ಭಾರತದಲ್ಲಿ, ಅದರಲ್ಲಿಯೂ ಹಿಂದೂ ಧರ್ಮದಲ್ಲಿ ತುಪ್ಪವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ ಮತ್ತು ಧಾರ್ಮಿಕ ಆಚರಣೆಗಳಲ್ಲಿ ಹಾಗೂ ಆಹಾರದಲ್ಲಿ, ವಿಶೇಷವಾಗಿ ಬಳಸಲಾಗುತ್ತದೆ. ಆಯುರ್ವೇದದಲ್ಲಿ ಅದರ ಪರಿಶುದ್ಧತೆಗಾಗಿ ಗೌರವಿಸಲ್ಪಡುವ ಇದು, ಅಡುಗೆ ಎಣ್ಣೆಗೆ ಪರ್ಯಾಯ ಆಯ್ಕೆಯಾಗಿ ನಿಲ್ಲುತ್ತದೆ. ಚಿನ್ನದ ಬಣ್ಣವನ್ನು ಹೊಂದಿರುವ ಈ ಅಮೃತವನ್ನು ನಮ್ಮ ಪೂರ್ವಜರು ಇಡೀ ವರ್ಷವೂ ಬಳಸುತ್ತಿದ್ದರೂ ಕೂಡ ಚಳಿಗಾಲದಲ್ಲಿ ಮಾತ್ರ ಸ್ವಲ್ಪ ಹೆಚ್ಚಾಗಿ ಉಪಯೋಗ ಮಾಡಿಕೊಳ್ಳುತ್ತಿದ್ದರು ಏಕೆಂದರೆ ಇದನ್ನು ಚಳಿಗಾಲದಲ್ಲಿ ಸೇವನೆ ಮಾಡುವುದರಿಂದ ಇನ್ನು ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ಚಳಿ ಬೀಳುವಾಗ ನಾವು ದೇಹವನ್ನು ಬೆಚ್ಚಗಿಡುವ ಪದಾರ್ಥಗಳನ್ನು ಇಷ್ಟ ಪಡುತ್ತೇವೆ ಅಂತಹ ಆಹಾರಗಳಲ್ಲಿ ತುಪ್ಪವು ಒಂದು. ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಅಗತ್ಯ ಪೋಷಕಾಂಶಗಳನ್ನು ಸಹ ನೀಡುತ್ತದೆ. ಚಳಿಗಾಲದ ಆಹಾರದಲ್ಲಿ ತುಪ್ಪವನ್ನು ಸೇರಿಸುವುದು ಏಕೆ ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳಿ.
ಹೆಲ್ತ್ ಶಾಟ್ಸ್ ಕನ್ಸಲ್ಟೆಂಟ್ ಡಯಟೀಷಿಯನ್ ರೀನು ದುಬೆ ಅವರು ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು, “ತುಪ್ಪವು ಅದರ ಸಮೃದ್ಧ, ಪರಿಮಳ ಮತ್ತು ಹಲವಾರು ಆರೋಗ್ಯ ಪ್ರಯೋಜನಗಳಿಗೆ ಹೆಸರು ವಾಸಿಯಾಗಿದೆ. ಆದ್ದರಿಂದ, ಚಳಿಗಾಲದಲ್ಲಿ ತುಪ್ಪವನ್ನು ಸೇವಿಸಲೇಬೇಕು ಎಂದು ಅವರು ಹೇಳಿದ್ದಾರೆ.
ತುಪ್ಪವು ಒಮೆಗಾ -3 ಮತ್ತು ಒಮೆಗಾ -9 ಕೊಬ್ಬಿನಾಮ್ಲಗಳು ಸೇರಿದಂತೆ ಆರೋಗ್ಯಕರ ಸ್ಯಾಚುರೇಟೆಡ್ ಕೊಬ್ಬಿನ ಸಮೃದ್ಧ ಮೂಲವಾಗಿದೆ. ಈ ಕೊಬ್ಬುಗಳು ಸೂಕ್ತ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ, ಸುಸ್ಥಿರ ಶಕ್ತಿಯ ಮೂಲವನ್ನು ಒದಗಿಸುವಲ್ಲಿ ಮತ್ತು ಪ್ರಮುಖ ದೈಹಿಕ ಕಾರ್ಯಗಳನ್ನು ಬೆಂಬಲಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಆದ್ದರಿಂದ, ನೀವು ಚಳಿಗಾಲದಲ್ಲಿ ಶುದ್ಧ ತುಪ್ಪವನ್ನು ಆದಷ್ಟು ಸೇವನೆ ಮಾಡುವುದು ಒಳ್ಳೆಯದು.
ಚಳಿಗಾಲವು ಕೀಲು ನೋವು ಅಥವಾ ಉಸಿರಾಟದ ಸಮಸ್ಯೆಗಳಂತಹ ಉರಿಯೂತದ ಪರಿಸ್ಥಿತಿಗಳನ್ನು ಉಲ್ಬಣಗೊಳಿಸುತ್ತದೆ. ಇದಕ್ಕೆ ಪರಿಹಾರ ಎಂಬಂತೆ ತುಪ್ಪವು ಉರಿಯೂತ ನಿವಾರಕ ಗುಣಲಕ್ಷಣಗಳು ಪರಿಹಾರವನ್ನು ನೀಡಬಹುದು ಮತ್ತು ಶೀತ ಪ್ರಕೃತಿಯಲ್ಲಿ ಕೀಲು ಮತ್ತು ಉಸಿರಾಟದ ಸಮಸ್ಯೆಗೆ ಪರಿಹಾರ ನೀಡುತ್ತದೆ.
ತುಪ್ಪವನ್ನು ಅದರ ಜೀರ್ಣಕಾರಿ ಪ್ರಯೋಜನಗಳಿಗಾಗಿ ಆಯುರ್ವೇದದಲ್ಲಿ ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ ಎಂದು ದುಬೆ ಹೇಳುತ್ತಾರೆ. “ತುಪ್ಪ ಬ್ಯೂಟ್ರಿಕ್ ಆಮ್ಲವನ್ನು ಹೊಂದಿರುತ್ತದೆ, ಇದು ಜೀರ್ಣಾಂಗವ್ಯೂಹದ ಆರೋಗ್ಯವನ್ನು ಬೆಂಬಲಿಸುತ್ತದೆ. ತುಪ್ಪವನ್ನು ಮಧ್ಯಮ ಪ್ರಮಾಣದಲ್ಲಿ ಸೇವಿಸುವುದರಿಂದ ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಸೂಕ್ತ ಜೀರ್ಣಕ್ರಿಯೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಆಯುರ್ವೇದದ ಪ್ರಕಾರ, ತುಪ್ಪ ದೇಹವನ್ನು ಬಿಸಿ ಮಾಡುವ ಆಹಾರವೆಂದು ಪರಿಗಣಿಸಲಾಗುತ್ತದೆ, ಅಂದರೆ ಇದು ದೇಹದ ಮೇಲೆ ತಾಪಮಾನದ ಪರಿಣಾಮವನ್ನು ಬೀರುತ್ತದೆ. ಚಳಿಗಾಲದಲ್ಲಿ, ಹೊರಗೆ ತಂಪಾಗಿರುವಾಗ ತುಪ್ಪವು ನಿಮ್ಮ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. “ಶೀತ ಪ್ರಕೃತಿಯ ವ್ಯಕ್ತಿಗಳಿಗೆ ಅಥವಾ ತಂಪಾದ ಹವಾಮಾನದಲ್ಲಿ ವಾಸಿಸುವವರಿಗೆ ಇದು ವಿಶೇಷವಾಗಿ ಪ್ರಯೋಜನಕಾರಿಯಾಗಿದೆ” ಎಂದು ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ಚರ್ಮ ಸುಕ್ಕುಗಟ್ಟದಂತೆ ತಡೆಯಲು ಕಾಫಿ ಮತ್ತು ಜೇನುತುಪ್ಪದ ಫೇಸ್ ಮಾಸ್ಕ್ ಹಚ್ಚಿ ನೋಡಿ
ತುಪ್ಪದಲ್ಲಿನ ಆರೋಗ್ಯಕರ ಕೊಬ್ಬುಗಳು ಕರಗುವ ವಿಟಮಿನ್ ಗಳಾದ ಎ, ಡಿ, ಇ ಮತ್ತು ಕೆ ಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಮೂಳೆಯ ಆರೋಗ್ಯ ಮತ್ತು ಚರ್ಮ ಸೇರಿದಂತೆ ವಿವಿಧ ದೈಹಿಕ ಕಾರ್ಯಗಳಿಗೆ ಈ ಜೀವಸತ್ವಗಳು ಅತ್ಯಗತ್ಯ. ಚಳಿಗಾಲದ ಆಹಾರದಲ್ಲಿ ತುಪ್ಪವನ್ನು ಸೇರಿಸುವುದರಿಂದ ಈ ಪ್ರಮುಖ ಪೋಷಕಾಂಶಗಳನ್ನು ಉತ್ತಮವಾಗಿ ಹೀರಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ.
ತುಪ್ಪವನ್ನು ಅಡುಗೆಗೆ ಬಳಸಲು ಸೂಕ್ತ ಆಯ್ಕೆಯಾಗಿದೆ. ಶಾಖಕ್ಕೆ ಒಡ್ಡಿಕೊಂಡಾಗ ಹಾನಿಕಾರಕ ಫ್ರೀ ರಾಡಿಕಲ್ಗಳನ್ನು ಬಿಡುಗಡೆ ಮಾಡುವ ಅನೇಕ ಅಡುಗೆ ಎಣ್ಣೆಗಳಿಗಿಂತ ಭಿನ್ನವಾಗಿ, ತುಪ್ಪವು ಸ್ಥಿರವಾಗಿರುತ್ತದೆ. ಈ ಸ್ಥಿರತೆಯು ಹುರಿಯುವುದು ಸೇರಿದಂತೆ ವಿವಿಧ ಅಡುಗೆ ವಿಧಾನಗಳಿಗೆ ಸುರಕ್ಷಿತ ಆಯ್ಕೆಯಾಗಿದೆ.
ಚಳಿಗಾಲವು ಹೆಚ್ಚಾಗಿ ಶುಷ್ಕ ಮತ್ತು ಕಠಿಣ ಹವಾಮಾನಕ್ಕೆ ಹೆಸರುವಾಸಿಯಾಗಿರುತ್ತದೆ, ಇದು ಚರ್ಮದ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ. ಹಾಗಾಗಿ ತುಪ್ಪದಲ್ಲಿರುವ ಅಗತ್ಯವಾದ ಕೊಬ್ಬಿನಾಮ್ಲಗಳು ಚರ್ಮವನ್ನು ಒಳಗಿನಿಂದ ತೇವಗೊಳಿಸುತ್ತದೆ, ಶುಷ್ಕತೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಆರೋಗ್ಯಕರ ಮೈ ಬಣ್ಣವನ್ನು ಉತ್ತೇಜಿಸುವಲ್ಲಿ ಸಹಕಾರಿಯಾಗಿದೆ. ಹೆಚ್ಚುವರಿಯಾಗಿ, ಚಳಿಗಾಲದಲ್ಲಿ ಸಾಮಾನ್ಯವಾಗಿ ಕಂಡು ಬರುವ ಶುಷ್ಕತೆ ಮತ್ತು ಬಿರುಕುಗಳನ್ನು ತಪ್ಪಿಸಲು ನೀವು ನಿಮ್ಮ ತುಟಿಗಳಿಗೆ ಪ್ರತಿದಿನ ಬೆಳಿಗ್ಗೆ ಅಥವಾ ರಾತ್ರಿ ತುಪ್ಪವನ್ನು ಹಚ್ಚಬಹುದು.
ಇದನ್ನೂ ಓದಿ:
ಕೊಬ್ಬುಗಳು ಮತ್ತು ತೂಕ ಹೆಚ್ಚಳದ ಬಗ್ಗೆ ಸಾಮಾನ್ಯ ತಪ್ಪು ಕಲ್ಪನೆಗಳಿಗೆ ವಿರುದ್ಧವಾಗಿ, ತುಪ್ಪದಲ್ಲಿನ ಆರೋಗ್ಯಕರ ಕೊಬ್ಬುಗಳು ಮಿತವಾಗಿ ಸೇವಿಸಿದಾಗ ತೂಕ ನಷ್ಟವನ್ನು ಬೆಂಬಲಿಸುತ್ತವೆ. ತುಪ್ಪವು ಸಂಯೋಜಿತ ಲಿನೋಲಿಕ್ ಆಮ್ಲವನ್ನು (ಸಿಎಲ್ಎ) ಹೊಂದಿರುತ್ತದೆ, ಇದು ಕೊಬ್ಬು ನಷ್ಟ ಮತ್ತು ಸುಧಾರಿತ ದೇಹದ ಸಂಯೋಜನೆಯೊಂದಿಗೆ ಸಂಬಂಧ ಹೊಂದಿದೆ.
ತುಪ್ಪವು ರೋಗ ನಿರೋಧಕ ಶಕ್ತಿಯನ್ನು ಬೆಂಬಲಿಸುವ ಜೀವಸತ್ವಗಳು, ಉತ್ಕರ್ಷಣ ನಿರೋಧಕಗಳು ಮತ್ತು ಆರೋಗ್ಯಕರ ಕೊಬ್ಬುಗಳಂತಹ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ. “ವಿಟಮಿನ್ ಎ, ವಿಶೇಷವಾಗಿ, ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಸೋಂಕುಗಳನ್ನು ತಡೆಗಟ್ಟಲು ನಿರ್ಣಾಯಕವಾಗಿದೆ” ಎಂದು ದುಬೆ ಹೇಳುತ್ತಾರೆ. ಆದ್ದರಿಂದ, ತುಪ್ಪವು ನಿಮ್ಮ ರೋಗನಿರೋಧಕ ವ್ಯವಸ್ಥೆಯು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಕಾಲೋಚಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ