
ಮಹಿಳೆಯರ ವಯಸ್ಸು (age) ಕೇಳಬಾರದು, ಪುರುಷರ ಸಂಬಳ ಕೇಳಬಾರದು ಎಂಬ ಮಾತನ್ನು ಕೇಳಿರಬಹುದಲ್ವಾ. ಈ ಪರ್ಸನಲ್ ಬಗ್ಗೆ ಅವರುಗಳು ಕೂಡ ರಿವೀಲ್ ಕೂಡ ಮಾಡುವುದಿಲ್ಲ. ಹೌದು ಹೆಣ್ಣು ಮಕ್ಕಳು ಯಾವಾಗಲೂ ತಮ್ಮ ವಯಸ್ಸನ್ನು ಕಡಿಮೆ ಹೇಳುತ್ತಾರೆ, ಇಲ್ಲವೇ ನಿಜವಾದ ವಯಸ್ಸನ್ನು ಮರೆ ಮಾಚಲು ಇಷ್ಟಪಡುತ್ತಾರೆ. ಅದೇ ರೀತಿ ಗಂಡು ಮಕ್ಕಳು ಕೂಡ ತಾವೆಷ್ಟು ಸಂಪಾದನೆ ಮಾಡುತ್ತಿದ್ದೇವೆ ಎಂಬ ಬಗ್ಗೆ ನಿಖರವಾದ ಮಾಹಿತಿಯನ್ನು ಹೇಳುವುದಿಲ್ಲ. ಆಚಾರ್ಯ ಚಾಣಕ್ಯರು ಗಂಡು ಮತ್ತು ಹೆಣ್ಣಿನ ಈ ನಡವಳಿಕೆಯ ಹಿಂದಿನ ಕಾರಣವನ್ನು ಬಹಳ ಹಿಂದೆಯೇ ವಿವರಿಸಿದ್ದಾರೆ. ಅದೇ ರೀತಿ ಆದಾಯ ಮತ್ತು ವಯಸ್ಸು ಒಬ್ಬರ ಗೌಪ್ಯ ವಿಷಯವಾಗಿದ್ದು, ಅದನ್ನು ಕೇಳುವುದು ಕೂಡ ಸರಿಯಲ್ಲ ಎಂದು ಹೇಳಿದ್ದಾರೆ. ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ.
ಆಚಾರ್ಯ ಚಾಣಕ್ಯರ ಪ್ರಕಾರ ಪುರುಷರು ಮತ್ತು ಮಹಿಳೆಯರು ಇಬ್ಬರೂ ಸಹ ಸ್ವಾರ್ಥವನ್ನು ಮೀರಿ ಇತರರಿಗಾಗಿ ಬದುಕುತ್ತಾರೆ. ಮಹಿಳೆಯರು ತಮ್ಮ ಕುಟುಂಬಕ್ಕಾಗಿ ತ್ಯಾಗ ಮಾಡುತ್ತಾರೆ ಮತ್ತು ಪುರುಷರು ತಮ್ಮ ಕುಟುಂಬದ ಏಳಿಗೆಗಾಗಿ ಹೋರಾಡುತ್ತಾರೆ. ಆದ್ದರಿಂದ, ಅವರ ವಯಸ್ಸು ಮತ್ತು ಆದಾಯದ ಬಗ್ಗೆ ಕೇಳುವುದು ಅವರ ಕೊಡುಗೆಗಳು ಮತ್ತು ಸಮರ್ಪಣೆಗೆ ಅಗೌರವ ತೋರಿದಂತಾಗುತ್ತದೆ.
ಚಾಣಕ್ಯ ನೀತಿಯ ಪ್ರಕಾರ, ಸಮಾಜದಲ್ಲಿ ಗೌರವ ಮತ್ತು ವೈಯಕ್ತಿಕ ಸ್ಥಾನಮಾನವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಸಮಾಜದಲ್ಲಿನ ವಿಭಿನ್ನ ದೃಷ್ಟಿಕೋನದಿಂದಾಗಿ ಮಹಿಳೆಯರು ತಮ್ಮ ವಯಸ್ಸನ್ನು ಬಹಿರಂಗಪಡಿಸುವುದಿಲ್ಲ. ವಯಸ್ಸನ್ನು ಮರೆ ಮಾಡುವುದು ಮದುವೆ ಇತ್ಯಾದಿಗೆ ಸಂಬಂಧಿಸಿ ಸಾಮಾಜಿಕ ಒತ್ತಡ ಅಥವಾ ನೋಟಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ ಭದ್ರತೆ ಮತ್ತು ಅವಕಾಶಗಳನ್ನು ಕಾಪಾಡಿಕೊಳ್ಳುವುದು ಆಗಿದೆ. ಮಹಿಳೆಯರು ತಮ್ಮ ನಿಜವಾದ ವಯಸ್ಸನ್ನು ಮರೆಮಾಚುವ ಮೂಲಕ ಸಮಾಜದಲ್ಲಿ ತಮ್ಮ ಮೌಲ್ಯ ಮತ್ತು ಸ್ಥಾನವನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುತ್ತಾರೆ. ಅಲ್ಲದೆ ಮಹಿಳೆಯರ ಜೀವನ ಕುಟುಂಬಕ್ಕೆ ಮೀಸಲಾಗಿರುತ್ತದೆ. ಅವರು ತಮ್ಮ ಮಕ್ಕಳು, ಗಂಡ ಮತ್ತು ಕುಟುಂಬದ ಸಂತೋಷಕ್ಕಾಗಿ ಬದುಕುತ್ತಾರೆ, ತಮ್ಮ ವಯಸ್ಸಿನ ಬಗ್ಗೆ ಯೋಚಿಸುವುದಿಲ್ಲ. ಹಾಗಾಗಿ ಅವರು ವಯಸ್ಸಲ್ಲ ತಮ್ಮ ಕುಟುಂಬದ ಸಂತೋಷದಿಂದ ತಮ್ಮನ್ನು ಗುರುತಿಸಿಕೊಳ್ಳಲು ಇಷ್ಟಪಡುತ್ತಾರೆ.
ಇದನ್ನೂ ಓದಿ: ಮಹಿಳೆಯರು ಅಡುಗೆ ಮಾಡುವಾಗ ಈ ತಪ್ಪುಗಳನ್ನು ಮಾಡಬಾರದು ಎನ್ನುತ್ತಾರೆ ಚಾಣಕ್ಯ
ಸಂಪತ್ತು ಮತ್ತು ಹಣಕಾಸಿನ ವಿಚಾರವನ್ನು ಬಹಿರಂಗಪಡಿಸುವುದರಿಂದ ಸಂಭಾವ್ಯ ಅಪಾಯ ಮತ್ತು ಸ್ಪರ್ಧೆ ಉಂಟಾಗುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಆದ್ದರಿಂದ ಪುರುಷರು ತಮ್ಮ ಆದಾಯವನ್ನು ಮರೆಮಾಡುತ್ತಾರೆ. ತಮ್ಮ ನಿಜವಾದ ಆರ್ಥಿಕ ಸ್ಥಿತಿಯನ್ನು ಖಾಸಗಿಯಾಗಿ ಇಟ್ಟುಕೊಳ್ಳುವುದು ಪುರುಷರು ಸಾಮಾಜಿಕ ಅಥವಾ ಆರ್ಥಿಕ ಹಾನಿಯನ್ನು ತಪ್ಪಿಸಲು ಒಂದು ತಂತ್ರವಾಗಿದೆ. ಇದಲ್ಲದೆ ಪುರುಷರು ತಮಗಾಗಿ ಮಾತ್ರ ಸಂಪಾದಿಸುವುದಿಲ್ಲ, ಅವರು ತಮ್ಮ ಗಳಿಕೆಯಿಂದ ತಮ್ಮ ಕುಟುಂಬವನ್ನು ಸಹ ಪೋಷಿಸುತ್ತಾರೆ. ಜೊತೆಗೆ ಪುರುಷರ ಗೌರವ ಮತ್ತು ಘನತೆ ಅವರ ಸಂಬಳವನ್ನು ಅವಲಂಬಿಸಿರುತ್ತದೆ. ಇದರಿಂದಾಗಿ ಅವರ ಮೇಲೆ ಮಾನಸಿಕ ಒತ್ತಡವಿರುತ್ತದೆ. ಈ ಒತ್ತಡದಿಂದಾಗಿ ಪುರುಷರು ತಮ್ಮ ಸಂಬಳವನ್ನು ಬಹಿರಂಗಪಡಿಸುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ