AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Christmas Eve 2023: ಕ್ರಿಸ್​ಮಸ್​ ಈವ್ ಹಬ್ಬದ ಇತಿಹಾಸ, ಮಹತ್ವ ಮತ್ತು ಆಚರಣೆ ವಿಧಾನ ತಿಳಿಯಿರಿ

ಯೇಸು ಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್‌ಮಸ್‌ ಹಬ್ಬವನ್ನಾಗಿ ಪ್ರತಿವರ್ಷ ಆಚರಿಸಲಾಗುತ್ತದೆ. ಈ ದಿನದಂದು ಜನರು ಚರ್ಚ್​ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವುದರೊಂದಿಗೆ ಮನೆಯನ್ನು ಕ್ರಿಸ್​ಮಸ್​ ಟ್ರೀ ಹಾಗೂ ಹೂವುಗಳಿಂದ ಅಲಂಕರಿಸಲಾಗುತ್ತದೆ. ಸಂಬಂಧಿಕರು, ಸ್ನೇಹಿತರೆಲ್ಲಾ ಒಟ್ಟಾಗಿ ಸೇರಿ ವಿಶೇಷ ಆಹಾರಗಳನ್ನು ಮಾಡಿ ಸವಿಯುತ್ತಾರೆ. ಈ ದಿನದ ಇತಿಹಾಸ, ಮಹತ್ವ ತಿಳಿಯಿರಿ.

Christmas Eve 2023: ಕ್ರಿಸ್​ಮಸ್​ ಈವ್ ಹಬ್ಬದ ಇತಿಹಾಸ, ಮಹತ್ವ ಮತ್ತು ಆಚರಣೆ ವಿಧಾನ ತಿಳಿಯಿರಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Dec 20, 2023 | 9:54 PM

ಪ್ರತಿ ವರ್ಷ ಡಿಸೆಂಬರ್ 25 ರಂದು ಪ್ರಪಂಚದಾದ್ಯಂತ ಜನರು ಕ್ರಿಸ್​ಮಸ್ (Christmas)​ ಹಬ್ಬವನ್ನು ಆಚರಿಸಲಾಗುತ್ತದೆ. ಇಸ್ರೇಲ್‌, ಆಸ್ಟ್ರೇಲಿಯಾ, ಅಮೆರಿಕ, ಬ್ರಿಟನ್‌, ಜಪಾನ್‌, ಚೈನಾ, ಈಜಿಪ್ಟ್‌, ರಷ್ಯಾ, ರೊಮೊನಿಯಾ, ಭಾರತ ಸೇರಿದಂತೆ ಬಹುತೇಕ ದೇಶಗಳು ಪ್ರತಿವರ್ಷ ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸುತ್ತವೆ. ಕ್ರಿಸ್‌ಮಸ್‌ ಹಿಂದಿನ ದಿನ, ಅಂದರೆ ಡಿಸೆಂಬರ್‌ 24ನ್ನು ಕ್ರಿಸ್‌ಮಸ್‌ ಈವ್‌ ಎಂದು ಆಚರಿಸಲಾಗುತ್ತದೆ. ಇದು ಸಂತೋಷ, ಸಾಮರಸ್ಯದೊಂದಿಗೆ ಆಚರಿಸಲಾಗುತ್ತದೆ.

ಯೇಸು ಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್‌ಮಸ್‌ ಹಬ್ಬವನ್ನಾಗಿ ಪ್ರತಿವರ್ಷ ಆಚರಿಸಲಾಗುತ್ತದೆ. ಈ ದಿನದಂದು ಜನರು ಚರ್ಚ್​ಗೆ ಹೋಗಿ ವಿಶೇಷವಾಗಿ ಪಾರ್ಥನೆ ಸಲ್ಲಿಸುವುದರೊಂದಿಗೆ ಮನೆಯನ್ನು ಕ್ರಿಸ್​ಮಸ್​ ಟ್ರೀ ಹಾಗೂ ಹೂವುಗಳಿಂದ ಅಲಂಕರಿಸಲಾಗುತ್ತದೆ. ಸಂಬಂಧಿಕರು, ಸ್ನೇಹಿತರೆಲ್ಲಾ ಒಟ್ಟಾಗಿ ಸೇರಿ ವಿಶೇಷ ಆಹಾರಗಳನ್ನು ಮಾಡಿ ಸವಿಯುತ್ತಾರೆ.

ಕ್ರಿಸ್​ಮಸ್​ ಹಬ್ಬ ಯಾವಾಗ?

ಬಹುತೇಕ ಕ್ರಿಶ್ಚಿಯನ್ನರು ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಡಿಸೆಂಬರ್ 25 ರಂದು ಕ್ರಿಸ್​ಮಸ್​ ಹಬ್ಬವನ್ನು ಆಚರಿಸುತ್ತಾರೆ. ಜೀಸಸ್ ಯಾವಾಗ ಜನಿಸಿದರು ಎಂಬುದಕ್ಕೆ ಇತರೆ ಸಿದ್ಧಾಂತಗಳಿವೆ, ಆದರೆ ನಾಲ್ಕನೇ ಶತಮಾನದ ಆರಂಭದಲ್ಲಿ ಅಂದರೆ ಡಿಸೆಂಬರ್ 25ರಂದು ಅಧಿಕೃತ ದಿನಾಂಕವಾಗಿ ನಿರ್ಧರಿಸಲಾಗಿದೆ. ಹಾಗಾಗಿ ಪ್ರತಿವರ್ಷ ಡಿಸೆಂಬರ್ 25ರಂದು ಪ್ರತಿವರ್ಷ ಆಚರಿಸಲಾಗುತ್ತಿದೆ.

ಕ್ರಿಸ್‌ಮಸ್​ ಹಬ್ಬದ ಮಹತ್ವ

ಕ್ರಿಸ್‌ಮಸ್​ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಯೇಸುವಿನ ಜನ್ಮದಿನದಂದು ಈ ಪವಿತ್ರ ಕ್ರಿಸ್​ಮಸ್​ ಹಬ್ಬವನ್ನು ಆಚರಿಸಲಾಗುತ್ತದೆ. ದೇವರ ಮಗ ಮತ್ತು ಮಾನವೀಯತೆಯ ವಿಮೋಚಕ ಎಂದು ಪೂಜಿಸಲ್ಪಟ್ಟ ಯೇಸುವಿನ ಜನ್ಮವನ್ನು ಆಚರಿಸುವ, ಗೌರವಿಸುವ  ಪವಿತ್ರ ದಿನವಾಗಿದೆ. ಈ ದಿನದಂದು ಜನರು ಚರ್ಚ್​ಗಳಿಗೆ ಭೇಟಿ ನೀಡಿ, ಪ್ರಾರ್ಥನೆ ಮಾಡುತ್ತಾರೆ. ಕ್ರಿಸ್​ಮಸ್​​ ಡಿ. 25 ರಂದು ಗ್ರೆಗೋರಿಯನ್ ಕ್ಯಾಲೆಂಡರ್ ಮೂಲಕ ಆಚರಿಸಲಾಗುತ್ತದೆ. ಇದು ರೋಮನ್ ಕ್ಯಾಲೆಂಡರ್ನಲ್ಲಿ ಚಳಿಗಾಲದ ಅಯನ ಸಂಕ್ರಾಂತಿಯ ಸಾಂಪ್ರದಾಯಿಕ ದಿನಾಂಕವಾಗಿದೆ.

ಇದನ್ನೂ ಓದಿ: Christmas 2023: ಕ್ರಿಸ್ಮಸ್ ಹಬ್ಬದ ಇತಿಹಾಸ ತಿಳಿದಿದೆಯಾ? ಸಾಂತಾಕ್ಲಾಸ್ ಎಂಬ ಕಲ್ಪನೆ ಹೇಗೆ ಹುಟ್ಟಿಕೊಂಡಿತು?

ಕ್ರಿಸ್ಮಸ್ ಪದವು “ಮಾಸ್ ಆಫ್ ಕ್ರೈಸ್ಟ್” ಎಂಬ ಪದದಿಂದ ಹುಟ್ಟಿಕೊಂಡಿದೆ. ಮೊದಲ ಕ್ರಿಶ್ಚಿಯನ್  ಚಕ್ರವರ್ತಿ ರೋಮನ್ ಚಕ್ರವರ್ತಿ ತನ್ನ ಆಳ್ವಿಕೆಯಲ್ಲಿ ಕ್ರಿಸ್​ಮಸ್​ನ್ನು ಮೊಟ್ಟಮೊದಲ ಬಾರಿಗೆ ಆಚರಿಸಿದನು.

ಈ ದಿನದಂದು ಜನರು ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುವಿಕೆಯೊಂದಿಗೆ ಹಬ್ಬವನ್ನು ಆಚರಿಸಲಾಗುತ್ತದೆ. ಕ್ಯಾರೋಲಿಂಗ್, ಕ್ರಿಸ್​ಮಸ್​ ಟ್ರೀ ಅಲಂಕರಣ, ಮತ್ತು ಸಾಂಟಾ ಕ್ಲಾಸ್​ ಸಾಕಷ್ಟು ಜನಪ್ರಿಯವಾಗಿರುವ ಕೆಲವು ಆಚರಣೆಗಳಾಗಿವೆ.

ಇತಿಹಾಸ

ಜೋಸೆಫ್ ಮತ್ತು ಮೇರಿಗೆ ಬೆಥ್ ಲೆಹೆಮ್‌ನಲ್ಲಿ ಜನಿಸಿದ ಯೇಸು ಕ್ರಿಸ್ತ ಜನಿಸುತ್ತಾರೆ. ಕ್ರಿಸ್ತನು ಪವಿತ್ರಾತ್ಮದ ಮೂಲಕ ಗರ್ಭಧರಿಸಿದನೆಂದು ನಂಬಲಾಗಿದೆ. ಆದಾಗ್ಯೂ, ಅವರು ಡಿಸೆಂಬರ್ 25 ರಂದು ಜನಿಸಿದರು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

ಇದನ್ನೂ ಓದಿ: ಕ್ರಿಸ್ಮಸ್​ಗೆ ಬೆಂಗಳೂರಿನಲ್ಲಿ ಕೇಕ್ ಶೋ ಆಯೋಜನೆ: ವಿಭಿನ್ನ ಶೈಲಿಯ ಕೇಕ್ ಸವಿದು ಎಂಜಾಯ್ ಮಾಡಿ

ಪ್ರಪಂಚದಾದ್ಯಂತ ವಿಭಿನ್ನ ಹೆಸರುಗಳಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದನ್ನು ಜರ್ಮನಿಯಲ್ಲಿ ಯುಲೆಟೈಡ್, ಸ್ಪ್ಯಾನಿಷ್‌ನಲ್ಲಿ ನವಿಡಾಡ್, ಇಟಾಲಿಯನ್‌ನಲ್ಲಿ ನಟಾಲ್ ಮತ್ತು ಫ್ರೆಂಚ್‌ನಲ್ಲಿ ನೋಯೆಲ್ ಎಂದು ಕರೆಯಲಾಗುತ್ತದೆ. ಈ ದಿನ ದೇವರು ತನ್ನ ಮಗನನ್ನು ಭೂಮಿಗೆ ಕಳುಹಿಸಿದ್ದು, ಜನರನ್ನು ಅವರ ಪಾಪಗಳಿಂದ ವಿಮೋಚನೆಗೊಳಿಸಲು ಮತ್ತು ಅವರಿಗೆ ಸರಿಯಾದ ಮಾರ್ಗವನ್ನು ತೋರಿಸುತ್ತಾರೆ ಎಂಬ ನಂಬಿಕೆ ಇದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 9:52 pm, Wed, 20 December 23

ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ