AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂತಿಯುತ ಚರ್ಮ ನಿಮ್ಮದಾಗಬೇಕಾ? ಗ್ರೀನ್ ಟೀ ಬಳಸಿಕೊಂಡು ಹೇಗೆ ಮುಖದ ಹೊಳಪು ಹೆಚ್ಚಿಸಿಕೊಳ್ಳಬಹುದು? ಇಲ್ಲಿದೆ ಮಾಹಿತಿ

ಕಾಂತಿಯುತ ಚರ್ಮವನ್ನು ಪಡೆಯಲು ನೈಸರ್ಗಿಕ ಮತ್ತು ಪರಿಣಾಮಕಾರಿ ಮಾರ್ಗವನ್ನು ಹುಡುಕುತ್ತಿದ್ದೀರಾ? ಫೇಸ್ ಮಾಸ್ಕ್ ಗಳಿಂದ ಹಿಡಿದು ಟೋನರ್ ಗಳವರೆಗೆ, ನಿಮ್ಮ ಚರ್ಮವನ್ನು ಅಂದಗೊಳಿಸುವುದರ ಜೊತೆಗೆ ಚರ್ಮವನ್ನು ಪೋಷಿಸುತ್ತದೆ. ಹಾಗಾದರೆ ಏನು ಮಾಡಬೇಕು ಇಲ್ಲಿದೆ ಮಾಹಿತಿ.

ಕಾಂತಿಯುತ   ಚರ್ಮ ನಿಮ್ಮದಾಗಬೇಕಾ? ಗ್ರೀನ್ ಟೀ ಬಳಸಿಕೊಂಡು ಹೇಗೆ ಮುಖದ ಹೊಳಪು ಹೆಚ್ಚಿಸಿಕೊಳ್ಳಬಹುದು? ಇಲ್ಲಿದೆ ಮಾಹಿತಿ
ಕಾಂತಿಯುತ ಚರ್ಮ
ಪ್ರೀತಿ ಭಟ್​, ಗುಣವಂತೆ
| Edited By: |

Updated on:Apr 11, 2023 | 12:36 PM

Share

ಗ್ರೀನ್ ಟೀ ಶತಮಾನಗಳಿಂದ ಹಲವಾರು ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದು ನಿಮ್ಮ ಚರ್ಮಕ್ಕೆ ಎಷ್ಟು ಪರಿಣಾಮಕಾರಿಯಾಗಬಹುದು ಎಂಬುದರ ಬಗ್ಗೆ ನಿಮಗೆ ತಿಳಿದಿದೆಯೇ? ಗ್ರೀನ್ ಟೀಯಲ್ಲಿರುವ ಉತ್ಕರ್ಷಣ ನಿರೋಧಕಗಳು ನಿಮ್ಮ ಚರ್ಮದ ಒಟ್ಟಾರೆ ಆರೋಗ್ಯ ಮತ್ತು ಕಾಂತಿಯುತ ತ್ವಚೆಗಾಗಿ ನೈಸರ್ಗಿಕ ಔಷಧವಾಗಿದೆ. ಕಾಂತಿಯುತ ಚರ್ಮವನ್ನು ಪಡೆಯಲು ನೈಸರ್ಗಿಕ ಮತ್ತು ಪರಿಣಾಮಕಾರಿ ಮಾರ್ಗವನ್ನು ಹುಡುಕುತ್ತಿದ್ದೀರಾ? ಫೇಸ್ ಮಾಸ್ಕ್ ಗಳಿಂದ ಹಿಡಿದು ಟೋನರ್ ಗಳವರೆಗೆ, ನಿಮ್ಮ ಚರ್ಮವನ್ನು ಅಂದಗೊಳಿಸುವುದರ ಜೊತೆಗೆ ಚರ್ಮವನ್ನು ಪೋಷಿಸುತ್ತದೆ. ಹಾಗಾದರೆ ಏನು ಮಾಡಬೇಕು ಇಲ್ಲಿದೆ ಮಾಹಿತಿ.

ಹೊಳೆಯುವ ಚರ್ಮಕ್ಕಾಗಿ ನೀವು ಪ್ರಯತ್ನಿಸಬಹುದಾದ ಐದು ಗ್ರೀನ್ ಟೀ ಮನೆಮದ್ದುಗಳು ಇಲ್ಲಿವೆ.

ಗ್ರೀನ್ ಟೀ ಫೇಸ್ ಮಾಸ್ಕ್:

ಗ್ರೀನ್ ಟೀ ಫೇಸ್ ಮಾಸ್ಕ್ ನಿಮ್ಮ ಚರ್ಮಕ್ಕೆ ಹೊಸ ರೀತಿಯ ಚೇತನ ನೀಡುವುದರ ಜೊತೆಗೆ ನಿಮ್ಮ ಮುಖದ ಕಾಂತಿಯನ್ನು ಹಾಗೆಯೇ ಪೋಷಿಸಿ ಕೊಳ್ಳಲು ಪರಿಪೂರ್ಣ ಮಾರ್ಗವಾಗಿದೆ. ಈ ಮಾಸ್ಕ್ ತಯಾರಿಸಲು, ಎರಡು ಚಮಚ ಗ್ರೀನ್ ಟೀ ಪುಡಿ, ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ಮೊಸರನ್ನು ಒಟ್ಟಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿ ಮತ್ತು ಬೆಚ್ಚಗಿನ ನೀರಿನಿಂದ ತೊಳೆಯುವ ಮೊದಲು 15-20 ನಿಮಿಷಗಳ ಕಾಲ ಬಿಡಿ. ಗ್ರೀನ್ ಟೀ ಎಲೆಗಳು ಪಾಲಿಫಿನಾಲ್ಗಳು ಮತ್ತು ಕ್ಯಾಟೆಚಿನ್ಗಳನ್ನು ಹೊಂದಿರುತ್ತವೆ, ಇದು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಯುವಿ ಕಿರಣಗಳಿಂದ ಉಂಟಾಗುವ ಚರ್ಮದ ಹಾನಿಯನ್ನು ತಡೆಯಲು ಸಹಾಯ ಮಾಡುತ್ತದೆ. ಮತ್ತೊಂದೆಡೆ, ಜೇನುತುಪ್ಪ ಮತ್ತು ಮೊಸರು ನಿಮ್ಮ ಚರ್ಮವನ್ನು ಮಾಯಿಶ್ಚರೈಸ್ ಮಾಡುತ್ತದೆ.

ಗ್ರೀನ್ ಟೀ ಟೋನರ್:

ಗ್ರೀನ್ ಟೀ ಟೋನರ್ ನಿಮ್ಮ ಚರ್ಮವನ್ನು ಸ್ವಚ್ಛಗೊಳಿಸಿ, ತಾಜಾತನ ನೀಡುತ್ತದೆ. ಇದು ತ್ವರಿತ ಮತ್ತು ಸುಲಭ ಮಾರ್ಗವಾಗಿದೆ. ಈ ಟೋನರ್ ತಯಾರಿಸಲು, ಮೂರು ಗ್ರೀನ್ ಟೀ ಪ್ಯಾಕೆಟ್ ಗಳನ್ನು ಒಂದು ಕಪ್ ಕುದಿಯುವ ನೀರಿನಲ್ಲಿ ಐದು ನಿಮಿಷಗಳ ಕಾಲ ಮುಳುಗಿಸಿ. ಚಹಾವನ್ನು ತಣ್ಣಗಾಗಲು ಬಿಡಿ, ಬಳಿಕ ಅದನ್ನು ನಿಮ್ಮ ಮನೆಯಲ್ಲಿರುವ ಶುಚಿಯಾಗಿರುವ ಸ್ಪ್ರೇ ಬಾಟಲಿಗೆ ವರ್ಗಾಯಿಸಿ. ಮುಖವನ್ನು ಸ್ವಚ್ಛಗೊಳಿಸಿದ ನಂತರ ನಿಮ್ಮ ಮುಖದ ಮೇಲೆ ಟೋನರ್ ಅನ್ನು ಸ್ಪ್ರಿಟ್ಜ್ ಮಾಡಿ. ಈ ಟೋನರ್ ನಿಮ್ಮ ಚರ್ಮವನ್ನು ತಾಜಾ ಮತ್ತು ಹೊಳೆಯುವಂತೆ ಮಾಡುತ್ತದೆ. ಅಲ್ಲದೆ ನಿಮ್ಮ ಮುಖ ರಂಧ್ರಗಳನ್ನು ಬಿಗಿಗೊಳಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.

ಗ್ರೀನ್ ಟೀ ಮತ್ತು ಲೆಮನ್ ಜ್ಯೂಸ್ ಸ್ಕ್ರಬ್:

ಗ್ರೀನ್ ಟೀ ಮತ್ತು ನಿಂಬೆ ರಸದ ಸ್ಕ್ರಬ್ ನಿಮಗೆ ಮುಖವನ್ನು ಮೃದು ಗೊಳಿಸಲು ಸಹಾಯ ಮಾಡುತ್ತದೆ. ಸ್ಕ್ರಬ್ ತಯಾರಿಸಲು ಒಂದು ಚಮಚ ಗ್ರೀನ್ ಟೀ ಪುಡಿ, ಒಂದು ಚಮಚ ನಿಂಬೆ ರಸ ಮತ್ತು ಎರಡು ಚಮಚ ಸಕ್ಕರೆಯನ್ನು ಒಟ್ಟಿಗೆ ಮಿಶ್ರಣ ಮಾಡಿ. ವೃತ್ತಾಕಾರದ ಚಲನೆಯಲ್ಲಿ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ನಿಧಾನವಾಗಿ ಮಸಾಜ್ ಮಾಡಿ, ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ಸ್ಕ್ರಬ್ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ, ಮತ್ತು ನಿಮ್ಮ ಚರ್ಮವನ್ನು ಮೃದು ಮತ್ತು ನಯವಾಗಿಸುತ್ತದೆ.

ಗ್ರೀನ್ ಟೀ ಮತ್ತು ಅಲೋವೆರಾ ಜೆಲ್ ಮಾಯಿಶ್ಚರೈಸರ್:

ಗ್ರೀನ್ ಟೀ ಮತ್ತು ಅಲೋವೆರಾ ಜೆಲ್ ಮಾಯಿಶ್ಚರೈಸರ್ ನಿಮ್ಮ ಚರ್ಮವನ್ನು ಹೈಡ್ರೇಟ್ ಮಾಡಲು ಮತ್ತು ಚರ್ಮವನ್ನು ಪೋಷಿಸಲು ಅತ್ಯುತ್ತಮ ಮಾರ್ಗವಾಗಿದೆ. ಎರಡು ಚಮಚ ಅಲೋವೆರಾ ಜೆಲ್, ಒಂದು ಚಮಚ ಗ್ರೀನ್ ಟೀ ಎಲೆಗಳು ಮತ್ತು ಕೆಲವು ಹನಿ ಸಾರಭೂತ ತೈಲವನ್ನು (ಲ್ಯಾವೆಂಡರ್ ಅಥವಾ ಟೀ ಟ್ರೀ ಆಯಿಲ್ ನಂತಹ) ಒಟ್ಟಿಗೆ ಮಿಶ್ರಣ ಮಾಡಿ. ರಾತ್ರಿ ಮಲಗುವ ಮುನ್ನ ಈ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆ ಭಾಗದಲ್ಲಿ ಹಚ್ಚಿಕೊಳ್ಳಿ. ಅಲೋವೆರಾ ಜೆಲ್ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ, ಅದು ನಿಮ್ಮ ಚರ್ಮಕ್ಕೆ ಕಾಂತಿ ನೀಡುತ್ತದೆ, ಸಾರಭೂತ ತೈಲವು ಬೇಸಿಗೆಯಲ್ಲಿ ಚರ್ಮದಿಂದ ಬರುವ ದುರ್ಗಂಧ ನಿವಾರಿಸಿ ಉತ್ತಮ ಪರಿಮಳ ನೀಡುತ್ತದೆ.

ಇದನ್ನೂ ಓದಿ: ಬೇಸಿಗೆಯಲ್ಲಿ ಪುದೀನಾ ಚಟ್ನಿಯಿಂದಾಗುವ ಆರೋಗ್ಯ ಪ್ರಯೋಜನಗಳನ್ನು ತಿಳಿದುಕೊಳ್ಳಿ

ಗ್ರೀನ್ ಟೀ ಸ್ನಾನ (ಬಾತ್):

ಗ್ರೀನ್ ಟೀ ಸ್ನಾನವು ನಿಮ್ಮ ಚರ್ಮದ ಒಟ್ಟಾರೆ ಆರೋಗ್ಯವನ್ನು ಸುಧಾರಿಸುತ್ತದೆ. ಗ್ರೀನ್ ಟೀ ಚಹಾದ ಪ್ಯಾಕೆಟ್ಗಳನ್ನು ಕುದಿಯುವ ನೀರಿನಲ್ಲಿ ಐದು ನಿಮಿಷಗಳ ಕಾಲ ಮುಳುಗಿಸಿ, ನಂತರ ಗ್ರೀನ್ ಟೀಯನ್ನು ನಿಮ್ಮ ಸ್ನಾನ ಮಾಡುವ ನೀರಿಗೆ ಸೇರಿಸಿಕೊಳ್ಳಿ. ಬಳಿಕ ಸ್ನಾನ ಮಾಡಿ. ಇಲ್ಲವಾದಲ್ಲಿ ಗ್ರೀನ್ ಟೀಯನ್ನು ಕುದಿಸಿದ ಬಳಿಕ ಚಹಾದ ಪ್ಯಾಕೆಟಗಳನ್ನು 20-30 ನಿಮಿಷಗಳ ಕಾಲ ಸ್ನಾನದಲ್ಲಿ ನೀರಿನಲ್ಲಿ ನೆನೆಸಿಡಿ. ಈ ಸ್ನಾನವು ನಿಮ್ಮ ಚರ್ಮವನ್ನು ಮೃದುವಾಗಿಸುತ್ತದೆ. ಅಲ್ಲದೆ ಉತ್ಕರ್ಷಣ ನಿರೋಧಕಗಳು ನಿಮ್ಮ ಚರ್ಮವನ್ನು ಪೋಷಿಸಲು ಸಹಾಯ ಮಾಡುತ್ತದೆ.

ಹೊಳೆಯುವ ಕಾಂತಿಯುತ ಚರ್ಮವನ್ನು ಪಡೆಯಲು ಗ್ರೀನ್ ಟೀ ನೈಸರ್ಗಿಕ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ನಿಮ್ಮ ಚರ್ಮವನ್ನು ಪೋಷಿಸಲು ಈ ಐದು ಗ್ರೀನ್ ಟೀ ಮನೆಮದ್ದುಗಳನ್ನು ಪ್ರಯತ್ನಿಸಿ, ಇದು ಆರೋಗ್ಯಕರವಾಗಿದ್ದು ನಿಮ್ಮನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 12:35 pm, Tue, 11 April 23

ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ