ಬೇಸಿಗೆಯಲ್ಲಿ ಕೆಲವು ಹಣ್ಣುಗಳನ್ನು ತಿನ್ನುವುದರಲ್ಲಿ, ವಿವಿಧ ಬಗೆಯ ಜ್ಯೂಸ್ ಕುಡಿಯುವುದರಲ್ಲಿ ಒಂದು ರೀತಿಯ ಸಂತೋಷವಿರುತ್ತದೆ. ಏಕೆಂದರೆ ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಆಗಿಡಬೇಕಾಗುತ್ತದೆ. ಹಾಗಾಗಿ ರಸಭರಿತ ಹಣ್ಣುಗಳ ಸೇವನೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಇವುಗಳ ಜೊತೆಯಲ್ಲಿ ದಿನಕ್ಕೊಂದು ಎಳನೀರು ಕುಡಿಯುವುದರಿಂದ ದೇಹ ನಿರ್ಜಲೀಕರಣಗೊಳ್ಳುವುದನ್ನು ತಪ್ಪಿಸಬಹುದು. ಎಳನೀರಿನಲ್ಲಿ ಕಡಿಮೆ ಕ್ಯಾಲರಿ ಇದ್ದು, ನೈಸರ್ಗಿಕ ಕಿಣ್ವಗಳು, ಖನಿಜಾಂಶಗಳಾಗಿರುವಂತಹ ಪೊಟಾಶಿಯಂ ಕೂಡ ಇದರಲ್ಲಿದೆ. ಆದರೆ ಹೆಚ್ಚಿನ ಜನರು ಇದನ್ನು ಕುಡಿಯುವಾಗ ಅನೇಕ ತಪ್ಪುಗಳನ್ನು ಪುನರಾವರ್ತಿಸುತ್ತಾರೆ. ಹಾಗಾದರೆ ಎಳನೀರನ್ನು ಕುಡಿಯಲು ಸರಿಯಾದ ಸಮಯ ಯಾವುದು? ಬೇಸಿಗೆ ಕಾಲದಲ್ಲಿ ಎಳನೀರನ್ನು ಯಾವ ಸಮಯದಲ್ಲಿ ಕುಡಿಯಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.
ಎಳನೀರು ಪೊಟ್ಯಾಸಿಯಮ್ ನ ಉತ್ತಮ ಮೂಲವಾಗಿದೆ ಇದಲ್ಲದೆ, ಇದು ವಿಟಮಿನ್ ಸಿ, ಸತು, ಮೆಗ್ನೀಸಿಯಮ್ ಮತ್ತು ಇತರ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದರ ದೊಡ್ಡ ವಿಶೇಷತೆಯೆಂದರೆ ಇದನ್ನು ಕುಡಿಯುವುದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುವುದಿಲ್ಲ. ಸಾಮಾನ್ಯವಾಗಿ ಬೇಸಿಗೆಯಲ್ಲಿ ನಿರ್ಜಲೀಕರಣ ಉಂಟಾಗುತ್ತದೆ ಆದ್ದರಿಂದ ಎಳನೀರು ಮತ್ತು ಸೌತೆಕಾಯಿಯಂತಹ ಪದಾರ್ಥಗಳನ್ನು ಸೇವಿಸಲು ಸೂಚಿಸಲಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಎಳನೀರು ದೇಹಕ್ಕೆ ತಕ್ಷಣ ಎಲೆಕ್ಟ್ರೋಲೈಟ್ಸ್ ಒದಗಿಸಲು ಕೆಲಸ ಮಾಡುತ್ತದೆ. ಇದಲ್ಲದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಇಲಿಗಳ ಕಾಟಕ್ಕೆ ಇದುವೇ ಉತ್ತಮ ಪಾಷಾಣ, ಈ ಮನೆ ಮದ್ದು ಬಳಸಿ!
ಎಳನೀರನ್ನು ಕೆಲವರು ಖಾಲಿ ಹೊಟ್ಟೆಯಲ್ಲಿ ಮತ್ತು ಕೆಲವರು ಮಧ್ಯಾಹ್ನ ಕುಡಿಯುವುದು ಪ್ರಯೋಜನಕಾರಿ ಎಂದು ಹೇಳುತ್ತಾರೆ. ಆಹಾರ ತಜ್ಞೆ ಸುರಭಿ ಪರೀಕ್ ಹೇಳುವ ಪ್ರಕಾರ ಎಳನೀರನ್ನು ಕುಡಿಯಲು ಉತ್ತಮ ಸಮಯವೆಂದರೆ ಬೆಳಿಗ್ಗೆ. ಇದನ್ನು ಊಟದ ಜೊತೆಗೆ ಅಥವಾ ನಂತರ ಕುಡಿಯಬಾರದು. ಎದೆಯುರಿ ಸಮಸ್ಯೆ ಇರುವವರು ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿಯಬೇಕು ಎಂದು ಹೇಳುತ್ತಾರೆ. ಮುಂಜಾನೆ ಸಮಯದಲ್ಲಿ ಇದನ್ನು ಕುಡಿಯುವುದರಿಂದ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ, ತೂಕ ನಷ್ಟಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಮೂತ್ರಪಿಂಡ ಸಂಬಂಧಿತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಜನರು ಎಳನೀರು ಕುಡಿಯಬಾರದು. ಇಲವಾದಲ್ಲಿ ಮೂತ್ರಪಿಂಡಕ್ಕೆ ಹಾನಿಯಾಗಬಹುದು.
ಎಳನೀರು ದುಪ್ಪಟ್ಟು ಪ್ರಯೋಜನ ಪಡೆಯಲು, ನೀವು ಅದರಲ್ಲಿ ಕೆಲವು ವಸ್ತುಗಳನ್ನು ನೆನೆಸಿ ತಿನ್ನಬಹುದು. ಚಿಯಾ ಬೀಜಗಳನ್ನು ರಾತ್ರಿಯಿಡೀ ಎಳನೀರಿನಲ್ಲಿ ನೆನೆಸಿ ಮರುದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ಆರೋಗ್ಯಕರ ಉಪಾಹಾರವಾಗಿದ್ದು, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಚರ್ಮವನ್ನು ಆರೋಗ್ಯಕರವಾಗಿ ಇಡುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ