Christmas 2023: ಕ್ರಿಸ್ಮಸ್ ಹಬ್ಬದ ಇತಿಹಾಸ ತಿಳಿದಿದೆಯಾ? ಸಾಂತಾಕ್ಲಾಸ್ ಎಂಬ ಕಲ್ಪನೆ ಹೇಗೆ ಹುಟ್ಟಿಕೊಂಡಿತು?
ಡಿಸೆಂಬರ್ ಎಂದಾಕ್ಷಣ ಮೊದಲು ನೆನಪಾಗುವುದು ಕ್ರಿಸ್ಮಸ್. ಈ ಹಬ್ಬವು ಕ್ರೈಸ್ತ ಧರ್ಮೀಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದಾಗಿದೆ. ಇನ್ನೇನು ಈ ಹಬ್ಬಕ್ಕೆ ದಿನಗಣನೆ ಆರಂಭವಾಗಿದೆ ಎಲ್ಲರಿಗೂ ತಿಳಿದಿರುವಂತೆ ಈ ಹಬ್ಬವನ್ನು ವಿಶ್ವದಾದ್ಯಂತ ಡಿಸೆಂಬರ್ 25 ರಂದು ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಆದರೆ ನಿಮಗೆ ಇದರ ಇತಿಹಾಸ ತಿಳಿದಿದೆಯಾ? ಈ ದಿನದ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.
ಕ್ರಿಸ್ಮಸ್ ಯೇಸು ಕ್ರಿಸ್ತನ ಜನನವನ್ನು ಸೂಚಿಸುವ ದಿನವಾಗಿದ್ದು ಅವನ ಬೋಧನೆಗಳನ್ನು ನೆನಪಿಸಿಕೊಳ್ಳುತ್ತದೆ. ಇದು ಒಂದು ಪ್ರಮುಖ ಕ್ರಿಶ್ಚಿಯನ್ ಹಬ್ಬವಾಗಿದ್ದರೂ, ಇದನ್ನು ವಿಶ್ವದಾದ್ಯಂತ ವಿವಿಧ ನಂಬಿಕೆಗಳ ಜನರು ಆಚರಿಸುತ್ತಾರೆ. ಈ ದಿನದಂದು, ಜನರು ತಮ್ಮ ಕುಟುಂಬ ಮತ್ತು ಪ್ರೀತಿಪಾತ್ರರೊಂದಿಗೆ ಒಟ್ಟುಗೂಡುವ ಮೂಲಕ ಅವರೊಂದಿಗೆ ಉಡುಗೊರೆಗಳ ವಿನಿಮಯ ಮಾಡಿಕೊಳ್ಳುತ್ತಾರೆ, ಜೊತೆಗೆ ಎಲ್ಲರೂ ಸೇರಿ ಊಟ ಮಾಡುತ್ತಾರೆ. ಕ್ರಿಸ್ಮಸ್ ಇತಿಹಾಸ ಯೇಸು ಕ್ರಿಸ್ತನ ಜನನ ಮತ್ತು ಆಗ ನಡೆದ ಪವಾಡಗಳನ್ನು ನೆನಪಿಸುವ ದಿನವಾಗಿದೆ. ಅವನ ಹೆತ್ತವರಾದ ಮೇರಿ ಮತ್ತು ಯೋಸೇಫರಿಗೆ ಬೆಥ್ ಲೆಹೆಮ್ ನಲ್ಲಿ ಉಳಿಯಲು ಸ್ಥಳ ಸಿಗದೆಯೇ ತೊಂದರೆಯಾದಾಗ ಯೇಸು ಒಂದು ಸಣ್ಣ ಕೊಟ್ಟಿಗೆಯಲ್ಲಿ ಜನಿಸಿದನು. ಯೇಸು ಕ್ರಿಸ್ತನ ಆಗಮನವನ್ನು ಗೌರವಿಸಲು, ಅವನಿಗೆ ಉಡುಗೊರೆಗಳನ್ನು ನೀಡಿದರು. ಆ ಪದ್ದತಿ ಇಂದಿಗೂ ಎಲ್ಲೆಡೆ ನಡೆದುಕೊಂಡು ಬಂದಿದೆ.
ಕ್ರಿಸ್‌ಮಸ್‌ಗೆ ಚರ್ಚ್‌ನಲ್ಲಿ ವಿಶೇಷ ಪೂಜೆ:
ಕ್ರಿಶ್ಚಿಯನ್ ಧರ್ಮದ ಜನರು ಕ್ರಿಸ್‌ಮಸ್ ಹಬ್ಬವನ್ನು ಕ್ರಿಸ್‌ಮಸ್‌ಗೆ ಒಂದು ದಿನ ಮೊದಲು ಅಂದರೆ ಡಿಸೆಂಬರ್ 24 ರಿಂದ ಆಚರಿಸುತ್ತಾರೆ. ಡಿಸೆಂಬರ್ 24 ರ ಮಧ್ಯರಾತ್ರಿ, ಜನರು ಚರ್ಚ್‌ಗೆ ಹೋಗುತ್ತಾರೆ ಮತ್ತು ಅಲ್ಲಿ ವಿಶೇಷ ಪೂಜೆಯನ್ನು ಮಾಡುತ್ತಾರೆ. ಈ ಆಚರಣೆಯು ಹಲವು ಶತಮಾನಗಳ ಹಿಂದಿನದು. ಕ್ರಿಸ್‌ಮಸ್ ಅನ್ನು ಮೊದಲು ರೋಮ್ ದೇಶದಲ್ಲಿ ಆಚರಿಸಲಾಯಿತು ಎಂದು ಹೇಳಲಾಗುತ್ತದೆ. ಇನ್ನು ಜರ್ಮನಿಯಲ್ಲಿ ಜನರು ತಮ್ಮ ಕ್ರಿಸ್ಮಸ್ ಮರಗಳನ್ನು ಸುಂದರವಾದ ತ್ರಿಕೋನಗಳಿಂದ ಅಲಂಕರಿಸಿದ ಮೊದಲಿಗರಾಗಿದ್ದರೆ ಎಂದು ಇತಿಹಾಸ ಹೇಳುತ್ತದೆ. ಈಗ ಅದೇ ಪದ್ದತಿಯನ್ನು ಪ್ರಪಂಚದಾದ್ಯಂತದ ಇರುವ ಜನರು ರೂಢಿಸಿಕೊಂಡಿದ್ದಾರೆ.
ಇದನ್ನೂ ಓದಿ: ಸಂತೋಷ ಹಾಗೂ ಸಮೃದ್ಧಿಗಾಗಿ ಹೊಸ ವರ್ಷಕ್ಕೆ ಈ ವಸ್ತುಗಳನ್ನು ಮನೆಗೆ ತನ್ನಿ
ಅನೇಕ ದೇಶಗಳಲ್ಲಿ, ಕ್ರಿಸ್ಮಸ್ ಮುನ್ನಾದಿನದಂದು ಸಾಂತಾಕ್ಲಾಸ್ ಬರುವುದನ್ನು ಮಕ್ಕಳು ಕುತೂಹಲದಿಂದ ಕಾಯುತ್ತಾರೆ. ಸಾಂತಾಕ್ಲಾಸ್ ನ ಕಲ್ಪನೆಯು ಬಹಳ ಹಿಂದಿನದ್ದು ಎಂದು ಹೇಳಲಾಗುತ್ತದೆ. ಜೊತೆಗೆ ಸೇಂಟ್ ನಿಕೋಲಸ್ ಎಂಬ ವ್ಯಕ್ತಿಯಿಂದ ಈ ಪದ್ಧತಿ ಸ್ಫೂರ್ತಿ ಪಡೆಡಿದ್ದು ಎಂದು ಇತಿಹಾಸ ಹೇಳುತ್ತದೆ. ಅವರು ವಿಶೇಷವಾಗಿ ಮಕ್ಕಳನ್ನು ಪ್ರೀತಿಯಿಂದ ಕಾಣಲು ಈ ರೀತಿ ಮಾಡುತ್ತಿದ್ದರೂ ಎಂದು ಕೂಡ ಹೇಳಲಾಗುತ್ತದೆ. ಇನ್ನು ಕೆಲವು ಕಥೆಗಳ ಪ್ರಕಾರ ಸಾಂತಾ ಮೂವರು ಬಡ ಸಹೋದರಿಯರಿಗೆ ಚಿನ್ನ ನೀಡುವ ಮೂಲಕ ಸಹಾಯ ಮಾಡಿದ್ದರು ಹಾಗಾಗಿ ಈ ರೀತಿ ಆಚರಣೆ ರೂಢಿಯಲ್ಲಿದೆ ಎಂದು ಹೇಳಲಾಗುತ್ತದೆ.
ಒಟ್ಟಿನಲ್ಲಿ ಈ ಹಬ್ಬ ಕುಟುಂಬಗಳು ಒಟ್ಟಿಗೆ ಸೇರಲು ಮತ್ತು ವಿಶೇಷ ರೀತಿಯಲ್ಲಿ ಮಾಡಿದ ಭೋಜನವನ್ನು ಆನಂದಿಸಲು ಮತ್ತು ಉಡುಗೊರೆಗಳನ್ನು ಹಂಚಿಕೊಳ್ಳುವ ಸಮಯವಾಗಿದೆ. ಇನ್ನು ಈ ದಿನ ಉಡುಗೊರೆಗಳನ್ನು ನೀಡುವುದು ಮತ್ತು ಪಡೆಯುವುದು ಪ್ರೀತಿ ಮತ್ತು ಕಾಳಜಿಯನ್ನು ತೋರಿಸುವ ಒಂದು ಮಾರ್ಗವಾಗಿದೆ ಎಂದು ಹೇಳಲಾಗುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: