
ಪ್ರತಿಯೊಬ್ಬರೂ ನಾವು ಜೀವನದಲ್ಲಿ ಹಣ ಗಳಿಸಬೇಕು, ಶ್ರೀಮಂತರಾಗಬೇಕು ಎಂದು ಬಯಸುತ್ತಾರೆ. ಇದಕ್ಕಾಗಿ ಕಷ್ಟಪಟ್ಟು ಕೆಲಸವನ್ನು ಸಹ ಮಾಡುತ್ತಾರೆ. ನಿರ್ದಿಷ್ಟ ಗುರಿ, ಸಾಧಿಸುವ ಛಲ ಇಲ್ಲದಿದ್ದರೆ ಹಾಗೂ ಸೋಮಾರಿತನದಿಂದ ನಾವು ಶ್ರೀಮಂತಿಕೆಯನ್ನು ಗಳಿಸಲು ಹೇಗೆ ಸಾಧ್ಯವಿಲ್ಲವೋ, ನಾವು ವಾಸಿಸುವಂತಹ ಸ್ಥಳವೂ ಸಹ ನಾವು ಬಡವರಾಗಿಯೇ ಉಳಿಯಲು ಕಾರಣವಾಗಬಹುದು. ಹೌದು ಚಾಣಕ್ಯರ (Chanakya) ಪ್ರಕಾರ ಈ ಕೆಲವೊಂದಿಷ್ಟು ಸ್ಥಳಗಳಲ್ಲಿ ವಾಸಿಸುವ ಜನರು ಎಂದಿಗೂ ಪ್ರಗತಿಯನ್ನು ಹೊಂದುವುದಿಲ್ಲವಂತೆ, ಅವರು ಬಡವರಾಗಿಯೇ ಉಳಿಯುತ್ತಾರೆ. ಜೊತೆಗೆ ಇಲ್ಲೇನಾದ್ರೂ ಕೋಟ್ಯಾಧಿಪತಿ ವಾಸಿಸಿದ್ರೆ ಆತನೂ ಬಡವನಾಗುತ್ತಾನಂತೆ. ಹಾಗಿದ್ರೆ ಚಾಣಕ್ಯರ ಪ್ರಕಾರ ಎಂತಹ ಸ್ಥಳಗಳಲ್ಲಿ ವಾಸಿಸಬಾರದು ಎಂಬುದನ್ನು ನೋಡೋಣ.
ಉದ್ಯೋಗ, ವ್ಯವಹಾರವಿಲ್ಲದ ಸ್ಥಳ: ಉದ್ಯೋಗವಿಲ್ಲದ, ವ್ಯವಹಾರವಿಲ್ಲದ ಅಥವಾ ಬಹಳ ಕಡಿಮೆ ಜನರಿರುವ ಸ್ಥಳಗಳಲ್ಲಿ ವಾಸಿಸುವುದು ಸೂಕ್ತವಲ್ಲ ಎಂದು ಚಾಣಕ್ಯರು ಹೇಳುತ್ತಾರೆ. ವೃದ್ಧಾಪ್ಯದಲ್ಲಿ ನೆಮ್ಮದಿಗಾಗಿ ನೀವು ಅಂತಹ ಸ್ಥಳಗಳಲ್ಲಿ ವಾಸಿಸಬಹುದು, ಆದರೆ ನಿಮ್ಮ ಯೌವನವನ್ನು ಅಲ್ಲಿ ಕಳೆಯಬೇಡಿ ಏಕೆಂದರೆ ಅಲ್ಲಿ ನಿಮ್ಮ ವ್ಯವಹಾರವು ಅಭಿವೃದ್ಧಿ ಹೊಂದುವುದಿಲ್ಲ, ನಿಮಗೆ ಉತ್ತಮ ಉದ್ಯೋಗ ಸಿಗುವುದಿಲ್ಲ ಮತ್ತು ನೀವು ಹಣ ಸಂಪಾದಿಸಲು ಸಾಧ್ಯವಿಲ್ಲ. ಹಾಗಾಗಿ ಉದ್ಯೋಗ, ವ್ಯವಹಾರಗಳಿಗೆ ಅನುಕೂಲವಾಗುವಂತಹ ಸ್ಥಳಗಳಲ್ಲಿಯೇ ವಾಸಿಸಿ.
ದುರ್ಬಲ ಆಡಳಿತ: ದುರ್ಬಲ ಆಡಳಿತ ಇಲ್ಲದಿರುವಲ್ಲಿ ವಾಸಿಸಬಾರದು. ಏಕೆಂದರೆ ಇಲ್ಲಿನ ಸ್ಥಳ ಅರಾಜಕತೆಯಿಂದ ಕೂಡಿರುತ್ತದೆ. ಇಲ್ಲಿನ ಸ್ಥಳದ ಜೊತೆಗೆ ಜನರಿಗೂ ಸಹ ಅಭಿವೃದ್ಧಿ ಹೊಂದಲು ಅವಕಾಶ ಸಿಗುವುದಿಲ್ಲ. ಜೊತೆಗೆ ಇದರಿಂದ ಹಣದ ನಷ್ಟವೂ ಸಂಭವಿಸುತ್ತದೆ. ಹಾಗಾಗಿ ಇಂತಹ ಸ್ಥಳಗಳಲ್ಲಿ ವಾಸಿಸುವುದನ್ನು ತಪ್ಪಿಸಿ.
ಶಿಕ್ಷಣ, ಆರೋಗ್ಯ ಸೇವೆ: ಶಿಕ್ಷಣ ಮತ್ತು ಆರೋಗ್ಯ ಸೇವೆಯಂತಹ ಮೂಲಭೂತ ಸೌಕರ್ಯಗಳ ಕೊರತೆಯಿರುವ ಪ್ರದೇಶಗಳಲ್ಲಿ ವಾಸಿಸುವುದನ್ನು ತಪ್ಪಿಸಿ. ಅಂತಹ ಸ್ಥಳದಲ್ಲಿ ವಾಸಿಸುವುದರಿಂದ ನಿಮ್ಮ ಮಕ್ಕಳು ಉತ್ತಮ ಶಿಕ್ಷಣದಿಂದ ವಂಚಿತರಾಗುತ್ತಾರೆ ಮತ್ತು ಆರೋಗ್ಯ ಸೇವೆಯ ಕೊರತೆಯಿಂದ ನೀವು ತೀವ್ರವಾಗಿ ತೊಂದರೆಗೊಳಗಾಗಬಹುದು.
ಇದನ್ನೂ ಓದಿ: ಈ ನಾಲ್ಕು ವಿಚಾರಗಳ ಬಗ್ಗೆ ಯಾವುದೇ ಕಾರಣಕ್ಕೂ ಸಂಕೋಚ, ನಾಚಿಕೆ ಪಡಬಾರದು ಎನ್ನುತ್ತಾರೆ ಚಾಣಕ್ಯ
ಕಳ್ಳತನ: ಕಳ್ಳರು ಮತ್ತು ದರೋಡೆಕೋರರು ವಾಸಿಸುವ ಸ್ಥಳಗಳಲ್ಲಿ ಮತ್ತು ತನ್ನ ನಾಗರಿಕರನ್ನು ರಕ್ಷಿಸಲು ಯಾವುದೇ ಕ್ರಮಗಳನ್ನು ಹೊಂದಿಲ್ಲದ ಆಡಳಿತ ಸ್ಥಳಗಳಲ್ಲಿ ವಾಸಿಸುವುದನ್ನು ತಪ್ಪಿಸಿ. ಅಂತಹ ಸ್ಥಳದಲ್ಲಿ ನಿಮ್ಮ ಸಂಪತ್ತು ಅಥವಾ ನಿಮ್ಮ ಕುಟುಂಬ ಎರಡೂ ಸುರಕ್ಷಿತವಾಗಿರುವುದಿಲ್ಲ. ಆದ್ದರಿಂದ ಸಾಧ್ಯವಾದಷ್ಟು ಉತ್ತಮ ಸ್ಥಳಗಳಲ್ಲಿ ವಾಸಿಸಿ.
ಪ್ರವಾಹ, ಭೂಕಂಪ: ಕ್ಷಾಮ, ಪ್ರವಾಹ, ಭೂಕಂಪ ಮುಂತಾದ ವಿಪತ್ತುಗಳಿಗೆ ಗುರಿಯಾಗುವ ಸ್ಥಳಗಳಲ್ಲಿ ವಾಸಿಸುವುದನ್ನು ತಪ್ಪಿಸಿ. ಅಂತಹ ಸ್ಥಳದಲ್ಲಿ ವಾಸಿಸುವ ಶ್ರೀಮಂತ ವ್ಯಕ್ತಿ ಕೂಡ ಪ್ರಕೃತಿ ವಿಕೋಪದ ಒಂದೇ ಹೊಡೆತಕ್ಕೆ ಎಲ್ಲವನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಬಹುದು. ಹಾಗಾಗಿ ಮೂಲಭೂತ ಸೌಕರ್ಯ ಹೊಂದಿರುವ, ಉತ್ತಮ ಆಡಳಿತ ಇರುವ ವಾಸಿಸಲು ಯೋಗ್ಯವಾದ ಸುರಕ್ಷಿತ ಸ್ಥಳಗಳಲ್ಲಿ ವಾಸಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ