Vastu Tips: ಒಂದು ರೂಪಾಯಿ ಖರ್ಚು ಮಾಡದೆ ಮನೆಯ ವಾಸ್ತು ದೋಷ ನಿವಾರಿಸುವುದು ಹೇಗೆ ಗೊತ್ತಾ?
ಮನೆಯಲ್ಲಿ ವಾಸ್ತು ದೋಷವಿದ್ದರೆ ನಕಾರಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ವಾಸ್ತು ದೋಷ ನಿವಾರಣೆಗೆ ಜನರು ಸಾಕಷ್ಟು ದುಡ್ಡು ಖರ್ಚು ಮಾಡುತ್ತಾರೆ. ಆದರೆ, ಒಂದು ರೂಪಾಯಿ ಖರ್ಚು ಮಾಡದೆ ಕೂಡ ಮನೆಯ ವಾಸ್ತು ದೋಷ ನಿವಾರಿಸಬಹುದಾಗಿದೆ.
ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಹರಿವು ಹೆಚ್ಚಾಗಲು ಪ್ರಾರಂಭಿಸಿದಾಗ, ಕುಟುಂಬ ಸದಸ್ಯರ ನಡುವೆ ಜಗಳಗಳು ಮತ್ತು ವಾದಗಳು ಪ್ರಾರಂಭವಾಗುತ್ತವೆ. ಇದರೊಂದಿಗೆ, ಕುಟುಂಬದ ಪ್ರಗತಿಯಲ್ಲಿ ಅಥವಾ ಶುಭ ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಮನೆಯಲ್ಲಿರುವ ನಕಾರಾತ್ಮಕತೆಯನ್ನು ಸುಲಭವಾಗಿ ತೊಡೆದುಹಾಕಲು ಕೆಲವು ವಾಸ್ತು ಸಲಹೆಗಳು ಇಲ್ಲಿವೆ. ನೀವು ಒಂದು ರೂಪಾಯಿ ಖರ್ಚು ಮಾಡದೆ ಕೂಡ ಮನೆಯ ವಾಸ್ತು ದೋಷ ನಿವಾರಿಸಬಹುದಾಗಿದೆ.
ವಾಸ್ತು ದೋಷ ನಿವಾರಿಸಲು ಕೆಲವು ಸಲಹೆಗಳು:
ಒಡೆದುಹೋದ ವಸ್ತುಗಳನ್ನು ಮನೆಯೊಳಗೆ ಇಡಬೇಡಿ:
ನೀವು ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ಬಯಸಿದರೆ, ಯಾವಾಗಲೂ ಮನೆಯನ್ನು ಸ್ವಚ್ಛವಾಗಿಡಿ. ಎಲೆಕ್ಟ್ರಾನಿಕ್ ವಸ್ತುಗಳು, ನಿಂತ ಗಡಿಯಾರ, ಒಡೆದ ಕನ್ನಡಿ ಇತ್ಯಾದಿ ಅನುಪಯುಕ್ತ ವಸ್ತುಗಳನ್ನು ಮನೆಯಿಂದ ಹೊರಹಾಕಿ. ಇಂತಹ ವಸ್ತುಗಳು ಮನೆಯಲ್ಲಿ ನಕಾರಾತ್ಮಕತೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ.
ತುಪ್ಪದ ದೀಪ ಹಚ್ಚಿ:
ಮನೆಯ ವಾಸ್ತು ದೋಷ ನಿವಾರಣೆಗೆ, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಮನೆಯ ದೇವರ ಕೋಣೆಯಲ್ಲಿ ಹಸುವಿನ ತುಪ್ಪದ ದೀಪವನ್ನು ಹಚ್ಚಿ. ಇದರೊಂದಿಗೆ ಸಂಜೆ, ಮನೆಯ ಮುಖ್ಯದ್ವಾರದಲ್ಲಿ ತುಪ್ಪದ ದೀಪವನ್ನು ಬೆಳಗಿಸುವುದರಿಂದ ಸಂಪತ್ತಿನ ದೇವತೆಯಾದ ಲಕ್ಷ್ಮಿಯ ಆಗಮನವಾಗುತ್ತದೆ ಎಂಬ ನಂಬಿಕೆಯಿದೆ.
ಇದನ್ನೂ ಓದಿ: ಸಂತೋಷ ಹಾಗೂ ಸಮೃದ್ಧಿಗಾಗಿ ಹೊಸ ವರ್ಷಕ್ಕೆ ಈ ವಸ್ತುಗಳನ್ನು ಮನೆಗೆ ತನ್ನಿ
ಕಲ್ಲುಪ್ಪು ಬಳಸಿ:
ಮನೆಯ ವಾಸ್ತು ದೋಷ ನಿವಾರಣೆಗೆ, ಉಪ್ಪನ್ನು ಸ್ವಲ್ಪ ನೀರಿನಲ್ಲಿ ಬೆರೆಸಿ ಮನೆಯ ಪ್ರತೀ ಮೂಲೆಗೆ ಸಿಂಪಡಿಸಿ. ಸಾಧ್ಯವಾದರೆ ಇದಕ್ಕೆ ಕಲ್ಲು ಉಪ್ಪನ್ನು ಬಳಸಿ. ಇದರಿಂದ ಮನೆಯಲ್ಲಿರುವ ಎಲ್ಲಾ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ ಎಂಬ ನಂಬಿಕೆಯಿದೆ. ಇದಲ್ಲದೇ ಎಳನೀರು ಚಿಮುಕಿಸುವುದರಿಂದ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.
ಮನೆಯ ಮುಖ್ಯ ದ್ವಾರ ಹೀಗಿರಲಿ:
ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತಿದೆ ಎಂದು ಅನಿಸಿದರೆ ಮಾವಿನ ಎಲೆಗಳ ತೋರಣವನ್ನು ಮುಖ್ಯ ದ್ವಾರಕ್ಕೆ ಕಟ್ಟಿ. ಆದರೆ ಮಾವಿನ ಎಲೆಗಳು ಹಸಿರಾಗಿರಬೇಕು, ಅಂದರೆ ಒಣಗಿರುವುದು ಬೇಡ. ಇದು ನಿಮ್ಮ ಮನೆಯಲ್ಲಿರುವ ಎಲ್ಲಾ ಋಣಾತ್ಮಕ ಶಕ್ತಿಯನ್ನು ನಾಶಪಡಿಸುತ್ತದೆ ಮತ್ತು ಧನಾತ್ಮಕ ಶಕ್ತಿಯು ಮನೆಯಲ್ಲಿ ನೆಲೆಸುವಂತೆ ಮಾಡುತ್ತದೆ.
ಆಧ್ಯಾತ್ಮಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:12 pm, Thu, 21 December 23