ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಮೊಮೊಸ್ (Momos) ಎಂದರೆ ಬಹುತೇಕ ಹೆಚ್ಚಿನವರಿಗೆ ಬಲು ಇಷ್ಟ. ನೇಪಾಳ (Nepal) ಮತ್ತು ಟಿಬೆಟ್‌ನ ಈ ಡಿಶ್ ಅನ್ನು ಎಲ್ರೂ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಖಾರವಾದ ಚಟ್ನಿಯೊಂದಿಗೆ ಈ ಮೊಮೊಗಳನ್ನು ಸವಿಯುವ ಮಜಾನೇ ಬೇರೆ. ಚಿಕನ್, ವೆಜ್, ಫ್ರೈಡ್, ಸ್ಟೀಮ್ಡ್ ಅಂತೆಲ್ಲಾ ವೈರೈಟಿ ಮೊಮೊಗಳನ್ನು ನೀವು ಸವಿದಿರುತ್ತೀರಿ ಅಲ್ವಾ. ಆದ್ರೆ ಯಾವತ್ತಾದ್ರೂ ಚಾಕೊಲೇಟ್ ಮೊಮೊಸ್ (Chocolate Momos) ಸವಿದಿದ್ದೀರಾ? ಇಲ್ಲೊಬ್ಬ ದೆಹಲಿಯ ಬೀದಿ ಬದಿ ವ್ಯಾಪಾರಿ ಮೊಮೊಸ್‌ನಲ್ಲಿ ವಿಚಿತ್ರ ಪ್ರಯೋಗ ಮಾಡಿದ್ದು, ಖಾರ ಚಟ್ನಿ ಬದಲಿಗೆ ಚಾಕೊಲೇಟ್‌ನಲ್ಲಿ ಅದ್ದಿ ಮೊಮೊಗಳನ್ನು ಗ್ರಾಹಕರಿಗೆ ಸರ್ವ್ ಮಾಡಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಈ ವಿಚಿತ್ರ ತಿನಿಸನ್ನು ಅದ್ಯಾರು ತಿಂತಾರಪ್ಪಾ ಎಂದು ನೆಟ್ಟಿಗರು ತಲೆ ಚಚ್ಚಿಕೊಂಡಿದ್ದಾರೆ.
ದೆಹಲಿಯ ವಿವೇಕ್ ವಿಹಾರ ನಗರದ ಬೀದಿ ಬದಿ ವ್ಯಾಪಾರಿಯೊಬ್ಬ ಈ ವಿಚಿತ್ರ ಪ್ರಯೋಗವನ್ನು ಮಾಡಿದ್ದು, 300 ರೂ. ಗಳಿಗೆ ಡಿಫರೆಂಟ್ ಆಗಿರುವ ಚಾಕೊಲೇಟ್ ಮೊಮೊಸ್‌ಗಳನ್ನು ಮಾರಾಟ ಮಾಡುತ್ತಿದ್ದಾನೆ. ಈ ಕುರಿತ ವಿಡಿಯೋವನ್ನು humbhifoodie ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.
ಚಾಕೊಲೇಟ್ ಮೊಮೊಸ್ ತಯಾರಿಕೆಯ ವಿಡಿಯೋ ಇಲ್ಲಿದೆ ನೋಡಿ:
ಈ ವೈರಲ್ ವಿಡಿಯೋದಲ್ಲಿ ಒಂದು ಪಾತ್ರೆಗೆ ಬೆಣ್ಣೆ ಸವರಿ ಅದಕ್ಕೆ ಡೈರಿ ಮಿಲ್ಕ್ ಚಾಕೊಲೇಟ್ ಮತ್ತು ಚಾಕೊಲೇಟ್ ಸೀರಪ್ ಸುರಿದು ಇವೆರಡನ್ನು ಸ್ವಲ್ವ ನೀರು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಅದಕ್ಕೆ ಎಣ್ಣೆಯಲ್ಲಿ ಕರಿದ ಮೊಮೊಸ್ ಸೇರಿಸಿ ಎಲ್ಲವನ್ನೂ ಮಿಶ್ರಣ ಮಾಡಿ, ನಂತರ ಇದನ್ನು ಒಂದು ಪ್ಲೇಟ್‌ಗೆ ಹಾಕಿ ಅದನ್ನು ಗ್ರಾಹಕರಿಗೆ ಸರ್ವ್ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಅಕ್ಷಯ ತೃತೀಯದಂದು ಚಿನ್ನ ಖರೀದಿಸುವುದು ಏಕೆ? ಪೌರಾಣಿಕ ಕಥೆ ಇಲ್ಲಿದೆ
9 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿರುವ ಈ ವಿಡಿಯೋಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ಸ್‌ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು ʼಈ ವಿಚಿತ್ರ ರೆಸಿಪಿ ಮಾಡಿದವನಿಗೆ ನರಕದಲ್ಲಿ ಇದೇ ರೀತಿಯ ವಿಚಿತ್ರ ಶಿಕ್ಷೆ ಸಿಗಬೇಕುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ಜನ ಯಾಕೆ ಹೀಗೆಲ್ಲಾ ಮಾಡ್ತಾರಪ್ಪಾʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದನ್ನು ತಿಂದವರು ಆಸ್ಪತ್ರೆಗೆ ಸೇರುವುದಂತೂ ನಿಜʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ