ಪ್ರೇಮಿಗಳ ದಿನಾಚರಣೆ(Valentines Day)ಯ ವಾರದ ಮೂರನೇ ದಿನ ಅಂದರೆ ಫೆಬ್ರವರಿ 9 ಚಾಕೊಲೇಟ್ ಡೇ(Chocolate Day) ಎಂದು ಆಚರಿಸಲಾಗುತ್ತದೆ. ಈ ದಿನದಂದು, ನಿಮ್ಮ ಪ್ರೀತಿಪಾತ್ರರಿಗೆ, ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಉಡುಗೊರೆಯಾಗಿ ಚಾಕೊಲೇಟ್ ನೀಡಿ, ಸಿಹಿಯೊಂದಿಗೆ ದಿನವನ್ನು ಆಚರಿಸಿ. ಸಿಹಿಯನ್ನು ನೀಡುವುದರ ಮೂಲಕ ನಿಮಗೆ ಅವರು ಎಷ್ಟು ಮುಖ್ಯ ಎಂದು ತಿಳಿಸಿ, ಅವರ ಮುಖದಲ್ಲೊಂದು ನಗು ಮೂಡಿಸಿ. ಚಾಕೊಲೇಟ್‌ಗಳು ಉತ್ತಮ ರುಚಿ ನೀಡುವುದು ಮಾತ್ರವಲ್ಲದೇ, ಅವುಗಳಲ್ಲಿರುವ ಕೋಕೋ ಆರೋಗ್ಯಕರ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಸಂಬಂಧಗಳನ್ನು ನಿರ್ಮಿಸುವಲ್ಲಿ ಚಾಕೊಲೇಟ್ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಜೊತೆಗೆ ಆರೋಗ್ಯವನ್ನು ಕೂಡ ಕಾಪಾಡುತ್ತದೆ.
ನೀವು ನಿಮ್ಮ ಪ್ರೀತಿ ಪಾತ್ರರಿಗೆ ಡಾರ್ಕ್ ಚಾಕೊಲೇಟ್, ಮಿಲ್ಕ್ ಚಾಕೊಲೇಟ್ ಹಾಗೂ ಡ್ರೈ ಫ್ರೂಟ್ಸ್ಗಳಿಂದ ಕೂಡಿದ ಚಾಕೋಲೇಟ್ಗಳನ್ನು ನೀಡಿ.ಚಾಕೊಲೇಟ್ ಡೇ ದಿನದಂದು, ಪ್ರೇಮಿಗಳಿಬ್ಬರು ತಮ್ಮ ಜೀವನದ ಎಲ್ಲಾ ಕಹಿ ಘಟನೆಗಳನ್ನು ಮರೆತು ಸಿಹಿ ಮತ್ತು ರುಚಿಕರವಾದ ಚಾಕೊಲೇಟ್ಗಳನ್ನು ಪರಸ್ಪರ ಹಂಚಿಕೊಳ್ಳಿ. ಅನೇಕರು ತಮ್ಮ ಪ್ರೀಯತಮೆಗೆ ಅಥವಾ ಕ್ರಶ್‌ಗೆ ಚಾಕೊಲೇಟ್‌ಗಳ ಅಲಂಕೃತ ಬಾಂಕ್ಸ್ನಲ್ಲಿ ಬೇರೆ ಬೇರೆ ಚಾಕೊಲೇಟ್ನ್ನು ಉಡುಗೊರೆಯಾಗಿ ನೀಡುವ ಮೂಲಕ ತಮ್ಮ ಪ್ರೀತಿಪಾತ್ರರಿಗೆ ಇನ್ನಷ್ಟು ಹತ್ತಿರವಾಗುತ್ತಾರೆ.
ಇದನ್ನೂ ಓದಿ: ಪ್ರೇಮಿಗಳ ದಿನ ಸಮೀಪಿಸುತ್ತಿದೆ, ವಾರಪೂರ್ತಿಯ ವಿಶೇಷತೆಗಳು ಇಲ್ಲಿವೆ
ಪುರಾತನ ರೋಮನ್ ಪಾದ್ರಿಯಾದ ಸೇಂಟ್ ವ್ಯಾಲೆಂಟೈನ್ಸ್ ಗೌರವಾರ್ಥವಾಗಿ ವ್ಯಾಲೆಂಟೈನ್ಸ್ ಡೇ ಅನ್ನು ಆಚರಿಸಲಾಗುತ್ತದೆ. ಅನೇಕ ಕ್ರಿಶ್ಚಿಯನ್ ರಾಷ್ಟ್ರಗಳಲ್ಲಿ ಈ ದಿನವನ್ನು ಹಬ್ಬದ ದಿನವಾಗಿ ಆಚರಿಸಲಾಗುತ್ತದೆ. 3 ನೇ ಶತಮಾನದಲ್ಲಿ ಪೇಗನ್ ರೋಮನ್ ರಾಜ ಕ್ಲಾಡಿಯಸ್ ಅವರ ಆದೇಶದ ಹೊರತಾಗಿಯೂ ರೋಮನ್ ಸೈನಿಕರು ವಿವಾಹವಾದರು ಎಂದು ನಂಬಲಾಗಿದೆ. ದಂತಕಥೆಗಳ ಪ್ರಕಾರ, ಅವರನ್ನು ಜೈಲಿಗೆ ಹಾಕಲಾಯಿತು ಮತ್ತು ನಂತರ ಫೆಬ್ರವರಿ 14 ರಂದು ಗಲ್ಲಿಗೇರಿಸಲಾಯಿತು. ಅವರ ತ್ಯಾಗವನ್ನು ಗೌರವಿಸುವ ಸಲುವಾಗಿ ಈ ದಿನ ಹುಟ್ಟಿಕೊಂಡಿತು ಎಂದು ಹೇಳಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: