Weight Loss: ತೂಕ ಕಳೆದುಕೊಳ್ಳುವುದು ಕೂದಲು ಉದುರುವ ಸಮಸ್ಯೆಗೆ ಕಾರಣವಾಗುವುದೇ?

| Updated By: shruti hegde

Updated on: Nov 23, 2021 | 3:01 PM

ತೂಕ ಇಳಿಸಿಕೊಳ್ಳುವುದರಿಂದ ಕೂದಲು ಉದುರುವ ಸಮಸ್ಯೆ ಕಾಡುತ್ತದೆಯೇ? ಇದಕ್ಕೆ ಪರಿಹಾರ ಕ್ರಮಗಳೇನು? ಈ ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

Weight Loss: ತೂಕ ಕಳೆದುಕೊಳ್ಳುವುದು ಕೂದಲು ಉದುರುವ ಸಮಸ್ಯೆಗೆ ಕಾರಣವಾಗುವುದೇ?
ಸಾಂದರ್ಭಿಕ ಚಿತ್ರ
Follow us on

ತೂಕ ಕಳೆದುಕೊಳ್ಳುವುದು ಸುಲಭವಲ್ಲ. ಕಠಿಣ ಶ್ರಮ ಮತ್ತು ದೃಢ ಮನಸ್ಸಿನಿಂದ ಮಾತ್ರ ತೂಕ ಕಳೆದುಕೊಳ್ಳಲು ಸಾಧ್ಯ. ನೀವು ನಿಯಮಿತವಾಗಿ ವ್ಯಾಯಾಮ ಅಭ್ಯಾಸದಲ್ಲಿ ತೊಡಗಿದ್ದರೆ ಜೊತೆಗೆ ನೀವು ಸೇವಿಸುವ ಆಹಾರದ ಬಗ್ಗೆ ಗಮನವಿಟ್ಟು ತೂಕ ಇಳಿಸಿಕೊಳ್ಳಬಹುದು . ಕೆಲವರು ತೂಕ ಇಳಿಸಿಕೊಳ್ಳುವ (Weight Loss) ಸಂದರ್ಭದಲ್ಲಿ ಕೂದಲು ಉದುರು ಸಮಸ್ಯೆಗೆ ಒಳಗಾಗುತ್ತಾರೆ. ಪೋಷಕಾಂಶಗಳ ಕೊರತೆಯಿಂದ ಕೂದಲು ಉದುರುವ (Hair Loss) ಸಮಸ್ಯೆ ಕಾಡಬಹುದು. ಹೀಗಿರುವಾಗ ತೂಕ ಇಳಿಸಿಕೊಳ್ಳುವುದರಿಂದ ಕೂದಲು ಉದುರುವ ಸಮಸ್ಯೆ ಕಾಡುತ್ತದೆಯೇ? ಇದಕ್ಕೆ ಪರಿಹಾರ ಕ್ರಮಗಳೇನು? ಈ ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಕ್ರ್ಯಾಶ್ ಡಯಟ್
ಕ್ರ್ಯಾಶ್ ಡಯಟ್ ಮಾಡುವುದರಿಂದ ಕೂದಲು ಉದುರುವ ಸಮಸ್ಯೆ ಕಂಡು ಬರುತ್ತದೆ ಎಂಬುದನ್ನು ಹಲವಾರು ಅಧ್ಯಯನಗಳು ತಿಳಿಸಿವೆ. ದೇಹಕ್ಕೆ ಆರೋಗ್ಯಕ್ಕೆ ಪ್ರೋಟೀನ್​ಗಳು, ಸಾಕಷ್ಟು ಪ್ರಮಾಣದ ಕ್ಯಾಲೊರಿಗಳು ಮತ್ತು ಪೋಷಕಾಂಶಗಳ ಅಗತ್ಯವಿರುವಂತೆ, ಕೂದಲಿಗೂ ಸಹ ಇವು ಮುಖ್ಯ. ಸಾಕಷ್ಟು ಪೋಷಕಾಂಶಗಳು ಮತ್ತು ಪ್ರೋಟೀನ್​ಗಳ ಕೊರತೆಯಿಂದ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳಬಹುದು. ಕ್ರ್ಯಾಶ್ ಡಯಟ್ ಅನುಸರಿಸುವವರು ಪೋಷಕಾಂಶಗಳ ಕೊರತೆ ಮತ್ತು ಮಾನಸಿಕ ಒತ್ತಡವನ್ನು ಅನುಭವಿಸುತ್ತಾರೆ. ಇವೆಲ್ಲವೂ ಕೂದಲು ಉದುರುವ ಸಮಸ್ಯೆಗೆ ಕಾರಣವಾಗುತ್ತವೆ.

ಕಡಿಮೆ ಪ್ರೊಟೀನ್ ಆಹಾರ
ಕೂದಲಿನ ಬೆಳವಣಿಗೆಗೆ ಅಮೈನೋ ಆಮ್ಲವು ಮುಖ್ಯವಾಗಿದೆ. ಇದು ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ. ಕೆರಾಟಿನ್ ಉತ್ಪಾದನೆಗೆ ಅಮೈನೋ ಆಮ್ಲವು ಸಹಾಯಕವಾಗಿದೆ. ಕೂದಲಿಗೆ ಬೇಕಾದ ಪ್ರೋಟೀನ್ ಸಿಗದಿದ್ದಾಗ ಅಪೌಷ್ಟಿಕತೆಯ ಕೊರತೆಯಿಂದ ಕೂದಲು ಉದುರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದ ಪ್ರೊಟೀನ್ ಇರಬೇಕು.

ತೂಕ ನಷ್ಟದ ಶಸ್ತ್ರ ಚಿಕಿತ್ಸೆಗಳು
ತ್ವರಿತ ತೂಕ ನಷ್ಟವು ಕೂದಲು ಉದುರುವ ಸಮಸ್ಯೆಗೆ ಕಾರಣವಾಗಬಹುದು. ಇದು ಜೀವಸತ್ವಗಳು, ಪ್ರೊಟೀನ್ ಮತ್ತು ಖನಿಜಾಂಶಗಳ ಕೊರತೆಯನ್ನು ಉಂಟು ಮಾಡಬಹುದು. 2018ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಹೊಟ್ಟೆಯಲ್ಲಿನ ಹೆಚ್ಚಿನ ಕ್ಯಾಲೊರಿಯನ್ನು ಅಥವಾ ಕೊಬ್ಬನ್ನು ತೆಗೆದು ಹಾಕಲು ಶಸ್ತ್ರ ಚಿಕಿತ್ಸಾ ವಿಧಾನವನ್ನು ಬಳಸಿದವರಲ್ಲಿ ಶೇ. 50ರಷ್ಟು ಮಹಿಳೆಯರು ಕೂದಲು ಉದುರುವ ಸಮಸ್ಯೆಗೆ ಒಳಗಾಗಿದ್ದಾರೆ.

ಹೆಚ್ಚುವರಿ ತೂಕ ಕಳೆದುಕೊಳ್ಳುವ ಸಮಯದಲ್ಲಿ ಕೂದಲು ಉದುರುವ ಸಮಸ್ಯೆಯಿಂದ ಹೊರಬರುವುದು ಹೇಗೆ?
ಪೌಷ್ಟಿಕಾಂಶದ ಕೊರತೆಯಿಂದ ಕೂದಲು ಉದುರುವ ಸಮಸ್ಯೆ ಉಂಟಾಗಿರುತ್ತದೆ. ಆದ್ದರಿಂದ ಡಯಟ್ಅನ್ನು ಅತಿಯಾಗಿ ಅನುಸರಿಸುವ ಬದಲಿಗೆ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರ ಸೇವನೆಯೂ ಮುಖ್ಯವಾಗಿರುತ್ತದೆ. ಕ್ರ್ಯಾಶ್ ಡಯಟ್​ಗಳು ಹಾನಿಕಾರಕವಾಗಿದ್ದು ಅವು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಸಮತೋಲಿತ ಆಹಾರವು ಪೋಷಕಾಂಶಗಳ ಕೊರತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಕೂದಲ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ. ನೀವು ತೂಕ ನಷ್ಟಕ್ಕಾಗಿ ಶಸ್ತ್ರ ಚಿಕಿತ್ಸೆ ಪಡೆಯುತ್ತಿದ್ದರೆ ವಿಟಮಿನ್ ಬಿ12, ಕಬ್ಬಿಣ ಮತ್ತು ಸತುವಿನ ಆಹಾರವನ್ನು ಪಡೆಯುವುದರ ಬಗ್ಗೆ ತಜ್ಞರಲ್ಲಿ ಸಲಹೆ ಪಡೆಯಿರಿ. ಇದರಿಂದ ಶಸ್ತ್ರ ಚಿಕಿತ್ಸೆಯ ನಂತರ ಕೂದಲು ಉದುರುವ ಸಮಸ್ಯೆಯಿಂದ ಪರಿಹಾರ ಪಡೆಯಲು ಸಹಾಯಕವಾಗುತ್ತದೆ.

ಇದನ್ನೂ ಓದಿ:

Hair Care Tips: ಕೂದಲು ಉದುರುವ ಸಮಸ್ಯೆ ನಿವಾರಣೆಗೆ ಇಲ್ಲಿದೆ ಕೆಲವೊಂದಿಷ್ಟು ಟಿಪ್ಸ್​

Hair Care Tips: ಕೂದಲು ಬೆಳ್ಳಗಾಗುತ್ತಿದೆಯೇ? ಪರಿಹಾರಕ್ಕೆ ಈ ಕೆಲವು ಸರಳ ಮಾರ್ಗಗಳನ್ನು ಅನುಸರಿಸಿ

Published On - 2:58 pm, Tue, 23 November 21