Dancing Health Benefits: ಪ್ರತಿದಿನ 30 ನಿಮಿಷಗಳ ಕಾಲ ಡ್ಯಾನ್ಸ್​​ ಮಾಡಿ: ಈ ಕಾಯಿಲೆಗಳಿಂದ ಮುಕ್ತರಾಗಿ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 22, 2022 | 7:00 AM

ನೃತ್ಯವು ದೇಹಕ್ಕೆ ಸಂಪೂರ್ಣ ವ್ಯಾಯಾಮ ನೀಡುತ್ತದೆ. ಇದು ನಿಮ್ಮ ದೇಹವನ್ನು ಸದೃಢಗೊಳಿಸುತ್ತದೆ. ಇದು ಕ್ಯಾಲೊರಿಗಳನ್ನು ಬರ್ನ್​ ಮಾಡುತ್ತದೆ.

Dancing Health Benefits: ಪ್ರತಿದಿನ 30 ನಿಮಿಷಗಳ ಕಾಲ ಡ್ಯಾನ್ಸ್​​ ಮಾಡಿ: ಈ ಕಾಯಿಲೆಗಳಿಂದ ಮುಕ್ತರಾಗಿ
ಪ್ರಾತಿನಿಧಿಕ ಚಿತ್ರ
Follow us on

ಪ್ರತಿದಿನ ವ್ಯಾಯಾಮ (Exercise) ಅಥವಾ ಇತರ ದೈಹಿಕ ಚಟುವಟಿಕೆಗಳನ್ನು ಮಾಡುವುದು ಆರೋಗ್ಯಕ್ಕೆ ಬಹಳ ಮುಖ್ಯ. ಇದು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುವುದರೊಂದಿಗೆ ಅನೇಕ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. ಪ್ರತಿದಿನ 30 ನಿಮಿಷಗಳ ಕಾಲ ನೃತ್ಯ ಮಾಡುವುದರಿಂದ ನಿಮ್ಮ ಫಿಟ್‌ನೆಸ್​ನ್ನು ಕಾಯ್ದುಕೊಳ್ಳುವುದರೊಂದಿಗೆ ಆರೋಗ್ಯಕರ ಜೀವನವನ್ನು ನಡೆಸಬಹುದು. ನೃತ್ಯವು ದೇಹಕ್ಕೆ ಸಂಪೂರ್ಣ ವ್ಯಾಯಾಮ ನೀಡುತ್ತದೆ. ಇದು ನಿಮ್ಮ ದೇಹವನ್ನು ಸದೃಢಗೊಳಿಸುತ್ತದೆ. ಇದು ಕ್ಯಾಲೊರಿಗಳನ್ನು ಬರ್ನ್​ ಮಾಡುತ್ತದೆ. ಮತ್ತು ತೂಕವನ್ನು ಕಳೆದುಕೊಳ್ಳಲು ಸಹಕಾರಿಯಾಗಿದೆ.  ನೃತ್ಯವು ನಿಮ್ಮನ್ನು ಆರೋಗ್ಯವಾಗಿ ಮತ್ತು ಫಿಟ್ ಆಗಿರಿಸುತ್ತದೆ ಎಂದು ಹಲವು ಅಧ್ಯಯನಗಳಿಂದ ಸಾಬೀತು ಮಾಡಲಾಗಿದೆ.

ಇದನ್ನೂ ಓದಿ: White Tea: ಬಿಳಿ ಚಹಾ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಇಲ್ಲಿದೆ ಮಾಹಿತಿ

ದೇಹಕ್ಕೆ ಶಕ್ತಿ ದೊರೆಯುವುದು:

ಕೆಲ ವರದಿಗಳ ಪ್ರಕಾರ, 30 ನಿಮಿಷಗಳ ಕಾಲ ನೃತ್ಯ ಮಾಡುವುದರಿಂದ 130 ರಿಂದ 250 ಕ್ಯಾಲೋರಿ ಕರಗುತ್ತದೆ. ನೃತ್ಯವು ಹೃದಯದ ಆರೋಗ್ಯವನ್ನು ಸುಧಾರುಸುವುದರೊಂದಿಗೆ ದೇಹವನ್ನು ಬಲಪಡಿಸುತ್ತದೆ. ಇದು ಸಮತೋಲನ ಮತ್ತು ಸಮನ್ವಯವನ್ನು ರಚಿಸಲು ಸಹಾಯ ಮಾಡುತ್ತದೆ. ಇದು ನೀವು ಯಾವ ರೀತಿಯ ನೃತ್ಯವನ್ನು ಮಾಡುತ್ತಿರುವಿರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಕೆಲ ವೇಗವಾಗಿ ಮಾಡುವ ನೃತ್ಯಗಳಿವೆ. ಇನ್ನೂ ಕೆಲವೂ ನಿಧಾನ ನೃತ್ಯಗಳಿವೆ. ಎರಡೂ ಪರಿಸ್ಥಿತಿಗಳಲ್ಲಿ ನಿಮ್ಮ ದೇಹ ಮತ್ತು ಮನಸ್ಸು ಎರಡೂ ಒಳಗೊಂಡಿರುತ್ತವೆ. ನೃತ್ಯವು ಸಂಪೂರ್ಣ ದೇಹದ ತಾಲೀಮು, ಇದು ನಿಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಉತ್ತಮಗೊಳಿಸುತ್ತದೆ.

ದೇಹದ ಈ ಭಾಗಗಳು ಶಕ್ತಿ ಪಡೆಯುತ್ತವೆ:

ನೃತ್ಯದಿಂದ ನಿಮ್ಮ ದೇಹದ ಮುಖ್ಯ ಸ್ನಾಯುಗಳು ಬಲಗೊಳ್ಳುತ್ತವೆ. ನೃತ್ಯದ ಸಮಯದಲ್ಲಿ ಪಾದಗಳನ್ನು ಚಲಿಸುವುದು ಬಹಳ ಮುಖ್ಯ. ಅಷ್ಟೇ ಅಲ್ಲ, ನಿಮ್ಮ ಕೈ ಮತ್ತು ಬೆನ್ನಿನ ಸ್ನಾಯುಗಳು ಕೂಡ ಚಲಿಸುತ್ತವೆ. ಮತ್ತು ಇಡೀ ದೇಹವು ಫಿಟ್ ಆಗುತ್ತದೆ. ನೃತ್ಯವು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಚೈತನ್ಯವನ್ನು ನೀಡುತ್ತದೆ. ವಿಶೇಷವೆಂದರೆ ನೀವು ಮನೆಯಲ್ಲಿಯೂ ನೃತ್ಯ ಮಾಡಬಹುದು. ಇಲ್ಲವೆಂದ್ದಾರೆ ಹಣ ಪಾವತಿಸಿ ಕೂಡ ಕೆಲ ಕ್ಲಾಸ್​ಗಳಿಗೆ ಸೇರಿಕೊಳ್ಳಬಹುದಾಗಿದೆ. ನೃತ್ಯವು ನಿಮ್ಮನ್ನು ಸಂತೋಷವಾಗಿಡುವುದಲ್ಲದೇ ಅನೇಕ ರೋಗಗಳಿಂದ ರಕ್ಷಿಸುತ್ತದೆ. ಮಧುಮೇಹ ಅಥವಾ ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿರುವವರಿಗೆ, ನೃತ್ಯವು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಾಗಿದೆ. ಇದಲ್ಲದೆ, ಹೃದ್ರೋಗ ಮತ್ತು ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರು ಫಿಟ್ ಆಗಿರಲು ನೃತ್ಯ ಮಾಡಬಹುದು. ನೀವು ನೃತ್ಯ ಮಾಡುವಾಗ ಯಾವುದೇ ಸಮಸ್ಯೆಯನ್ನು ಅನುಭವಿಸಿದರೇ ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.