Chanakya Niti: ಪ್ರತಿಯೊಬ್ಬರೂ ಈ ವಿಷಯಗಳ ಬಗ್ಗೆ ಆದಷ್ಟು ಜಾಗರೂಕರಾಗಿರಬೇಕು

ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರ ಒಬ್ಬ ವ್ಯಕ್ತಿ ಸಾಧನೆಯ ಹಾದಿಯನ್ನು ಏರಲು, ಶ್ರೀಮಂತಿಕೆಯನ್ನು ಗಳಿಸಲು ಏನೆಲ್ಲಾ ಮಾಡಬೇಕು ಎಂಬುದರ ಬಗ್ಗೆ ಸಲಹೆ ನೀಡಿರುವಂತೆ, ಒಂದಷ್ಟು ವಿಚಾರಗಳ ಬಗ್ಗೆ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು, ಅದರ ಬಗ್ಗೆ ತಮಾಷೆ ಬೇಡ್ವೇ ಬೇಡ ಎಂದಿದ್ದಾರೆ. ಹಾಗಿದ್ರೆ ಚಾಣಕ್ಯರು ಹೇಳಿರುವಂತೆ ಯಾವ ವಿಚಾರಗಳ ಬಗ್ಗೆ ಜಾಗರೂಕರಾಗಿರಬೇಕು ಎಂಬುದನ್ನು ನೋಡೋಣ ಬನ್ನಿ.

Chanakya Niti: ಪ್ರತಿಯೊಬ್ಬರೂ ಈ ವಿಷಯಗಳ ಬಗ್ಗೆ ಆದಷ್ಟು ಜಾಗರೂಕರಾಗಿರಬೇಕು
ಚಾಣಕ್ಯ ನೀತಿ

Updated on: Feb 23, 2026 | 7:48 PM

ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ವಿಷಯಗಳು ಮಾತ್ರವಲ್ಲದೆ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆಯೂ ತಿಳಿಸಿಕೊಟ್ಟಿದ್ದಾರೆ. ಹೌದು ಯಶಸ್ಸು, ಶ್ರೀಮಂತಿಕೆ ಗಳಿಸುವುದು ಹೇಗೆ, ದಾಂಪತ್ಯ ಜೀವನ ಸುಖವಾಗಿರಲು ಪತಿಪತ್ನಿಯರು ಹೇಗಿರಬೇಕು ಎಂಬುದರ ಬಗ್ಗೆ ಹೇಳಿದ್ದಾರೆ ಅದೇ ರೀತಿ ಅವರು ಕೆಲವೊಂದಿಷ್ಟು ಸಂಗತಿಗಳ ಬಗ್ಗೆ ಆದಷ್ಟು ಜಾಗರೂಕರಾಗಿರಬೇಕು, ಅವುಗಳ ಹತ್ತಿರಕ್ಕೆ ಹೋದರೆ ಅಥವಾ ಅವುಗಳೊಂದಿಗೆ ತಮಾಷೆ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಕೆ ನೀಡಿದ್ದಾರೆ.  ಹಾಗಿದ್ರೆ ಯಾವ ವಿಷಯಗಳ ಬಗ್ಗೆ ಆದಷ್ಟು ಜಾಗರೂಕರಾಗಿರಬೇಕು ಎಂಬುದನ್ನು ನೋಡೋಣ ಬನ್ನಿ.

ಈ ವಿಷಯಗಳ ಬಗ್ಗೆ ಜಾಗರೂಕರಾಗಿರಿ:

ಹಾವುಗಳು: ಹಾವುಗಳ ಬಗ್ಗೆ ಯಾವಾಗಲೂ ಜಾಗರೂಕರಾಗಿರಬೇಕು ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ. ಕೆಲವೊಂದು ಬಾರಿ ಅವುಗಳು ಸೇಹಪರವಾಗಿ ಕಂಡರೂ ಅವುಗಳು ಅಪಾಯವನ್ನು ತಂದೊಡ್ಡುತ್ತವೆ. ಹೌದು ಹಾವುಗಳು ಯಾವಾಗ ಕಚ್ಚುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಾಗಿ ಯಾವುಗಳ ಜೊತೆ ತಮಾಷೆ ಬೇಡ, ಅವುಗಳಿಂದ ದೂರವಿರುವುದೇ ಸೂಕ್ತ.

ಬೆಂಕಿ: ಬೆಂಕಿಯ ಜೊತೆ ಸರಸ ಬೇಡ್ವೇ ಬೇಡ ಎನ್ನುತ್ತಾರೆ ಚಾಣಕ್ಯ. ಬೆಂಕಿಯೊಂದಿಗೆ ತಮಾಷೆ ಮಾಡಲು ಹೋದರೆ ಅಥವಾ ಅದರೊಂದಿಗೆ ಹುಚ್ಚಾಟ ಆಡಿದರೆ  ಆ ಬೆಂಕಿ ಕ್ಷಣ ಮಾತ್ರದಲ್ಲಿ ನಮ್ಮನ್ನು ಸುಟ್ಟು ಬೂದಿ ಮಾಡಬಹುದು. ಹಾಗಾಗಿ ಬೆಂಕಿಯಿಂದ ಯಾವಾಗಲೂ ದೂರವಿರಿ.

ಇದನ್ನೂ ಓದಿ: ದಾಂಪತ್ಯ ಜೀವನದಲ್ಲಿ ಬಿರುಕು ಮೂಡಲು ಅಂಶಗಳೇ ಮುಖ್ಯ ಕಾರಣ

ನೀರು: ಕೆಲವರು ನೀರನ್ನು ಕಂಡರೆ ಹುಚ್ಚಾಟಗಳನ್ನು ಆಡುತ್ತಾರೆ. ಹೀಗೆ ನೀರಿನಲ್ಲಿ ಆಟವಾಡಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡ ಹಲವರಿದ್ದಾರೆ. ಅದಕ್ಕಾಗಿ ಆಚಾರ್ಯ ಚಾಣಕ್ಯರು ನೀರಿನಿಂದ ಆದಷ್ಟು ದೂರವಿರಿ, ಸಮುದ್ರ, ನದಿ ನೀರಿನ ಬಳಿ ಜಾಗರೂಕರಾಗಿರಿ ಎಂದು ಎಚ್ಚರಿಕೆ ನೀಡಿದ್ದು. ಹೀಗೆ ಹಾವು, ನೀರು, ಬೆಂಕಿ ಈ ಅಂಶಗಳು ಇರುವ ಸ್ಥಳದಲ್ಲಿ ಕೊಂಚ ಅಜಾಗರೂಕತೆಯನ್ನು ತೋರಿದರೂ ಅದು ನಮ್ಮ ಪ್ರಾಣಕ್ಕೆ ಕುತ್ತಾಗಿ ಪರಿಣಮಿಸಬಹುದು. ಹಾಗಾಗಿ ಈ ಮೂರು ವಿಷಯಗಳ ಬಗ್ಗೆ ತಮಾಷೆ ಬೇಡ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Malashree anchan

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವಳು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದೇನೆ.

Read More
Follow Us