ಪ್ರೀತಿ ಹೇಳಿ ಕೇಳಿ ಹುಟ್ಟುವುದಿಲ್ಲ. ಪ್ರೀತಿಗೆ ಜಾತಿ, ಭಾಷೆ, ಅಂತಸ್ತು ಯಾವುದು ಬೇಕಾಗಿಲ್ಲ. ಪ್ರೀತಿಯಲ್ಲಿ ಬಿದ್ದವರು ಸದಾ ಹೇಳುವ ಮಾತುಗಳಿವು. ಆದರೆ ಫೆಬ್ರವರಿ ತಿಂಗಳು ಪ್ರೇಮಿಗಳ ಪಾಲಿಗೆ ಪ್ರೀತಿಯನ್ನು ನಾನಾ ರೀತಿಯಲ್ಲಿ ವ್ಯಕ್ತಪಡಿಸುವ ಸಾಧ್ಯವಾಗುವ ತಿಂಗಳು. ಸಹಜವಾಗಿಯೇ ಫೆಬ್ರವರಿ ಎಂದಾಕ್ಷಣ ಪ್ರೇಮಿಗಳು ಪ್ರೀತಿಯಲ್ಲಿ ತೇಲಾಡುತ್ತಿರುತ್ತಾರೆ. ಈಗಾಗಲೇ ಪ್ರೇಮಿಗಳ ವಾರ ಆರಂಭವಾಗಿದ್ದು , ಪ್ರತಿಯೊಂದು ದಿನವು ವಿಶೇಷತೆಯಿಂದ ಕೂಡಿದೆ. ಪ್ರೀತಿಯಲ್ಲಿ ಬಿದ್ದವರು ಈ ಎಲ್ಲಾ ದಿನ ವನ್ನು ವಿಶೇಷವಾಗಿಯೇ ಸೆಲೆಬ್ರೇಟ್ ಮಾಡುವ ಮೂಲಕ ತನ್ನ ಮನದರಸಿಗೆ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಆದರೆ ಇನ್ನೇನು ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ಸಜ್ಜಾಗಿರುವ ನವ ಪ್ರೇಮಿಗಳಂತೂ ಕಾಯುವುದೇ ಈ ಪ್ರಪೋಸ್ ಡೇ ಗಾಗಿ. ಫೆಬ್ರವರಿ 8 ಪ್ರಪೋಸ್ ಡೇಯಂದು ಪ್ರೀತಿಯ ವಿಚಾರವನ್ನು ತಾನು ಪ್ರೀತಿಸುವವರಿಗೆ ಹೇಳಿಕೊಳ್ಳಲು ಬಯಸಿದ್ದರೆ ವಿಭಿನ್ನವಾಗಿ ಪ್ರಪೋಸ್ ಮಾಡಿ ಮನಸ್ಸು ಗೆಲ್ಲುವುದು ಮುಖ್ಯವಾಗುತ್ತದೆ.
*ಇಷ್ಟವಾದ ಸ್ಥಳವನ್ನು ಆಯ್ಕೆ ಮಾಡಿ : ಪ್ರೀತಿಸುವ ವ್ಯಕ್ತಪಡಿಸುವ ಘಳಿಗೆಯಲ್ಲಿ ಇಷ್ಟವಾಗುವ ಸ್ಥಳವಿದ್ದರೆ ಆ ಕ್ಷಣವು ಇನ್ನಷ್ಟು ಅದ್ಭುತವಾಗಿರುತ್ತದೆ. ಹೀಗಾಗಿ ಇಷ್ಟವಾದ ಸ್ಥಳಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರೆ ನೀವು ಪ್ರೀತಿಸುವ ವ್ಯಕ್ತಿಯ ಮನಸ್ಸನ್ನು ನೂರಕ್ಕೆ ನೂರರಷ್ಟು ಗೆದ್ದಂತೆಯೇ. ಆಕೆಗೆ ಇಷ್ಟವಾಗುವ ಸ್ಥಳವು ನಿಮಗೆ ಗೊತ್ತಿದ್ದರೆ ಆ ಸ್ಥಳದಲ್ಲಿ ಪ್ರೀತಿಯನ್ನು ಹೇಳಿಕೊಂಡರೆ ಬೆಸ್ಟ್.
* ಪ್ರೇಮ ಪತ್ರವನ್ನು ನೀಡಿ: ಈ ಲವ್ ಲೆಟರ್ ನಲ್ಲಿ ಹೃದಯದ ಭಾವನೆಯನ್ನು ಬರೆಯುವ ಮೂಲಕ ನೀವು ಪ್ರೀತಿಸುವ ವ್ಯಕ್ತಿಗೆ ಪ್ರೀತಿಯನ್ನು ತಿಳಿಸಬಹುದು. ನಿಮ್ಮ ಪ್ರೀತಿಯನ್ನು ಅಕ್ಷರ ರೂಪಕ್ಕೆ ಇಳಿಸುವುದರಿಂದ, ಆಕೆಯು ಓದುವ ಮೂಲಕ ಎಲ್ಲವನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಈ ಪ್ರೇಮ ಪತ್ರದಲ್ಲಿ ಆಕೆಯನ್ನು ಅಥವಾ ಆತನನ್ನು ಹೊಗಳುವಂತಹ ಕವನಗಳಿದ್ದರೆ ಇಂಪ್ರೆಸ್ ಆಗಿ ಪ್ರೀತಿಗೂ ಓಕೆ ಎನ್ನಲು ಬಹುದು.
* ಭಿತ್ತಿಪತ್ರದ ಮೂಲಕ ಪ್ರೇಮ ನಿವೇದಿಸಿಕೊಳ್ಳಿ : ಭಿತ್ತಿ ಪತ್ರದಲ್ಲಿ ನೀವು ಪ್ರೀತಿಸುವ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿ, ಪ್ರೀತಿಯನ್ನು ತಿಳಿಸಿ. ಅದಲ್ಲದೆ ಆ ಪತ್ರದಲ್ಲಿ ನಿಮಗೆ ಇಷ್ಟವಿದೆಯೇ, ಇದ್ದರೆ ಉತ್ತರಿಸಿ ಎಂದು ಪ್ರಶ್ನೆಯು ಇರಲಿ. ಆ ಭಿತ್ತಿ ಪತ್ರವನ್ನು ಆಕೆಯ ಮನೆಯ ಕಿಟಕಿಯಲ್ಲಿಡಿ. ಈ ಭಿತ್ತಿ ಪತ್ರವನ್ನು ನೋಡಿದ ಆಕೆಯು ಕ್ರಿಯೇಟಿವ್ ಆಗಿ ನೀವು ಪ್ರಪೋಸ್ ಮಾಡಿದ ರೀತಿಗೆ ಆಕೆಯು ಪ್ರೀತಿಯಲ್ಲಿ ಬೀಳುವುದು ಪಕ್ಕಾ.
ಇದನ್ನೂ ಓದಿ: ಪ್ರೇಮಿಗಳ ದಿನದಂದು ಪ್ರೇಯಸಿಯನ್ನು ಇಂಪ್ರೆಸ್ ಮಾಡಲು ಈ ಟಿಪ್ಸ್ ಪಾಲಿಸಿ
*ಚಾಕೊಲೇಟ್ ಹಾಗೂ ಹೂಗುಚ್ಛಗಳು ನೀಡಿ ಪ್ರಪೋಸ್ ಮಾಡಿ: ಎಲ್ಲಾ ಹುಡುಗಿಯರಿಗೆ ಹೂವುಗಳು, ಚಾಕೊಲೇಟ್ ಗಳೆಂದರೆ ಇಷ್ಟ. ಹೀಗಾಗಿ ನೀವು ಪ್ರೀತಿಸುವ ವ್ಯಕ್ತಿಗೆ ಚಾಕೊಲೇಟ್ ಗಳೊಂದಿಗೆ ಹೂಗುಚ್ಛಗಳನ್ನು ನೀಡಿ ಪ್ರಪೋಸ್ ಮಾಡಿದರೆ ನೀವು ಬೇಗನೇ ಇಷ್ಟವಾಗುತ್ತೀರಿ.
* ಪ್ರೀತಿಯ ಸಂದೇಶವನ್ನು ಕಳುಹಿಸಿ: ಹೆಚ್ಚಿನವರಿಗೆ ಪ್ರೀತಿಯನ್ನು ನೇರವಾಗಿ ವ್ಯಕ್ತಪಡಿಸುವುದು ಕಷ್ಟವಾಗುತ್ತದೆ. ಒಂದು ವೇಳೆ ನಿಮಗೆ ಆ ರೀತಿಯ ಸಮಸ್ಯೆಯಿದ್ದರೆ, ಸಂದೇಶದ ಮೂಲಕ ಪ್ರೀತಿಯನ್ನು ಹೇಳಿಕೊಳ್ಳಿ. ಆದರೆ ಮೆಸೇಜ್ ನಲ್ಲಿ ನೇರವಾಗಿ ಐ ಲವ್ ಯು ಎಂದು ಹೇಳುವ ಬದಲು, ಮನಸ್ಸಿನ ಭಾವನೆಗಳನ್ನು ಕವನಗಳಲ್ಲಿ ಬರೆದರೆ ಹುಡುಗಿಯ ಮನಸ್ಸು ಗೆಲ್ಲಬಹುದು.
Published On - 12:33 pm, Wed, 7 February 24