AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಕೈಗಳನ್ನು ಪ್ಯಾಂಟ್‌ ಜೇಬಿನಲ್ಲಿಟ್ಟುಕೊಳ್ಳುವ ಅಭ್ಯಾಸ ನಿಮ್ಮ ವ್ಯಕ್ತಿತ್ವದ ಸೀಕ್ರೆಟ್‌ ಬಗ್ಗೆ ತಿಳಿಸುತ್ತದೆ

ಕಣ್ಣಿನ ಆಕಾರ, ಪಾದದ ಆಕಾರ ಸೇರಿದಂತೆ ದೇಹಕಾರ, ದೇಹ ಭಾಷೆಯ ಮೂಲಕ ನಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನಾವೇ ತಿಳಿಯಬಹುದು. ಇಂತಹ ಸಾಕಷ್ಟು ಪರ್ಸನಾಲಿಟಿ ಟೆಸ್ಟ್‌ಗಳ ಮೂಲಕ ನೀವು ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಿರುತ್ತೀರಿ ಅಲ್ವಾ. ಅದೇ ರೀತಿ ಇಂದಿನ ಪರ್ಸನಾಲಿಟಿ ಟೆಸ್ಟ್‌ನಲ್ಲಿ ಜೇಬಿನಲ್ಲಿ ಕೈ ಇಟ್ಟುಕೊಳ್ಳುವವರ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಿರಿ. ನಿಮಗೂ ಜೇಬಿನಲ್ಲಿ ಕೈ ಇಟ್ಟುಕೊಳ್ಳುವ ಅಭ್ಯಾಸ ಇದ್ರೆ, ನಿಮ್ಮ ವ್ಯಕ್ತಿತ್ವ ಯಾವ ರೀತಿ ಇರುತ್ತೆ ಎಂಬುದನ್ನು ಎಕ್ಸ್‌ಪ್ಲೋರ್‌ ಮಾಡಿ.

Personality Test: ಕೈಗಳನ್ನು ಪ್ಯಾಂಟ್‌ ಜೇಬಿನಲ್ಲಿಟ್ಟುಕೊಳ್ಳುವ ಅಭ್ಯಾಸ ನಿಮ್ಮ ವ್ಯಕ್ತಿತ್ವದ ಸೀಕ್ರೆಟ್‌ ಬಗ್ಗೆ ತಿಳಿಸುತ್ತದೆ
ವ್ಯಕ್ತಿತ್ವ ಪರೀಕ್ಷೆImage Credit source: Pinterest
ಮಾಲಾಶ್ರೀ ಅಂಚನ್​
|

Updated on: Sep 25, 2025 | 6:40 PM

Share

ಪ್ರತಿಯೊಬ್ಬರಿಗೂ ಕೂಡ ಒಂದೊಂದು ಅಭ್ಯಾಸಗಳು (Habits) ಇದ್ದೇ ಇರುತ್ತವೆ. ಕೆಲವರಿಗೆ ಉಗುರು ಕಚ್ಚುವ ಅಭ್ಯಾಸ ಇದ್ರೆ, ಇನ್ನೂ ಕೆಲವರಿಗೆ ಪದೇ ಪದೇ ತಲೆಗೂದಲನ್ನು ಸರಿ ಮಾಡಿಕೊಳ್ಳುವ ಅಭ್ಯಾಸ ಇರುತ್ತದೆ. ಮತ್ತೂ ಕೆಲವರಿಗೆ ಜೇಬಿನಲ್ಲಿ ಕೈ ಇಟ್ಟುಕೊಳ್ಳುವಂತಹ, ಪದೇ ಪದೇ ಕನ್ನಡಿ ನೋಡುವಂತಹ ಅಭ್ಯಾಸ ಇರುತ್ತದೆ. ನಿಮ್ಮ ಈ ಅಭ್ಯಾಸಗಳ ಮೂಲಕವೂ ನೀವೆಂಥಾ ವ್ಯಕ್ತಿ ಎಂಬುದನ್ನು ತಿಳಿಯಬಹುದಂತೆ. ಹೌದು ದೇಹಕಾರ, ಹಸ್ತರೇಖೆ, ದೇಹ ಭಾಷೆಯ ಮೂಲಕ ವ್ಯಕ್ತಿತ್ವವನ್ನು (Personality) ತಿಳಿಯುವಂತೆ, ಜೇಬಿನಲ್ಲಿ ಕೈಯಿಟ್ಟುಕೊಳ್ಳುವ ಅಭ್ಯಾಸದ ಮೂಲಕವೂ ನಿಮ್ಮ ಪರ್ಸನಾಲಿಟಿ ಹೇಗಿದೆ ಎಂಬುದನ್ನು ತಿಳಿಯಬಹುದು. ಇದು ಕೇವಲ ಫ್ಯಾಷನ್‌ ಮಾತ್ರವಲ್ಲ, ವ್ಯಕ್ತಿಯ ವ್ಯಕ್ತಿತ್ವವನ್ನು ಬಹಿರಂಗಪಡಿಸುವ ಸಾಧನವೂ ಹೌದು. ನಿಮಗೂ ಜೇಬಿನಲ್ಲಿ ಕೈ ಇಟ್ಟುಕೊಳ್ಳುವ ಅಭ್ಯಾಸ ಇದ್ರೆ, ನಿಮ್ಮ ವ್ಯಕ್ತಿತ್ವ ಯಾವ ರೀತಿ ಇರುತ್ತೆ ಎಂಬುದನ್ನು ಎಕ್ಸ್‌ಪ್ಲೋರ್‌ ಮಾಡಿ.

ಪ್ಯಾಂಟ್‌ ಜೇಬಿನಲ್ಲಿ ಕೈ ಇಟ್ಟುಕೊಳ್ಳುವುದರ ಹಿಂದಿನ ಅರ್ಥವೇನು?

ಸುರಕ್ಷಿತ ಭಾವನೆ: ಗುಂಪಿನಲ್ಲಿರುವಾಗ ಅಥವಾ ಸಂಭಾಷಣೆಯ ಸಮಯದಲ್ಲಿ ಕೆಲವರು ತಮ್ಮ ಕೈಗಳನ್ನು ಪ್ಯಾಂಟ್‌ ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ. ಏಕೆಂದರೆ ಸಾಮಾಜಿಕ ಅನಾನುಕೂಲಗಳ ಸಂದರ್ಭದಲ್ಲಿ ಸುರಕ್ಷಿತ ಭಾವನೆಯನ್ನು ಮೂಡಿಸುವ ಹಾಗೂ ತಮ್ಮನ್ನು ಶಾಂತಗೊಳಿಸುವ ಸಲುವಾಗಿ ಜೇಬಿನಲ್ಲಿ ಕೈ ಇಟ್ಟುಕೊಳ್ಳುತ್ತಾರೆ.

ಆತ್ಮವಿಶ್ವಾಸ: ಕೈಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದು ಎಲ್ಲಾ ಸಂದರ್ಭದಲ್ಲೂ ಅಭದ್ರತೆಯ ಭಾವನೆಯನ್ನು ಪ್ರದರ್ಶಿಸುವುದಿಲ್ಲ. ಕೆಲವರು ಆತ್ಮವಿಶ್ವಾಸವನ್ನು ಪ್ರದರ್ಶಿಸುವ ಸಲುವಾಗಿಯೂ ಜೇಬಿನಲ್ಲಿ ಕೈ ಇಟ್ಟುಕೊಳ್ಳುತ್ತಾರೆ.

ಇದನ್ನೂ ಓದಿ
Image
ಕೈ ಹಿಂದಕ್ಕೆ ಕಟ್ಟಿ ನಿಲ್ಲುವ ಅಭ್ಯಾಸದಿಂದ ವ್ಯಕ್ತಿತ್ವದ ರಹಸ್ಯ ತಿಳಿಯಬಹುದು
Image
ನೀವು ಸೋಮಾರಿಯೇ, ಶ್ರಮಜೀವಿಯೇ ಎಂಬುದನ್ನು ಈ ಚಿತ್ರವೇ ತಿಳಿಸುತ್ತದೆ
Image
ನೀವು ಆಯ್ಕೆ ಮಾಡುವ ಕಿಟಕಿ ಬಹಿರಂಗಪಡಿಸುತ್ತೆ ನಿಮ್ಮ ವ್ಯಕ್ತಿತ್ವದ ರಹಸ್ಯ
Image
ಕಾರು ಎತ್ತ ಕಡೆ ಸಾಗುತ್ತಿದೆ ಎಂಬ ಅಂಶ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತೆ

ರಹಸ್ಯ ಅಥವಾ ಮೀಸಲು ಸ್ವಭಾವ: ಕೈಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳುವುದು ಕೆಲವೊಮ್ಮೆ ನೀವು ನಿಮ್ಮ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುವುದಿಲ್ಲ ಎಂದು ಸೂಚಿಸುತ್ತದೆ. ನೀವು ನಿಮ್ಮ ಆಲೋಚನೆಗಳನ್ನು ಮುಚ್ಚಿಡಲು ಮತ್ತು ಅಗತ್ಯವಿರುವುದನ್ನು ಮಾತ್ರ ಹಂಚಿಕೊಳ್ಳಲು ಬಯಸುತ್ತೀರಿ. ಈ ನೀವು ಅಭ್ಯಾಸವು ಮೀಸಲು ಸ್ವಭಾವದ ವ್ಯಕ್ತಿ ಎಂಬುದನ್ನು ಸೂಚಿಸುತ್ತದೆ.

ಇದನ್ನೂ ಓದಿ: ಕೈಗಳನ್ನು ಹಿಂದಕ್ಕೆ ಕಟ್ಟಿ ನಿಲ್ಲುವ ಅಭ್ಯಾಸ ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿಸುತ್ತದೆ

ನಿರಾಳ ಭಾವ: ಜೇಬಿನಲ್ಲಿ ಕೈ ಇಟ್ಟುಕೊಳ್ಳುವುದು ಇದು ಯಾವಾಗಲೂ ನಕಾರಾತ್ಮಕ ಸಂಕೇತವಲ್ಲ. ಇದು ನಿರಾಳ ಭಾವದ ಸಂಕೇತವೂ ಆಗಿದೆ. ಇಂತಹ ಜನರು ಯಾವುದೇ ಒತ್ತಡವಿಲ್ಲದೆ ಜೀವನವನ್ನು ಹಗುರವಾಗಿ, ನಿರಾಳವಾಗಿ ನಡೆಸಲು ಬಯಸುತ್ತಾರೆ ಎಂದರ್ಥ.

ಅನಾನುಕೂಲತೆಯ ಅನುಭವ: ಕೆಲವರು ತಮಗೆ ಅನಾನುಕೂಲತೆಯ ಅನುಭವವಾದಗಲೂ ತಮ್ಮ ಕೈಗಳನ್ನು ಜೇಬಿನಲ್ಲಿ ಇಟ್ಟುಕೊಳ್ಳುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ