ಇತ್ತೀಚೆಗಿನ ದಿನಗಳಲ್ಲಿ ಸಿಎ ಗಳಿಗೆ ಬಾರಿ ಬೇಡಿಕೆಯಿದ್ದು, ಆದರೆ ಲೆಕ್ಕ ಪರಿಶೋಧಕರ ಸಂಖ್ಯೆಗಳು ಮಾತ್ರ ಕಡಿಮೆಯೇ ಇದೆ. ಇದಕ್ಕೆ ಮುಖ್ಯ ಕಾರಣ ಈ ಸಿಎ ತಯಾರಿಯು ತುಂಬಾನೇ ಕಠಿಣವಾಗಿರುವುದಾಗಿದೆ. ಇಂದಿನ ಹಣಕಾಸು ಮತ್ತು ಉದ್ಯಮ ವಲಯದಲ್ಲಿ ಸಿಎ ಅಥವಾ ಚಾರ್ಟರ್ಡ್ ಅಕೌಂಟೆಂಟ್ಸ್ ಅಥವಾ ಲೆಕ್ಕ ಪರಿಶೋಧಕರ ಪಾತ್ರವು ಅಗಾಧವಾದದ್ದು. ಲೆಕ್ಕಪತ್ರ ನಿರ್ವಹಣೆ ಕ್ಷೇತ್ರದ ವೃತ್ತಿಪರರು ಮತ್ತು ಚಾರ್ಟರ್ಡ್ ಅಕೌಂಟೆಂಟ್ ಗಳಿಗಾಗಿ ಈ ದಿನವನ್ನು ಮೀಸಲಿಡಲಾಗಿದೆ. ಆರ್ಥಿಕತೆಯ ವಿವಿಧ ಕ್ಷೇತ್ರಗಳಲ್ಲಿ ಸಿಎಗಳ ಕೊಡುಗೆಗಳನ್ನು ಗೌರವಿಸುವ ದಿನವಾಗಿದೆ. ಹೀಗಾಗಿ ಪ್ರತಿ ವರ್ಷ ಜುಲೈ 1 ರಂದು ಚಾರ್ಟರ್ಡ್ ಅಕೌಂಟೆಂಟ್ಸ್ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ‘ಸುಸ್ಥಿರ ಭವಿಷ್ಯಕ್ಕಾಗಿ ನಾವೀನ್ಯತೆ’ ಥೀಮ್ ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ಸ್ ದಿನವನ್ನು ಆಚರಿಸಲಾಗುತ್ತಿದೆ.
* ಹಣಕಾಸಿನ ಸಮಗ್ರತೆಯನ್ನು ಕಾಪಾಡಿಕೊಳ್ಳಲು ನಿಮ್ಮ ಸಮರ್ಪಣೆ ಮತ್ತು ಬದ್ಧತೆಗೆ ಧನ್ಯವಾದಗಳು. ಎಲ್ಲಾ ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ಚಾರ್ಟರ್ಡ್ ಅಕೌಂಟೆಂಟ್ಸ್ ದಿನದ ಶುಭಾಶಯಗಳು.
* ಹಣಕಾಸಿನ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಆರ್ಥಿಕ ಬೆಳವಣಿಗೆಗೆ ಚಾರ್ಟರ್ಡ್ ಅಕೌಂಟೆಂಟ್‌ಗಳ ಅಮೂಲ್ಯ ಪಾತ್ರ ಅಗಾಧ. ಇಂದು ನಿಮ್ಮ ದಿನವಾಗಿದ್ದು, ಚಾರ್ಟರ್ಡ್ ಅಕೌಂಟೆಂಟ್ ದಿನದ ಶುಭಾಶಯಗಳು.
* ಹಣಕಾಸು ಜಗತ್ತಿನಲ್ಲಿ ಉತ್ಕೃಷ್ಟರಾಗಿರುವ ಚಾರ್ಟರ್ಡ್ ಅಕೌಂಟೆಂಟ್‌ಗಳನ್ನು ಗೌರವಿಸುತ್ತೇವೆ. ನಿಮ್ಮ ಸಮರ್ಪಣೆ, ನಿಖರತೆ ಮತ್ತು ನೈತಿಕ ಮಾನದಂಡಗಳು ಮತ್ತು ಸಂಸ್ಥೆಗಳ ಯಶಸ್ಸಿಗೆ ಕಾರಣವಾಗಿದೆ. ಚಾರ್ಟರ್ಡ್ ಅಕೌಂಟೆಂಟ್ ದಿನದ ಶುಭಾಶಯಗಳು.
* ನಿಮ್ಮ ವೃತ್ತಿಪರ ಪ್ರಯಾಣವು ನಿರಂತರ ಬೆಳವಣಿಗೆ, ಅವಕಾಶಗಳು ಮತ್ತು ಗಮನಾರ್ಹ ಸಾಧನೆಗಳಿಂದ ತುಂಬಿರಲಿ. ಚಾರ್ಟರ್ಡ್ ಅಕೌಂಟೆಂಟ್ ದಿನದ ಶುಭಾಶಯಗಳು.
ಇದನ್ನೂ ಓದಿ: ಜುಲೈ 1ರಂದು ರಾಷ್ಟ್ರೀಯ ವೈದ್ಯರ ದಿನ! ಈ ದಿನದ ಇತಿಹಾಸ, ಮಹತ್ವದ ಮಾಹಿತಿ ಇಲ್ಲಿದೆ
* ಲೆಕ್ಕಪರಿಶೋಧನೆ, ತೆರಿಗೆ ಮತ್ತು ಹಣಕಾಸು ನಿರ್ವಹಣೆಯಲ್ಲಿ ನಿಮ್ಮ ಕೌಶಲ್ಯಗಳು ಶ್ಲಾಘನೀಯ. ಹಣಕಾಸು ಜಗತ್ತಿನಲ್ಲಿ ಪ್ರಕಾಶಮಾನವಾಗಿ ಹೊಳೆಯುವ ನಿಮಗೆ ಚಾರ್ಟರ್ಡ್ ಅಕೌಂಟೆಂಟ್ ದಿನದ ಶುಭಾಶಯಗಳು
* ಆರ್ಥಿಕತೆಯ ಬೆಳವಣಿಗೆಗೆ ಮತ್ತು ಪಾರದರ್ಶಕತೆಗೆ ಶ್ರಮಿಸುತ್ತಿರುವ ಸಿಎ ಗಳಿಗೆ ಚಾರ್ಟರ್ಡ್ ಅಕೌಂಟೆಂಟ್ ದಿನದ ಹಾರ್ಥಿಕ ಶುಭಾಶಯಗಳು
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ