Rat Problem : ಇಲಿಗಳ ಕಾಟಕ್ಕೆ ಇದುವೇ ಉತ್ತಮ ಪಾಷಾಣ, ಈ ಮನೆ ಮದ್ದು ಬಳಸಿ!
ಮನೆಯಲ್ಲಿ ಅತ್ತಿಂದ ಇತ್ತ ಓಡಾಡುತ್ತ ಎಲ್ಲರಿಗೂ ಕಾಟ ಕೊಡುವ ಪ್ರಾಣಿಯೆಂದರೆ ಅದುವೇ ಇಲಿ. ಒಂದೇ ಒಂದು ಇಲಿಯಿದ್ದು ಬಿಟ್ಟರೆ ಮನೆಯಲ್ಲಿ ಯಾವ ವಸ್ತುಗಳನ್ನು ಇಡುವ ಆಗಿಲ್ಲ. ಕೆಲವೊಮ್ಮೆ ಬಟ್ಟೆ, ಅಗತ್ಯ ವಸ್ತುಗಳನ್ನೇ ತುಂಡರಿಸಿಬಿಟ್ಟಿರುತ್ತವೆ. ಹೀಗಾಗಿ ಇಲಿಯನ್ನು ಓಡಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯ ವಾಗುವುದಿಲ್ಲ. ಮನೆಯಲ್ಲಿರುವ ಈ ಕೆಲವು ವಸ್ತುಗಳನ್ನು ಬಳಸಿಕೊಂಡು ಇಲಿಗಳ ಕಾಟಕ್ಕೆ ಮುಕ್ತಿ ಹಾಡಬಹುದು.
ಕೆಲವರ ಮನೆಯಲ್ಲಿ ಇಲಿಗಳದ್ದೇ ರಾಶಿ ಇರುತ್ತದೆ. ಸಿಕ್ಕ ಸಿಕ್ಕ ವಸ್ತುಗಳನ್ನು ತುಂಡರಿಸುವ ಇವುಗಳಿಂದ ಮುಕ್ತಿ ಪಡೆಯಲು ಹೆಚ್ಚಿನವರು ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳನ್ನೆ ಹೆಚ್ಚು ಅವಲಂಬಿಸಿರುತ್ತಾರೆ. ಈಗಾಗಲೇ ಮಾರುಕಟ್ಟೆಯಲ್ಲಿ ಹಲವು ಬಗೆಯ ಇಲಿ ಔಷಧಿಗಳು ಲಭ್ಯವಿವೆ. ಇದನ್ನು ಬಳಸಿ ಈ ಇಲಿಗಳನ್ನು ದೂರವಿಡಬಹುದಾದರೂ ಆರೋಗ್ಯಕ್ಕೆ ತೊಂದರೆಯಾಗುವ ಸಾಧ್ಯತೆಯೇ ಅಧಿಕ.
ಇಲಿಗಳ ಕಾಟಕ್ಕೆ ಸುಲಭವಾದ ಮನೆ ಮದ್ದುಗಳು
- ಮನೆಯಲ್ಲಿ ಇಲಿಗಳು ತುಂಬಿ ಕೊಂಡಿದ್ದರೆ ಅವುಗಳ ಓಡಾಡುವ ಸ್ಥಳ ಗಳಲ್ಲಿ ಕೆಂಪು ಮೆಣಸಿನ ಪುಡಿಯನ್ನು ಸಿಂಪಡಿಸಿದರೆ ಇಲಿಗಳು ಓಡಿ ಹೋಗುತ್ತವೆ.
- ಮನೆಯ ಮೂಲೆಗಳಲ್ಲಿ ಅಥವಾ ಸಂಧಿಗಳಲ್ಲಿ ಕರ್ಪೂರದ ತುಂಡುಗಳನ್ನು ಇಡುವ ಮೂಲಕ ಇಲಿಗಳ ಕಾಟಕ್ಕೆ ಮುಕ್ತಿ ಹಾಡುವುದು ತುಂಬಾನೇ ಸುಲಭ.
- ಮನೆಯಲ್ಲಿ ಇಲಿಗಳ ಕಾಟವಿದ್ದರೆ ಬೆಳ್ಳುಳ್ಳಿಯನ್ನು ನೀರಿನಲ್ಲಿ ನೆನೆಸಿಟ್ಟು, ಬಳಿಕ ಆ ನೀರನ್ನು ಮನೆಯ ಮೂಲೆಗಳಲ್ಲಿ ಸಂಧಿಗಳಿಗೆ ಸಿಂಪಡಿಸಿದರೆ ಇಲಿಗಳು ಅತ್ತ ಸುಳಿಯುವುದೇ ಇಲ್ಲ.
- ಇಲಿಗಳು ಹೆಚ್ಚಾಗಿ ಕಾಣಸಿಗುವ ಸ್ಥಳಗಳಲ್ಲಿ ಅಡುಗೆ ಸೋಡಾವನ್ನು ಸಿಂಪಡಿಸಿ ಬೆಳಗ್ಗೆ ಆ ಜಾಗವನ್ನು ಸ್ವಚ್ಛಗೊಳಿಸಿದರೆ ಇಲಿಗಳು ಬರುವುದಿಲ್ಲ.
- ಇಲಿಗಳು ಕಾಣ ಸಿಗುವ ಸ್ಥಳಗಳಲ್ಲಿ ಈರುಳ್ಳಿ ಸಿಪ್ಪೆಯನ್ನು ಅಥವಾ ಈರುಳ್ಳಿಯನ್ನು ಇಟ್ಟರೆ ತಕ್ಷಣವೇ ಇಲಿಗಳು ಓಡಿ ಹೋಗುತ್ತವೆ.
- ಇಲಿಗಳು ಕಾಣಿಸಿಕೊಳ್ಳುವ ಸಂಧಿಗಳಲ್ಲಿ ಪುದೀನಾ ನೀರನ್ನು ಸ್ಪ್ರೇ ಮಾಡಿದರೆ ಇಲಿಗಳನ್ನು ಸುಲಭವಾಗಿ ಓಡಿಸಬಹುದು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ