
ಮಹಿಳೆಯರು ಸಾಕಷ್ಟು ನಿದ್ದೆ ಮಾಡದಿದ್ದರೆ, ಇದೇ ಪರಿಸ್ಥಿತಿ ಹಲವಾರು ದಿನಗಳವರೆಗೆ ಮುಂದುವರಿದರೆ, ಶೀಘ್ರದಲ್ಲೇ ಹೃದ್ರೋಗಕ್ಕೆ ತುತ್ತಾಗುವ ಸಾಧ್ಯತೆಯಿದೆ ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ. ಇಷ್ಟು ಮಾತ್ರವಲ್ಲದೆ ಪಿಟ್ಸ್‌ಬರ್ಗ್ ವಿಶ್ವವಿದ್ಯಾನಿಲಯದಲ್ಲಿ ನಡೆಸಲಾದ ಈ ಸಂಶೋಧನೆಯೊಂದರ ಪ್ರಕಾರ ರಾತ್ರಿಯಲ್ಲಿ 7 ಗಂಟೆಗಳ ಕಾಲ ನಿದ್ರೆ ಮಾಡದಿದ್ದರೆ, ಆಕೆಗೆ ಹೃದಯಾಘಾತ ಆಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ನಿದ್ರಾಹೀನತೆಯು ಮಹಿಳೆಯರಲ್ಲಿ ಈ ಅಪಾಯವನ್ನು 70 ಪ್ರತಿಶತದಷ್ಟು ಹೆಚ್ಚಿಸುತ್ತದೆ ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ.
42 ರಿಂದ 52 ವರ್ಷ ವಯಸ್ಸಿನ 2,517 ಮಹಿಳೆಯರ ಮೇಲೆ ವಿಜ್ಞಾನಿಗಳು ಈ ಸಂಶೋಧನೆ ನಡೆಸಿದ್ದಾರೆ. ಅವರನ್ನು 22 ವರ್ಷಗಳ ಕಾಲ ಟ್ರ್ಯಾಕ್ ಮಾಡಲಾಗಿತ್ತು. ಅವರು ಎಷ್ಟು ಹೊತ್ತು ಮಲಗುತ್ತಾರೆ ಮತ್ತು ಅವರ ಹೃದಯ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳಲಾಗಿತ್ತು. ಆಗಾಗ್ಗೆ ನಿದ್ರಾ ಭಂಗವನ್ನು ಹೊಂದಿರುವ ನಾಲ್ಕು ಮಹಿಳೆಯರಲ್ಲಿ ಒಬ್ಬರಿಗೆ ಹೃದ್ರೋಗದ ಅಪಾಯವು ಶೇಕಡಾ 70 ರಷ್ಟು ಹೆಚ್ಚಾಗುತ್ತದೆ ಎಂದು ಸಂಶೋಧನೆಯು ಕಂಡುಹಿಡಿದಿದೆ. ಅದೇ ಸಮಯದಲ್ಲಿ, 5 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ಮಹಿಳೆಯರಲ್ಲಿ, 72 ಪ್ರತಿಶತದಷ್ಟು ಹೃದಯಾಘಾತಗಳು, ಪಾರ್ಶ್ವವಾಯು, ಹೃದಯ ವೈಫಲ್ಯ ಮತ್ತು ಅಪಧಮನಿಯ ಕಾಯಿಲೆಗಳು ಕಂಡುಬಂದಿವೆ.
ಇದನ್ನೂ ಓದಿ: Hair Care: ಸ್ಟ್ರೈಟನರ್ ಇಲ್ಲದೆ ಕೂದಲನ್ನು ಸ್ಟ್ರೈಟ್ ಮಾಡುವುದು ಹೇಗೆ?
ನಿದ್ರೆಯ ಕೊರತೆಯು ಅಧಿಕ ರಕ್ತದೊತ್ತಡ, ಇನ್ಸುಲಿನ್ ಸಮಸ್ಯೆಗಳು ಮತ್ತು ಮಹಿಳೆಯರಲ್ಲಿ ರಕ್ತನಾಳಗಳಿಗೆ ಹಾನಿಯಾಗಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಇದಲ್ಲದೇ ನಿದ್ರೆಯ ಕೊರತೆಯು ಮಹಿಳೆಯರಲ್ಲಿ ಸ್ಥೂಲಕಾಯತೆಯ ಅಪಾಯವನ್ನು ಹೆಚ್ಚಿಸುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ