ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಹೆಚ್ಚಿನವರ ಸಂಬಂಧಗಳು ಏರಿಳಿತ ಕಂಡಿವೆ. ಬಹಳಷ್ಟು ಜನರಿಗೆ ಹಲವು ಕುತೂಹಲಕರ ಪ್ರಶ್ನೆಗಳು ಮನದಲ್ಲಿ ಮೂಡಿವೆ. ಈ ಎಲ್ಲವಕ್ಕೂ ಪರಿಹಾರವೇನು? ಅನಿವಾರ್ಯ ಸಂದರ್ಭಗಳಲ್ಲದ ಹೊರತು ಬಹುತೇಕ ಬಾರಿ ಎಲ್ಲರೂ ಮೊರೆ ಹೋಗುವುದು ಗೂಗಲ್ಗೆ. 2021 ಅಂತ್ಯವಾಗುತ್ತಿರುವ ಈ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಹುಡುಕಾಟಕ್ಕೆ ಒಳಗಾದ ರಿಲೇಷನ್ಶಿಪ್ ಕುರಿತಾದ ವಿಚಾರಗಳನ್ನು ವರದಿಗಳು ಬಿಡುಗಡೆ ಮಾಡಿವೆ. ಈ ಪಟ್ಟಿಯನ್ನು ನೋಡಿದಾಗ ನಿಮಗೆ ‘ಇಂಥದ್ದೂ ಜನರು ಹುಡುಕುತ್ತಾರಾ?’ ಎಂದನ್ನಿಸಬಹುದು. ಅಥವಾ ನೀವೇ ಈ ಪ್ರಶ್ನೆಗಳನ್ನು ಗೂಗಲ್ ಬಳಿ ಕೇಳಿರಬಹುದು. ಒಟ್ಟಿನಲ್ಲಿ ಕುತೂಹಲಕರ ವಿಚಾರ ನಿಮ್ಮ ಓದಿಗೆ ಇಲ್ಲಿದೆ.
1. ಉತ್ತಮ ಡೇಟಿಂಗ್ ಆಪ್ಗಳಾವುವು? (What are the best dating apps?)
ಹಲವು ವರದಿಗಳ ಪ್ರಕಾರ ಜನರು ಹೆಚ್ಚಾಗಿ ಹುಡುಕಾಟ ನಡೆಸಿರುವುದು ಯಾವುದು ಉತ್ತಮ ಡೇಟಿಂಗ್ ಆಪ್ಗಳು ಎಂಬುದರ ಕುರಿತು. ಬಹುತೇಕರು ಲಾಕ್ಡೌನ್, ವರ್ಕ್ ಫ್ರಮ್ ಹೋಮ್ ಮೊದಲಾದ ಕಾರಣದಿಂದ ಮನೆಯಲ್ಲೇ ಉಳಿದರು. ಆದ್ದರಿಂದಲೇ ಆನ್ಲೈನ್ ಡೇಟಿಂಗ್ ಮೊರೆ ಹೋದರು. ಬಹುರ್ಶ ಇದೇ ಕಾರಣಕ್ಕೆ ಜನರು ಈ ವಿಷಯದ ಕುರಿತು ಹೆಚ್ಚಾಗಿ ಹುಡುಕಾಟ ನಡೆಸಲು ಕಾರಣವಾಗಿದೆ ಎನ್ನುತ್ತವೆ ವರದಿಗಳು. ಅಂದಹಾಗೆ ಇದು ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದ ವ್ಯಾಪ್ತಿಯಲ್ಲೂ ಹೆಚ್ಚು ಸರ್ಚ್ಗೆ ಒಳಗಾಗಿದೆ.
2. ಕಿಸ್ ಮಾಡೋದು ಹೇಗೆ? (How to kiss?)
ಬಹಳಷ್ಟು ಮಂದಿಗೆ ಈ ವಿಷಯ ನೋಡಿದಾಗ, ಛೇ ಇದೆಂಥಾ ಪ್ರಶ್ನೆ ಎನ್ನಿಸಬಹುದು. ಆದರೆ ಜನರು ಬಹಳ ಕುತೂಹಲದಿಂದ ಈ ವಿಷಯವನ್ನು ಹುಡುಕಿದ್ದಾರೆ. ಚುಂಬನದಲ್ಲೂ ಹಲವು ಬಗೆಗಳಿವೆ. ಪ್ರತಿಯೊಂದಕ್ಕೂ ಬೇರೆ ಬೇರೆ ಅರ್ಥಗಳಿವೆ. ಇದೇ ಕಾರಣಕ್ಕೆ ಜನರು ಕುತೂಹಲದಿಂದ ಇದನ್ನು ಹೆಚ್ಚಾಗಿ ಹುಡುಕಿದ್ದಾರೆ.
3. ಆಕೆಗೆ/ ಅವನಿಗೆ ನನ್ನನ್ನು ಕಂಡರೆ ಇಷ್ಟವೇ ಎಂದು ತಿಳಿಯೋದು ಹೇಗೆ? (Does he/she like me?)
ಕೊರೊನಾ ಕಾಲದಲ್ಲಿ ಸಂಬಂಧಗಳ ವ್ಯಾಖ್ಯೆಯೂ ಬದಲಾಗಿದೆ. ಮೊದಲೆಲ್ಲಾ ಜತೆಯಲ್ಲೇ ಸುತ್ತಾಡುವಾಗ ಪ್ರೀತಿಯ ಸುಳಿವು ಗೊತ್ತಾಗಿಬಿಡುತ್ತಿತ್ತು. ಆದರೆ ಈಗ ಅನಿವಾರ್ಯವಾಗಿ ಆನ್ಲೈನ್ ಎಂಬುದೇ ಪ್ರಪಂಚವಾಗಿದ್ದು, ಅದರಲ್ಲೇ ಪರಿಚಯ, ಸುತ್ತಾಟ ಎಂದಾಗಿದೆ. ಅದರೆ ಎದುರಿನವರಿಗೆ ನಾವು ಇಷ್ಟವೇ ಎಂದು ತಿಳಿಯೋದು ಹೇಗೆ? ಇದೇ ಪ್ರಶ್ನೆಯನ್ನು ಜನರು ಗೂಗಲ್ ಬಳಿ ಕೇಳಿ, ಉತ್ತರ ಕಂಡುಕೊಂಡಿದ್ದಾರೆ.
4. ಲಾಂಗ್ ಡಿಸ್ಟೆನ್ಸ್ ಸಂಬಂಧಗಳನ್ನು ನಿರ್ವಹಿಸೋದು ಹೇಗೆ? (How to make a long distance relationship work?)
ಪ್ರಸ್ತುತ ಅನಿವಾರ್ಯ ಕಾರಣಗಳಿಂದ ದಂಪತಿಗಳು, ಪ್ರೇಮಿಗಳು ದೂರದೂರುಗಳಲ್ಲಿ ಇರಬೇಕಾಗಿ ಬಂದಿದೆ. ಕೆಲವೊಮ್ಮೆ ಪರ ಊರುಗಳಲ್ಲಿ, ಕೆಲವೊಮ್ಮೆ ಬೇರೆ ದೇಶಗಳಲ್ಲಿ. ಆದರೆ ಕೆಲಸದ ನಡುವೆ ಕಳೆದು ಹೋಗಿರುವಾಗ, ಸಂಬಂಧವನ್ನು ನಿರ್ವಹಿಸೋದು ಹೇಗೆ? ಇದೇ ಪ್ರಶ್ನೆಯನ್ನು ಜನರು ಗೂಗಲ್ ಬಳಿ ಕೇಳಿ, ಸಂಶಯ ಪರಿಹರಿಸಿಕೊಂಡಿದ್ದಾರೆ.
ಇದನ್ನೂ ಓದಿ:
ಓಟಿಟಿಯಲ್ಲಿ ನೋಡಬಹುದು ‘ಭಜರಂಗಿ 2’ ಸಿನಿಮಾ; ಶಿವರಾಜ್ಕುಮಾರ್ ಅಭಿಮಾನಿಗಳಿಗೆ ಗುಡ್ ನ್ಯೂಸ್
BSNL: ಜಿಯೋ ಏರ್ಟೆಲ್ ಯಾವುದರಲ್ಲೂ ಇಲ್ಲ: ಬಿಎಸ್ಎನ್ಎಲ್ನಿಂದ ಹೊಸ ಬಂಪರ್ ಪ್ಲಾನ್ ಘೋಷಣೆ