Chanakya Niti: ಹೆಂಡತಿಯಲ್ಲಿ ಈ ಗುಣಗಳಿದ್ದರೆ ಗಂಡನಾದವನು ಸುಖವಾಗಿರಲು ಸಾಧ್ಯವಂತೆ

ಆಚಾರ್ಯ ಚಾಣಕ್ಯರು ದಾಂಪತ್ಯ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಸಂಸಾರ ಚೆನ್ನಾಗಿರಬೇಕೆಂದರೆ ಪತಿ ಪತ್ನಿ ಹೇಗಿರಬೇಕು, ಪತ್ನಿ ಸಂಸಾರವನ್ನು ಹೇಗೆ ಸರಿದೂಗಿಸಿಕೊಂಡು ಹೋಗ್ಬೇಕು. ಹೀಗೆ ಅನೇಕ ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಅದೇ ರೀತಿ ಅವರು ಹೆಂಡತಿಯಲ್ಲಿ ಈ ಕೆಲವು ಗುಣಗಳಿದ್ದರೆ ಮಾತ್ರ ಆಕೆಯ ಗಂಡ ಸಂತೋಷವಾಗಿರುತ್ತಾನೆ ಮತ್ತು ಆ ಮನೆಯಲ್ಲಿ ಶಾಂತಿ ಸಮೃದ್ಧಿ ನೆಲೆಸಿರುತ್ತದೆ ಎಂದು ಹೇಳಿದ್ದಾರೆ. ಹಾಗಿದ್ದರೆ ಹೆಂಡತಿಯಾದವಳು ಯಾವೆಲ್ಲಾ ಸದ್ಗುಣಗಳನ್ನು ಹೊಂದಿರಬೇಕು ಎಂಬುದನ್ನು ನೋಡೋಣ ಬನ್ನಿ.

Chanakya Niti: ಹೆಂಡತಿಯಲ್ಲಿ ಈ ಗುಣಗಳಿದ್ದರೆ  ಗಂಡನಾದವನು ಸುಖವಾಗಿರಲು ಸಾಧ್ಯವಂತೆ
ಚಾಣಕ್ಯ ನೀತಿ
Image Credit source: vecteezy

Updated on: Oct 29, 2025 | 4:52 PM

ದಾಂಪತ್ಯ ಜೀವನ (married life), ಸಂಸಾರ ನಿಂತಿರುವುದೇ ಗಂಡ ಹೆಂಡತಿಯ ಗುಣ, ಮೌಲ್ಯ, ನಡವಳಿಕೆಗಳ ಆಧಾರದ ಮೇಲೆ. ಹೌದು ಗಂಡ ಹೆಂಡತಿ ಅನ್ಯೋನ್ಯವಾಗಿ ಪ್ರೀತಿಯಿಂದ ಇದ್ದರೆ, ದಾಂಪತ್ಯ ಜೀವನ ಹಾಲು ಜೇನಿನಂತಿರುತ್ತದೆ. ಅದೇ ಪತಿ ಪತ್ನಿ ಯಾವಾಗ್ಲೂ ಜಗಳವಾಡುತ್ತಿದ್ದರೆ ಸಂಸಾರದಲ್ಲಿ ಬಿರುಕು ಮುಡುತ್ತದೆ. ಅದರಲ್ಲೂ ಸಂಸಾರವನ್ನು ಸರಿದೂಗಿಸಿಕೊಂಡು ಹೋಗುವಲ್ಲಿ ಹೆಂಡತಿಯ ಪಾತ್ರ ಬಹು ಮುಖ್ಯವಾಗಿರುತ್ತದೆ. ಆಕೆ ವಿನಾಕಾರಣ ಜಗಳವಾಡಬಾರದು, ಗಂಡನನ್ನು ಕೇವಲವಾಗಿ ನೋಡಬಾರದು. ಜೊತೆಗೆ ಪತ್ನಿಯಾದವಳು  ಈ ಒಂದಷ್ಟು ಗುಣಗಳನ್ನು ಬೆಳೆಸಿಕೊಂಡರೆ ಗಂಡನೂ ಸಂತೋಷದಿಂದಿರುತ್ತಾನೆ, ಸಂಸಾರದಲ್ಲೂ ನೆಮ್ಮದಿ ಇರುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯರು. ಹಾಗಿದ್ರೆ ಹೆಂಡತಿಯಲ್ಲಿ ಯಾವೆಲ್ಲಾ ಗುಣಗಳಿರಬೇಕು ಎಂಬುದನ್ನು ನೋಡೋಣ ಬನ್ನಿ.

ಹೆಂಡತಿಯಲ್ಲಿ ಈ ಗುಣಗಳಿರಬೇಕು ಎನ್ನುತ್ತಾರೆ ಚಾಣಕ್ಯ:

ಸದ್ಗುಣ, ನೈತಿಕತೆ: ಹೆಂಡತಿಯಾದವಳು ಗಂಡನಿಗೆ ವಿಧೇಯಳಾಗಿರಬೇಕು, ನಿಷ್ಠಳಾಗಿರಬೇಕು, ಪ್ರಾಮಾಣಿಕಳಾಗಿರಬೇಕು. ಅಷ್ಟೇ ಅಲ್ಲದೆ ಆಕೆ ಯಾವಾಗಲೂ ಸಭ್ಯ ಮತ್ತು ದಯೆಯಿಂದ ಇರಬೇಕು ಎಂದು ಆಚಾರ್ಯ ಚಾಣಕ್ಯ ಹೇಳುತ್ತಾರೆ. ಈ ಅಭ್ಯಾಸವನ್ನು ಹೊಂದಿರುವ ಮಹಿಳೆ ತನ್ನ ಇಡೀ ಕುಟುಂಬವನ್ನು ಸಂತೋಷದಿಂದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾಳೆ. ಅಂತಹ ಮಹಿಳೆ ಯಾವಾಗಲೂ ಕುಟುಂಬಕ್ಕೆ ಒಳ್ಳೆಯದನ್ನು ಬಯಸುತ್ತಾಳೆ, ಮತ್ತು  ಇದು ಮನೆಯಲ್ಲಿ ಸಕಾರಾತ್ಮಕ ವಾತಾವರಣವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಹೆಂಡತಿಯೂ ಈ ಗುಣವನ್ನು ಹೊಂದಿದ್ದರೆ, ನೀವೂ ಖುಷಿಯಾಗಿರುತ್ತೀರಿ ಮತ್ತು ನಿಮ್ಮ ವೈವಾಹಿಕ ಜೀವನವು ಸಂತೋಷವಾಗಿರುತ್ತದೆ.

ಧರ್ಮ ಮತ್ತು ಸಂಪ್ರದಾಯಗಳನ್ನು ಅನುಸರಿಸುವುದು:  ಚಾಣಕ್ಯರ  ಪ್ರಕಾರ, ಮಹಿಳೆ ಯಾವಾಗಲೂ ಧರ್ಮವನ್ನು ಹೇಗೆ ಅನುಸರಿಸಬೇಕೆಂದು ತಿಳಿದಿರಬೇಕು ಮತ್ತು ಪದ್ಧತಿಗಳು, ಸಂಪ್ರದಾಯಗಳ ಬಗ್ಗೆ ತಿಳುವಳಿಕೆಯನ್ನು ಹೊಂದಿರಬೇಕು. ಈ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಮಹಿಳೆಯಿರುವ ಮನೆಯಲ್ಲಿ ಸಂತೋಷ, ಸಮೃದ್ಧಿ ನೆಲೆಸುತ್ತದೆ. ಜೊತೆಗೆ ಅಂತಹ ಮಹಿಳೆಗೆ ಕೋಪಮಾಡಿಕೊಳ್ಳದೆ, ಕಟುವಾದ ಮಾತುಗಳನ್ನಾಡದೆ ಗಂಡನನ್ನು ಸಂತೋಷವಾಗಿಡುವುದು ಹೇಗೆ ಎಂಬುದು ತಿಳಿದಿರುತ್ತದೆ. ಜೊತೆಗೆ ಆಕೆ ತನ್ನ ಕುಟುಂಬ ಒಗ್ಗಟ್ಟಿನಿಂದ ಇರುವಂತೆ ನೋಡಿಕೊಳ್ಳುತ್ತಾಳೆ.

ಇದನ್ನೂ ಓದಿ
ಕೆಲವರು ಎಷ್ಟೇ ಸಂಪಾದನೆ ಮಾಡಿದರೂ ಬಡವರಾಗಿಯೇ ಉಳಿಯಲು ಕಾರಣ ಏನು ಗೊತ್ತಾ?
ಕೆಲಸದ ಸ್ಥಳದಲ್ಲಿ ಇಂತಹ ಜನರಿಂದ ನೀವು ದೂರವಿದ್ದಷ್ಟು ಒಳ್ಳೆಯದು
ಇತರರಿಗೆ ಸಹಾಯ ಮಾಡುವ ಮುನ್ನ, ಚಾಣಕ್ಯರ ಈ ಮಾತುಗಳನ್ನೊಮ್ಮೆ ಕೇಳಿ
ಪುರುಷರ ವ್ಯಕ್ತಿತ್ವನ್ನು ಆಕರ್ಷಕಗೊಳಿಸುವ ಗುಣಗಳಿವು

ಇದನ್ನೂ ಓದಿ: ಇದೇ ಕಾರಣಕ್ಕಂತೆ ಕೆಲವರು ಎಷ್ಟೇ ಸಂಪಾದನೆ ಮಾಡಿದರೂ ಬಡವರಾಗಿಯೇ ಉಳಿಯುವುದು

ಕೌಶಲ್ಯ ಮತ್ತು ಪರಿಣತಿ: ಹಣ ಉಳಿತಾಯ, ಮನೆ, ಖರ್ಚುಗಳನ್ನು ನಿಭಾಯಿಸುವುದು, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಕೌಶಲ್ಯಗಳನ್ನು ಹೊಂದಿರುವ ಹೆಂಡತಿಯಿದ್ದರೆ ಗಂಡ ಯಾವುದೇ ಒತ್ತಡಗಳಿಲ್ಲದೆ ನೆಮ್ಮದಿಯಿಂದ ಜೀವನ ಸಾಗಿಸಬಹುದು. ಜೊತೆಗೆ ಹಣವನ್ನು ಉಳಿಸುವ ಮಹಿಳೆಗೆ ಕಷ್ಟಕಾಲದಲ್ಲಿ ತನ್ನ ಸಂಸಾರವನ್ನು ರಕ್ಷಿಸುವುದು ಹೇಗೆ ಎಂಬುದು ತಿಳಿದಿರುತ್ತದೆ. ಹೆಂಡತಿಗೆ ಈ ಗುಣಗಳಿದ್ದರೆ ಸಂಸಾರದಲ್ಲಿ ಕಷ್ಟ ಬರುವುದಿಲ್ಲ, ಬಿರುಕು ಮೂಡುವುದಿಲ್ಲ ಎನ್ನುತ್ತಾರೆ ಆಚಾರ್ಯ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ