AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Christmas House Decoration: ಕ್ರಿಸ್‌ಮಸ್ ಸಮಯದಲ್ಲಿ ಮನೆ ಅಲಂಕಾರಕ್ಕಾಗಿ ಟಿಪ್ಸ್ ಇಲ್ಲಿವೆ

ಕ್ರಿಯೇಟಿವ್ ಐಡಿಯಾಗಳ ಮೂಲಕ ನಿಮ್ಮ ಮನೆಯನ್ನು ಅಲಂಕರಿಸಲು ಟಿಪ್ಸ್​ಗಳು ಇಲ್ಲಿವೆ. ನಿಮ್ಮ ಮನೆಯ  ಲಿವಿಂಗ್ ರೂಮ್, ಬೆಡ್ ರೂಮ್, ಅಡುಗೆ ಕೋಣೆ ಹಾಗೂ ಮಕ್ಕಳ ಕೋಣೆಯನ್ನು ಅಲಂಕರಿಸಲು ಸೂಪರ್ ಐಡಿಯಾಗಳು ಇಲ್ಲಿವೆ.

Christmas House Decoration: ಕ್ರಿಸ್‌ಮಸ್ ಸಮಯದಲ್ಲಿ ಮನೆ ಅಲಂಕಾರಕ್ಕಾಗಿ ಟಿಪ್ಸ್ ಇಲ್ಲಿವೆ
ಸಾಂದರ್ಭಿಕ ಚಿತ್ರImage Credit source: iStock
TV9 Web
| Updated By: ಅಕ್ಷತಾ ವರ್ಕಾಡಿ|

Updated on: Dec 23, 2022 | 3:57 PM

Share

ಕ್ರಿಸ್​ಮಸ್(Christmas)​ ಸಮಯದಲ್ಲಿ ಮನೆಯ ಮೂಲೆ ಮೂಳೆಗಳನ್ನು ಸುಂದರವಾಗಿ ಅಲಂಕರಿಸಿ. ಹಬ್ಬದ ಸಮಯದಲ್ಲಿ ಇದು ನಿಮಗೆ ಹಬ್ಬದ ಗುಂಗು ನೀಡುವುದರ ಜೊತೆಗೆ, ನಿಮ್ಮ ಮನೆಗೆ ಭೇಟಿ ನೀಡುವ ಸ್ನೇಹಿತರು ಹಾಗೂ ಸಂಬಂಧಿಕರೂ ಮನೆಯ ಅಲಂಕಾರವನ್ನು ಹೊಗಳುವಂತೆ ಮಾಡಿ. ಆದರೆ ಯಾವ ರೀತಿ ಕ್ರಿಯೇಟಿವ್ ಐಡಿಯಾಗಳ ಮೂಲಕ ಮನೆಯನ್ನು ಅಲಂಕರಿಸುವುದು ಎಂಬ ಯೋಚನೆಗಳು ಹೊಳೆಯುತ್ತಿಲ್ಲವೇ? ಆದ್ದರಿಂದ ಕ್ರಿಯೇಟಿವ್ ಐಡಿಯಾಗಳ ಮೂಲಕ ನಿಮ್ಮ ಮನೆಯನ್ನು ಅಲಂಕರಿಸಲು ಟಿಪ್ಸ್​ಗಳು ಇಲ್ಲಿವೆ. ನಿಮ್ಮ ಮನೆಯ  ಲಿವಿಂಗ್ ರೂಮ್, ಬೆಡ್ ರೂಮ್, ಅಡುಗೆ ಕೋಣೆ ಹಾಗೂ ಮಕ್ಕಳ ಕೋಣೆಯನ್ನು ಅಲಂಕರಿಸಲು ಸೂಪರ್ ಐಡಿಯಾಗಳು ಇಲ್ಲಿವೆ.

1. ಮನೆಯ ಪ್ರವೇಶ ದ್ವಾರ(Entryway):

ಕ್ರಿಸ್​ಮಸ್​ ಹಬ್ಬದ ಸಡಗರಗಳ ಸಮಯದಲ್ಲಿ ಮನೆಗೆ ಅತಿಥಿಗಳು ಬರುತ್ತಿರುತ್ತಾರೆ.ಆದ್ದರಿಂದ ಅವರನ್ನು ಸ್ವಾಗತಿಸಲು ಮನೆಯ ಮನೆಯ ಪ್ರವೇಶ ದ್ವಾರ ಅಂದರೆ ಮನೆ ಬಾಗಿಲನ್ನು ಸುಂದರವಾಗಿ ಅಲಂಕರಿಸುವುದು ಅಗತ್ಯವಾಗಿದೆ. ಕ್ರಿಸ್​ಮಸ್​ ಹಬ್ಬವಾಗಿರುವುದರಿಂದ ಮನೆ ಬಾಗಿಲಿಗೆ ಕೆಂಪು, ಹಸಿರು ಮತ್ತು ಬಿಳಿ ಬಣ್ಣದ ಕೃತಕ ಅಲಂಕಾರಿಕ ಮಿನುಗುವ ಹೂಮಾಲೆಯನ್ನು ಬಳಸಿ. ಜೊತೆಗೆ ಬಣ್ಣ ಬಣ್ಣದ ಗೂಡು ದೀಪಗಳನ್ನು ಬಳಸಿ.

2.ಲಿವಿಂಗ್ ರೂಮ್:

ನೀವು ಹೆಚ್ಚಿನ ಸಮಯವನ್ನು ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಲಿವಿಂಗ್ ರೂಮಿನಲ್ಲಿ ಕಳೆಯುವುದರಿಂದ ಹಬ್ಬದ ಸಮಯದಲ್ಲಿ ಕ್ರಿಯಾತ್ಮಕವಾಗಿ ಅಲಂಕರಿಸುವುದು ಅಗತ್ಯವಾಗಿದೆ. ಬಿಳಿ ಬಣ್ಣದ ಪೀಠೋಪಕರಣಗಳು, ಇದಲ್ಲದೆ ಬಿಳಿ ಬಣ್ಣದಲ್ಲಿ ಬೇಗ ಕೊಳೆಯಾಗುತ್ತದೆ ಎಂದರೆ ಬದಲಾಗಿ ಕೆಂಪು ಅಥವಾ ಹಸಿರು ಬಣ್ಣದಲ್ಲಿರಲಿ. ಲಿವಿಂಗ್ ರೂಮ್​ನಲ್ಲಿ ಅಲಂಕಾರಿತ ಕ್ರಿಸ್​ಮಸ್​ ಮರಗಳು, ಕಾಲ್ಪನಿಕ ದೀಪಗಳನ್ನು ಇರಿಸಿ.

3.ಕಿಚನ್:

ಅಡುಗೆ ಮನೆಯನ್ನು “ಮನೆಯ ಹೃದಯ” ಎಂದು ಕರೆಯಲಾಗುತ್ತದೆ. ಆದ್ದರಿಂದ ಸಂಭ್ರಮದ ಮಧ್ಯೆ ಅಡುಗೆ ಕೋಣೆಯನ್ನು ನಿರ್ಲಕ್ಷಿಸದಿರಿ. ನಿಮ್ಮ ಅಡುಗೆಮನೆಯಲ್ಲಿನ ಕಿಟಕಿಗಳನ್ನು ಅಲಂಕಾರಗಳು ಮತ್ತು ಕೃತಕ ಎಲೆಗಳನ್ನು ನೇತುಹಾಕುವ ಮೂಲಕ ಅಲಂಕರಿಸಿ. ಜೊತೆಗೆ ಬಿಳಿ ಮೇಣದ ಬತ್ತಿ, ಹಳದಿ ಕ್ರಿಸ್ಮಸ್ ದೀಪಗಳನ್ನು ಇರಿಸಿ.

4. ಮಲಗುವ ಕೋಣೆ:

ನಿಮ್ಮ ಮಲಗುವ ಕೋಣೆಯನ್ನು ಕ್ರಿಸ್​ಮಸ್​ ಸಮಯದಲ್ಲಿ ಅಲಂಕರಿಸಲು ಸಲಹೆಗಳು ಇಲ್ಲಿವೆ. ಬಿಳಿ ಬಣ್ಣದ ದಿಂಬುಗಳೊಂದಿಗೆ ಕೆಂಪು ಬೆಡ್ ಕವರ್ ಇರಿಸಿ. ನಿಮ್ಮ ಕೋಣೆಯ ಗೋಡೆಯ ಮೇಲೆ, ಸ್ಟ್ರಿಂಗ್ ಲೈಟ್‌ಗಳಿಂದ ಮರವನ್ನು ನಿರ್ಮಿಸಿ.ಸುಂದರವಾದ ಕೆಂಪು ಲ್ಯಾಂಟರ್ನ್, ಕ್ರಿಸ್ಮಸ್ ಮರ, ನಕ್ಷತ್ರಪುಂಜದ ಅಲಂಕಾರಗಳಿಂದ ನಿಮ್ಮ ಮಲಗುವ ಕೋಣೆಯನ್ನು ಅಲಂಕರಿಸಿ.

ಇದನ್ನೂ ಓದಿ: ಕ್ರಿಸ್‌ಮಸ್ ಈವ್‌ ಎಂದರೇನು? ಯಾಕೆ ಆಚರಿಸಲಾಗುತ್ತದೆ?

5. ಮಕ್ಕಳ ಕೋಣೆ: ಕ್ರಿಸ್​ಮಸ್​​ ಸಮಯದಲ್ಲಿ ಮನೆಯ ಅಲಂಕಾರಗಳೊಂದಿಗೆ ಮಕ್ಕಳು ಮಲಗುವ ಕೋಣೆಯನ್ನು ಸುಂದರವಾಗಿ ಅಲಂಕರಿಸಿ. ಕ್ರಿಸ್​ಮಸ್​ ಹಬ್ಬದ ಥೀಮ್​ನ್ನು ಹೊಂದಿರುವ ಆಟಿಕೆಗಳಿಂದ ಅಲಂಕರಿಸಿ. ಸಾಕಷ್ಟು ಬಣ್ಣಗಳನ್ನು ಬಳಸುವುದರಿಂದ ಅಂದರೆ ಮಕ್ಕಳ ಕೋಣೆಯೂ ಬಣ್ಣ ಬಣ್ಣದಿಂದ ಕೂಡಿದ್ದರೆ ಮಕ್ಕಳಿಗೆ ಹೆಚ್ಚಿನ ಸಂತೋಷವನ್ನು ನೀಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್