Chanakya Niti: ಈ ರಹಸ್ಯಗಳನ್ನು ತಿಳಿದರೆ ನೀವು ಜೀವನದಲ್ಲಿ ಎಂದಿಗೂ ಸೋಲಲು ಸಾಧ್ಯವೇ ಇಲ್ಲ

ಯಶಸ್ಸು ಸಾಧಿಸುವುದೆಂದರೆ ಅದೇನು ಸುಲಭದ ಕೆಲಸವಲ್ಲ. ಇದಕ್ಕಾಗಿ ಕಠಿಣ ಪರಿಶ್ರಮ, ಆತ್ಮವಿಶ್ವಾಸ ದೃಢ ನಿರ್ಧಾರ ಎಲ್ಲವೂ ಅಗತ್ಯವಿರುತ್ತದೆ. ಜೊತೆಗೆ ಈ ಕೆಲವೊಂದು ಜೀವನದ ರಹಸ್ಯಗಳ ಬಗ್ಗೆ ತಿಳಿದಿದ್ದರೆ ನೀವು ಜೀವನದಲ್ಲಿ ಎಂದಿಗೂ ಸೋಲನ್ನು ಕಾಣಲು ಸಾಧ್ಯವಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಯಶಸ್ಸಿನ ಗುಟ್ಟುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

Chanakya Niti: ಈ ರಹಸ್ಯಗಳನ್ನು ತಿಳಿದರೆ ನೀವು ಜೀವನದಲ್ಲಿ ಎಂದಿಗೂ ಸೋಲಲು ಸಾಧ್ಯವೇ ಇಲ್ಲ
ಚಾಣಕ್ಯ ನೀತಿ
Image Credit source: Pinterest

Updated on: Jan 24, 2026 | 5:56 PM

ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಯಶಸ್ವಿಯಾಗಲು ಬಯಸುತ್ತಾನೆ. ಯಶಸ್ಸನ್ನು (success) ಸಾಧಿಸಲು ಹಗಲು ರಾತ್ರಿ ಶ್ರಮಿಸುತ್ತಾರೆ, ಅನೇಕ ವಿಷಯಗಳಲ್ಲಿ ತ್ಯಾಗವನ್ನು ಮಾಡುತ್ತಾನೆ. ಇಷ್ಟೆಲ್ಲಾ ಶ್ರಮಿಸಿದರೂ, ಎಷ್ಟೇ ಪ್ರಯತ್ನಪಟ್ಟರೂ ಒಂದಷ್ಟು ಮಂದಿ ಯಶಸ್ಸಿನ ಮೆಟ್ಟಿಲನ್ನು ಏರಲು ಸಾಧ್ಯವೇ ಆಗುವುದಿಲ್ಲ, ಸತತ ಸೋಲುಗಳನ್ನೇ ಕಾಣುತ್ತಿರುತ್ತಾರೆ. ಅಂತಹವರು ಚಾಣಕ್ಯರು ಹೇಳಿರುವ ಈ ಕೆಲವು ಜೀವನ ರಹಸ್ಯಗಳನ್ನು ಪಾಲಿಸುವ ಮೂಲಕ ಯಶಸ್ಸಿನ ಶಿಖರವನ್ನು ಏರಬಹುದು. ಯಶಸ್ಸಿನ ಆ ರಹಸ್ಯಗಳು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಚಾಣಕ್ಯರು ಹೇಳಿರುವ ಯಶಸ್ಸಿನ ರಹಸ್ಯಗಳಿವು:

ಗುರಿಯ ಬಗ್ಗೆ ಸ್ಪಷ್ಟತೆ: ತನ್ನ ಗುರಿಯ ಬಗ್ಗೆ ಸ್ಪಷ್ಟವಾಗಿರುವ ವ್ಯಕ್ತಿ ಖಂಡಿತವಾಗಿಯೂ ಯಶಸ್ಸನ್ನು ಸಾಧಿಸುತ್ತಾನೆ. ಗುರಿಯಿಲ್ಲದ ಜೀವನವು ಗಮ್ಯಸ್ಥಾನವಿಲ್ಲದ ಪ್ರಯಾಣದಂತೆ. ತನ್ನ ಮಾರ್ಗವನ್ನು ಸ್ಪಷ್ಟವಾಗಿ ಆರಿಸಿಕೊಂಡ ವ್ಯಕ್ತಿ ಎಂದಿಗೂ ದಾರಿ ತಪ್ಪುವುದಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಅಂತಹ ಜನರು ತಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡುವುದಿಲ್ಲ. ಅಲ್ಲದೆ ಗುರಿಯ ಬಗ್ಗೆ ಸ್ಪಷ್ಟವಾಗಿರುವವರು ಜೀವನದಲ್ಲಿ ಎಂದಿಗೂ ಸೋಲಲು ಸಾಧ್ಯವೇ ಇಲ್ಲ.

ಮಾತಿನ ಬಗ್ಗೆ ಸ್ಪಷ್ಟತೆ: ಮಾತಿಗಿರುವಷ್ಟು ಶಕ್ತಿ ಬೇರೆ ಯಾವುದಕ್ಕೂ ಇಲ್ಲ. ಅದಕ್ಕಾಗಿಯೇ ಎಲ್ಲಿ ಮಾತನಾಡಬೇಕು ಮತ್ತು ಎಲ್ಲಿ ಮೌನವಾಗಿರಬೇಕು ಎಂಬುದರ ಬಗ್ಗೆ ವಿವೇಚನೆಯಿಂದ ಇರುವುದು ಬಹಳ ಮುಖ್ಯ ಎಂದು ಚಾಣಕ್ಯರು ಹೇಳಿದ್ದು. ಅನಗತ್ಯವಾಗಿ ಮಾತನಾಡುವುದರಿಂದ ಶತ್ರುಗಳು ಹೆಚ್ಚಾಗಬಹುದು. ಸರಿಯಾದ ಸಮಯದಲ್ಲಿ ಮಾತನಾಡುವ ಮಾತುಗಳು ಸಮಾಜದಲ್ಲಿ ಗೌರವ ಮತ್ತು ಮನ್ನಣೆಯನ್ನು ತರುತ್ತವೆ. ಮೌನವನ್ನು ಆಯುಧವಾಗಿ ಬಳಸುವುದು ಹೇಗೆ ಎಂದು ತಿಳಿದಿರುವ ವ್ಯಕ್ತಿಗೆ ಯಾರೂ ಮಾನಸಿಕವಾಗಿ ಹಾನಿ ಮಾಡಲು ಸಾಧ್ಯವಿಲ್ಲ. ಮತ್ತು ಇಂತಹ ವ್ಯಕ್ತಿಗಳು ಜೀವನದಲ್ಲಿ ಸೋಲನ್ನು ಸಹ ಎದುರಿಸುವುದಿಲ್ಲ.

ಸುತ್ತಮುತ್ತಲಿನವರ ಬಗ್ಗೆ ಎಚ್ಚರಿಕೆಯಿಂದ ಇರುವುದು: ನಾವು ಯಶಸ್ವಿಯಾಗಬೇಕಾದರೆ, ನಮ್ಮ ಸುತ್ತಲಿನ ಜನರು ಎಂತಹವರೆಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನಗುತ್ತಾ ಬೆನ್ನಿಗೆ ಚೂರಿ ಹಾಕುವ ಸ್ನೇಹಿತನಿಗಿಂತ ನೇರವಾಗಿ ದಾಳಿ ಮಾಡುವ ಶತ್ರುವೇ ಲೇಸು. ನಿಜವಾದ ಸ್ನೇಹಿತ ಮತ್ತು ಶತ್ರುವಿನ ನಡುವೆ ವ್ಯತ್ಯಾಸವನ್ನು ಗುರುತಿಸುವ ಬುದ್ಧಿವಂತಿಕೆ ಇರುವ ವ್ಯಕ್ತಿ ಎಂದಿಗೂ ಮೋಸ ಹೋಗುವುದಿಲ್ಲ ಎನ್ನುತ್ತಾರೆ ಚಾಣಕ್ಯ.

ಇದನ್ನೂ ಓದಿ: ಜೀವನದಲ್ಲಿ ಸದಾ ಸಂತೋಷವಾಗಿರಲು ಚಾಣಕ್ಯರ ಈ ಸರಳ ಸೂತ್ರವನ್ನು ಪಾಲಿಸಿ

ಕೆಟ್ಟವರ ಸಹವಾಸದಿಂದ ದೂರವಿರುವುದು: ಕೆಟ್ಟ ಸ್ವಭಾವದ ಜನರಿಂದ ದೂರವಿರುವುದರಿಂದ ಅನಗತ್ಯ ತೊಡಕುಗಳನ್ನು ತಪ್ಪಿಸಬಹುದು. ಜೊತೆಗೆ ಒಳ್ಳೆಯವರ ಜೊತೆ ಇರುವುದಿಂದ ನೀವು ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಹಾಗಾಗಿ ಸಜ್ಜನರ ಸಹವಾಸದಲ್ಲಿಯೇ ಇರಬೇಕು ಎನ್ನುತ್ತಾರೆ ಚಾಣಕ್ಯ.

ಸವಾಲುಗಳನ್ನು ಧೈರ್ಯದಿಂದ ಎದುರಿಸುವುದು: ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸುವವರು, ಜೀವನದಲ್ಲಿ ಎದುರಾಗುವ ಸವಾಲುಗಳ ಬಗ್ಗೆ ಭಯಪಡದವರು ಜೀವನದಲ್ಲಿ ಎಂದಿಗೂ ಸೋಲನ್ನು ಕಾಣಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಚಾಣಕ್ಯರು. ಜೀವನದ ಈ ರಹಸ್ಯಗಳ ಬಗ್ಗೆ ತಿಳಿದರೆ ಯಶಸ್ಸನ್ನು ಸಾಧಿಸಲು ಸಾಧ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ