ನಾವೆಲ್ಲಾ ಚಿಕ್ಕವರಿದ್ದಾಗ ಅಂಗಡಿಗೆ ಹೋದಾಗ ಅಮ್ಮನ ಬಳಿ ಚೂಯಿಂಗ್ ಗಮ್ ಬೇಕೆಂದು ಹಠ ಹಿಡಿಯುತ್ತಿದ್ದೆವು. ಈಗಿನ ಕಾಲದ ಮಕ್ಕಳು ಕೂಡ ಇದಕ್ಕೆ ಹೊರತಾಗಿಲ್ಲ. ಈ ಗಮ್ ನಿಂದ ಬರುವ ರಸವನ್ನು ನುಂಗುತ್ತಾ ಬಲೂನ್ ರೀತಿ ಮಾಡಿ ಮಕ್ಕಳು ಅದರಲ್ಲಿ ಸಂತಸ ಪಡುವುದನ್ನು ಕಾಣಬಹುದು. ಮಕ್ಕಳಿಂದ ಹಿಡಿದು ದೊಡ್ಡವರು ಇಷ್ಟಪಡುವ ಈ ಚೂಯಿಂಗ್ ಗಮ್ ನ ಅತಿಯಾದ ಸೇವನೆಯು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ. ಆದರೆ ಈ ಮನೆಯಲ್ಲೇ ಅತ್ಯಂತ ಸುಲಭವಾಗಿ ಚೂಯಿಂಗ್ ಗಮ್ ರೆಸಿಪಿಯನ್ನು ಮಾಡಬಹುದು.
* 1/3 ಕಪ್ ಗಮ್ ಬೇಸ್
* 1/4 ಚಮಚ ಸಿಟ್ರಿಕ್ ಆಮ್ಲ
* 1 ಚಮಚ ಗ್ಲಿಸರಿನ್
* 2 ಚಮಚ ಕಾರ್ನ್ ಸಿರಪ್
* ಫ್ಲೆವರ್ಡ್
* ಸಕ್ಕರೆ ಪುಡಿ
* ಆಹಾರ ಬಣ್ಣ
ಇದನ್ನೂ ಓದಿ: ಗಂಡನಿಗೆ ಆ ಸಮಸ್ಯೆ ಇದ್ದರೆ… ಹೆಂಡತಿಗೂ ಅದು ಬರುತ್ತದೆ, ಅಧ್ಯಯನದಲ್ಲಿ ಬಯಲಾಯ್ತು ಆ ಆತಂಕಕಾರಿ ಮಾಹಿತಿ
* ಒಂದು ಬಾಣಲೆಯನ್ನು ಸ್ಟವ್ ಮೇಲೆ ಇಟ್ಟು ಗಮ್ ಬೇಸ್, ಟೀಸ್ಪೂನ್ ಸಿಟ್ರಿಕ್ ಆಮ್ಲ, ಗ್ಲಿಸರಿನ್ ಹಾಗೂ ಕಾರ್ನ್ ಸಿರಪ್ ಸೇರಿಸಿ ಮಿಶ್ರಣ ಮಾಡಿಕೊಳ್ಳಿ.
* ದ್ರವ ರೂಪದ ಮಿಶ್ರಣವು ಸಿದ್ಧವಾಗುತ್ತಿದ್ದಂತೆ ಬೇಕಾದ ಫ್ಲೆವರ್ ಸೇರಿಸಿಕೊಳ್ಳಿ. ತದನಂತರದಲ್ಲಿ ಸಕ್ಕರೆ ಪುಡಿ ಮತ್ತು ಆಹಾರ ಬಣ್ಣವನ್ನು ಸೇರಿಸಿ ಒಂದು ನಿಮಿಷಗಳ ಕಾಲ ಕುದಿಸಿಕೊಳ್ಳಿ.
* ತದನಂತರದಲ್ಲಿ ಈ ಮಿಶ್ರಣವನ್ನು ಕ್ಯಾಂಡಿ ಅಚ್ಚು ಅಥವಾ ಐಸ್ ಕ್ಯೂಬ್ ಟ್ರೇನಲ್ಲಿ ಹಾಕಿ ಮತ್ತು ತಣ್ಣಗಾಗಲು ಬಿಟ್ಟರೆ ಚೂಯಿಂಗ್ ಗಮ್ ಸಿದ್ಧವಾದಂತೆ.
* ಈ ಚೂಯಿಂಗ್ ಗಮ್ ಅನ್ನು ಗಾಳಿಯಾಡದ ಕಂಟೇನರ್‌ನಲ್ಲಿ ಸಂಗ್ರಹಿಸಿಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ