Chanakya Niti: ಈ ಕೆಲಸಗಳ ಮಾಡೋ ಮುನ್ನ ನೂರು ಬಾರಿ ಯೋಚಿಸಿ, ಇಲ್ಲಾಂದ್ರೆ ಪಶ್ಚಾತಾಪ ಪಡಬೇಕಾಗುತ್ತದೆ

ಜೀವನದಲ್ಲಿ ತೆಗೆದುಕೊಳ್ಳುವ ಕೆಲವು ನಿರ್ಧಾರಗಳು, ಮಾಡುವ ಕೆಲವು ಕೆಲಸಗಳು ನಮ್ಮ ಭವಿಷ್ಯವನ್ನು ಸಂಪೂರ್ಣವಾಗಿ ಬದಲಾಯಿಸಬಹುದು, ಇದರಿಂದಾಗಿ ಪಶ್ಚಾತಾಪ ಪಡಬೇಕಾಗುತ್ತದೆ, ಹಾಗಾಗಿ ಕೆಲವು ಕೆಲಸಗಳನ್ನು ಮಾಡುವ ಮುನ್ನ ನೂರು ಬಾರಿ ಯೋಚಿಸಬೇಕು ಎಂದು ಆಚಾರ್ಯ ಚಾಣಕ್ಯ ಎಚ್ಚರಿಸಿದ್ದಾರೆ. ಹಾಗಿದ್ದರೆ ನಾವು ಯೋಚಿಸದೆ ಮಾಡುವ ಯಾವ ಕ್ರಿಯೆಗಳು ಜೀವನದುದ್ದಕ್ಕೂ ವಿಷಾದಕ್ಕೆ ಕಾರಣವಾಗಬಹುದು ಎಂಬುದನ್ನು ನೋಡೋಣ ಬನ್ನಿ.

Chanakya Niti: ಈ ಕೆಲಸಗಳ ಮಾಡೋ ಮುನ್ನ ನೂರು ಬಾರಿ ಯೋಚಿಸಿ, ಇಲ್ಲಾಂದ್ರೆ ಪಶ್ಚಾತಾಪ ಪಡಬೇಕಾಗುತ್ತದೆ
ಚಾಣಕ್ಯ ನೀತಿ
Image Credit source: Pinterest

Updated on: Apr 09, 2026 | 6:26 PM

ಜೀವನದಲ್ಲಿ ಯಶಸ್ವಿಯಾಗಲು (success), ಯಶಸ್ವಿ ಜೀವನವನ್ನು ನಡೆಸಲು ನಾವು ಮಾಡುವ ಪ್ರತಿಯೊಂದರ ಬಗ್ಗೆಯೂ ನೂರು ಬಾರಿ ಯೋಚಿಸಬೇಕು, ಸಾವಿರ ಬಾರಿ ಯೋಚಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಒಂದು ವೇಳೆ ಆತುರದಲ್ಲಿ ಮಾಡುವ ಯಾವುದೇ ಕೆಲಸವಾದರೂ ಸರಿ, ಅದು ನಮ್ಮ ಭವಿಷ್ಯವನ್ನೇ ಹಾಳು ಮಾಡುತ್ತದೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ. ಅದರಲ್ಲೂ ನಾವು ಈ ಕೆಲವು ಕೆಲಸಗಳನ್ನು ಆತುರದಿಂದ ಮತ್ತು ಯೋಚಿಸದೆ ಮಾಡಿದರೆ,  ಭವಿಷ್ಯದಲ್ಲಿ ಸಾಕಷ್ಟು ಕಷ್ಟ ನಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಹಾಗಿದ್ರೆ ಯಾವ ಕೆಲಸಗಳನ್ನು ಮಾಡುವ ಮುನ್ನ ನೂರು ಬಾರಿ ಯೋಚಿಸಬೇಕು ಎಂಬುದನ್ನು ನೋಡೋಣ ಬನ್ನಿ.

ಈ ಕೆಲಸಗಳನ್ನು ಮಾಡೋ ಮುನ್ನ ಇರಲಿ ಎಚ್ಚರ:

ಮಾತನಾಡುವ ಮೊದಲು ಯೋಚಿಸಿ:  ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು ಎಂಬ ಮಾತಿನಂತೆ, ಒಮ್ಮೆ ಮಾತನಾಡಿದ ಮಾತನ್ನು ಹಿಂದಕ್ಕೆ ಪಡೆಯಲು ಸಾಧ್ಯವೇ ಇಲ್ಲ. ನಾವು ಯೋಚಿಸದೆ ಮಾತನಾಡಿದರೆ, ನಮ್ಮ ಮಾತುಗಳಿಂದ ಇತರರು ನೋಯುತ್ತಾರೆ. ಇದು ಸಂಬಂಧಗಳಿಗೆ ಹಾನಿ ಉಂಟು ಮಾಡಬಹುದು. ಆದ್ದರಿಂದ, ಮಾತನಾಡುವ ಮೊದಲು ನೂರು ಬಾರಿ ಯೋಚಿಸುವುದು ಬಹಳ ಮುಖ್ಯ ಎನ್ನುತ್ತಾರೆ ಚಾಣಕ್ಯ.

ಕೆಟ್ಟ ಸಹವಾಸ ಮಾಡುವ ಮುನ್ನ ಇರಲಿ ಎಚ್ಚರ: ನಾವು ಸಹವಾಸ ಮಾಡುವ ಜನರು ನಮ್ಮ ಜೀವನದ ಮೇಲೆ  ನೇರವಾಗಿ ಪರಿಣಾಮ ಬೀರುತ್ತಾರೆ. ಕೆಟ್ಟ ಸಹವಾಸವು ನಮ್ಮನ್ನು ದಾರಿ ತಪ್ಪಿಸಬಹುದು, ನಮ್ಮ ಭವಿಷ್ಯವನ್ನೇ ಹಾಳು ಮಾಡಬಹುದು. ಅದಕ್ಕಾಗಿಯೇ ನಾವು ಸ್ನೇಹಿತರು ಮತ್ತು ಜೀವನ ಸಂಗಾತಿಯನ್ನು ಆಯ್ಕೆ ಮಾಡುವಾಗ ತುಂಬಾನೇ ಜಾಗರೂಕರಾಗಿರಬೇಕು ಎನ್ನುತ್ತಾರೆ ಚಾಣಕ್ಯ.

ನಿರ್ಧಾರ ತೆಗೆದುಕೊಳ್ಳುವ ಮೊದಲು ಯೋಚಿಸಿ: ಜೀವನದಲ್ಲಿ ತಾಳ್ಮೆ ಎನ್ನುವಂತಹದ್ದು ತುಂಬಾನೇ ಮುಖ್ಯ. ಯಾವಾಗಲೂ ಅಷ್ಟೇ ಯೋಚಿಸದೇ, ಕೂಲಂಕುಷವಾಗಿ ಪರೀಕ್ಷಿಸದೇ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ಏಕೆಂದರೆ ಆತುರದ ನಿರ್ಧಾರಗಳು ನಮ್ಮ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರಬಹುದು. ಆದ್ದರಿಂದ, ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮೊದಲು ಸಾಧಕ-ಬಾಧಕಗಳನ್ನು ಅಳೆಯುವುದು ಅವಶ್ಯಕ ಎಂದಿದ್ದಾರೆ ಚಾಣಕ್ಯ.

ಇದನ್ನೂ ಓದಿ: ಮಹಿಳೆಯ ಗುಣಗಳು ಕುಟುಂಬದ ಬಹುದೊಡ್ಡ ಶಕ್ತಿ ಎಂದಿದ್ದಾರೆ ಚಾಣಕ್ಯ

ಕೋಪದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ:  ಕೋಪ ಬಂದಾಗ ನಮ್ಮ ಯೋಚನಾ ಶಕ್ತಿ ಕಡಿಮೆಯಾಗುತ್ತದೆ. ಅಲ್ಲದೆ ಕೋಪದಲ್ಲಿ ನಾವು ಏನು ಮಾಡುತ್ತೇವೆ ಎಂಬ ಅರಿವು ಸಹ ನಮಗಿರುವುದಿಲ್ಲ.  ಆ ಸಮಯದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ತಪ್ಪಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ, ಕೋಪ ಕಡಿಮೆಯಾದ ನಂತರವೇ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ, ಕೋಪದ ಕೈಗೆ ಯಾವತ್ತೂ ಬುದ್ಧಿ ಕೊಡಬಾರದು ಎಂದಿದ್ದಾರೆ ಚಾಣಕ್ಯ.

ಯೋಜನೆಗಳನ್ನು ಹಂಚಿಕೊಳ್ಳಬೇಡಿ: ಯಾವುದೋ ಉತ್ಸಾಹದಲ್ಲಿ, ಆತುರದಲ್ಲಿ ನಿಮ್ಮ ಗುರಿ ಮತ್ತು ಯೋಜನೆಗಳನ್ನು ಎಲ್ಲರೊಂದಿಗೂ ಹಂಚಿಕೊಳ್ಳಬೇಡಿ. ಇದರಿಂದ ಭವಿಷ್ಯದಲ್ಲಿ ಸಾಕಷ್ಟು ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ, ನೀವು ಅಂದುಕೊಂಡ ಗುರಿಯನ್ನು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಆದ್ದರಿಂದ ಈ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳುವ ಮುನ್ನ ನೂರು ಬಾರಿ ಯೋಚಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us