Christmas 2022: ಚಾಕೊಲೇಟ್ ವಾಲ್‌ನಟ್ ಬ್ರೌನಿ ರೆಸಿಪಿ ಮಾಡುವ ವಿಧಾನ ಇಲ್ಲಿದೆ

ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಮಯದಲ್ಲಿ ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬಕ್ಕೆ ಕೊಸ ರುಚಿಯನ್ನು ಉಣ ಬಡಿಸಬೇಕೆಂದು ಬಯಸಿದರೆ, ಚಾಕೊಲೆಟ್ ವಾಲ್‌ನಟ್ ಬ್ರೌನಿ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ.

Christmas 2022: ಚಾಕೊಲೇಟ್ ವಾಲ್‌ನಟ್ ಬ್ರೌನಿ ರೆಸಿಪಿ ಮಾಡುವ ವಿಧಾನ ಇಲ್ಲಿದೆ
ಸಾಂದರ್ಭಿಕ ಚಿತ್ರ
Image Credit source: indiatv
Updated By: ಅಕ್ಷಯ್​ ಪಲ್ಲಮಜಲು​​

Updated on: Dec 23, 2022 | 5:22 PM

ಚಾಕೊಲೇಟ್ ವಾಲ್‌ನಟ್ ಬ್ರೌನಿ (Chocolate walnut brownie) ಖಂಡಿತವಗಿಯೂ ಪ್ರತಿಯೊಬ್ಬರ ನಾಲಿಗೆಯ ರುಚಿಯನ್ನು ಹೆಚ್ಚಿಸುತ್ತದೆ. ಈ ಹಬ್ಬದ ಸೀಸನ್‌ನಲ್ಲಿ ಈ ರುಚಿಕರವಾದ ಖಾದ್ಯವನ್ನು ಮನೆಯಲ್ಲಿಯೇ ತಯಾರಿಸಿ ಮತ್ತು ನಿಮ್ಮ ಸ್ನೇಹಿತರು, ಕುಟುಂಬದೊಂದಿಗೆ ಸವಿಯಿರಿ. ನೀವು ಬೇಕಿಂಗ್‌ನ್ನು ಇಷ್ಟ ಪಡುತ್ತಿದ್ದರೆ ಮತ್ತು ಕ್ರಿಸ್ಮಸ್ (Christmas 2022) ಹಾಗೂ ಹೊಸ ವರ್ಷದ ಸಮಯದಲ್ಲಿ ನಿಮ್ಮ ಸ್ನೇಹಿತರಿಗೆ ಹಾಗೂ ಕುಟುಂಬಕ್ಕೆ ಕೊಸ ರುಚಿಯನ್ನು ಉಣ ಬಡಿಸಬೇಕೆಂದು ಬಯಸಿದರೆ, ಚಾಕೊಲೆಟ್ ವಾಲ್‌ನಟ್ ಬ್ರೌನಿ ರೆಸಿಪಿಯನ್ನೊಮ್ಮೆ ಟ್ರೈ ಮಾಡಿ. ಈ ಕೆಳಗೆ ಕೊಟ್ಟಿರುವ ಪಾಕ ವಿಧಾನವನ್ನು ಅನುಸರಿಸಿ ಚಾಕೊಲೇಟ್ ವಾಲ್‌ನಟ್ ರೆಸಿಪಿಯನ್ನು ತಯಾರಿಸಿ.

ಚಾಕೊಲೆಟ್ ವಾಲ್‌ನಟ್ ಬ್ರೌನಿ ಮಾಡಲು ಬೇಕಾಗಿರುವ ಸಾಮಾಗ್ರಿಗಳು:

ಬೆಣ್ಣೆ – 14ಲೀ ಟೀಸ್ಪೂನ್ ಅಥವಾ 22 ಗ್ರಾಂ, ಡಾರ್ಕ್ ಚಾಕೊಲೇಟ್ 30 ಗ್ರಾಂ, ಸಕ್ಕರೆ ಪುಡಿ 14ಲೀ ಟೀಸ್ಪೂನ್ ಅಥವಾ 10 ಗ್ರಾಂ, ವೆನಿಲ್ಲಾ – ಕೆಲವು ಹನಿಗಳು, ಮೈದಾ ಹಿಟ್ಟು – 4ಲೀ ಟೀಸ್ಪೂನ್ ಅಥವಾ 35 ಗ್ರಾಂ, ಹಾಲು 2 ಚಮಚ, ಬಾಕಲೇಟ್ ತುಂಡು – ಬೆರಳೆನಿಕೆಯಷ್ಟು ( 5 ರಿಂದ 9), ಬಟರ್ ಪೇಪರ್ ( ಬೆಣ್ಣೆ ಕಾಗದ), ಮೈಕ್ರೋವೇವ್

ತಯಾರಿಸುವ ವಿಧಾನ :

ಮೊದಲಿಗೆ ಚಾಕೊಲೇಟ್‌ಗಳನ್ನು ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಮತ್ತು ಬೆಣ್ಣೆಯೊಂದಿಗೆ ಸೇರಿಸಿ, ಬೆಣ್ಣೆ ಮತ್ತು ಚಾಕೊಲೇಟ್ ಕರಗುವವರೆಗೆ ಮೈಕ್ರೋವೇವ್‌ನಲ್ಲಿ ಇರಿಸಿ. ಯಾವುದೇ ಬಾಕಲೇಟ್ ಉಂಡೆಗಳಿರದಂತೆ ನೋಡಿಕೊಳ್ಳಿ. ನಂತರ ಸಕ್ಕರೆ, ಹಾಲು, ವೆನಿಲ್ಲಾ, ಮೈದಾ, ವಾಲ್‌ನಟ್ಸ್​ನ್ನು ಮೊದಲೇ ತಯಾರಿಸಿದ ಚಾಕೊಲೇಟ್ ಮಿಶ್ರಣಕ್ಕೆ ಸೇರಿಸಿ. ಮೃದುವಾಗಿ ಎಲ್ಲವನ್ನೂ ಕಳಸಿಕೊಳ್ಳಿ. ಪಾತ್ರೆಯ ಗಾತ್ರಕ್ಕೆ ಅನುಗುಣವಾಗಿ ಬೆಣ್ಣೆ ಕಾಗದವನ್ನು ಕತ್ತರಿಸಿ. ಮತ್ತು ಕಂಟೇನರ್ ತಳಭಾಗ ಮತ್ತು ಬದಿ ಭಾಗಗಳಿಗೆ ಬೆಣ್ಣೆ ಪೇಪರ್ ಅಂಟಿಸಿಕೊಳ್ಳಿ.

ಇದನ್ನು ಓದಿ: ಕ್ರಿಸ್ಮಸ್ ಹಬ್ಬಕ್ಕೆ ಮನೆಯಲ್ಲಿಯೇ ತಯಾರು ಮಾಡಬಹುದಾದ ಕೇಕ್ ರೆಸೆಪಿ ಐಡಿಯಾ ಇಲ್ಲಿದೆ

ನಂತರ ಮೊದಲೇ ತಯಾರಿಸಿಟ್ಟ ಬ್ಯಾಟರ್ (ಹಿಟ್ಟು)ನ್ನು ಬಟರ್ ಪೇಪರ್ ಹಾಕಿದ ಕಂಟೇನರ್ ಒಳಗೆ ಸುರಿಯಿರಿ. ಮತ್ತು ಅದು ಸಮವಾಗಿ ಹರಡಿಕೊಳ್ಳುವಂತೆ ಮಾಡಿ. ನಂತರ ರುಚಿಗೆ ಸ್ವಲ್ಪ ಹುರಿದ ವಾಲ್‌ನಟ್ ಹಾಗೂ ಚಾಕೊಲೇಟ್ ತುಂಡುಗಳಿಂದ ಮಿಶ್ರಣದ ಮೇಲ್ಭಾಗವನ್ನು ಅಲಂಕರಿಸಿ. 15 ಸೆಕೆಂಡುಗಳ ಕಾಲ ಬಾಕೊಲೇಟ್ ಬ್ರೌನಿಯ ಮಿಶ್ರಣವನ್ನು ಬೇಯಲು ಇರಿಸಿ. ಬಳಿಕ ಟೂತ್‌ಪಿಕ್ ಅಥವಾ ಚಾಕು ಮೂಲಕ ಅದು ಬೆಂದಿದೆಯಾ ಎಂದು ಪರಿಶೀಲಿಸಿ. ಬೆಂದಿಲ್ಲದಿದ್ದರೆ ಇನ್ನೂ ಸ್ವಲ್ಪ ಸಮಯಗಳ ಕಾಲ ಬೇಯಿಸಿಕೊಳ್ಳಿ, ಬೆಂದ ಬಳಿಕ ಕಂಟೇನರ್‌ನಿಂದ ಬ್ರೌನಿಯನ್ನು ತೆಗೆದು ಒಂದು ಪ್ಲೇಟ್‌ನಲ್ಲಿ ಇಟ್ಟು ಸ್ವಲ್ಪ ಹೊತ್ತು ತಣ್ಣಗಾಗಲು ಬಿಡಿ. ಈಗ ರುಚಿಯಾದ ಚಾಕೊಲೇಟ್ ವಾಲ್‌ನಟ್ ಬ್ರೌನಿ ಸವಿಯಲು ಸಿದ್ಧ.

ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:15 pm, Fri, 23 December 22