ರತಿಬಾರಿ ತಾನು ಧರಿಸುವ ಮೂಲಕ ಭಾರೀ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ನಡೆದ 2023ರ ಗ್ರ್ಯಾಮಿ ಅವಾರ್ಡ್​ನಲ್ಲಿ ಕೆಂಪು ಬಣ್ಣದ ವ್ಯಾಲೆಂಟಿನೋ ಗೌನ್‌ನಲ್ಲಿ ಕಾರ್ಪೆಟ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಇದಲ್ಲದೇ ಗ್ರ್ಯಾಮಿ ಅವಾರ್ಡ್​ನಲ್ಲಿ ಪ್ರಶಸ್ತಿಯನ್ನೂ ಕೂಡ ಪಡೆದ್ದಿದ್ದರು.

2023 ರ ಬ್ರಿಟ್ ಆವರ್ಡ್​ ಈವೆಂಟ್​​​ನ ರೆಡ್ ಕಾರ್ಪೆಟ್ ಮೇಲೆ  ಕಾಣಿಸಿಕೊಂಡ ನಂತರ, ಸಾಮಾಜಿಕ ಜಾಲತಾಣದಲ್ಲಿ ಧರಿಸಿರುವ ಬಗ್ಗೆಯ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ಜೊತೆಗೆ ಈ ಬಟ್ಟೆಯ ಬಗ್ಗೆ ನೆಟ್ಟಿಗರು ಹಾಸ್ಯಸ್ಪದವಾಗಿ ಪ್ರತಿಕ್ರಿಯಿಸಿ ಸಾಕಷ್ಟು ಟ್ರೋಲ್​​ಗಳಿಗೆ ಕಾರಣವಾಗಿದೆ.ಸ್ವತಃ ಸ್ಯಾಮ್ ಸ್ಮಿತ್ ತನ್ನ ಇನ್ಟಾಗ್ರಾಮ್​​ನಲ್ಲಿ 2023 ರ ಬ್ರಿಟ್ ಆವರ್ಡ್​ ರೆಡ್​​ಕಾರ್ಪೆಟ್​​​ನಲ್ಲಿ ಲ್ಯಾಟೆಕ್ಸ್ ಬಲೂನ್​​ನ ವಿಭಿನ್ನ ವಿನ್ಯಾಸದ ಬಟ್ಟೆಯಲ್ಲಿ ಪೋಸ್​​ ಕೊಟ್ಟ ಪೋಟೋಗಳನ್ನು ​​​ಹಂಚಿಕೊಂಡಿದ್ದಾರೆ. ಆ ಪೋಸ್ಟ್​​ ಇಲ್ಲಿದೆ.

ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ರೆಡ್ ಕಾರ್ಪೆಟ್​​​ನಲ್ಲಿ ಸೆಲೆಬ್ರೆಟಿಗಳು ಕಾಣಿಸಿಕೊಂಡಿದ್ದು ಹೀಗೆ

ಪೇಜ್ ಸಿಕ್ಸ್ ಪ್ರಕಾರ ಭಾರತೀಯ ಮೂಲದ ಲಂಡನ್​​ನ ಸೆಲೆಬ್ರೆಟಿ ಕಾಸ್ಟೂಮ್​​​ ಡಿಸೈನರ್​​​ ಹರಿ ಕೃಷ್ಣನ್ ಈ ಬಟ್ಟೆಯಲ್ಲಿ ವಿನ್ಯಾಸಗೊಳಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಟ್ಟೆಯ ಭುಜ ಹಾಗು ಕಾಲುಗಳಲ್ಲಿ ಪ್ಯಾಡ್‌ಗಳನ್ನು ಇರಿಸಲಾಗಿದೆ. ಜೊತೆಗೆ ಕಪ್ಪು ಲ್ಯಾಟೆಕ್ಸ್ ಗ್ಲೌಸ್​​​ ಹಾಗೂ ಕಪ್ಪು ಬಣ್ಣದ ಬೂಟುಗಳನ್ನು ಕಾಣಬಹುದು. ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಹಾಸ್ಯಸ್ಪದವಾಗಿ ಪ್ರತಿಕ್ರಿಯಿಸಿದ್ದಾರೆ. ಒರ್ವ ಬಳಕೆದಾರ ಇವರು ಬಿದ್ದರೆ, ಜಂಪ್​ ಆಗಿ ಮತ್ತೇ ಹಾಗೆಯೇ ನಿಲ್ಲಬಹುದು ಎಂದು ಹೇಳಿದರೆ, ಮತ್ತೊಬ್ಬ ಬಳಕೆದಾರ ಫ್ಯಾಶನ್ ಈವೆಂಟ್​​​ ನಿಲ್ಲಿಸಬೇಕು ಏಕೆಂದರೆ ಅದು ಫ್ಯಾಷನ್‌ನಿಂದ ದೂರ ಹೋಗಿ ವಿಲಕ್ಷಣ ವೇಷಭೂಷಣಗಳಾಗಿ ಮಾರ್ಪಟ್ಟಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 6:49 pm, Tue, 14 February 23