ಲೈಂಗಿಕತೆಯಲ್ಲಿ ತೊಡಗಿಕೊಂಡ್ರು ಹದಿಹರೆಯದವರು ಬಳಸುತ್ತಿಲ್ಲ ಕಾಂಡೋಮ್, ಆತಂಕ ವ್ಯಕ್ತಪಡಿಸಿದ WHO
ಇತ್ತೀಚಿನ ವರದಿಯ ಪ್ರಕಾರ ಲೈಂಗಿಕವಾಗಿ ಸಕ್ರಿಯವಾಗಿರುವ ಹದಿಹರೆಯದವರಲ್ಲಿ ಕಾಂಡೋಮ್ ಬಳಕೆಯು ಕಳೆದ ದಶಕದಲ್ಲಿ ಯುರೋಪ್‌ನಲ್ಲಿ ಗಮನಾರ್ಹವಾಗಿ ಕಡಿಮೆಯಾಗಿದೆ. ಸುರಕ್ಷಿತ ಲೈಂಗಿಕತೆಯ ದರಗಳಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯೂ ಆತಂಕ ವ್ಯಕ್ತಪಡಿಸಿದೆ.
ಕಾಂಡೋಮ್‌ಗಳನ್ನು ಗರ್ಭನಿರೋಧಕಗಳಾಗಿ ಬಳಸಲಾಗುತ್ತಿದ್ದು, ಇದರಿಂದ ಲೈಂಗಿಕವಾಗಿ ಹರಡುವ ರೋಗಗಳನ್ನು ತಡೆಗಟ್ಟಬಹುದಾಗಿದೆ. ಆದರೆ ಇದೀಗ ವಿಶ್ವ ಆರೋಗ್ಯ ಸಂಸ್ಥೆಯ ಇತ್ತೀಚಿನ ವರದಿಯಲ್ಲಿ ಲೈಂಗಿಕವಾಗಿ ಸಕ್ರಿಯವಾಗಿರುವ ಹದಿಹರೆಯದವರಲ್ಲಿ ಕಾಂಡೋಮ್ ಬಳಕೆಯು ಯುರೋಪ್‌ನಲ್ಲಿ ಗಮನಾರ್ಹವಾಗಿ ಕಡಿಮೆಯಾಗಿದೆ ಎನ್ನುವ ಆತಂಕಕಾರಿ ವಿಚಾರವನ್ನು ಬಹಿರಂಗ ಪಡಿಸಿದೆ.
ಮಧ್ಯ ಏಷ್ಯಾದ ಯುರೋಪಿಯನ್ ಪ್ರದೇಶದ 53 ದೇಶಗಳಲ್ಲಿ 42 ದೇಶಗಳಲ್ಲಿ 242,000 ಕ್ಕೂ ಹೆಚ್ಚು 15 ವರ್ಷ ವಯಸ್ಸಿನ ಹದಿಹರೆಯದವರ ಮೇಲೆ ನಡೆಸಿದ ಸಮೀಕ್ಷೆಯು ಆತಂಕಕಾರಿ ವಿಷಯವೊಂದು ಹೊರಬಿದ್ದಿದೆ. ಕಾಂಡೋಮ್ ಬಳಕೆ ಮಾಡದೇ ಇರುವುದರಿಂದ ಯುವಜನರಿಗೆ ಲೈಂಗಿಕವಾಗಿ ಹರಡುವ ಸೋಂಕುಗಳು (ಎಸ್‌ಟಿಐಗಳು ) ಮತ್ತು ಸುರಕ್ಷಿತವಲ್ಲದ ಗರ್ಭಧಾರಣೆಯ ಅಪಾಯವು ಹೆಚ್ಚಾಗುತ್ತಿದೆ.
ಸಮಗ್ರ ಲೈಂಗಿಕ ಶಿಕ್ಷಣದ ಪ್ರಾಮುಖ್ಯತೆಯನ್ನು ಒತ್ತಿಹೇಳುವುದಲ್ಲದೆ, ಸರ್ಕಾರಗಳು, ಆರೋಗ್ಯ ಅಧಿಕಾರಿಗಳು ಮತ್ತು ಶಿಕ್ಷಣತಜ್ಞರಿಂದ ತಕ್ಷಣದ ಕ್ರಮ ತೆಗೆದುಕೊಳ್ಳದೇ ಹೋದರೆ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು ಎಂದು ಎಚ್ಚರಿಸಿದೆ. ಅದಲ್ಲದೇ, ಲೈಂಗಿಕವಾಗಿ ಸಕ್ರಿಯವಾಗಿರುವ ಹದಿಹರೆಯದ ಹುಡುಗರಲ್ಲಿ ಕಾಂಡೋಮ್ ಬಳಸಿದ ಪ್ರಮಾಣವು 2014 ರಲ್ಲಿ 70 ಪ್ರತಿಶತದಿಂದ 2022 ರಲ್ಲಿ 61 ಪ್ರತಿಶತಕ್ಕೆ ಇಳಿದಿದೆ. ಅದೇ ಅವಧಿಯಲ್ಲಿ ಹುಡುಗಿಯರಲ್ಲಿ 63 ಪ್ರತಿಶದಿಂದ 57 ಪ್ರತಿಶತಕ್ಕೆ ಇಳಿಕೆ ಕಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಗರ್ಭನಿರೋಧಕ ಮಾತ್ರೆಗಳ ಬಳಕೆಯು 2014 ಮತ್ತು 2022 ರ ನಡುವೆ ಸ್ಥಿರವಾಗಿದೆ.15 ವರ್ಷ ವಯಸ್ಸಿನವರಲ್ಲಿ 26 ಪ್ರತಿಶತದಷ್ಟು ಜನರು ಲೈಂಗಿಕವಾಗಿ ತೊಡಗಿಸಿಕೊಂಡಾಗ ಈ ಮಾತ್ರೆಗಳನ್ನು ಬಳಸಿದ್ದಾರೆಂದು ತಿಳಿಸಿದ್ದಾರೆ. ಆದರೆ, ಈ ವರದಿಯು ಗರ್ಭನಿರೋಧಕ ಬಳಕೆಯಲ್ಲಿ ಸಾಮಾಜಿಕ ಆರ್ಥಿಕ ಅಸಮಾನತೆಗಳನ್ನು ಎತ್ತಿ ತೋರಿಸಿದೆ. ಕಡಿಮೆ ಆದಾಯದ ಕುಟುಂಬಗಳ ಹದಿಹರೆಯದವರು ಕಾಂಡೋಮ್ ಅಥವಾ ಗರ್ಭನಿರೋಧಕ ಮಾತ್ರೆಗಳನ್ನು ಬಳಸುವುದನ್ನು ನಿಲ್ಲಿಸಿದ್ದಾರೆ.
ಇದನ್ನೂ ಓದಿ: ಸಕ್ಕರೆ ಅಂಶಯುಕ್ತ ಪಾನೀಯ ಸೇವನೆಯಿಂದ ಕ್ಯಾನ್ಸರ್, ಲಿವರ್ಗೆ ಹಾನಿ, ಎಚ್ಚರಿಕೆ ನೀಡಿದ ತಜ್ಞರು
33 ಪ್ರತಿಶತದಷ್ಟು ಜನರು ತಮ್ಮ ಸಂಭೋಗದ ಸಮಯದಲ್ಲಿ ಕಾಂಡೋಮ್ ಅಥವಾ ಗರ್ಭನಿರೋಧಕ ಮಾತ್ರೆ ಈ ಎರಡನ್ನೂ ಬಳಸಲಿಲ್ಲ ಎಂದು ವರದಿಯಾಗಿದೆ. ಸಮಗ್ರ ಲೈಂಗಿಕ ಶಿಕ್ಷಣವನ್ನು ನೀಡುವುದನ್ನು ನಿರ್ಲಕ್ಷ್ಯ ಮಾಡಿರುವುದು ಕಾರಣ ಎಂದು ಡಬ್ಲ್ಯೂ ಹೆಚ್ ಒ ಯುರೋಪ್ ನಿರ್ದೇಶಕ ಹ್ಯಾನ್ಸ್ ಕ್ಲ್ಯೂಗ್ ತಿಳಿಸಿದ್ದಾರೆ.
ಇದು ಆರೋಗ್ಯದ ವೆಚ್ಚವನ್ನು ಹೆಚ್ಚಿಸುವುದಲ್ಲದೆ, ಯುವಜನರಿಗೆ ಶಿಕ್ಷಣ ಮತ್ತು ವೃತ್ತಿ ಮಾರ್ಗಗಳನ್ನು ಅಡ್ಡಿಪಡಿಸುತ್ತದೆ. ಪ್ರಸ್ತುತ ಈ ಪರಿಸ್ಥಿತಿಯ ಮೂಲ ಕಾರಣಗಳನ್ನು ಗುರುತಿಸದೇ, ಸರಿಯಾದ ಕ್ರಮ ಕೈಗೊಳ್ಳದೇ ಹೋದರೆ ಪರಿಸ್ಥಿತಿಯೂ ಇನ್ನಷ್ಟು ಹದಗೆಡಲಿದೆ. ಹೀಗಾಗಿ ಲೈಂಗಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದು. ಲೈಂಗಿಕ ಆರೋಗ್ಯ ಸೇವೆಗಳನ್ನು ಸುಧಾರಿಸಲು ಹಾಗೂ ಉತ್ತಮ ತರಬೇತಿ ನೀಡಲು ಶಿಕ್ಷಣ ತಜ್ಞರು ಮತ್ತು ಆರೋಗ್ಯ ಪೂರೈಕೆದಾರರನ್ನು ವಿಶ್ವ ಆರೋಗ್ಯ ಸಂಸ್ಥೆಯೂ ಒತ್ತಾಯಿಸಿದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ