
ಯೌವನದಲ್ಲಿರುವಾಗ ಮಾಡುವ ಕೆಲವೊಂದು ತಪ್ಪುಗಳು ವೃದ್ಧಾಪ್ಯವನ್ನು (old age) ನರಕ ಮಾಡುತ್ತಂತೆ. ಹೌದು ಇಂದು ಮಾಡುವ ತಪ್ಪಿನಿಂದ ಕೊನೆಗಾಲದಲ್ಲಿ ಮಕ್ಕಳ ಪ್ರೀತಿಯೂ ಸಿಗೋದಿಲ್ಲ, ನೆಮ್ಮದಿಯೂ ಇರೋಲ್ಲ, ಮುಖ್ಯವಾಗಿ ಆಹಾರಕ್ಕೂ ಪರದಾಡಬೇಕಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ವೃದ್ಧಾಪ್ಯವು ಶಾಂತಿ ಮತ್ತು ಸಂತೋಷದಿಂದ ಕೂಡಿರಬೇಕೆಂದರೆ ಯೌನದಲ್ಲಿರುವಾಗ ಈ ಒಂದಷ್ಟು ಕೆಲಸಗಳನ್ನು ತಪ್ಪದೆ ಮಾಡಲೇಬೇಕು ಎಂಬ ಸಲಹೆಯನ್ನು ನೀಡಿದ್ದಾರೆ. ಹಾಗಿದ್ರೆ ಕೊನೆಗಾಲದಲ್ಲಿ ನೆಮ್ಮದಿಯಾಗಿ ಜೀವನ ನಡೆಸಲು ಮುಂಚಿತವಾಗಿಯೇ ಏನೆಲ್ಲಾ ಮಾಡಬೇಕು ಎಂಬುದನ್ನು ತಿಳಿಯಿರಿ.
ಹಣ ಉಳಿತಾಯ ಬಹಳ ಮುಖ್ಯ: ಯೌವನದ ಆಸೆಗಳನ್ನು ಅನುಸರಿಸಲು ನಿಮ್ಮ ಎಲ್ಲಾ ಗಳಿಕೆಯನ್ನು ವ್ಯರ್ಥ ಮಾಡುವುದು ಅತ್ಯಂತ ಮೂರ್ಖತನವೆಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ನಿಮ್ಮ ಸ್ವಂತ ಮಗ ಕೂಡ ವೃದ್ಧಾಪ್ಯದಲ್ಲಿ ನಿಮ್ಮನ್ನು ಕೈಬಿಡಬಹುದು, ಇಂತಹ ಸಮಯದಲ್ಲಿ ನೀವು ಕೂಡಿಟ್ಟ ಹಣ, ನೀವು ಗಳಿಸಿದ ಆಸ್ತಿ ನಿಮ್ಮ ಸಹಾಯಕ್ಕೆ ಬರುತ್ತದೆ. ಹಾಗಾಗಿ ನಿಮಗಾಗಿ, ನಿಮ್ಮ ಸ್ವಂತಕ್ಕಾಗಿ ಒಂದಷ್ಟು ಹಣವನ್ನು ಕೂಡಿಡಿ. ಇದು ನೀವು ವೃದ್ಧಾಪ್ಯದಲ್ಲಿ ಇನ್ನೊಬ್ಬರ ಮುಂದೆ ಕೈ ಚಾಚುವುದನ್ನು ತಪ್ಪಿಸುತ್ತದೆ, ನೆಮ್ಮದಿಯ, ಸ್ವಾಭಿಮಾನದ ಜೀವನ ನಡೆಸಲಲು ಅನುವು ಮಾಡಿಕೊಡುತ್ತದೆ.
ನಿಮ್ಮ ಆರೋಗ್ಯದ ಬಗ್ಗೆ ಯಾವಾಗಲೂ ವಿಶೇಷ ಕಾಳಜಿ ವಹಿಸಿ: ನಮ್ಮ ಯೌವನದಲ್ಲಿ, ಆರೋಗ್ಯದ ಬಗ್ಗೆ ತುಂಬಾನೇ ಕಾಳಜಿ ವಹಿಸಬೇಕು ಅದಕ್ಕಾಗಿ ದೈಹಿಕ ವ್ಯಾಯಾಮ ಮಾಡಬೇಕು, ಸಮತೋಲಿತ, ಆರೋಗ್ಯಕರ ಆಹಾರವನ್ನು ಸೇವನೆ ಮಾಡಬೇಕು ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಇಂದು ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಿದರೆ ವೃದ್ಧಾಪ್ಯದಲ್ಲಿ ಆಸ್ಪತ್ರೆಯಲ್ಲೇ ಜೀವನವನ್ನು ಕಳೆಯಬೇಕಾಗುತ್ತದೆ ಎಚ್ಚರ.
ಇದನ್ನೂ ಓದಿ: ಈ ಗುಣಗಳು ವ್ಯಕ್ತಿಗೆ ಯಶಸ್ಸು, ಗೌರವವನ್ನು ತಂದುಕೊಡುತ್ತದೆ
ನಿಮ್ಮ ಮಕ್ಕಳಿಗೆ ಒಳ್ಳೆಯ ಮೌಲ್ಯಗಳನ್ನು ಕಲಿಸಿ: ನಿಮ್ಮ ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಅವರನ್ನೇ ಆಸ್ತಿ ಮಾಡಿ. ಒಳ್ಳೆಯ ಸಂಸ್ಕಾರಗಳನ್ನು ಕಲಿಸಿ. ಇಂತಹ ಮಕ್ಕಳು ಖಂಡಿತವಾಗಿಯೂ ಕೊನೆಗಾಲದಲ್ಲಿ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಬರೀ ವಿದ್ಯೆ ಕಲಿಸಿ, ಸಂಸ್ಕಾರ, ಹೆತ್ತವರ ಮೌಲ್ಯ ಏನೆಂಬುದನ್ನು ಕಲಿಸದಿದ್ದರೆ, ಅಂತಹ ಮಕ್ಕಳಿಂದ ಕೊನೆಗಾದಲ್ಲಿ ಬರಿ ನೋವನ್ನೇ ತಿನ್ನಬೇಕಾಗುತ್ತದೆ. ಆದ್ದರಿಂದ ಮುಖ್ಯವಾಗಿ ಮಕ್ಕಳಿಗೆ ಒಳ್ಳೆಯ ಮೌಲ್ಯಗಳನ್ನು ಕಲಿಸುತ್ತ ಗಮನ ನೀಡಿ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.
ಧಾರ್ಮಿಕ ಯಾರ್ಯ ಮತ್ತು ದಾನ, ಸದ್ಗುಣ: ಯೌವನದಲ್ಲಿ ಮಾಡುವ ದಾನ ಮತ್ತು ಒಳ್ಳೆಯ ಕಾರ್ಯಗಳು ಸಮಾಜದಲ್ಲಿ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ. ಇದು ನಿಮಗೆ ಸಂತೋಷವನ್ನು ನೀಡುವುದು ಮಾತ್ರವಲ್ಲ ಕೊನೆಗಾಲದಲ್ಲಿ ಈ ದಾನ ಧರ್ಮ ಒಂದಲ್ಲಾ ಒಂದು ರೀತಿಯಲ್ಲಿ ನಿಮ್ಮ ಸಹಾಯಕ್ಕೆ ಬರುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಆದ್ದರಿಂದ ಒಳ್ಳೆಯ ಕಾರ್ಯಗಳನ್ನು ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ