ವಿಶ್ವದಾದ್ಯಂತ ಕೇವಲ ಕ್ರೈಸ್ತ ಧರ್ಮದವರು ಮಾತ್ರವಲ್ಲದೇ ಪ್ರತಿಯೊಬ್ಬರೂ ಆಚರಿಸುವ ಹಬ್ಬವಾಗಿದೆ. ಇದು ಕೇವಲ ಏಸು ಹುಟ್ಟಿದ ದಿನದ ಸಂಭ್ರಮ ಮಾತ್ರವಲ್ಲದೇ ಒಂದು ತಿಂಗಳ ಹಿಂದಿನಿಂದಲೂ ಪ್ರತಿಯೊಂದು ಮನೆಯುಲ್ಲಿಯೂ ಸಂಭ್ರಮಗಳು ಮನೆ ಮಾಡಿರುತ್ತದೆ.ಆದ್ದರಿಂದ ಕ್ರಿಸ್ಮಸ್ ಹಬ್ಬದ ದಿನ ಮಾತ್ರವಲ್ಲದೇ ಮುಂಚಿತವಾಗಿ ಆಚರಿಸುವ ಸಡಗರಗಳ ಕುರಿತು ಮಾಹಿತಿ ಇಲ್ಲಿದೆ. ಕ್ರಿಸ್ಮಸ್ ಈವ್(Christmas Eve)ನ ಪರಿಕಲ್ಪನೆಯು ಜೆನೆಸಿಸ್ ಸ್ಟೋರಿ ಆಫ್ ಕ್ರಿಯೇಷನ್ಸ್ ಬುಕ್ನಿಂದ ಬಂದಿದೆ. ಪ್ರತಿದಿನ ಸೂರ್ಯಾಸ್ತದ ಸಮಯದಲ್ಲಿ ಕ್ರಿಶ್ಚಿಯನ್ ಸಮುದಾಯದವರು ಪ್ರಾರ್ಥನೆ ಸಲ್ಲಿಸುವ ವಾಡಿಕೆ ಇದೆ.
ಕ್ರಿಸ್ಮಸ್ ಈವ್ ಪ್ರಪಂಚದ ಕೆಲವು ಭಾಗಗಳಲ್ಲಿ, ನವೆಂಬರ್ 15ರಿಂದಲೇ ಪ್ರಾರಂಭವಾಗುತ್ತದೆ. ಡೆನ್ಮಾರ್ಕ್, ಸ್ವೀಡನ್ ಮತ್ತು ನಾರ್ವೆಯಂತಹ ಅನೇಕ ಸ್ಕ್ಯಾಂಡಿನೇವಿಯನ್ ದೇಶಗಳಲ್ಲಿ, ಈ ಸಮಯದಲ್ಲಿ ಪೂರ್ವಜರು ಸಮಾಧಿಯಿಂದ ಮತ್ತೇ ಮನೆಗೆ ಭೇಟಿ ನೀಡುತ್ತಾರೆ ಎಂಬ ನಂಬಿಕೆ ಇದೆ. ಆದ್ದರಿಂದ ಮನೆಯಲ್ಲಿನ ಮೇಜುಗಳನ್ನು ಅಲಂಕರಿಸಿ, ಮೇಣದಬತ್ತಿಗಳನ್ನು ಬೆಳಗಿಸುತ್ತಾರೆ. ಜೊತೆಗೆ ಸಾಕಷ್ಟು ಆಹಾರವನ್ನು ಕೂಡ ಇಡಲಾಗುತ್ತದೆ. ಪೂರ್ವಜರು ಸಮಾಧಿಯಿಂದ ಹೊರ ಬರುತ್ತಾರೆ ಎಂಬ ನಂಬಿಕೆ ಇದೆ.
ಕ್ರಿಸ್ಮಸ್ ಈವ್ ಎಂದರೆ ಡಿಸೆಂಬರ್ 24 ಮತ್ತು ಅದರ ಮುಂಚಿನ ದಿನಗಳಲ್ಲಿ ಜನರು ಹಬ್ಬಗಳ ತಯಾರಿ ಹಾಗೂ ತಮ್ಮವರೊಂದಿಗೆ ಉಡುಗೊರೆಗಳನ್ನು ಹಾಗೂ ಸಿಹಿತಿಂಡಿಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದಾಗಿದೆ.
ಇದನ್ನೂ ಓದಿ: ಕ್ರಿಸ್ಮಸ್ ಹಬ್ಬಕ್ಕೆ ಮನೆಯಲ್ಲಿಯೇ ತಯಾರು ಮಾಡಬಹುದಾದ ಕೇಕ್ ರೆಸೆಪಿ ಐಡಿಯಾ ಇಲ್ಲಿದೆ
ಕ್ರಿಸ್ಮಸ್ ಈವ್ ಸಂಜೆ ಅಥವಾ ಕ್ರಿಸ್‌ಮಸ್ ದಿನದ ಹಿಂದಿನ ಒಂದು ತಿಂಗಳ ದಿನವಾಗಿದೆ. ಡಿಸೆಂಬರ್ 24 ರ ಸಂಜೆ ಕ್ರಿಸ್‌ಮಸ್ ದಿನದ ಮೊದಲು ಮಧ್ಯರಾತ್ರಿಯಲ್ಲಿ ಇದನ್ನು ಆಚರಿಸಲಾಗುತ್ತದೆ, ಕ್ರಿಶ್ಚಿಯನ್ ಧರ್ಮದ ಕೇಂದ್ರ ವ್ಯಕ್ತಿಯಾದ ಯೇಸುಕ್ರಿಸ್ತನ ಜನನದ ನೆನಪಿಗಾಗಿ. ಜನರು ಮುಂದಿನ ದಿನದಿಂದ ಮೆರ್ರಿ ಕ್ರಿಸ್ಮಸ್ ಶುಭಾಶಯಗಳನ್ನು ಹಂಚಿಕೊಳ್ಳಲು ಪ್ರಾರಂಭಿಸುತ್ತಾರೆ.
ಜೆರುಸಲೆಮ್ ನಗರದ ದಕ್ಷಿಣಕ್ಕೆ 10 ಕಿಮೀ ದೂರದಲ್ಲಿರುವ ಬೆಥ್ ಲೆಹೆಮ್ನಲ್ಲಿ ಯೇಸು ಜನಿಸಿದನೆಂದು ನಂಬಲಾಗಿದೆ. ಕ್ರಿಸ್‌ಮಸ್ ಈವ್ ವಿಶ್ವದ ವಿವಿಧ ಜನರು ವಿವಿಧ ರೀತಿಯಲ್ಲಿ ಆಚರಿಸಲು ಅನೇಕ ಐತಿಹಾಸಿಕ ಪರಿಕಲ್ಪನೆಗಳು ಕಾರಣವಾಗಿವೆ. ಪ್ರಪಂಚದಾದ್ಯಂತ ಅನೇಕ ದೇಶಗಳಲ್ಲಿ ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ಜನರು ಕ್ರಿಸ್ಮಸ್ ಈವ್ ಅಂದರೆ ಕ್ರಿಸ್ಮಸ್ನ ಹಬ್ಬದ ಹಿಂದಿನ ದಿನಗಳು ಅನೇಕ ವಿಧಗಳಲ್ಲಿ ಆಚರಿಸುತ್ತಾರೆ. ಇದನ್ನು ವಿಶೇಷವಾಗಿ ಅಮೇರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಕೆನಡಾ. ಆಚರಿಸಲಾಗುತ್ತದೆ.
ಇದನ್ನೂ ಓದಿ: ಭಾರತೀಯ ಕರೆನ್ಸಿಯ ಮೂಲಕ ಕಡಿಮೆ ಖರ್ಚಿನಲ್ಲಿ ಹೋಗಬಹುದಾದ ವಿದೇಶಿ ತಾಣಗಳು ಇಲ್ಲಿವೆ
ಈ ಸಮಯದಲ್ಲಿ ಕೆಲವು ದೇಶಗಳಲ್ಲಿ ಮುಂಚಿತವಾಗಿಯೇ ರಜೆಯನ್ನು ನೀಡಲಾಗುತ್ತದೆ. ಪಾಶ್ಚಿಮಾತ್ಯ ದೇಶಗಳಂತೆ, ಭಾರತದಲ್ಲಿಯೂ ಕೂಡ ಕ್ರಿಸ್ಮಸ್ ಈವ್ ಸಂತೋಷ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ. ಜನರು ತಮ್ಮ ಪ್ರೀತಿಪಾತ್ರರೊಂದಿಗೆ ಉಡುಗೊರೆಗಳು ಮತ್ತು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಸಿಕ್ರೇಟ್ ಸಾಂತ ಎಂದು ಕೂಡ ಆಚರಿಸಲಾಗುತ್ತದೆ. ಜೊತೆಗೆ ಮನೆಯವರೆಲ್ಲಾ ಒಂದಾಗಿ ಕ್ರಿಸ್ಮಸ್ ಟ್ರೀ, ಟೋಪಿ, ಚಿಕ್ಕ ಚಿಕ್ಕ ಅಲಂಕಾರಿಕ ಘಂಟೆಗಳು, ಹೂಮಾಲೆಗಳಿಂದ ಮನೆಯನ್ನು ಸುಂದರವಾಗಿ ಅಲಂಕರಿಸುತ್ತಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: