
ಆಚಾರ್ಯ ಚಾಣಕ್ಯರು (Acharya Chanakya) ತಮ್ಮ ನೀತಿಶಾಸ್ತ್ರದಲ್ಲಿ ರಾಜಕೀಯ ವಿಷಯಗಳು ಮಾತ್ರವಲ್ಲ ಜೀವನಕ್ಕೆ ಸಂಬಂಧಿಸಿದ ಬಹಳಷ್ಟು ಸಂಗತಿಗಳನ್ನು ವಿವರಿಸಿದ್ದಾರೆ. ಹೌದು ಯಶಸ್ಸು, ಶ್ರೀಮಂತಿಕೆ, ಪತಿ ಪತ್ನಿಯರ ಸಂಬಂಧ, ಸ್ನೇಹ, ಕುಟುಂಬ ಹೀಗೆ ಹಲವಾರು ಸಂಗತಿಗಳ ಬಗ್ಗೆ ಹೇಳಿದ್ದಾರೆ. ಇವರು ನೀಡಿರುವ ಈ ಸಲಹೆಗಳನ್ನು ಪಾಲಿಸುವ ಮೂಲಕ ಒಬ್ಬ ವ್ಯಕ್ತಿ ಯಶಸ್ವಿ ಜೀವನವನ್ನು ಸಾಧಿಸಲು ಸಾಧ್ಯ. ಅದೇ ರೀತಿ ಆಚಾರ್ಯ ಚಾಣಕ್ಯರು ಹೇಳಿರುವ ಈ ಒಂದಷ್ಟು ಸಲಹೆಗಳನ್ನು ಪಾಲಿಸುವ ಮೂಲಕ ಗೌರವನ್ನು ಗಳಿಸಲು ಕೂಡ ಸಾಧ್ಯ. ನಮ್ಮನ್ನು ಎಲ್ಲರೂ ಇಷ್ಟಪಡಬೇಕು, ನಮ್ಮನ್ನು ಎಲ್ಲರೂ ಗೌರವಿಸಬೇಕು ಎಂದು ಪ್ರತಿಯೊಬ್ಬರೂ ಬಯಸುತ್ತಾರೆ. ಈ ಗೌರವ ನಿಮಗೆ ಸಿಗಬೇಕೆಂದರೆ ಈ ಕೆಲವು ಅಭ್ಯಾಸಗಳನ್ನು ತ್ಯಜಿಸಿ.
ದುರಾಸೆಯನ್ನು ಬಿಟ್ಟುಬಿಡಿ: ಎಂದಿಗೂ ದುರಾಸೆಯಿಂದ ಇರಬಾರದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ದುರಾಸೆಯು ನಿಮ್ಮನ್ನು ಇತರರಿಂದ ದೂರವಿಡುತ್ತದೆ ಮತ್ತು ನಿಮ್ಮ ಯಶಸ್ಸಿಗೆ ಅಡ್ಡಿಯಾಗುತ್ತದೆ. ದುರಾಸೆಯ ವ್ಯಕ್ತಿಯನ್ನು ಸಮಾಜದಲ್ಲಿ ಅಥವಾ ಕುಟುಂಬದಲ್ಲಿ ಯಾರೂ ಇಷ್ಟಪಡುವುದಿಲ್ಲ, ಅಂತಹವರಿಗೆ ಯಾವ ಗೌರವವವೂ ಇರುವುದಿಲ್ಲ, ಆದ್ದರಿಂದ ನೀವು ದುರಾಸೆಯನ್ನು ಬಿಟ್ಟುಬಿಡಬೇಕು.
ಇತರರನ್ನು ಟೀಕಿಸಬೇಡಿ: ಚಾಣಕ್ಯ ನೀತಿಯ ಪ್ರಕಾರ, ಇತರರನ್ನು ಟೀಕಿಸುವುದು ಒಳ್ಳೆಯ ಗುಣವಲ್ಲ. ಇತರರನ್ನು ಟೀಕಿಸುವ ಜನರಿಗೆ ಸಮಾಜದಲ್ಲಿ ಕಿಂಚಿತ್ತು ಗೌರವವೂ ಇರುವುದಿಲ್ಲ, ಅಂತಹ ವ್ಯಕ್ತಿಗಳನ್ನು ಯಾರು ಹತ್ತಿರಕ್ಕೂ ಸೇರಿಸಲು ಇಷ್ಟಪಡುವುದಿಲ್ಲ. ಆದ್ದರಿಂದ, ನೀವು ಯಾರನ್ನೂ ಎಂದಿಗೂ ಟೀಕಿಸಬಾರದು. ಜೊತೆಗೆ ಟೀಕಾಕಾರರಿಂದಲೂ ದೂರವಿರಬೇಕು.
ಇದನ್ನೂ ಓದಿ: ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಚಾಣಕ್ಯರ ಮಾತುಗಳನ್ನು ಪಾಲಿಸಿ
ಅಹಂಕಾರ ತ್ಯಜಿಸಿ: ಮನುಷ್ಯನಾದವನಿಗೆ ಅಹಂಕಾರ ಇರಬಾರದು ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಅಹಂಕಾರಪಡುವ ಜನರನ್ನು ಯಾರು ಇಷ್ಟಪಡುವುದಿಲ್ಲ, ಅವರಿಗೆ ಯಾವ ಗೌರವವೂ ಇರುವುದಿಲ್ಲ. ಈ ಅಹಂಕಾರ ಗೌರವವನ್ನು ಹಾಳು ಮಾಡುವುದಲ್ಲದೆ, ನಿಮ್ಮ ಯಶಸ್ಸಿಗೂ ಅಡ್ಡಿಯಾಗುತ್ತದೆ. ಆದ್ದರಿಂದ ಎಂದಿಗೂ ಅಹಂಕಾರ ಪಡಬೇಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ