Chanakya Niti: ಚಾಣಕ್ಯರ ಪ್ರಕಾರ ಹಣ, ಶ್ರೀಮಂತಿಕೆ ಪಡೆಯಲು ಈ ಅಭ್ಯಾಸಗಳನ್ನು ನೀವು ತ್ಯಜಿಸಲೇಬೇಕು

ನಮ್ಮ ಉನ್ನತಿ, ಅವನತಿಗಳಿಗೆ ನಮ್ಮ ಅಭ್ಯಾಸಗಳು ಕೂಡ ಮುಖ್ಯ ಕಾರಣವಾಗುತ್ತವೆ. ಹೌದು ನಾವು ಯಾರ ಸಹವಾಸದಲ್ಲಿದ್ದೇವೆ, ಕೆಟ್ಟ ಚಟಗಳು ಇವೆಲ್ಲವೂ ಕೂಡ ನಮ್ಮ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುತ್ತದೆ. ಅದಕ್ಕಾಗಿಯೇ ಕೆಟ್ಟ ಅಭ್ಯಾಸಗಳನ್ನು ಬಿಟ್ಟುಬಿಡಬೇಕೆಂದು ಹಲವರು ಹೇಳುತ್ತಾರೆ. ಅದರಲ್ಲೂ ಈ ನಾಲ್ಕು ಅಭ್ಯಾಸಗಳಿದ್ದರೆ ಎಂದಿಗೂ ಹಣ, ಶ್ರೀಮಂತಿಕೆ ಗಳಿಸಲು ಸಾಧ್ಯವೇ ಇಲ್ಲ ಎಂದು ಚಾಣಕ್ಯರು ಹೇಳುತ್ತಾರೆ. ಆ ಅಭ್ಯಾಸಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

Chanakya Niti: ಚಾಣಕ್ಯರ ಪ್ರಕಾರ ಹಣ, ಶ್ರೀಮಂತಿಕೆ ಪಡೆಯಲು ಈ ಅಭ್ಯಾಸಗಳನ್ನು ನೀವು ತ್ಯಜಿಸಲೇಬೇಕು
ಚಾಣಕ್ಯ ನೀತಿ
Image Credit source: Pinterest

Updated on: Nov 22, 2025 | 9:41 AM

ಜೀವನದಲ್ಲಿ ಸಾಕಷ್ಟು ಹಣ (money) ಗಳಿಸಬೇಕು, ಶ್ರೀಮಂತಿಕೆ ಗಳಿಸಬೇಕು ಎಂದು ಎಲ್ಲರೂ ಬಯಸುತ್ತಾರೆ. ಇವೆಲ್ಲವನ್ನೂ ಗಳಿಸಲು ಕಠಿಣ ಪರಿಶ್ರಮದ ಜೊತೆಗೆ ಉತ್ತಮ ಗುಣಗಳನ್ನು ಸಹ ಅಳವಡಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ ನಮ್ಮ ಉನ್ನತಿ ಮತ್ತು ಅವನತಿಗೆ ನಮ್ಮಲ್ಲಿರುವ ಗುಣಗಳು, ಅಭ್ಯಾಸಗಳು ಕೂಡ ಮುಖ್ಯ ಕಾರಣವಾಗುತ್ತದೆ. ಅದಕ್ಕಾಗಿಯೇ ಹಿರಿಯರು ಕೆಟ್ಟವರ ಸಹವಾಸ ಮಾಡಬೇಕು, ಕೆಟ್ಟ ಚಟಗಳಿಗೆ ದಾಸರಾಗಬೇಡಿ ಎಂದು ಹೇಳುವುದು. ಇದರ ಜೊತೆಗೆ ಈ ಕೆಲವು ಅಭ್ಯಾಸಗಳನ್ನು ಹೊಂದಿರುವವರು ಜೀವನದಲ್ಲಿ ಎಂದಿಗೂ ಶ್ರೀಮಂತಿಕೆ, ಹಣ ಗಳಿಸಲು ಸಾಧ್ಯವಿಲ್ಲ ಅವರು ಬಡವರಾಗಿಯೇ ಉಳಿದು ಬಿಡುತ್ತಾರೆ, ಹಾಗಾಗಿ ಆಭ್ಯಾಸಗಳನ್ನು ತಕ್ಷಣ ತ್ಯಜಿಸಿ ಎಂದು ಚಾಣಕ್ಯರು ಸಲಹೆ ನೀಡಿದ್ದಾರೆ. ಹಾಗಿದ್ದರೆ ಶ್ರೀಮಂತಿಕೆ ಗಳಿಸಲು ಯಾವೆಲ್ಲಾ ಅಭ್ಯಾಸಗಳನ್ನು ತ್ಯಜಿಸಲೇಬೇಕು ಎಂಬುದನ್ನು ನೋಡೋಣ ಬನ್ನಿ.

ಶ್ರೀಮಂತಿಕೆ ಗಳಿಸಲು ಯಾವೆಲ್ಲಾ ಅಭ್ಯಾಸಗಳನ್ನು ತ್ಯಜಿಸಬೇಕು ಗೊತ್ತಾ?

ಹಣ ಖರ್ಚು ಮಾಡುವ ಅಭ್ಯಾಸ: ಹಣವನ್ನು ಬೇಕಾಬಿಟ್ಟಿ ಖರ್ಚು ಮಾಡುವ ಅಭ್ಯಾಸವು ವ್ಯಕ್ತಿಯನ್ನು ಬಡವನನ್ನಾಗಿ ಮಾಡಬಹುದು. ಒಬ್ಬ ವ್ಯಕ್ತಿಯು ಅನಗತ್ಯವಾಗಿ ಹಣವನ್ನು ಖರ್ಚು ಮಾಡುತ್ತಲೇ ಇದ್ದರೆ, ಗಳಿಸಿದ ನಂತರವೂ ಅವನ ಜೇಬು ಯಾವಾಗಲೂ ಖಾಲಿಯಾಗಿರುತ್ತದೆ. ಆಚಾರ್ಯ ಚಾಣಕ್ಯ ಪ್ರಕಾರ, ಒಬ್ಬ ವ್ಯಕ್ತಿ ಯಾವಾಗಲೂ ತನ್ನ ಆದಾಯದ ಸ್ವಲ್ಪ ಭಾಗವನ್ನು ತನ್ನ ಭವಿಷ್ಯಕ್ಕಾಗಿ ಉಳಿಸಬೇಕು. ಅಗತ್ಯವಿರುವ ವಸ್ತುಗಳಿಗೆ ಮಾತ್ರ ಹಣವನ್ನು ಖರ್ಚು ಮಾಡಬೇಕು. ಈ ಅಭ್ಯಾಸದಿಂದ ವ್ಯಕ್ತಿಯು ಎಂದಿಗೂ ಹಣದ ಕೊರತೆಯನ್ನು ಎದುರಿಸುವುದಿಲ್ಲ.

ಅನಗತ್ಯವಾಗಿ ಸಾಲ ಪಡೆಯುವ ಅಭ್ಯಾಸ: ಚಾಣಕ್ಯ ನೀತಿಯ ಪ್ರಕಾರ, ಯಾರೂ ಅನಗತ್ಯವಾಗಿ ಯಾರಿಂದಲೂ ಹಣವನ್ನು ಸಾಲ ಪಡೆಯಬಾರದು. ಒಬ್ಬ ವ್ಯಕ್ತಿಯಿಂದ ಹಣವನ್ನು ಎರವಲು ಪಡೆಯುವ ಅಭ್ಯಾಸವು ಅವನನ್ನು ಬಡವನನ್ನಾಗಿ ಮಾಡುವುದಲ್ಲದೆ, ಅವನಿಗೆ ಸಾಲದ ಹೊರೆಯನ್ನೂ ತರುತ್ತದೆ. ಅಂತಹ ಅಭ್ಯಾಸಗಳನ್ನು ಹೊಂದಿರುವ ಜನರು ಯಾವಾಗಲೂ ಬಡತನದಲ್ಲಿಯೇ ಇರುತ್ತಾರೆ. ಅವರು ಎಂದಿಗೂ ಸಂಪತ್ತನ್ನು ಗಳಿಸಲು ಸಾಧ್ಯವಾಗುವುದಿಲ್ಲ. ಸಂಪೂರ್ಣ ಆದಾಯವನ್ನು ಸಾಲ ತೀರಿಸಲು ಖರ್ಚು ಮಾಡಲಾಗುತ್ತದೆ.

ನಿರಂತರ ತಿನ್ನುವ ಅಭ್ಯಾಸ: ಹೊಟ್ಟೆಬಾಕ ಸ್ವಭಾವದ ವ್ಯಕ್ತಿಯು ತಿನ್ನುವುದರ ಮೇಲೆ ಮಾತ್ರ ಗಮನಹರಿಸುತ್ತಾನೆ ಮತ್ತು ಯಾವಾಗಲೂ ತಿನ್ನುವ ಈ ಅಭ್ಯಾಸವು ಅವನಿಗೆ ಸಂಪತ್ತನ್ನು ಸಂಗ್ರಹಿಸಲು ಅವಕಾಶ ನೀಡುವುದಿಲ್ಲ, ಆತ ಯಾವಾಗಲೂ ತಿನ್ನುವುದರ ಕಡೆಗೆಯೇ ಗಮನಹರಿಸುತ್ತಾನೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ.

ಇದನ್ನೂ ಓದಿ: ಚಾಣಕ್ಯರ ಪ್ರಕಾರ ನಿಮ್ಮ ಜೀವನದಲ್ಲಿ ಕೆಟ್ಟ ಸಮಯ ಬರುತ್ತಿದೆ ಎಂಬುದರ ಮುನ್ಸೂಚನೆಗಳಿವು

ಸೋಮಾರಿತನ: ಜೀವನದಲ್ಲಿ ಎಂದಿಗೂ ಆರ್ಥಿಕ ತೊಂದರೆಗಳು ಬರಬಾರದೆಂದರೆ  ನೀವು ಸೋಮಾರಿತನವನ್ನು ತ್ಯಜಿಸಬೇಕು. ಏಕೆಂದರೆ ಸೋಮಾರಿ ವ್ಯಕ್ತಿಯು ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಾಗುವುದಿಲ್ಲ. ಅವನು ಬಡವನಾಗಿಯೇ ಉಳಿಯುತ್ತಾನೆ. ಹಾಗಾಗಿ ಹಣ, ಶ್ರೀಮಂತಿಕೆ ಗಳಿಸಲು ಬಯಸಿದರೆ ನೀವು ಸೋಮಾರಿತವನ್ನು ಬಿಟ್ಟು ಗುರಿ ಸಾಧಿಸುವ ಕಡೆಗೆ ಗಮನಹರಿಸಬೇಕು ಎನ್ನುತ್ತಾರೆ ಚಾಣಕ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:37 am, Sat, 22 November 25