ನೀರು ಕುಡಿಯುವಾಗ ಈ ತಪ್ಪು ಮಾಡಲೇಬೇಡಿ? ಈ ಬಗ್ಗೆ ಇಲ್ಲಿದೆ ಮಾಹಿತಿ

ನೀರು ಕುಡಿಯುವಾಗ ನಾವು ಸಾಮಾನ್ಯವಾಗಿ ಮಾಡುವ ಕೆಲವು ತಪ್ಪುಗಳನ್ನು ತಪ್ಪಿಸುವುದು ಬಹಳ ಅವಶ್ಯಕ. ಈ ಬಗ್ಗೆ ಅನೇಕ ಅಧ್ಯಯನಗಳು ತಿಳಿಸಿದ್ದರೂ ಕೂಡ ನಾವು ಅದನ್ನು ತಿಳಿದೋ ತಿಳಿಯದೆಯೋ ನಿರ್ಲಕ್ಷಿಸಿದ್ದೇವೆ. ಹಾಗಾಗಿ ಈ ಬಗ್ಗೆ ಜಾಗ್ರತೆ ಮಾಡಲು ಇಲ್ಲಿ ಮಾಹಿತಿ ನೀಡಲಾಗಿದೆ.

ನೀರು ಕುಡಿಯುವಾಗ ಈ ತಪ್ಪು ಮಾಡಲೇಬೇಡಿ? ಈ ಬಗ್ಗೆ ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Apr 10, 2023 | 2:59 PM

ಪ್ರತಿಯೊಬ್ಬ ಮನುಷ್ಯನಿಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಇದು ದೇಹವನ್ನು ನೀರಿನಾಂಶ ಆಗಿರಿಸುವುದಲ್ಲದೆ ಪೋಷಕಾಂಶಗಳನ್ನು ಸುಲಭವಾಗಿ ಹೀರಿಕೊಳ್ಳಲು, ಆಹಾರವನ್ನು ವಿಭಜಿಸಲು ಸಹಾಯ ಮಾಡುತ್ತದೆ. ಅಲ್ಲದೆ ದೇಹದ ತಾಪಮಾನವನ್ನು ಕಾಪಾಡಿಕೊಳ್ಳಲು ಮತ್ತು ದೇಹದಿಂದ ವಿಷವನ್ನು ಹೊರಹಾಕಲು ನೀರು ಸಹಾಯ ಮಾಡುತ್ತದೆ. ನೀರು ನಿಮ್ಮ ದೇಹಕ್ಕೆ ಒಳ್ಳೆ ರೀತಿಯಲ್ಲಿ ಸಹಾಯ ಮಾಡಲು, ನೀರು ಕುಡಿಯುವಾಗ ನಾವು ಸಾಮಾನ್ಯವಾಗಿ ಮಾಡುವ ಕೆಲವು ತಪ್ಪುಗಳನ್ನು ತಪ್ಪಿಸುವುದು ಬಹಳ ಅವಶ್ಯಕ.

ನೀರು ಕುಡಿಯುವಾಗ ತಪ್ಪಿಸಬೇಕಾದ ತಪ್ಪುಗಳು

ಆಯುರ್ವೇದವು ಉತ್ತಮ ಆರೋಗ್ಯಕ್ಕಾಗಿ ಕುಡಿಯುವ ನೀರಿನ ಕೆಲವು ಮಾಡಬೇಕಾದ ಮತ್ತು ಮಾಡಬಾರದ ಕೆಲಸಗಳನ್ನು ಸೂಚಿಸುತ್ತದೆ. ಅವುಗಳಲ್ಲಿ ಕೆಲವು ಹೀಗಿವೆ:

ನೀರನ್ನು ವೇಗವಾಗಿ ಕುಡಿಯಬೇಡಿ

ತುಂಬಾ ವೇಗವಾಗಿ ನೀರು ಕುಡಿಯುವುದರಿಂದ ದೇಹಕ್ಕೆ ಕೆಲವು ಸಣ್ಣ ಆಘಾತಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಪರಿಣಾಮವಾಗಿ, ಹೊಟ್ಟೆಯ ನರಗಳಿಗೆ ಇದು ಪೆಟ್ಟು ಇದರಿಂದ ಅಜೀರ್ಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನೀರನ್ನು ಸ್ವಲ್ಪ ಸ್ವಲ್ಪವೇ ಕುಡಿಯಬೇಕು.

ಊಟದ ನಂತರ ನೀರು ಕುಡಿಯಬೇಕು

ಆಯುರ್ವೇದದ ಪ್ರಕಾರ, ಊಟಕ್ಕೆ ಸ್ವಲ್ಪ ಮೊದಲು ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಕಡಿಮೆಯಾಗುತ್ತದೆ ಮತ್ತು ಊಟದ ನಂತರ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಹೆಚ್ಚಾಗುತ್ತದೆ. ಹಾಗಾಗಿ ಊಟ ಮಾಡುವುದಕ್ಕಿಂತ ಮೊದಲು ನೀರು ಕುಡಿಯುವುದನ್ನು ತಪ್ಪಿಸಬೇಕು. ಇಲ್ಲವಾದಲ್ಲಿ ಬೊಜ್ಜು ಹೆಚ್ಚಾಗುತ್ತದೆ. ನೀರು ಮತ್ತು ಊಟದ ನಡುವೆ ಕನಿಷ್ಠ 45 ನಿಮಿಷಗಳ ಅಂತರವನ್ನು ನೀಡುವುದು ಹೆಚ್ಚು ಪ್ರಯೋಜನಕಾರಿ.

ಪ್ಲಾಸ್ಟಿಕ್ ಬಾಟಲಿಯಿಂದ ನೀರು ಕುಡಿಯುವುದನ್ನು ತಪ್ಪಿಸಿ

ಪ್ಲಾಸ್ಟಿಕ್ ಬಾಟಲಿಗಳಲ್ಲಿ ದೀರ್ಘಕಾಲದವರೆಗೆ ನೀರನ್ನು ಇಟ್ಟು ಕುಡಿಯುವುದರಿಂದ ಕ್ಯಾನ್ಸರ್ ನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಆದಷ್ಟು ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸುವುದನ್ನು ಕಡಿಮೆ ಮಾಡಿ. ಸ್ಟಿಲ್ ಅಥವಾ ತಾಮ್ರದ ಬಾಟಲಿಗಳು ಉತ್ತಮ.

ಇದನ್ನೂ ಓದಿ: ಬೇಸಿಗೆಯಲ್ಲಿ ನೀರು ಕಡಿಮೆ ಕುಡಿದರೆ ಪಾರ್ಶ್ವವಾಯು ಅಪಾಯ ಹೆಚ್ಚು

ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯಿರಿ

ಪ್ರತಿದಿನ ಎರಡರಿಂದ ಮೂರು ಲೀಟರ್ ನೀರು ಕುಡಿಯಿರಿ. ಕೆಲವರು ಎಂಟರಿಂದ ಹತ್ತು ಲೋಟಗಳನ್ನು ಸಹ ಶಿಫಾರಸು ಮಾಡುತ್ತಾರೆ. ಇವು ಸಾಮಾನ್ಯ ಮಿಥ್ಯೆಗಳು. ಬಾಯಾರಿಕೆಯಾಗದಿದ್ದಾಗ ಮಾತ್ರ ನೀರು ಕುಡಿಯುವುದು ಒಳ್ಳೆಯದು.

ತಂಪಾದ ನೀರನ್ನು ಕುಡಿಯುವುದನ್ನು ತಪ್ಪಿಸಿ

ನಮ್ಮಲ್ಲಿ ಅನೇಕರು ದೀರ್ಘ ದಿನದ ಕೆಲಸದ ಬಳಿಕ ತಣ್ಣೀರಿನ ಬಾಟಲಿಗಳಿಗೆ ಫ್ರಿಡ್ಜ್ ತೆಗೆದು ನೀರು ಕುಡಿಯುತ್ತಾರೆ. ಆದರೆ ಅದು ಉಂಟು ಮಾಡಬಹುದಾದ ಹಾನಿಯ ಬಗ್ಗೆ ಹೆಚ್ಚು ತಿಳಿದುಕೊಂಡಿಲ್ಲ. ಆಯುರ್ವೇದದ ಪ್ರಕಾರ, ತಂಪಾದ ನೀರು ಆಹಾರದ ಜೀರ್ಣ ಕ್ರಿಯೆಗೆ ಸಾಕಷ್ಟು ತೊಂದರೆ ನೀಡುತ್ತದೆ. ಇದಲ್ಲದೆ, ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ.

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ