Christmas 2022: ಕ್ರಿಸ್‌ಮಸ್ ಹಬ್ಬದ ಇತಿಹಾಸ, ಮಹತ್ವ ಮತ್ತು ಆಚರಿಸುವ ವಿಧಾನಗಳ ಕುರಿತು ಮಾಹಿತಿ ಇಲ್ಲಿವೆ

ಯೇಸು ಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್‌ಮಸ್‌ ಹಬ್ಬವನ್ನಾಗಿ ಪ್ರತಿವರ್ಷ ಆಚರಿಸಲಾಗುತ್ತದೆ. ಇದಲ್ಲದೇ ಪರಸ್ಪರ ಕ್ರಿಸ್ಮಸ್ ಕಾರ್ಡ್‌, ಉಡುಗೊರೆ ನೀಡುವುದು, ಚರ್ಚ್​ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವುದು ಜೊತೆಗೆ ಮನೆಯನ್ನು ಕ್ರಿಸ್​ಮಸ್​ ಟ್ರೀ ಹಾಗೂ ಹೂವುಗಳಿಂದ ಆಲಂಕರಿಸಲಾಗುತ್ತದೆ.

Christmas 2022: ಕ್ರಿಸ್‌ಮಸ್ ಹಬ್ಬದ ಇತಿಹಾಸ, ಮಹತ್ವ ಮತ್ತು ಆಚರಿಸುವ ವಿಧಾನಗಳ ಕುರಿತು ಮಾಹಿತಿ ಇಲ್ಲಿವೆ
ಸಾಂದರ್ಭಿಕ ಚಿತ್ರImage Credit source: Pinterest
Follow us
| Updated By: ಅಕ್ಷತಾ ವರ್ಕಾಡಿ

Updated on:Dec 23, 2022 | 12:32 PM

ಕ್ರಿಸ್​ಮಸ್​(Christmas) ಹಬ್ಬದ ಸಂಭ್ರಮ ಸಡಗರಗಳು ಈಗಾಗಲೇ ಪ್ರಾರಂಭವಾಗಿದ್ದು, ಕ್ರಿಶ್ಚಿಯನ್ನರಷ್ಟೇ ಅಲ್ಲ, ಪ್ರಪಂಚದ ಪ್ರತಿಯೊಂದು ಭಾಗದ ಜನರು ಸಂಭ್ರಮದಿಂದ ಆಚರಿಸುತ್ತಾರೆ. ಈ ದಿನದ ವಿಶೇಷತೆ ಎಂದರೆ ಯೇಸು ಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್‌ಮಸ್‌ ಹಬ್ಬವನ್ನಾಗಿ ಪ್ರತಿವರ್ಷ ಆಚರಿಸುವುದು. ಇದಲ್ಲದೇ ಪರಸ್ಪರ ಕ್ರಿಸ್ಮಸ್ ಕಾರ್ಡ್‌, ಉಡುಗೊರೆ ನೀಡುವುದು, ಚರ್ಚ್​ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವುದು ಜೊತೆಗೆ ಮನೆಯನ್ನು ಕ್ರಿಸ್​ಮಸ್​ ಟ್ರೀ ಹಾಗೂ ಹೂವುಗಳಿಂದ ಆಲಂಕರಿಸುವುದಾಗಿದೆ. ಸಂಬಂಧಿಕರು, ಸ್ನೇಹಿತರೆಲ್ಲಾ ಒಟ್ಟಾಗಿ ಸೇರಿ ವಿಶೇಷ ಆಹಾರಗಳೊಂದಿಗೆ ಸಂಭ್ರವಿಸುವುದಾಗಿದೆ. ಇಸ್ರೇಲ್‌, ಆಸ್ಟ್ರೇಲಿಯಾ, ಅಮೆರಿಕ, ಬ್ರಿಟನ್‌, ಜಪಾನ್‌, ಚೈನಾ, ಈಜಿಪ್ಟ್‌, ರಷ್ಯಾ, ರೊಮೊನಿಯಾ, ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವು ಭಾಗಗಳಲ್ಲಿ ಪ್ರತಿವರ್ಷ ಕ್ರಿಸ್‌ಮಸ್‌ ಆಚರಿಸುತ್ತಾರೆ.

ಕ್ರಿಶ್ಚಿಯನ್ ಸಮುದಾಯದ ಪ್ರಕಾರ ಇಡೀ ವಿಶ್ವಕ್ಕೆ ಶಾಂತಿಯ ಸಂದೇಶವನ್ನು ಸಾರಿದ ಯೇಸು ಕ್ರಿಸ್ತ ಜನಿಸಿದ ದಿನವನ್ನು ಪ್ರತಿವರ್ಷ ಕ್ರಿಸ್‌ಮಸ್‌ ಹಬ್ಬವಾಗಿ ಆಚರಿಸಲಾಗುತ್ತದೆ.ಜೋಸೆಫ್‌ ಮತ್ತು ಮೇರಿಯ ಪುತ್ರನಾಗಿ ಡಿಸೆಂಬರ್ 25ರಂದು ಯೇಸು ಜನಿಸುತ್ತಾನೆ. ಆದರೆ ಆತನ ಜನನ ಯಾವುದೇ ಅರಮನೆಯಲ್ಲಿ ಆಗಿಲ್ಲ. ಬದಲಾಗಿ ಯೇಸುಕ್ರಿಸ್ತನು ಬೆತ್ಲಹೆಮ್​ನ ಒಂದು ಚಿಕ್ಕ ದನದ ಕೊಟ್ಟಿಗೆಯಲ್ಲಿ ಜನಿಸಿದ ಎಂದು ಹೇಳಲಾಗುತ್ತದೆ. ಗ್ರೀಕ್‌ ಲಿಪಿಯಲ್ಲಿ ಯೇಸು ಕ್ರಿಸ್ತನ ಮೊದಲ ಅಕ್ಷರವು ಇಂಗ್ಲೀಷಿನಲ್ಲಿ X ನಂತೆ ಕಾಣುವುದರಿಂದ ಈ ಹಬ್ಬವನ್ನು ಕ್ರಿಸ್‌ಮಸ್‌ ಎಂದೂ ಇನ್ನೂ ಕೆಲವರು ಎಕ್ಸ್‌ ಮಸ್‌ ಎಂದೂ ಕರೆಯುತ್ತಾರೆ. ಡಿಸೆಂಬರ್‌ 25ರಂದು ಸಾರ್ವತ್ರಿಕ ರಜಾ ದಿನವಾಗಿ ಘೋಷಿಸಲಾಗಿದೆ.

ಸಾಂತಾ ಕ್ಲಾಸ್ ಉಡುಗೊರೆಯನ್ನು ಹೊತ್ತು ತರುತ್ತಾನೆ ಎಂಬ ನಂಬಿಕೆಯನ್ನು ಹಾಗೆಯೇ ಉಳಿಸಲು ಪ್ರತಿ ವರ್ಷ ಸೀಕ್ರೇಟ್ ಸಾಂತ ಎಂದು ಕೂಡ ಆಚರಿಸಲಾಗುತ್ತದೆ. ಈ ಸಾಂತಾ ಕ್ಲಾಸ್ ಹಿಂದೆ ಇತಿಹಾಸವೇ ಇದೆ. ಸೇಂಟ್ ನಿಕೋಲಸ್ ಎಂಬ ಸನ್ಯಾಸಿ ಇಂತಹ ಆಚರಣೆಯನ್ನು ತಂದರು ಎಂದು ಹೇಳಲಾಗುತ್ತದೆ. ಸೇಂಟ್ ನಿಕೋಲಸ್ ಕ್ರಿ.ಶ. 280ರ ಸುಮಾರಿಗೆ ಜನಿಸಿದನೆಂದು ಪುರಾಣಗಳಲ್ಲಿ ಉಲ್ಲೇಖವಿದೆ.

ಇದನ್ನೂ ಓದಿ: ಕ್ರಿಸ್‌ಮಸ್ ಈವ್‌ ಎಂದರೇನು? ಯಾಕೆ ಆಚರಿಸಲಾಗುತ್ತದೆ?

ಕ್ರಿಸ್‌ಮಸ್ ಹಬ್ಬದ ಆಹಾರಗಳೇ ವಿಶೇಷವಾಗಿರುತ್ತದೆ. ಕುಟುಂಬ ಸದಸ್ಯರು, ಸ್ನೇಹಿತರು ಎಲ್ಲಾ ಒಟ್ಟಿಗೆ ಸೇರಿ ಸಂಭ್ರಮದಿಂದ ಪಾರ್ಟಿಯೊಂದಿಗೆ ಆಚರಿಸಲಾಗುತ್ತದೆ. ಉದಾಹರಣೆಗೆ ಸಿಸಿಲಿಯಲ್ಲಿ 12 ಬಗೆಯ ಮೀನುಗಳಿಂದ ವಿಶೇಷ ಖಾದ್ಯವನ್ನು ತಯಾರಿಸುತ್ತಾರೆ. ಕ್ರಿಶ್ಚಿಯನ್ ಪ್ರಭಾವಿ ರಾಷ್ಟ್ರಗಳಲ್ಲಿ ಹೆಬ್ಬಾತು ಅಥವಾ ದೊಡ್ಡ ಹಕ್ಕಿಗಳ ಗ್ರೇವಿ, ಆಲೂಗಡ್ಡೆ, ತರಕಾರಿಗಳು, ಕೆಲವೊಮ್ಮೆ ಬ್ರೆಡ್ ಗಳ ಆಹಾರಗಳನ್ನು ಕಾಣಬಹುದು. ಜೊತೆಗೆ ಕೇಕ್​ಗಳಲ್ಲಿ ಸಾಕಷ್ಟು ಬಗೆಯನ್ನು ಕಾಣಬಹುದು. ಸಾಂಪ್ರದಾಯಿಕವಾಗಿ, ಕ್ರಿಸ್‌ಮಸ್ ಸಮಯದಲ್ಲಿ ಕುಟುಂಬದೊಂದಿಗೆ ಆಹಾರವನ್ನು ಸವಿಯುವುದು ಆಚರಣೆಯ ಪ್ರಮುಖ ಭಾಗವಾಗಿದೆ. ಉದಾಹರಣೆಗೆ ಇಟಲಿಯ ದ್ವೀಪ ಪ್ರದೇಶವಾದ ಸಿಸಿಟಿಯಲ್ಲಿ 12 ಬಗೆಯ ಮೀನುಗಳನ್ನು ಊಟದ ಭಾಗವಾಗಿ ನೀಡಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

Published On - 12:29 pm, Fri, 23 December 22

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ