AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chanakya Niti: ಮಹಿಳೆಯ ಈ ಗುಣಗಳು ಕುಟುಂಬದ ಬಹುದೊಡ್ಡ ಶಕ್ತಿ ಎಂದಿದ್ದಾರೆ ಚಾಣಕ್ಯ

ಕುಟುಂಬದ ಅಳಿವು ಉಳಿವು, ಕುಟುಂಬ ಸದಸ್ಯರ ಉನ್ನತಿ ಅವನತಿ ಎಲ್ಲವೂ ಆ ಮನೆಯ ಮಹಿಳೆಯ ಮೇಲೆ ನಿಂತಿರುತ್ತದೆ. ಹಾಗಾಗಿ ಉತ್ತಮ ಗುಣನಡತೆಗಳನ್ನು ಬೆಳೆಸಿಕೊಳ್ಳಬೇಕು ಎಂದಿದ್ದಾರೆ ಆಚಾರ್ಯ ಚಾಣಕ್ಯ. ಅದರಲ್ಲೂ ಮಹಿಳೆಯಾದವಳು ಈ ಕೆಲವೊಂದಿಷ್ಟು ಗುಣಗಳನ್ನು ಹೊಂದಿದ್ದರೆ ಆಕೆ ಮತ್ತು ಆಕೆಯ ಕುಟುಂಬದ ಭವಿಷ್ಯ ಉತ್ತಮ ರೀತಿಯಲ್ಲಿ ಇರುತ್ತದಂತೆ. ಮಹಿಳೆಗಿರಬೇಕಾದ ಆ ಉತ್ತಮ ಗುಣಗಳು ಯಾವುವು ಎಂಬುದನ್ನು ನೋಡೋಣ ಬನ್ನಿ.

Chanakya Niti: ಮಹಿಳೆಯ ಈ ಗುಣಗಳು ಕುಟುಂಬದ ಬಹುದೊಡ್ಡ ಶಕ್ತಿ ಎಂದಿದ್ದಾರೆ ಚಾಣಕ್ಯ
ಚಾಣಕ್ಯ ನೀತಿImage Credit source: Pinterest
ಮಾಲಾಶ್ರೀ ಅಂಚನ್​
|

Updated on: Apr 07, 2026 | 10:18 PM

Share

ಹೆಣ್ಣು ಸಂಸಾರದ ಕಣ್ಣು, ಮನೆಯ ಏಳುಬೀಳು, ಕುಟುಂಬ ಸದಸ್ಯರ ಉನ್ನತಿ-ಅವನತಿ ಇವೆಲ್ಲವೂ ಆ ಮನೆಯ ಮಹಿಳೆಯ ಕೈಯಲ್ಲಿ ಇರುತ್ತದೆ. ಆದ್ದರಿಂದ ಮಹಿಳೆಯಾದವಳು ಸರಿಯಾದ ರೀತಿಯಲ್ಲಿ ಸಂಸಾರವನ್ನು ಸಾಗಿಸಿದರೆ, ಆ ಸಂಸಾರದಲ್ಲಿ ಸುಖ, ಶಾಂತಿ, ಸಮೃದ್ಧಿ ಎನ್ನುವಂತಹದ್ದು ನೆಲೆಸುತ್ತದೆ ಎಂದು ಆಚಾರ್ಯ ಚಾಣಕ್ಯ (Acharya Chanakya). ಅದರಲ್ಲೂ ಮಹಿಳೆಯಲ್ಲಿ ಈ ಕೆಲವು ಗುಣಗಳಿದ್ದರೆ ಆಕೆ ಮತ್ತು ಆಕೆಯ ಕುಟುಂಬದ ಭವಿಷ್ಯ ಉತ್ತಮ ರೀತಿಯಲ್ಲಿ ಇರುತ್ತದೆ. ಕುಟುಂಬದಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಹಾಗಿದ್ರೆ ಮಹಿಳೆಯಾದವಳು ಯಾವೆಲ್ಲಾ ಗುಣಗಳನ್ನು ಬೆಳೆಸಬೇಕು ಎಂಬುದನ್ನು ನೋಡೋಣ ಬನ್ನಿ.

ಮಹಿಳೆಯಾದವಳಿಗೆ ಈ ಗುಣಗಳು ಇರಲೇಬೇಕು:

ತಾಳ್ಮೆ ಮತ್ತು ಸಹಿಸಿಕೊಳ್ಳುವ ಶಕ್ತಿ: ಆಚಾರ್ಯ ಚಾಣಕ್ಯರ ಪ್ರಕಾರ, ಮಹಿಳೆಯ ದೊಡ್ಡ ಶಕ್ತಿ ಅವಳ ತಾಳ್ಮೆ.  ಜೀವನವು ಅನೇಕ ಸವಾಲುಗಳನ್ನು ಒಡ್ಡುತ್ತವೆ, ಈ ಸವಾಲುಗಳನ್ನು ತಾಳ್ಮೆಯಿಂದ ನಿಭಾಯಿಸುವ ಮಹಿಳೆ ಮನೆಯ ವಾತಾವರಣ ಹದಗೆಡದಂತೆ ನೋಡಿಕೊಳ್ಳುತ್ತಾಳೆ. ಮಹಿಳೆಗಿರುವ ಈ ಸಹಿಷ್ಣುತೆಯ ಶಕ್ತಿಯು ಇಡೀ ಕುಟುಂಬಕ್ಕೆ ಬಲವಾದ ಅಡಿಪಾಯವನ್ನು ಒದಗಿಸುತ್ತದೆ ಎನ್ನುತ್ತಾರೆ ಆಚಾರ್ಯ ಚಾಣಕ್ಯ.

ಪ್ರೀತಿ ಮತ್ತು ವಾತ್ಸಲ್ಯ: ಮಹಿಳೆಯಾದವಳಿಗೆ ಪ್ರೀತಿ ಮತ್ತು ವಾತ್ಸಲ್ಯ ಗುಣ ಇರಬೇಕೆಂದಿದ್ದಾರೆ ಚಾಣಕ್ಯ. ಈ ಪ್ರೀತಿ ಮತ್ತು ವಾತ್ಸಲ್ಯವು ಕುಟುಂಬವನ್ನು ಒಗ್ಗಟ್ಟಿನಿಂದ ಇರಿಸುತ್ತದೆ, ಸಂತೋಷದಿಂದ ಇರಿಸುತ್ತದೆ.  ಆಚಾರ್ಯ ಚಾಣಕ್ಯರ ಪ್ರಕಾರ, ಪ್ರೀತಿ ಇರುವಲ್ಲಿ ದೇವರು ನೆಲೆಸಿರುತ್ತಾನೆ, ಸುಖ ಶಾಂತಿ ನೆಲೆಸುತ್ತದೆ. ಒಟ್ಟಾರೆಯಾಗಿ ಪ್ರೀತಿ ವಾತ್ಸಲ್ಯ ತುಂಬಿರುವ ಮನೆ ಸ್ವರ್ಗದಂತಿರುತ್ತದೆ.

ಬುದ್ಧಿವಂತಿಕೆ ಮತ್ತು ತಿಳುವಳಿಕೆ: ಮಹಿಳೆಯ ದೊಡ್ಡ ಶಕ್ತಿ ಅವಳ ಬುದ್ಧಿವಂತಿಕೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಗುಣ ಮತ್ತು ತಿಳುವಳಿಕೆ ಇರುವ ಮಹಿಳೆ  ಸಣ್ಣ ಸಮಸ್ಯೆಗಳನ್ನು ದೊಡ್ಡದಾಗದಂತೆ ನೋಡಿಕೊಳ್ಳುತ್ತಾಳೆ ಮತ್ತು ಅವುಗಳನ್ನು ಸಮಯೋಚಿತವಾಗಿ ಪರಿಹರಿಸುತ್ತಾಳೆ. ಮಹಿಳೆಯ ಈ ಬುದ್ಧಿವಂತಿಕೆಯು ಇಡೀ ಕುಟುಂಬವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ವೃತ್ತಿ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಚಾಣಕ್ಯರ ಮಾತುಗಳನ್ನು ಪಾಲಿಸಿ

ಸಕಾರಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸ: ಚಾಣಕ್ಯ ನೀತಿಯ ಪ್ರಕಾರ, ಮಹಿಳೆಯ ಸಕಾರಾತ್ಮಕ ಚಿಂತನೆಯು ಇಡೀ ಮನೆಯ ವಾತಾವರಣವನ್ನು ಸಕಾರಾತ್ಮಕ ರೀತಿಯಲ್ಲಿ ಇರಿಸುತ್ತದೆ.  ಇದಲ್ಲದೆ, ಆತ್ಮವಿಶ್ವಾಸದಿಂದ ಜೀವನವನ್ನು ನಡೆಸುವ ಮಹಿಳೆ ತನ್ನ ಕುಟುಂಬವನ್ನೂ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಇಂತಹ ಮಹಿಳೆ ಮನೆಗೆ ಮಹಾಲಕ್ಷ್ಮೀ ಇದ್ದಂತೆ ಎಂದಿದ್ದಾರೆ ಚಾಣಕ್ಯ.

ಜವಾಬ್ದಾರಿ ಮತ್ತು ಸಮರ್ಪಣೆ: ಜವಾಬ್ದಾರಿ ಮತ್ತು ಸಮರ್ಪಣೆ ಮಹಿಳೆಯ ದೊಡ್ಡ ಶಕ್ತಿಗಳಲ್ಲಿ ಒಂದೆಂದು ಆಚಾರ್ಯ ಚಾಣಕ್ಯ ಹೇಳಿದ್ದಾರೆ.  ಒಬ್ಬ ಮಹಿಳೆ ತನ್ನ ಕುಟುಂಬದ ಬಗ್ಗೆ ಸಂಪೂರ್ಣ ಭಕ್ತಿ ಮತ್ತು ಸಮರ್ಪಣೆಯಿಂದ ಕೆಲಸ ಮಾಡಿದರೆ, ತನ್ನ ಎಲ್ಲಾ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಪೂರೈಸಿದರೆ, ಈ ಸಮರ್ಪಣೆ ಅವಳ ಮನೆ ಮತ್ತು ಕುಟುಂಬವನ್ನು ಸಂತೋಷ ಮತ್ತು ಸುರಕ್ಷಿತ ಸ್ಥಳವನ್ನಾಗಿ ಮಾಡಲು ಸಹಾಯ ಮಾಡುತ್ತದೆ ಎಂದು ಚಾಣಕ್ಯರು ಹೇಳಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
‘ಪಲ್ಲಿಚಟ್ಟಂಬಿ’ ಸಿನಿಮಾ: ‘ಮುಗಿಲ್ ಪೇಟೆ’ ಚೆಲುವೆಯ ಮುದ್ದಾದ ಮಾತು
‘ಪಲ್ಲಿಚಟ್ಟಂಬಿ’ ಸಿನಿಮಾ: ‘ಮುಗಿಲ್ ಪೇಟೆ’ ಚೆಲುವೆಯ ಮುದ್ದಾದ ಮಾತು
ಪ್ರತಿದಿನ ನ್ಯೂಸ್‌ನಲ್ಲಿ ಬ್ಯುಸಿಯಾಗಿದ್ದ ಸಿಬ್ಬಂದಿಗೆ ಫ್ರೀ ಹೆಲ್ತ್ ಚೆಕಪ್
ಪ್ರತಿದಿನ ನ್ಯೂಸ್‌ನಲ್ಲಿ ಬ್ಯುಸಿಯಾಗಿದ್ದ ಸಿಬ್ಬಂದಿಗೆ ಫ್ರೀ ಹೆಲ್ತ್ ಚೆಕಪ್
ಹೈಕಮಾಂಡ್​​ ಅಂಗಳದಲ್ಲಿದ್ಯಾ BJP, JDS ಮೈತ್ರಿ ಭವಿಷ್ಯ?
ಹೈಕಮಾಂಡ್​​ ಅಂಗಳದಲ್ಲಿದ್ಯಾ BJP, JDS ಮೈತ್ರಿ ಭವಿಷ್ಯ?
ಅರ್ಜುನ್ ತೆಂಡೂಲ್ಕರ್ ಯಾರ್ಕರ್​ಗೆ LSG ಬ್ಯಾಟರ್​ಗಳು ತಬ್ಬಿಬ್ಬು..!
ಅರ್ಜುನ್ ತೆಂಡೂಲ್ಕರ್ ಯಾರ್ಕರ್​ಗೆ LSG ಬ್ಯಾಟರ್​ಗಳು ತಬ್ಬಿಬ್ಬು..!
ಬಸವಜಯಮೃತ್ಯುಂಜಯ ಸ್ವಾಮೀಜಿ ಬಗ್ಗೆ ಕೈ ಶಾಸಕ ಸ್ಫೋಟಕ ಹೇಳಿಕೆ
ಬಸವಜಯಮೃತ್ಯುಂಜಯ ಸ್ವಾಮೀಜಿ ಬಗ್ಗೆ ಕೈ ಶಾಸಕ ಸ್ಫೋಟಕ ಹೇಳಿಕೆ
ಸಿಎಂ ಕುರ್ಚಿ ವಿವಾದ: ಸಚಿವ ಜಮೀರ್​​ ಹೇಳಿಕೆಗೆ ಡಿಕೆಶಿ ಕೌಂಟರ್​​
ಸಿಎಂ ಕುರ್ಚಿ ವಿವಾದ: ಸಚಿವ ಜಮೀರ್​​ ಹೇಳಿಕೆಗೆ ಡಿಕೆಶಿ ಕೌಂಟರ್​​
ವಾಷಿಂಗ್ ಮಷಿನ್ ಒಳಗೆ ಬೆಚ್ಚಗೆ ಮಲಗಿತ್ತು ಹಾವು! ಆಮೇಲೇನಾಯ್ತು ನೋಡಿ
ವಾಷಿಂಗ್ ಮಷಿನ್ ಒಳಗೆ ಬೆಚ್ಚಗೆ ಮಲಗಿತ್ತು ಹಾವು! ಆಮೇಲೇನಾಯ್ತು ನೋಡಿ
ಕೈ ಸನ್ನೆಯೊಂದಿಗೆ ​ವಿಶ್ಲೇಷಣೆ... ಬಿದ್ದು ಬಿದ್ದು ನಕ್ಕ RCB ಆಟಗಾರರು
ಕೈ ಸನ್ನೆಯೊಂದಿಗೆ ​ವಿಶ್ಲೇಷಣೆ... ಬಿದ್ದು ಬಿದ್ದು ನಕ್ಕ RCB ಆಟಗಾರರು
ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಅವಕಾಶ ಸಿಕ್ತು ಎಂದ ಸ್ನೇಹಮಯಿ ಕೃಷ್ಣ!
ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಅವಕಾಶ ಸಿಕ್ತು ಎಂದ ಸ್ನೇಹಮಯಿ ಕೃಷ್ಣ!
Video: ಆನೇಕಲ್ ದೊಡ್ಡಕೆರೆಯಲ್ಲಿ ಬೀಡುಬಿಟ್ಟ ಗಜಪಡೆ
Video: ಆನೇಕಲ್ ದೊಡ್ಡಕೆರೆಯಲ್ಲಿ ಬೀಡುಬಿಟ್ಟ ಗಜಪಡೆ