
ನಮ್ಮ ಜೀವನದಲ್ಲಿ ಬರುವ ಪ್ರತಿಯೊಬ್ಬರೂ ಕೂಡ ನಮ್ಮ ಸ್ನೇಹಿತರೆಂದು ಹೇಳಲು ಸಾಧ್ಯವಿಲ್ಲ. ಅದರಲ್ಲಿ ಕೆಲವೊಬ್ಬರು ಒಳ್ಳೆಯತನದ ಮುಖವಾಡ ಹಾಕಿಕೊಂಡವರಿರುತ್ತಾರೆ. ಇಂತಹ ಜನರು ಹಾವಿಗಿಂತಲೂ ವಿಷಕಾರಿಯಾಗಿದ್ದು, ಇಂತಹ ವ್ಯಕ್ತಿಗಳ ಸಹವಾಸದಿಂದ ನಿಮ್ಮ ಜೀವನವೇ ಸರ್ವನಾಶವಾಗಬಹುದು ಎಂದು ಆಚಾರ್ಯ ಚಾಣಕ್ಯರು (Chanakya) ಎಚ್ಚರಿಕೆಯನ್ನು ನೀಡಿದ್ದಾರೆ. ಹಾಗಿದ್ದರೆ ಎಂತಹ ವ್ಯಕ್ತಿಗಳ ಸ್ನೇಹ ಒಳ್ಳೆಯದಲ್ಲ, ಯಾರಿಂದ ದೂರವಿದ್ದಷ್ಟು ಒಳ್ಳೆಯದು ಎಂಬುದರ ಸಂಕ್ಷಿಪ್ತ ಮಾಹಿತಿಯನ್ನು ತಿಳಿಯಿರಿ.
ತಮ್ಮ ಮಾತಿಗೆ ನಿಲ್ಲದ ಜನರು: ಆಚಾರ್ಯ ಚಾಣಕ್ಯರ ಪ್ರಕಾರ, ನಿಮಗೆ ದೊಡ್ಡ ಭರವಸೆಗಳನ್ನು ನೀಡಿ, ಆದರೆ ಸಮಯ ಬಂದಾಗ, ಆ ಭರವಸೆಗಳನ್ನು ನೆರವೇರಿಸದೆ ದೂರ ಸರಿಯುವ, ನಿಮ್ಮ ಬೆಂಬಲಕ್ಕೆ ನಿಲ್ಲದ ಜನರ ಸಹವಾಸ ಒಳ್ಳೆಯದಲ್ಲ. ಏಕೆಂದರೆ ಇಂತಹ ಜನರನ್ನು ನಂಬಿ ನೀವು ಕೊನೆಯಲ್ಲಿ ಮೋಸ ಹೋಗಬೇಕಾಗುತ್ತದೆ. ಇವರಿಂದ ನಿಮ್ಮ ಭಾವನೆಗಳಿಗೂ ನೋವಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಸುಳ್ಳುಗಾರು: ಆಚಾರ್ಯ ಚಾಣಕ್ಯರ ಪ್ರಕಾರ, ಎಲ್ಲದರ ಬಗ್ಗೆಯೂ ಸುಳ್ಳು ಹೇಳುವ ಜನರೊಂದಿಗೆ ಇರುವುದು ಒಳ್ಳೆಯದಲ್ಲ. ಅಂತಹ ವ್ಯಕ್ತಿಗಳು ನಿಮಗೆ ಗಂಭೀರ ತೊಂದರೆ ಉಂಟುಮಾಡಬಹುದು. ಅವರು ಭವಿಷ್ಯದಲ್ಲಿ ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಆದ್ದರಿಂದ, ಸುಳ್ಳುಗಾರರಿಂದ ದೂರವಿರಿ.
ಒಳ್ಳೆಯವರಂತೆ ನಟಿಸುವ ಜನ: ನಿಮ್ಮ ಮುಂದೆ ಒಳ್ಳೆಯವನಾಗಿ ವರ್ತಿಸುವ ಆದರೆ ನಿಮ್ಮ ಬೆನ್ನ ಹಿಂದೆ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವ ಸ್ನೇಹಿತರು ಹಾವಿಗಿಂತಲೂ ತುಂಬಾನೇ ವಿಷಕಾರಿ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಆದ್ದರಿಂದ, ನಿಮ್ಮ ಜೀವನದಲ್ಲಿ ಅಂತಹ ಸ್ನೇಹಿತರಿದ್ದರೆ, ನೀವು ಅವರಿಂದ ದೂರವಿರಬೇಕು, ಇಲ್ಲದಿದ್ದರೆ ನಿಮ್ಮ ಜೀವನವೇ ಹಾಳಾಗುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಚಾಣಕ್ಯರ ಪ್ರಕಾರ ಈ ನಾಲ್ಕು ಅಭ್ಯಾಸಗಳೇ ಯಶಸ್ಸಿನ ಮೂಲ ಗುಟ್ಟು
ಪದೇ ಪದೇ ಅವಮಾನಿಸುವವರು: ಯಾರಾದರೂ ನಿಮ್ಮನ್ನು ಪದೇ ಪದೇ ಅವಮಾನಿಸಿದರೆ, ನೋಯಿಸಿದರೆ ಅಂತಹವರಿಂದ ದೂರವಿರಿ. ಏಕೆಂದರೆ ಅಂತಹ ಜನರು ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುವುದಲ್ಲದೆ, ನಿಮ್ಮ ಜೀವನದಲ್ಲಿ ಕಷ್ಟಗಳನ್ನು ಸೃಷ್ಟಿಸುತ್ತಾರೆ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ.
ನಕಾರಾತ್ಮಕ ಜನರು: ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡುವ ಅಥವಾ ಅಸೂಯೆ, ದ್ವೇಷದ ಭಾವನೆಗಳನ್ನು ಹೊಂದಿರುವ ನಕಾರಾತ್ಮಕ ಜನರಿಂದ ಸಾಧ್ಯವಾದಷ್ಟು ದೂರವಿರಿ ಎಂದು ಆಚಾರ್ಯ ಚಾಣಕ್ಯರು ಸಲಹೆ ನೀಡುತ್ತಾರೆ. ಇದಲ್ಲದೆ ಕಾನೂನಿನ ಭಯವಿಲ್ಲದ, ದುಷ್ಟ ಜನರಿಂದ ದೂರವಿರಿ, ಏಕೆಂದರೆ ಇಂತಹವರ ಸಹವಾಸ ನಿಮಗೆ ಹೊರೆಯಾಗಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ